ಆಸ್ಟ್ರಿಯಾ ಅಧ್ಯಕ್ಷನಿಗೆ ಕಚ್ಚಿದ ಮಾಲ್ಡೋವಾ ಅಧ್ಯಕ್ಷೆಯ ನಾಯಿ
ಮಾಲ್ಡೋವಾ ದೇಶದ ಅಧಿಕೃತ ಭೇಟಿಗೆಂದು ಆಗಮಿಸಿದ್ದ ಆಸ್ಟ್ರಿಯಾದ ಅಧ್ಯಕ್ಷ ಅಲೆಕ್ಸಾಂಡರ್ ವ್ಯಾನ್ ಡೇರ್ ಬೆಲ್ಲೆನ್ ಅವರಿಗೆ ಮಾಲ್ಡೋವಾ ಅಧ್ಯಕ್ಷೆ ಮಯಾ ಸಂಡು ಅವರ ನಾಯಿ ಕಚ್ಚಿ ಗಾಯಗೊಳಿಸಿದೆ. ಕೈಗೆ ಬ್ಯಾಂಡೇಜ್ ಕಟ್ಟಿಕೊಂಡು ವ್ಯಾನ್ ಡೇರ್ ಅವರು ಸಭೆಗಳಿಗೆ ಹಾಜರಾಗಿದ್ದಾರೆ.

ಬರ್ಲಿನ್: ಮಾಲ್ಡೋವಾ ದೇಶದ ಅಧಿಕೃತ ಭೇಟಿಗೆಂದು ಆಗಮಿಸಿದ್ದ ಆಸ್ಟ್ರಿಯಾದ ಅಧ್ಯಕ್ಷ ಅಲೆಕ್ಸಾಂಡರ್ ವ್ಯಾನ್ ಡೇರ್ ಬೆಲ್ಲೆನ್ ಅವರಿಗೆ ಮಾಲ್ಡೋವಾ ಅಧ್ಯಕ್ಷೆ ಮಯಾ ಸಂಡು ಅವರ ನಾಯಿ ಕಚ್ಚಿ ಗಾಯಗೊಳಿಸಿದೆ. ಕೈಗೆ ಬ್ಯಾಂಡೇಜ್ ಕಟ್ಟಿಕೊಂಡು ವ್ಯಾನ್ ಡೇರ್ ಅವರು ಸಭೆಗಳಿಗೆ ಹಾಜರಾಗಿದ್ದಾರೆ. ಇದರ ಬೆನ್ನಲ್ಲೇ ಸಂಡು ಅವರು ವ್ಯಾನ್ ಡೇರ್ ಅವರ ಕ್ಷಮೆ ಯಾಚಿಸಿದ್ದಾರೆ.
ಮಾಲ್ಡೋವಾ ಅಧ್ಯಕ್ಷರ (Moldovan President) ಭವನಕ್ಕೆ ಆಸ್ಟ್ರಿಯಾ ಅಧ್ಯಕ್ಷರು( Austrian President) ಭೇಟಿ ನೀಡಿದ್ದರು. ಬಳಿಕ ಇಬ್ಬರೂ ನಾಯಕರು ಭವನದ ಹೊರಾಂಗಣದಲ್ಲಿ ಹೆಜ್ಜೆ ಹಾಕುತ್ತಿದ್ದರು. ಈ ವೇಳೆ ಸಂಡು ಅವರ ನಾಯಿಯನ್ನು ಕಂಡು ವ್ಯಾನ್‌ಡೇರ್ ಮುದ್ದಿಸಲು ಮುಂದಾದರು. ತಕ್ಷಣವೇ ಆ ನಾಯಿ ಅವರ ಕೈಗೆ ಕಚ್ಚಿತು.
ಮೃತ ಮಾಲೀಕನಿಗಾಗಿ 4 ತಿಂಗ್ಳಿಂದ ಆಸ್ಪತ್ರೆ ಶವಾಗಾರದ ಹೊರ ಕಾಯ್ತಿದೆ ಈ ಶ್ವಾನ!
ಸ್ಥಳದಲ್ಲಿ ನೆರೆದಿದ್ದ ಜನರನ್ನು ಕಂಡು ಗಲಿಬಿಲಿಯಾಗಿ ನಾಯಿ ಕಚ್ಚಿತು ಎಂದು ಹೇಳಲಾಗಿದೆ. ನಾಯಿ ಮಾಡಿದ ಕೃತ್ಯಕ್ಕೆ ಸಂಡು ಅವರು ವ್ಯಾನ್‌ಡೇರ್ (Alexander van der Bellen) ಅವರ ಕ್ಷಮೆ ಕೇಳಿದರು. ಬಳಿಕ ಬ್ಯಾಂಡೇಜ್ ಧರಿಸಿ ಸಭೆಗಳಿಗೆ ಹಾಜರಾದರು. ವ್ಯಾನ್ ಡೇರ್ ಅವರಿಗೆ ಸಣ್ಣ ಗಾಯವಾಗಿದೆ. ಅವರು ಆರೋಗ್ಯವಾಗಿದ್ದಾರೆ ಎಂದು ಅವರ ಕಚೇರಿ ಅಧಿಕಾರಿಗಳು ತಿಳಿಸಿದ್ದಾರೆ. ಈ ನಡುವೆ, ನಾಯಿಗಳನ್ನು ಕಂಡರೆ ನನಗೆ ತುಂಬಾ ಇಷ್ಟ. ಆದರೆ ಅಲ್ಲಿದ್ದ ಜನರನ್ನು ಕಂಡು ಅದು ಹಾಗೆ ಮಾಡಿದೆ ಎಂದು ವ್ಯಾನ್‌ಡೇರ್ ಹೇಳಿದ್ದಾರೆ.
ಕಾರು ಅಪಘಾತದಲ್ಲಿ ಗಾಯಗೊಂಡಿದ್ದ ಕಾಡ್ರಟ್ ಎಂಬ ನಾಯಿಯನ್ನು ಮಲ್ಡೋವಾ ಅಧ್ಯಕ್ಷೆ ಸಂಡು ದತ್ತು ಪಡೆದು ಸಾಕುತ್ತಿದ್ದಾರೆ. ಅಪಘಾತದಲ್ಲಿ ಈ ಶ್ವಾನ ಒಂದು ಕಾಲನ್ನು ಕಳೆದುಕೊಂಡಿದೆ.
ಹಾಸನ: ಪತ್ನಿ ಕೊಂದವನನ್ನು ಜೈಲಿಗಟ್ಟಿದ ಬೀದಿ ನಾಯಿಗಳು..!