ಮೊಸಳೆ ಮರಿಯ ಬೆನ್ನುಜ್ಜುವ ಯೂಟ್ಯೂಬರ್ ಬೆನ್ನುಜ್ಜುವುದನ್ನು ಆನಂದಿಸುವ ಮರಿ ಮೊಸಳೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್
ಪ್ರೀತಿ ಮಾಡೋದನ್ನ ಪ್ರಾಣಿಗಳು ಕೂಡ ಇಷ್ಟ ಪಡುತ್ತವೆ. ಇದಕ್ಕೆ ನಮ್ಮಲ್ಲಿ ಸಾಕಷ್ಟು ಉದಾಹರಣೆಗಳಿವೆ. ಸಾಕು ಪ್ರಾಣಿಗಳಾದ ಬೆಕ್ಕು ನಾಯಿಗಳು ಮುದ್ದಿಸುವುದರಲ್ಲಿ, ಎತ್ತಿದ ಕೈ. ಅದರಲ್ಲೂ ಶ್ವಾನಗಳ ಪ್ರೀತಿಗೆ ಮಿತಿ ಇಲ್ಲ. ಆದರೆ ಮೊಸಳೆ ಮರಿಯೂ ಮೈ ಸವರುವುದನ್ನು ಇಷ್ಟಪಡುತ್ತೆ ಅಂದರೆ ನೀವು ನಂಬಲೇಬೇಕು. ಮರಿ ಮೊಸಳೆಯೊಂದು ತನ್ನ ಬೆನ್ನನ್ನು ವ್ಯಕ್ತಿಯೊಬ್ಬರು ಬ್ರಷ್‌ನಲ್ಲಿ ಉಜ್ಜಿದಾಗ ಬಾಯ್ತರೆದು ಆನಂದಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸರೀಸೃಪಗಳ ಮೃಗಾಲಯದಲ್ಲಿ ಕೊಕೊನೆಟ್ ಹೆಸರಿನ ಹೆಣ್ಣು ಮೊಸಳೆ ಮರಿಯೊಂದನ್ನು ಜೇ ಎಂಬುವವರು ಕೈಯಲ್ಲಿ ಎತ್ತಿ ಹಿಡಿದುಕೊಂಡು ಪ್ರೀತಿಯಿಂದ ಅದರ ಬೆನ್ನಿನ ಮೇಲೆ ಬ್ರಷ್‌ನಲ್ಲಿ ಉಜ್ಜುತ್ತಾ ತಲೆ ಸವರುತ್ತಾರೆ. ಇದನ್ನು ಬಹಳವೇ ಇಷ್ಟಪಡುವ ಮೊಸಳೆ ಮರಿ ಹಾಗೆಯೇ ಬಾಯನ್ನು ತೆರೆದು ಆಹಾ ಆಹಾ ಎಂಬಂತೆ ಆನಂದಿಸಲು ಶುರು ಮಾಡುತ್ತದೆ.
ಅಲ್ಬಿನೋ ಅಲಿಗೇಟರ್‌ಗಳು ಎಂದು ಕರೆಯಲ್ಪಡುವ ಈ ಮೊಸಳೆ ಅತ್ಯಂತ ಅಪರೂಪದ್ದಾಗಿದೆ. ಇವುಗಳು ತಮ್ಮ ಚರ್ಮ ಅಥವಾ ಕಣ್ಣುಗಳಿಗೆ ಬಣ್ಣ ನೀಡಲು ಮೆಲನಿನ್ ಅನ್ನು ರಚಿಸುವ ಸಾಮರ್ಥ್ಯವನ್ನು ಹೊಂದಿಲ್ಲ. ಹೀಗಾಗಿ ಈ ಆನುವಂಶಿಕ ದೋಷವು ಅವರ ಚರ್ಮಕ್ಕೆ ಹಳದಿ ಮಿಶ್ರಿತ ಬಿಳಿ ನೋಟವನ್ನು ನೀಡುತ್ತದೆ ಮತ್ತು ಬಣ್ಣರಹಿತ ಕಣ್ಪೊರೆಗಳಲ್ಲಿ ಗೋಚರಿಸುವ ರಕ್ತನಾಳಗಳ ಕಾರಣದಿಂದಾಗಿ ಕಣ್ಣುಗಳು ಸಾಮಾನ್ಯವಾಗಿ ಗುಲಾಬಿ ಬಣ್ಣವನ್ನು ಹೊಂದಿವೆ.
Karwar ಬಾವಿಗೆ ಬಿದ್ದು ಸಾವು ಕಂಡ ಮೊಸಳೆ!
ಸರೀಸೃಪ ಮೃಗಾಲಯದ ಇತಿಹಾಸಪೂರ್ವ ಸಂಸ್ಥಾಪಕ ಮತ್ತು ಅಧ್ಯಕ್ಷರಾಗಿರುವ ಅಮೆರಿಕನ್ ಯೂಟ್ಯೂಬರ್ (YouTuber) ಜೇ ಬ್ರೂವರ್ ಅವರು ಇತ್ತೀಚೆಗೆ ಇನ್‌ಸ್ಟಾಗ್ರಾಮ್‌ನಲ್ಲಿ ಈ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ, ಅಲ್ಲಿ ಅವರು ಟೂತ್ ಬ್ರಷ್‌ನಿಂದ ಬೇಬಿ ಅಲ್ಬಿನೋ ಅಲಿಗೇಟರ್‌ನ (ಮೊಸಳೆ ಮರಿ)ಹಿಂಭಾಗವನ್ನು ಸ್ವಚ್ಛಗೊಳಿಸುವುದನ್ನು ಕಾಣಬಹುದು.
ಕೊಕನೆಟ್ (ಹೆಸರು) ನಿಜವಾಗಿಯೂ ಸ್ಕ್ರಬ್ ಮಾಡುವುದನ್ನು ಇಷ್ಟಪಡುತ್ತದೆ ಎಂದು ನಾನು ಭಾವಿಸುತ್ತೇನೆ ಎಂದು ಬರೆದು ವಿಡಿಯೋವನ್ನು ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಲಾಗಿದೆ. ಜೇ ಬ್ರೂವರ್ ಸರೀಸೃಪ ಮೃಗಾಲಯದಲ್ಲಿ ಕೊಕನೆಟ್ ಎಂಬ ಹೆಣ್ಣು ಅಲ್ಬಿನೋ ಅಲಿಗೇಟರ್ ಅನ್ನು ಹಿಡಿದುಕೊಂಡು ಪ್ರೀತಿಯಿಂದ ಸ್ವಚ್ಛಗೊಳಿಸುತ್ತಿರುವುದನ್ನು ಈ ವೀಡಿಯೊ ತೋರಿಸುತ್ತದೆ.
ಮೊಸಳೆಯ ಕುತ್ತಿಗೆಯಲ್ಲಿ ಸಿಲುಕಿದ್ದ ಟಯರ್‌ನ್ನು ಹೊರ ತೆಗೆದ ಪ್ರಾಣಿ ಪ್ರೇಮಿ
ವೀಡಿಯೊದಲ್ಲಿ, ಜೇ ಅವರು ಮರಿ ಅಲಿಗೇಟರ್‌ನ ಬೆನ್ನನ್ನು ಕೆರೆದುಕೊಂಡು ವಿವರಿಸುತ್ತಾರೆ, 'ನಾವು ಸ್ವಲ್ಪ ನೀರು ತೆಗೆದುಕೊಳ್ಳುತ್ತೇವೆ ಮತ್ತು ನಾವು ಕೊಕೊನೆಟ್‌ನ್ನು ಸ್ವಲ್ಪ ಗೀಚುತ್ತೇವೆ. ಜೇ ಅವರು ಕೊಕನೆಟ್‌ನ್ನು ಸ್ವಚ್ಛಗೊಳಿಸಲು ಪ್ರಾರಂಭಿಸಿದಾಗ, ಆಕೆ ಅದನ್ನು ಆನಂದಿಸುತ್ತಿರುವಂತೆ ತನ್ನ ಬಾಯಿಯನ್ನು ಅಗಲವಾಗಿ ತೆರೆಯುತ್ತಾಳೆ.
ವೀಡಿಯೊವನ್ನು 4 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಜೇ ಬ್ರೂವರ್ (Jay Brewer) ಅವರು ಅಥವಾ ಬಣ್ಣ ಮತ್ತು ಮಾದರಿಯ ವ್ಯತ್ಯಾಸಗಳಿಗೆ ಹೆಸರುವಾಸಿಯಾದ ರೆಟಿಕ್ಯುಲೇಟೆಡ್ ಹೆಬ್ಬಾವುಗಳ ಬ್ರಿಡಿಂಗ್ ಮಾಡಿಸುವುದಕ್ಕೆ ಹೆಚ್ಚು ಹೆಸರುವಾಸಿಯಾಗಿದ್ದಾರೆ. ಅವರು ಇನ್ಸ್ಟಾಗ್ರಾಮ್‌ನಲ್ಲಿ ಸುಮಾರು 6 ಮಿಲಿಯನ್ ಫಾಲೋವರ್‌ಗಳನ್ನು ಹೊಂದಿದ್ದಾರೆ.
ಕಳೆದ ಆರು ವರ್ಷಗಳಿಂದ ಕುತ್ತಿಗೆಗೆ ಟೈರ್ ಸಿಲುಕಿಕೊಂಡು ಒದ್ದಾಡುತ್ತಿದ್ದ ಮೊಸಳೆಯೊಂದು ಕೊನೆಗೂ ಬಂಧಮುಕ್ತವಾದ ಘಟನೆ ಇತ್ತೀಚೆಗೆ ನಡೆದಿತ್ತು. ಪ್ರಾಣಿ ಪ್ರೇಮಿಯೊಬ್ಬರು ಮೊಸಳೆಯ ಕುತ್ತಿಗೆಯಲ್ಲಿದ್ದ ಟೈರ್‌ನ್ನು ತೆಗೆಯುವ ಮೂಲಕ ಮೊಸಳೆಯ ಶಾಪ ವಿಮೋಚನೆ ಮಾಡಿದ್ದರು. ಇಂಡೋನೇಷ್ಯಾದ ಸುಲಾವೆಸಿ ದ್ವೀಪದಲ್ಲಿ ಈ ಘಟನೆ ನಡೆದಿತ್ತು. 13.12 ಅಡಿ ಉದ್ದದ ಮೊಸಳೆ ಬೆಳೆದು ಗಾತ್ರ ಹೆಚ್ಚಾದಂತೆ ಕುತ್ತಿಗೆಯಲ್ಲಿರುವ ಟೈರ್ ಅದರ ಉಸಿರುಗಟ್ಟಿಸಬಹುದು ಎಂದು ಪಾಲು ನಗರದ ನಿವಾಸಿಗಳು ಆತಂಕ ವ್ಯಕ್ತಪಡಿಸಿದ್ದರು.