ಪ್ರವಾದಿ ನಿಂದನೆ ಆರೋಪಕ್ಕೆ ಭಾರತದಲ್ಲಿ ಪ್ರತಭಟನೆ ತೀವ್ರ ಭಾರತದ ಬೆನ್ನಲ್ಲೇ ಬಾಂಗ್ಲಾದೇಶದಲ್ಲಿ ಪ್ರತಿಭಟನೆ ಕಿಚ್ಚು ಭಾರತದ ಉತ್ಪನ್ನ ಬಹಿಷ್ಕರಿಸಲು ಕರೆ

ಢಾಕಾ(ಜು.11): ಪ್ರವಾದಿ ಮೊಹಮ್ಮದ್ ನಿಂದನೆ ಆರೋಪದ ಹೆಸರಿನಲ್ಲಿ ಮುಸ್ಲಿಮರು ಹಮ್ಮಿಕೊಂಡ ಪ್ರತಿಭಟನೆ ಭಾರತದಲ್ಲಿ ಹಿಂಸಾರೂಪ ಪಡೆದಿದೆ. ಶುಕ್ರವಾರ ನಮಾಜ್ ಬಳಿಕ ನಡೆದ ಪ್ರತಿಭಟನೆ ಕಾವು ಇನ್ನೂ ನಿಂತಿಲ್ಲ. ಪ್ರವಾದಿ ವಿರುದ್ಧ ಹೇಳಿಕೆ ನೀಡಿದ ಬಿಜೆಪಿ ನಾಯಕಿ ನೂಪುರ್ ಶರ್ಮಾ ಬಂಧನಕ್ಕೆ ಆಗ್ರಹಿಸಿ ನಡೆದ ಪ್ರತಿಭಟನೆ ದೇಶಾದ್ಯಂತ ಉಗ್ರ ಸ್ವರೂಪ ಪಡೆದಿದೆ. ಇದೀಗ ಬಾಂಗ್ಲಾದೇಶದಲ್ಲೂ ಭಾರತದ ವಿರುದ್ಧ ಪ್ರತಿಭಟನೆ ನಡೆದಿದೆ. ಇದೇ ವೇಳೆ ಭಾರತದ ಉತ್ಪನ್ನಗಳನ್ನು ಬಹಿಷ್ಕರಿಸಲು ಕರೆ ನೀಡಲಾಗಿದೆ.

ಬಾಂಗ್ಲಾದೇಶದ ಹಲವು ರಾಜಕೀಯ ಪಕ್ಷಗಳು, ಇಸ್ಲಾಮಿಸ್ಟ್ ಆಫ್ ಇಸ್ಲಾಮಿಕ್ ಆಂದೋಲನ್ ಬಾಂಗ್ಲಾದೇಶ, ಜಮೈತ್ ಉಲ್ಮಾ ಇ ಇಸ್ಲಾಮ್, ಇಸ್ಲಾಮಿ ಒ ಸೇರಿದಂತೆ ಹಲವು ಸಂಘಟನೆಗಳು ಬಾಂಗ್ಲಾದೇಶದಲ್ಲಿ ಪ್ರತಿಭಟನೆ ನಡೆಸಿದೆ. ಭಾರತ ವಿರುದ್ಧ ಆಕ್ರೋಶ ಹೊರಹಾಕಿದ ಈ ಸಂಘಟನೆಗಳು, ನೂಪುರ್ ಬಂಧಿಸಲು ಆಗ್ರಹಿಸಿದೆ.

ಹಿಂಸೆಗೆ ತಿರುಗಿದ ಪ್ರತಿಭಟನೆ, NSA ಅಡಿ ಪ್ರಕರಣ ದಾಖಲಿಸಲು ಮುಂದಾದ ಯುಪಿ ಪೊಲೀಸ್!

ಭಾರತೀಯ ಹೈಕಮಿಷನರ್ ಕಚೇರಿ ಎದರು ಭಾರಿ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು ಬಿಜೆಪಿ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ. ಭಾರತದ ಬಿಜೆಪಿ ಸರ್ಕಾರದಿಂದ ಕೋಮು ಸಂಘರ್ಷ ನಡೆಯುತ್ತಿದೆ. ಇಧಕ್ಕೆ ಬಿಜೆಪಿ ಪ್ರಚೋದನೆ ನೀಡುತ್ತಿದೆ ಎಂದು ಆರೋಪಿಸಿದರು.

ಪ್ರವಾದಿ ವಿರುದ್ಧ ಹೇಳಿಕೆ ನೀಡಿದವರ ವಿರುದ್ಧ ಬಿಜೆಪಿ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಬದಲಾಗಿ ಪ್ರತಿಭಟನೆ ಮಾಡಿದವರ ವಿರುದ್ಧ ಸುಳ್ಳು ಕೇಸು ದಾಖಲಿಸಲಾಗುತ್ತಿದೆ. ಇದು ಬಿಜೆಪಿ ಸರ್ಕಾರದ ಆಡಳಿತ ಎಂದು ಆರೋಪಿಸಿದ್ದಾರೆ. ಇಷ್ಟೇ ಅಲ್ಲ ಬಾಂಗ್ಲಾದೇಶದಲ್ಲಿ ಭಾರತದ ಉತ್ಪನ್ನ ಬಹಿಷ್ಕರಿಸಲು ಕರೆ ನೀಡಲಾಗಿದೆ.

ಬಾಂಗ್ಲಾದೇಶದ ನಬೀನಗರ ಹಾಗೂ ಚಂದ್ರ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಿದ್ದಾರೆ. ಚಿತ್ತಗಾಂಗ್‌ನಲ್ಲೂ ಇಸ್ಲಾಮಿಕ್ ಸಂಘಟನೆಗಳು ಭಾರತದ ವಿರುದ್ಧ ಪ್ರತಿಭಟನೆ ನಡೆಸಿದೆ. ಪ್ರವಾದಿ ನಿಂದನೆಯನ್ನು ಎಳ್ಳಷ್ಟು ಸಹಿಸಲು ಸಾಧ್ಯವಿಲ್ಲ ಎಂದು ಎಚ್ಚರಿಕೆ ನೀಡಿದೆ. ಇದೇ ವೇಳೆ ಭಾರತದಲ್ಲಿ ಮುಸ್ಲಿಮರ ವಿರುದ್ಧ ದೌರ್ಜನ್ಯಗಳು ಹೆಚ್ಚಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಮುಕ್ತ ಸ್ವಾತಂತ್ರ್ಯ ನೀಡಿದ್ದೇನೆ, ಕಲ್ಲು ತೂರಿದ ಒಬ್ಬರನ್ನೂ ಬಿಡಬೇಡಿ, ಉತ್ತರ ಪ್ರದೇಶದಲ್ಲಿ ಯೋಗಿಯ ಖಡಕ್ ಆದೇಶ!

ಪ್ರವಾದಿ ನಿಂದನೆ: ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ
ಪ್ರವಾದಿಯವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಬಿಜೆಪಿ ರಾಷ್ಟ್ರೀಯ ವಕ್ತಾರರಾದ ನೂಪುರ್‌ ಶರ್ಮ ಮತ್ತು ನವೀನ್‌ ಜಿಂದಾಲ… ಅವರ ಶೀಘ್ರ ಬಂಧನಕ್ಕೆ ಒತ್ತಾಯಿಸಿ ದಕ್ಷಿಣ ಕನ್ನಡದ ಪುತ್ತೂರಿನ ಜುಮಾ ನಮಾಝ್‌ ಬಳಿಕ ಸಂಪ್ಯ ಮುಹಿಯದ್ದೀನ್‌ ಜುಮ್ಮಾ ಮಸೀದಿ ವತಿಯಿಂದ ಭಿತ್ತಿ ಪತ್ರ ಪ್ರದರ್ಶಿಸುವ ಮೂಲಕ ಪ್ರತಿಭಟನೆ ನಡೆಸಲಾಯಿತು.ಈ ಸಂದರ್ಭ ಮೊಅಲ್ಲಾದ ಖತೀಬ್‌ ಅಬ್ದುಲ್‌ ಹಮೀದ್‌ ದಾರಿಮಿ, ಜಮಾಅತ್‌ ಕಮಿಟಿ ಉಪಾಧ್ಯಕ್ಷ ಅಬೂಬಕ್ಕರ್‌ ಸಂಪ್ಯ, ಕಾರ್ಯದರ್ಶಿ ಇಸ್ಮಾಯಿಲ್‌ ಬೈಲಾಡಿ, ಕೋಶಾಧಿಕಾರಿ ಇಬ್ರಾಹಿಂ ಹಾಜಿ ಇಡಬೆಟ್ಟು ಹಾಗೂ ಜಮಾಅತ್‌ ಕಮಿಟಿ ಸದಸ್ಯರು ಮತ್ತು ಜಮಾಅತ್‌ಗೊಳಪಟ್ಟನಿವಾಸಿಗಳು ಉಪಸ್ಥಿತರಿದ್ದರು.

ಪೈಗಂಬರರ ನಿಂದನೆ ವಿರುದ್ಧ ಎಸ್ಡಿಪಿಐ ಆಕ್ರೋಶ
ಇತ್ತೀಚೆಗೆ ಮಾಧ್ಯಮ ಚರ್ಚೆಯಲ್ಲಿ ಪ್ರವಾದಿ ಮೊಹಮ್ಮದ ಪೈಗಂಬರ್‌ ಬಗ್ಗೆ ಅವಹೇಳನಕಾರಿ ಮಾಡಿರುವ ಬಿಜೆಪಿ ರಾಷ್ಟ್ರೀಯ ವಕ್ತಾರೆ ನೂಪುರ್‌ ಶರ್ಮಾ ಹಾಗೂ ಬಿಜೆಪಿ ಮಾಧ್ಯಮ ಉಸ್ತುವಾರಿ ನವೀನ ಜಿಂದಾಲ್‌ ಅವರನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿ ಸೋಷಿಯಲ್‌ ಡೆಮಾಕ್ರಟಿಕ್‌ ಪಾರ್ಟಿ ಆಫ್‌ ಇಂಡಿಯಾ (ಎಸ್‌ಡಿಪಿಐ) ಕಾರ್ಯಕರ್ತರು ಶುಕ್ರವಾರ ನಗರದಲ್ಲಿ ಬೃಹತ್‌ ಪ್ರತಿಭಟನೆ ನಡೆಸಿದರು.

ನಗರದ ಡಾ.ಬಿ.ಆರ್‌.ಅಂಬೇಡ್ಕರ್‌ ವೃತ್ತದಲ್ಲಿ ಮಧ್ಯಾಹ್ನ 3 ಗಂಟೆ ಸುಮಾರಿಗೆ ಎಸ್‌ಡಿಪಿಐನ ನೂರಾರು ಕಾರ್ಯಕರ್ತರು ಜಮಾಯಿಸಿ ಬಿಜೆಪಿ ರಾಷ್ಟ್ರೀಯ ವಕ್ತಾರೆ ನೂಪುರ್‌ ಶರ್ಮಾ ಹಾಗೂ ಬಿಜೆಪಿ ಮಾಧ್ಯಮ ಉಸ್ತುವಾರಿ ನವೀನ ಜಿಂದಾಲ್‌ ಅವರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.