ಬಾಂಗ್ಲಾ ನಿರಾಶ್ರಿತರಿಗೆ ಬಾಗಿಲು ತೆರೆದಿದೆ: WB ಸಿಎಂ ಮಮತಾ ಬ್ಯಾನರ್ಜಿ ಹೇಳಿಕೆ ಬಾಂಗ್ಲಾದೇಶದ ತೀವ್ರ ವಿರೋಧ

ಬಾಂಗ್ಲಾದೇಶದಲ್ಲಿ ವಾರದ ಹಿಂದೆ ಉದ್ಯೋಗ ಮೀಸಲಾತಿ ವಿರೋಧಿಸಿ ನಡೆಯುತ್ತಿದ್ದ ಪ್ರತಿಭಟನೆ ವೇಳೆ ಅಲ್ಲಿನ 'ನಿರಾಶ್ರಿತರಿಗೆ ಬಾಗಿಲು ತೆರೆದಿದೆ' ಎಂಬ ಹೇಳಿಕೆ ನೀಡಿದ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಹೇಳಿಕೆಗೆ ಬಾಂಗ್ಲಾದೇಶ ಸರ್ಕಾರ ತೀವ್ರ ವಿರೋಧ ವ್ಯಕ್ತಪಡಿಸಿದೆ.

Bangladesh Government strongly opposed West Bengal CM Mamata Banerjee statement on Shelters for Bangladesh refugees akb

ಬಾಂಗ್ಲಾದೇಶದಲ್ಲಿ ವಾರದ ಹಿಂದೆ ಉದ್ಯೋಗ ಮೀಸಲಾತಿ ವಿರೋಧಿಸಿ ನಡೆಯುತ್ತಿದ್ದ ಪ್ರತಿಭಟನೆ ವೇಳೆ ಅಲ್ಲಿನ 'ನಿರಾಶ್ರಿತರಿಗೆ ಬಾಗಿಲು ತೆರೆದಿದೆ' ಎಂಬ ಹೇಳಿಕೆ ನೀಡಿದ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಹೇಳಿಕೆಗೆ ಬಾಂಗ್ಲಾದೇಶ ಸರ್ಕಾರ ತೀವ್ರ ವಿರೋಧ ವ್ಯಕ್ತಪಡಿಸಿದೆ. ಕಳೆದೊಂದು ವಾರ ಬಾಂಗ್ಲಾದೇಶದಲ್ಲಿ ಉದ್ಯೋಗ ಮೀಸಲಾತಿ ವಿರೋಧಿಸಿ ನಡೆದ ಪ್ರತಿಭಟನೆ ಹಿಂಸೆಗೆ ತಿರುಗಿದ ಪರಿಣಾಮ ಬಾಂಗ್ಲಾದೇಶ ಸರ್ಕಾರ ಕಂಡಲ್ಲಿ ಗುಂಡಿಕ್ಕುವ ಆದೇಶ ನೀಡಿತ್ತು, ಇದಕ್ಕೂ ಮೊದಲೇ ಪ್ರತಿಭಟನೆಯಲ್ಲಿ ಅನೇಕರು ಪ್ರಾಣ ಕಳೆದುಕೊಂಡಿದ್ದರು. ದೇಶದಲ್ಲಿ ಪ್ರತಿಭಟನೆ ತೀವ್ರಗೊಂಡ ನಂತರವಷ್ಟೇ ಬಾಂಗ್ಲಾದೇಶದ ಸುಪ್ರೀಂಕೋರ್ಟ್ ಈ ಉದ್ಯೋಗ ಮೀಸಲಾತಿ ಕಾಯ್ದೆಗೆ ತಡೆ ನೀಡಿತ್ತು. ಇದಾದ ಬಳಿಕವೇ ಬಾಂಗ್ಲಾದೇಶ ಶಾಂತವಾಗಿತ್ತು. 

ಇದೇ ಸಂದರ್ಭದಲ್ಲಿ ಜುಲೈ 21ರಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ನೆರೆಯ ದೇಶದಲ್ಲಿ ಅಂದರೆ ಹಿಂಸೆ ಪೀಡಿತ ಬಾಂಗ್ಲಾದಲ್ಲಿ ಸಂಕಷ್ಟಕ್ಕೀಡಾಗಿರುವ ಅಸಹಾಯಕ ಜನರಿಗೆ ಪಶ್ಚಿಮ ಬಂಗಾಳದ ಬಾಗಿಲು ತೆರೆದಿರುತ್ತದೆ ಎಂದು ಹೇಳುತ್ತಾ ಅವರಿಗೆ ಆಶ್ರಯದ ನೀಡುವುದಾಗಿ ಹೇಳಿದ್ದರು.  ಈ ವಿಚಾರಕ್ಕೆ ಸಂಬಂಧಿಸಿದಂತೆ ಈಗ ಪಶ್ಚಿಮ ಬಂಗಾಳ ಸರ್ಕಾರ ಅಧಿಕೃತವಾಗಿ ತನ್ನ ವಿರೋಧವನ್ನು ದಾಖಲಿಸಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಅಧಿಕೃತ ನೋಟ್‌ನ್ನು  ಬಾಂಗ್ಲಾದೇಶ ನವದೆಹಲಿಗೆ ಕಳುಹಿಸಿದೆ. 

135 ಜನರ ಸಾವಿನ ಬೆನ್ನಲ್ಲೇ ಬಾಂಗ್ಲಾದೇಶ ಮೀಸಲು ಕಡಿತ; ಇತ್ತ ದೀದಿ ಹೇಳಿಕೆಗೆ ಕೆಂಡವಾದ ಬಿಜೆಪಿ

ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯವರನ್ನು ಗೌರವಿಸುತ್ತಾ, ಅವರೊಂದಿಗೆ ನಾವು ನಿಕಟವಾದ ಸಂಬಂಧವನ್ನು ಹೊಂದಿದ್ದೇವೆ, ನಾವು ಈ ವಿಚಾರವನ್ನು ಸ್ಪಷ್ಟಪಡಿಸಲು ಬಯಸುತ್ತೇವೆ, ಅವರ ಹೇಳಿಕೆ ಸಾಕಷ್ಟು ಗೊಂದಲಕ್ಕೆ ಅವಕಾಶ ನೀಡುತ್ತಿದೆ. ಹೀಗಾಗಿ ನಾವು ಭಾರತ ಸರ್ಕಾರಕ್ಕೆ ಒಂದು ಪತ್ರ(ಟಿಪ್ಪಣಿ)ವನ್ನು ನೀಡಿದ್ದೇವೆ ಎಂದು ಬಾಂಗ್ಲಾದೇಶ ವಿದೇಶಾಂಗ ಸಚಿವ ಹಸನ್ ಮಹ್ಮುದ್ ಪತ್ರದಲ್ಲಿ ಹೇಳಿದ್ದಾರೆ ಎಂದು ಆಂಗ್ಲ ಮಾಧ್ಯಮವೊಂದು ವರದಿ ಮಾಡಿದೆ. 

ಜುಲೈ 21ರಂಧು ಬಾಂಗ್ಲಾದೇಶದಲ್ಲಿ ಉದ್ಯೋಗ ಮೀಸಲಾತಿ ಪ್ರತಿಭಟನೆ ಹಿಂಸೆಗೆ ತಿರುಗುತ್ತಿದ್ದಂತೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ನೆರೆಯ ರಾಜ್ಯದಲ್ಲಿ ಸಂಕಷ್ಟಕ್ಕೀಡಾಗಿರುವ ಜನರಿಗೆ ಪಶ್ಚಿಮ ಬಂಗಾಳದ ಬಾಗಿಲು ಸದಾ ತೆರೆದಿದೆ ಎಂದು ಹೇಳುವ ಮೂಲಕ ಅಲ್ಲಿನ ಜನರಿಗೆ ಆಶ್ರಯ ನೀಡುವುದಾಗಿ ಹೇಳಿದ್ದರು. ವಿದೇಶದ ವಿವಾದಗಳ ಬಗ್ಗೆ  ಚರ್ಚಿಸುವುದು ಕೇಂದ್ರ ಸರ್ಕಾರದ ವ್ಯಾಪ್ತಿಯಲ್ಲಿ ಬರುವ ವಿಚಾರವಾದರೂ ಕೂಡ ರಾಜ್ಯವೂ ಅಗತ್ಯವಿರುವವರಿಗೆ ನೆರವು ನೀಡುವುದಕ್ಕೆ ನಿರಾಕರಿಸುವುದಿಲ್ಲ ಎಂದು ಮಮತಾ ಬ್ಯಾನರ್ಜಿ ಹೇಳಿದ್ದರು. 

ಬಾಂಗ್ಲಾದಲ್ಲಿರುವ ಭಾರತದ ನಿವಾಸಿಗಳಿಗೆ ಸಲಹಾವಳಿ, ಹೆಲ್ಪ್‌ಲೈನ್ ಬಿಡುಗಡೆ ಮಾಡಿದ ಹೈ ಕಮೀಷನರ್

ಒಂದು ವೇಳೆ ಅಸಹಾಯಕ ಜನ ಪಶ್ಚಿಮ ಬಂಗಾಳದ ಬಾಗಿಲನ್ನು ತಟ್ಟಿದರೆ ನಾವು ಖಂಡಿತವಾಗಿಯೂ ಅವರಿಗೆ ಆಶ್ರಯ ನೀಡುತ್ತೇವೆ ಎಂದು ಸಮಾವೇಶವೊಂದರಲ್ಲಿ ಮಾತನಾಡುವ ವೇಳೆ ಮಮತಾ ಬ್ಯಾನರ್ಜಿ ಹೇಳಿದ್ದಾರೆ.  ಅಲ್ಲದೇ ತಮ್ಮ ಹೇಳಿಕೆಗೆ ವಿಶ್ವಸಂಸ್ಥೆಯ ನೀತಿಯಲ್ಲಿರುವಂತೆ 'ಸಂಘರ್ಷ ಪೀಡಿತ ಪ್ರದೇಶಗಳ ನಿರಾಶ್ರಿತರಿಗೆ ಪಕ್ಕದ ದೇಶಗಳು ಆಶ್ರಯ ನೀಡಬೇಕು'  ಎಂಬ ನಿಯಮದ ಬಗ್ಗೆ ಹೇಳಿ ಸಮರ್ಥಿಸಿಕೊಂಡಿದ್ದರು.  

ಪಶ್ಚಿಮ ಬಂಗಾಳದ ರಾಜ್ಯಪಾಲ ಸಿವಿ ಆನಂದ್ ಬೋಸ್ ಕೂಡ ಮಮತಾ ಬ್ಯಾನರ್ಜಿ ಅವರ ಈ ಆಶ್ರಯದ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ವಿದೇಶಗಳ ವಿಚಾರವನ್ನು ನಿಭಾಯಿಸುವುದು ಕೇಂದ್ರ ಸರ್ಕಾರದ ಕೆಲಸ, ಆದರೆ ಮಮತಾ ಬ್ಯಾನರ್ಜಿ ಆಶ್ರಯ ನೀಡುವ ಮಾತಾಡುವ ಮೂಲಕ ಸಂವಿಧಾನವನ್ನು ಉಲ್ಲಂಘಿಸುತ್ತಿದ್ದಾರೆ ಎಂದು ರಾಜ್ಯಪಾಲರು ಹೇಳಿದ್ದಾರೆ. 

Latest Videos
Follow Us:
Download App:
  • android
  • ios