Asianet Suvarna News Asianet Suvarna News

ರಸ್ತೆ ಅಪಘಾತದಲ್ಲಿ ಕರ್ನಾಟಕಕ್ಕೆ ನಂ.5 ಸ್ಥಾನ: ಹೆಲ್ಮೆಟ್‌ ಧರಿಸದೇ 50029 ಜನರ ಸಾವು

2022ರಲ್ಲಿ ಕರ್ನಾಟಕದಲ್ಲಿ ಒಟ್ಟು 39,762 ರಸ್ತೆ ಅಪಘಾತಗಳು ಸಂಭವಿಸಿದ್ದು 11,702 ಮಂದಿ ಮರಣ ಹೊಂದಿದ್ದಾರೆ. ಅಪಘಾತ ಪ್ರಮಾಣದಲ್ಲಿ ಕರ್ನಾಟಕ ದೇಶದಲ್ಲಿ 5ನೇ ಸ್ಥಾನದಲ್ಲಿದ್ದರೆ, ಸಾವಿನ ಸಂಖ್ಯೆಯಲ್ಲಿ 4ನೇ ಸ್ಥಾನದಲ್ಲಿದೆ.

Karnataka No 5 in road accident Rate 50029 people died without wearing helmets 16,715 riders died without wearing seat belts akb
Author
First Published Nov 1, 2023, 6:58 AM IST

ನವದೆಹಲಿ: 2022ರಲ್ಲಿ ಕರ್ನಾಟಕದಲ್ಲಿ ಒಟ್ಟು 39,762 ರಸ್ತೆ ಅಪಘಾತಗಳು ಸಂಭವಿಸಿದ್ದು 11,702 ಮಂದಿ ಮರಣ ಹೊಂದಿದ್ದಾರೆ. ಅಪಘಾತ ಪ್ರಮಾಣದಲ್ಲಿ ಕರ್ನಾಟಕ ದೇಶದಲ್ಲಿ 5ನೇ ಸ್ಥಾನದಲ್ಲಿದ್ದರೆ, ಸಾವಿನ ಸಂಖ್ಯೆಯಲ್ಲಿ 4ನೇ ಸ್ಥಾನದಲ್ಲಿದೆ. ಅಪಘಾತಗಳ ಸಂಖ್ಯೆ ತುಸು ಹೆಚ್ಚಾಗಿದ್ದರೂ 4 ರಿಂದ 5ನೇ ಸ್ಥಾನಕ್ಕೆ ಇಳಿದಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ರಾಷ್ಟ್ರೀಯ ಹೆದ್ದಾರಿಗಳ ಸಚಿವಾಲಯ ಬಿಡುಗಡೆ ಮಾಡಿರುವ ವರದಿ ತಿಳಿಸಿದೆ.

ಇವುಗಳ ಪೈಕಿ 13,384 ರಸ್ತೆ ಅಪಘಾತಗಳು ರಾಷ್ಟ್ರೀಯ ಹೆದ್ದಾರಿಯಲ್ಲಿಯೂ, 3046 ಅಪಘಾತಗಳು ರಾಜ್ಯ ಹೆದ್ದಾರಿಗಳಲ್ಲಿಯೂ ಸಂಭವಿಸಿದ್ದು, ಉಳಿದವು ಇತರೆ ರಸ್ತೆಗಳಲ್ಲಿ ಸಂಭವಿಸಿವೆ. ಸಾವುಗಳ ಪೈಕಿ 4164 ಮಂದಿ ರಾಷ್ಟ್ರೀಯ ಹೆದ್ದಾರಿಯಲ್ಲಿಯೂ, 3278 ಮಂದಿ ರಾಜ್ಯ ಹೆದ್ದಾರಿಗಳಲ್ಲಿಯೂ ಹಾಗೂ ಉಳಿದವರು ಇತರ ರಸ್ತೆಗಳಲ್ಲಿಯೂ ಅಸುನೀಗಿದ್ದಾರೆಂದು ವರದಿ ತಿಳಿಸಿದೆ.

ಮಕ್ಕಳ ವಿರುದ್ಧ ಕೋರ್ಟ್‌ ಕೇಸ್ ಗೆದ್ದ 75ರ ವೃದ್ಧ ತಾಯಿ: 40ರ ಮಕ್ಕಳಿಗೀಗ ಬಯಲೇ ಗತಿ

ಇವುಗಳ ಪೈಕಿ ಮಿತಿಮೀರಿದ ವೇಗದಲ್ಲಿ ವಾಹನ ಚಲಾಯಿಸುವಾಗ 4000 ಅಪಘಾತಗಳು ಸಂಭವಿಸಿದ್ದು, ಇದರಲ್ಲಿ 3872 ಮಂದಿ ಸಾವನ್ನಪ್ಪಿದ್ದಾರೆ. ಇನ್ನುಳಿದಂತೆ ಕುಡಿದು ವಾಹನ ಚಲಾಯಿಸುವಾಗ 18 ಮಂದಿ ಸಾವನ್ನಪ್ಪಿದ್ದರೆ, ವಿರುದ್ಧ ದಿಕ್ಕಿನಲ್ಲಿ ವಾಹನ ಚಲಾಯಿಸಿ 144 ಮಂದಿ ಸಾವನ್ನಪ್ಪಿದ್ದಾರೆ. ಅಲ್ಲದೆ ಮೊಬೈಲ್‌ನಲ್ಲಿ ಮಾತನಾಡಿಕೊಂಡು ವಾಹನ ಚಲಾಯಿಸಿ 5 ಮಂದಿ ಅಸುನೀಗಿದ್ದಾರೆ.

ಕೆಲಸದ ಸ್ಥಳ ಬೇಗ ತಲುಪಲು ಕಾರಿಗೆ ಪೊಲೀಸ್ ಲೈಟ್ ಫಿಕ್ಸ್‌ ಮಾಡಿದ ವ್ಯಕ್ತಿಯ ಬಂಧನ

ನವದೆಹಲಿ: 2022ರಲ್ಲಿ ದೇಶದಲ್ಲಿ ಒಟ್ಟು 4.61 ಲಕ್ಷ ರಸ್ತೆ ಅಪಘಾತ ನಡೆದಿದ್ದು, ಇದರಲ್ಲಿ 1.68 ಲಕ್ಷ ಜನರು ಸಾವನ್ನಪ್ಪಿದ್ದು, 4.43 ಲಕ್ಷ ಜನರು ಗಾಯಗೊಂಡಿದ್ದಾರೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ಬಿಡುಗಡೆ ಮಾಡಿರುವ '2022ರಲ್ಲಿ ಭಾರತದಲ್ಲಿ ರಸ್ತೆ ಅಪಘಾತಗಳು' ಎಂಬ ವರದಿಯನ್ವಯ ಕಳೆದ ವರ್ಷ ದೇಶದಲ್ಲಿ 4,61,312 ಅಪಘಾತ ಸಂಭವಿಸಿದೆ. ಇದರಲ್ಲಿ 1,68,491 ಜನರು ಸಾವನ್ನಪ್ಪಿ, 4,43,366 ಜನರು ಸಾವನ್ನಪ್ಪಿದ್ದಾರೆ.

ಇನ್ನು ಅಪಘಾತಗಳ ಪೈಕಿ 1,51,997 (ಶೇ.32.9) ರಾಷ್ಟ್ರೀಯ ಹೆದ್ದಾರಿಗಳಲ್ಲಿ, 1,06,682(ಶೇ. 23.1) ರಾಜ್ಯ ಹೆದ್ದಾರಿಗಳಲ್ಲಿ ಮತ್ತು ಉಳಿದ ರಸ್ತೆಗಳಲ್ಲಿ 2,02,633 (ಶೇ.43.9) ಸಂಭವಿಸಿವೆ. 2021ಕ್ಕೆ ಹೋಲಿಸಿದರೆ 2022ರಲ್ಲಿ ರಸ್ತೆ ಅಪಘಾತ ಪ್ರಮಾಣದಲ್ಲಿ ಶೇ.11.9ರಷ್ಟು ಮತ್ತು ಸಾವಿನ ಸಂಖ್ಯೆಯಲ್ಲಿ ಶೇ.9.4ರಷ್ಟು ಹೆಚ್ಚಳ ದಾಖಲಾಗಿದೆ.

ಸೀಟ್‌ಬೆಲ್ಟ್‌ ಧರಿಸದೆ 16,715 ಜನ, ಹೆಲ್ಮೆಟ್‌ ಧರಿಸದೇ 50029  ಸಾವು

ನವದೆಹಲಿ: ಸೀಟ್‌ಬೆಲ್ಟ್‌ ಧರಿಸದೆ ವಾಹನ ಸವಾರಿ ಮಾಡುತ್ತಿದ್ದ 16,715 ಮಂದಿ ವಿವಿಧ ರೀತಿಯ ರಸ್ತೆ ಅಪಘಾತಗಳಿಂದ ಅಸುನೀಗಿದ್ದಾರೆ. ಇದರಲ್ಲಿ 8,384 ಮಂದಿ ವಾಹನ ಚಲಾಯಿಸುತ್ತಿದ್ದವರಾಗಿದ್ದು 8,331 ಮಂದಿ ಸಹಪ್ರಯಾಣಿಕರಾಗಿದ್ದರು. ಪ್ರಸಕ್ತ ಸಾಲಿನಲ್ಲಿ ಹೆಲ್ಮೆಟ್‌ ಧರಿಸದ ಕಾರಣ 50,029 ಮಂದಿ ಅಸುನೀಗಿದ್ದು, ಅದರ ಪೈಕಿ 35,697 (ಶೇ.71.3)ರಷ್ಟು ಮಂದಿ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದಾಗ ಮೃತಪಟ್ಟಿದ್ದಾರೆ.

ವಾಹನ ಅಪಘಾತದಲ್ಲಿ ಮಿತಿಮೀರಿದ ವೇಗದಿಂದ ಚಲಾವಣೆ(ಶೇ.72.3) ಮಾಡಿದ್ದು ಪ್ರಮುಖ ಕಾರಣವಾದರೆ, ವಿರುದ್ಧ ದಿಕ್ಕಿನಲ್ಲಿ ಚಲಾವಣೆ ಮಾಡುತ್ತಿದ್ದುದು ಎರಡನೇ ಪ್ರಮುಖ ಕಾರಣವಾಗಿದೆ. ಇಷ್ಟೇ ಅಲ್ಲದೆ ಮದ್ಯ ಸೇವನೆ-ಸಿಗ್ನಲ್‌ ಜಂಪ್‌(ಶೇ.7.4), ಪರಿಸರ-ವಾಹನ ಸ್ಥಿತಿ(ಶೇ.18.2) ವಾಹನ ಅಪಘಾತಗಳಿಗೆ ಇತರ ಕಾರಣಗಳಾಗಿವೆ.

Follow Us:
Download App:
  • android
  • ios