ಬಾಂಗ್ಲಾದೇಶದಲ್ಲಿ 3ನೇ ಹಿಂದೂ ಹತ್ಯೆ, ಗಾರ್ಮೆಂಟ್ಸ್ ಫ್ಯಾಕ್ಟರಿ ಕೆಲಸದಲ್ಲಿರುವಾಗಲೇ ಗುಂಡಿನ ದಾಳಿಯಾಗಿದೆ. ಕಳೆದ ಎರಡು ವಾರದಲ್ಲಿ ನಡೆಯುತ್ತಿರುವ ಮೂರನೇ ಹಿಂದೂ ಹತ್ಯೆ ಇದಾಗಿದೆ. ಬಾಂಗ್ಲಾದೇಶದಲ್ಲಿ ಹಿಂದೂಗಳ ಹುಡುಕಿ ಹುಡುಕಿ ದಾಳಿಯಾಗುತ್ತಿದೆ.
ಢಾಕಾ (ಡಿ.30) ಬಾಂಗ್ಲಾದೇಶದಲ್ಲಿ ಭಾರತ ವಿರೋಧಿ ಪ್ರತಿಭಟನೆ, ಹಿಂದೂಗಳ ಮೇಲೆ ದಾಳಿ ಘಟನೆಗಳು ತೀವ್ರಗೊಳ್ಳುತ್ತಿದೆ. ಭಾರತ ವಿರೋಧಿ ನಡೆಯಿಂದ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ನಿರಂತರ ದಾಳಿ ನಡೆಯುತ್ತಿದೆ. ದೀಪು ಚಂದ್ರದಾಸ್ ಮೇಲೆ ಉದ್ರಿಕ್ತರು ದಾಳಿ ನಡೆಸಿ ಹತ್ಯೆ ಮಾಡಿದ್ದರು. ಇದರ ಬೆನ್ನಲ್ಲೇ ಸುಲಿಗೆ ಆರೋಪದಡಿ ಹಿಂದೂ ಅಮೃತ್ ಮೊಂಡಲ್ ಮೇಲೆ ದಾಳಿ ನಡೆಸಿ ಹತ್ಯೆ ಮಾಡಲಾಗಿತ್ತು. ಇದೀಗ ಎರಡೇ ವಾರದಲ್ಲಿ ಮೂರನೇ ಹಿಂದೂವಿನ ಹತ್ಯೆಯಾಗಿದೆ. ಗಾರ್ಮೆಂಟ್ಸ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಹಿಂದೂ ನೌಕರನನ್ನು ಗುಂಡಿಕ್ಕು ಹತ್ಯೆ ಮಾಡಲಾಗಿದೆ.
ಸಹೋದ್ಯೋಗಿಗಳಿಂದ ಕೃತ್ಯ
ಬಾಂಗ್ಲಾದೇಶದಲ್ಲಿ ಹೆಜ್ಜೆ ಹೆಜ್ಜೆಗೂ ಗಾರ್ಮೆಂಟ್ಸ್ ಫ್ಯಾಕ್ಟರಿಗಳಿವೆ. ಅತೀ ಹೆಚ್ಚು ಟೆಕ್ಸ್‌ಟೈಲ್ ಇಂಡಸ್ಟ್ರಿ ಬಾಂಗ್ಲಾದೇಶದಲ್ಲಿದೆ. ಇಲ್ಲಿನ ಮೈಮೆನ್‌ಸಿಂಗ್ ಜಿಲ್ಲೆಯ ಲಬೀಬ್ ಗ್ರೂಪ್ ಗಾರ್ಮೆಂಟ್ಸ್ ಫ್ಯಾಕ್ಟರಿಯಲ್ಲಿ ನೌಕರನಾಗಿದ್ದ ಹಿಂದೂವಿನ ಮೇಲೆ ಸಹೋದ್ಯೋಗಿಗಳು ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿದ್ದಾರೆ. ಮೃತ ಹಿಂದೂವನ್ನು 42 ವರ್ಷದ ಬಜೇಂದ್ರ ಬಿಸ್ವಾಸ್ ಎಂದು ಗುರುತಿಸಲಾಗಿದೆ. ಬಡ ಬಜೇಂದ್ರ ಬಿಸ್ವಾಸ್ ಕುಟುಂಬ ಕಂಗಾಲಾಗಿದೆ.
ಸೆಕ್ಯೂರಿಟಿ ಗಾರ್ಡ್ ಆಗಿದ್ದ ಬಜೇಂದ್ರ ಬಿಸ್ವಾಸ್
ಲಬೀಬ್ ಗ್ರೂಪ್ ಗಾರ್ಮೆಂಟ್ ಫ್ಯಾಕ್ಟರಿಯಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಬಜೇಂದ್ರ ಬಿಸ್ವಾಲ್ ಕರ್ತವ್ಯ ನಿರ್ವಹಿಸುತ್ತಿದ್ದ. ಆರೋಪಿ 29 ವರ್ಷದ ನೊನಮ್ ಮಿಯಾ ಕೂಡ ಸೆಕ್ಯೂರಿಟಿ ಗಾರ್ಡ್ ಕೆಲಸ ಮಾಡುತ್ತಿದ್ದ. ಸೆಕ್ಯೂರಿಟಿ ಕೆಲಸಕ್ಕೆ ನೀಡಿದ್ದ ಶಾಟ್‌ಗನ್‌ನಿಂದ ದಾಳಿ ಮಾಡಲಾಗಿದೆ. ಕರ್ತವ್ಯದಲ್ಲಿರುವಾಗಲೇ ಈ ಘಟನೆ ನಡೆದಿದೆ.
ಗಾಯಗೊಂಡ ಬಜೇಂದ್ರ ದಾಸ್ ಆಸ್ಪತ್ರೆ ದಾಖಲಿಸಿದರೂ ಪ್ರಯೋಜನವಾಗಲಿಲ್ಲ
ಗಾಯಗೊಂಡ ಬಜೇಂದ್ರ ದಾಸ್‌ನನ್ನು ಆಸ್ಪತ್ರೆ ದಾಖಲಿಸಲಾಗಿತ್ತು. ಆದರೆ ಗಂಭೀರವಾಗಿ ಗಾಯಗೊಂಡ ಬಜೇಂದ್ರ ಬಿಸ್ವಾಸ್ ಬದುಕುಳಿಯಲಿಲ್ಲ. ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗಿದೆ. ಇತ್ತ ಬಜೇಂಜ್ರ ಬಿಸ್ವಾಸ್ ಕುಟುಂಬಸ್ಥರು, ಅಲ್ಪಸಂಖ್ಯಾತ ಹಿಂದೂ ಸಮುದಾಯಕ ಫ್ಯಾಕ್ಟರಿ ಮುಂಭಾಗದಲ್ಲಿ ಪ್ರತಿಭಟನೆ ಮಾಡಿದೆ. ಆದರೆ ಇವರ ಪ್ರತಿಭಟನೆಯನ್ನು ಪೊಲೀಸರು ಹತ್ತಿಕ್ಕಿದ್ದಾರೆ.
ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸ್
ಬಜೇಂದ್ರ ಬಿಸ್ವಾಸ್ ಮೇಲೆ ಗುಂಡಿನ ದಾಳಿ ಮಾಡಿದ ಆರೋಪಿ ನಮೊನ್ ಮಿಯಾಯನನ್ನು ಪೊಲೀಸರು ವಶಕ್ಕೆ ವಿಚಾರಣೆ ನಡೆಸಿದ್ದಾರೆ. ಈ ಘಟನೆಯಿಂದ ಬಾಂಗ್ಲಾದೇಶದಲ್ಲಿ ಹಿಂದೂಗಳು ಮತ್ತಷ್ಟು ಭಯಭೀತಗೊಂಡಿದ್ದಾರೆ. ಎರಡು ವಾರದಲ್ಲಿ ಮೂರನೇ ಹಿಂದೂವಿನ ಹತ್ಯೆಯಾಗಿದೆ. ಹಲವು ಹಿಂದೂಗಳ ಮನೆ ಮೇಲೆ ದಾಳಿಯಾಗಿದೆ. ಹಿಂದೂ ಮನೆಗಳನ್ನು ಬೆಂಕಿ ಹಚ್ಚಿ ಭಸ್ಮಮಾಡಲಾಗಿದೆ.


