ಹಾಸನ: ಪತ್ನಿ ಕೊಂದವನನ್ನು ಜೈಲಿಗಟ್ಟಿದ ಬೀದಿ ನಾಯಿಗಳು..!
ಹಳೆಬಾಗೆ ಗ್ರಾಮದ ಶಾಂತಿವಾಸು ಕೊಲೆಯಾದ ಮಹಿಳೆ. ಈಕೆಯ ಪತಿ ಮೈಲಾರಿ ಕೊಲೆಯ ಆರೋಪಿ. ಪತ್ನಿಯನ್ನು ಕೊಂದು ಆರೋಪಿ ಹೂತು ಹಾಕಿದ್ದ. ಆದರೆ ಬೀದಿ ನಾಯಿಗಳು ಈ ಪ್ರಕರಣದ ಪತ್ತೆ ಹಾಗೂ ಆರೋಪಿ ಬಂಧನಕ್ಕೆ ಕಾರಣವಾಗಿವೆ.

ಸಕಲೇಶಪುರ(ನ.04): ತಾಲೂಕಿನ ಬಾಗೆ ಗ್ರಾಮದಲ್ಲಿ ಪತಿಯೇ ಪತ್ನಿಯನ್ನು ಕೊಲೆ ಮಾಡಿ ಹೂತುಹಾಕಿದ್ದ ಪ್ರಕರಣ ಮೂರು ತಿಂಗಳ ನಂತರ ಬೀದಿ ನಾಯಿಗಳಿಂದ ಬೆಳಕಿಗೆ ಬಂದಿದೆ. ಹಳೆಬಾಗೆ ಗ್ರಾಮದ ಶಾಂತಿವಾಸು (32) ಕೊಲೆಯಾದ ಮಹಿಳೆ. ಈಕೆಯ ಪತಿ ಮೈಲಾರಿ ಕೊಲೆಯ ಆರೋಪಿ. ಪತ್ನಿಯನ್ನು ಕೊಂದು ಆರೋಪಿ ಹೂತು ಹಾಕಿದ್ದ. ಆದರೆ ಬೀದಿ ನಾಯಿಗಳು ಈ ಪ್ರಕರಣದ ಪತ್ತೆ ಹಾಗೂ ಆರೋಪಿ ಬಂಧನಕ್ಕೆ ಕಾರಣವಾಗಿವೆ.
ಕಳೆದ ಹನ್ನೆರೆಡು ವರ್ಷದ ಹಿಂದೆ ಮದುವೆಯಾಗಿದ್ದ ಜೋಡಿಗೆ ಇಬ್ಬರು ಗಂಡು ಮಕ್ಕಳಿದ್ದು ಇತ್ತೀಚಿನ ವರ್ಷಗಳಲ್ಲಿ ಕುಟುಂಬ ಕಲಹ ನಿತ್ಯ ನಡೆಯುತ್ತಿತ್ತು. ಕಳೆದ ಜುಲೈ ತಿಂಗಳಲ್ಲಿ ನಡೆದ ಕಲಹದಲ್ಲಿ ಪತಿ ಪತ್ನಿಯ ಮೇಲೆ ಹಲ್ಲೆ ನಡೆಸಿದ್ದರಿಂದ ನೆಲಕ್ಕೆ ಬಿದ್ದ ಪತ್ನಿ ತಲೆಗೆ ಪೆಟ್ಟು ಬಿದ್ದು ಅಸುನೀಗಿದ್ದರು.
ಅಮಾಯಕರನ್ನ ಯಾಮಾರಿಸಿ ಕೋಟ್ಯಂತರ ರೂ. ದೋಚಿದ ಖತರ್ನಾಕ್ ದಂಪತಿ!
ವಿಚಾರವನ್ನು ಗೋಪ್ಯವಾಗಿಟ್ಟು ಮನೆಯಿಂದ ಮುನ್ನೂರು ಮೀಟರ್ ದೂರದವರಗೆ ಹೆಣವನ್ನು ಹೊತ್ತೊಯ್ದು ಶ್ರೀನಿವಾಸ್ ಎಂಬ ವ್ಯಕ್ತಿಯ ಕಾಫಿ ತೋಟದಲ್ಲಿ ಗುಂಡಿ ತೋಡಿ ಮುಚ್ಚಿ ಹಾಕಿದ್ದ ಆರೋಪಿ ಹೆಂಡತಿ ಮನೆ ಬಿಟ್ಟು ಹೋಗಿರುವುದಾಗಿ ನಂಬಿಸಿದ್ದ. ಆದರೆ, ಶುಕ್ರವಾರ ಗುಂಡಿಯಲ್ಲಿದ್ದ ಹೆಣವನ್ನು ಬೀದಿ ನಾಯಿಗಳು ಎಳೆದು ಮೇಲಕ್ಕೆ ಹಾಕಿವೆ. ಇದನ್ನು ಗಮನಿಸಿದ ಕಾಫಿ ತೋಟದ ಮಾಲೀಕ ಶ್ರೀನಿವಾಸ್ ಪಟ್ಟಣ ಠಾಣೆಗೆ ದೂರು ನೀಡಿದ್ದರು. ಸ್ಥಳಕ್ಕೆ ತೆರಳಿದ ಪೋಲಿಸರು ಪ್ರಕರಣದ ತನಿಖೆ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.