Asianet Suvarna News Asianet Suvarna News

2 ತಿಂಗಳ ಹಿಂದಷ್ಟೇ 6ನೇ ಬಾರಿ ಮದುವೆಯಾಗಿದ್ದ 91 ವರ್ಷದ ಕೋಟ್ಯಾಧಿಪತಿ ನಿಧನ

ಹಾಲಿವುಡ್ ನಟಿ ಕಿಮ್ ಕರ್ದಾಶಿಯನ್ ಜೊತೆ ಡೇಟಿಂಗ್‌ಗೆ 5 ಲಕ್ಷ ಡಾಲರ್ (ಭಾರತೀಯ ರೂಪಾಯಿ ಲೆಕ್ಕದಲ್ಲಾದರೆ 4 ಕೋಟಿಗೂ ಅಧಿಕ) ನೀಡಿದ್ದ ಆಸ್ಟ್ರಿಯಾದ ಉದ್ಯಮಿ ನಿಧನರಾಗಿದ್ದು, 91 ವರ್ಷ ವಯಸ್ಸಾಗಿತ್ತು. 

Austrian billionaire Richard Lugner died six months after his 6th marriage he was paid 4 crore to Kim Kardashian for date akb
Author
First Published Aug 15, 2024, 12:32 PM IST | Last Updated Aug 15, 2024, 12:32 PM IST

ಆಸ್ಟ್ರಿಯಾ: 45 ವರ್ಷದ ಮಹಿಳೆಯನ್ನು 2 ತಿಂಗಳ ಹಿಂದಷ್ಟೇ ಆರನೇ ಬಾರಿ ಮದುವೆಯಾಗಿದ್ದ ಆಸ್ಟ್ರೀಯಾದ ಕೋಟ್ಯಾಧಿಪತಿ ರಿಚರ್ಡ್ ಲುಗ್ನರ್ ನಿಧನರಾಗಿದ್ದು, ಅವರಿಗೆ 91 ವರ್ಷ ವಯಸ್ಸಾಗಿತ್ತು, ಹಾಲಿವುಡ್ ನಟಿ ಕಿಮ್ ಕರ್ದಾಶಿಯನ್ ಜೊತೆ ಡೇಟಿಂಗ್‌ಗೆ 5 ಲಕ್ಷ ಡಾಲರ್ (ಭಾರತೀಯ ರೂಪಾಯಿ ಲೆಕ್ಕದಲ್ಲಾದರೆ 4 ಕೋಟಿಗೂ ಅಧಿಕ) ನೀಡಿದ್ದ ಕಾರಣಕ್ಕೆ ಇವರು ವಿಶ್ವದಾದ್ಯಂತ ಸುದ್ದಿಯಾಗಿದ್ದರು. ಹಲವು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ನಾಲ್ವರು ಮಕ್ಕಳನ್ನು ಅಗಲಿದ್ದಾರೆ. 

ಹಾಲಿವುಡ್‌ನ ಫೇಮಸ್ ಸೆಲೆಬ್ರಿಟಿಗಳನ್ನು ಹೋಸ್ಟ್ ಮಾಡಿದ ಕಾರಣಕ್ಕೆ ಇವರು ಸಾಕಷ್ಟು ಖ್ಯಾತಿ ಗಳಿಸಿದ್ದರು.  ಆಸ್ಟ್ರಿಯಾದ ರಾಜಧಾನಿ ವಿಯೆನ್ನಾದಲ್ಲಿ ನಡೆಯುವ ಐತಿಹಾಸಿಕ ಒಪೆರಾ ಬಾಲ್‌ನಲ್ಲಿ ಹಾಲಿವುಡ್ ತಾರೆಯರಾದ ಕಿಮ್ ಕಾರ್ದಶಿಯಾನ್, ಸೋಫಿಯಾ ಲೊರೆನ್, ಜೇನ್ ಫೋಂಡಾ, ಪಮೇಲಾ ಆಂಡರ್ಸನ್ ಮತ್ತು ಗೋಲ್ಡಿ ಹಾನ್‌ ಮುಂತಾದ ಜಾಗತಿಕ ಪ್ರಸಿದ್ಧ ವ್ಯಕ್ತಿಗಳನ್ನು ಪರಿಚಯಿಸಿದ್ದರು. 

ವಿಶ್ವದ ಧಡೂತಿ ವ್ಯಕ್ತಿ ಎನಿಸಿಕೊಂಡಿದ್ದವ ಈಗ ಹೇಗಿದ್ದಾನೆ ನೋಡಿ: 6 ತಿಂಗಳಲ್ಲಿ 542 ಕೇಜಿ ಇಳಿಕೆ

ಕಟ್ಟಡ ನಿರ್ಮಾಣ ಲೋಕದ ಪ್ರಮುಖ ವ್ಯಕ್ತಿ ಎನಿಸಿದ್ದ ರಿಚರ್ಡ್ ಲುಗ್ನರ್ ಅವರು ಸೋಮವಾರ ನಿಧನರಾಗಿದ್ದಾರೆ ಎಂದು ಆಸ್ಟ್ರೀಯಾದ ಮಾಧ್ಯಮಗಳು ವರದಿ ಮಾಡಿವೆ. ಆಸ್ಟ್ರೀಯಾದ ಚಾನ್ಸಲರ್ ಕರ್ಲ್ ನೆಹ್ಮರ್ ಕೂಡ ಟ್ವಿಟ್ಟರ್‌ನಲ್ಲಿ ರಿಚರ್ಡ್ ಲುಗ್ನರ್ ನಿಧನಕ್ಕೆ ಶೋಕ ವ್ಯಕ್ತಪಡಿಸಿದ್ದು, ಅವರೊಬ್ಬರು ಆಸ್ಟ್ರೀಯಾ ಮೂಲದ ನಿರ್ಮಾಣ ಲೋಕದ ಪ್ರಸಿದ್ಧ ವ್ಯಕ್ತಿಯಾಗಿದ್ದರು ಎಂದು ಬರೆದಿದ್ದಾರೆ. 

ಎರಡು ತಿಂಗಳ ಹಿಂದಷ್ಟೇ ಜೂನ್‌ 1 ರಂದು ರಿಚರ್ಡ್ ಲುಗ್ನರ್ 42 ವರ್ಷದ ಸಿಮೊನೆ ರೈಲ್ಯಾಂಡರ್ ಎಂಬಾಕೆಯನ್ನು ಮದುವೆಯಾಗಿದ್ದರು. ಆ ಮದುವೆಯ ವೇಳೆ ಇದು ನನ್ನ ಕೊನೆಯ ಮದುವೆ ಎಂದಿದ್ದಂತೆ ರಿಚರ್ಡ್. ಅದರಂತೆ ಈಗ ಅವರು ಇಹಲೋಕ ತ್ಯಜಿಸಿದ್ದು ಇದು ಅವರ ಕೊನೆಯ ಮದುವೆಯಾಗಿದೆ. 

ಬಾಂಗ್ಲಾ ದಂಗೆಕೋರರು ಹಚ್ಚಿದ ಬೆಂಕಿಗೆ ಆಹುತಿಯಾಯ್ತು 65 ಕೋಟಿ ಮೌಲ್ಯದ ನೂರಾರು ವಾಹನಗಳು

2014ರಲ್ಲಿ ರಿಚರ್ಡ್ ಲುಗ್ನರ್ ಅವರು ವಾರ್ಷಿಕ ವಿಯೆನ್ನಾ ಒಪೆರಾ ಬಾಲ್ ಕಾರ್ಯಕ್ರಮದಲ್ಲಿ ಕಿಮ್ ಕರ್ದಾಶಿಯನ್ ತನ್ನ ಡೇಟಿಂಗ್ ಗರ್ಲ್ ಆಗುವುದಕ್ಕಾಗಿ ಆಕೆಗೆ ಬರೋಬ್ಬರಿ 5 ಲಕ್ಷ ಡಾಲರ್ ಹಣ ನೀಡಿದ್ದರು ಎಂದು ವರದಿಯಾಗಿದ್ದರು. ಕಿಮ್ ಕಾರ್ಯಕ್ರಮದಲ್ಲಿ ಸರಿಯಾಗಿ ಪಾಲ್ಗೊಳ್ಳದೇ ನನಗೆ ಕೋಪ ತರಿಸಿದಳು ಎಂದು ಆತ ಹೇಳಿದ್ದಾಗಿ ನಂತರ ಮಾಧ್ಯಮಗಳು ವರದಿ ಮಾಡಿದ್ದವು. ಇದಕ್ಕೂ ಮೊದಲು 2010ರ ವಿಯೆನ್ನಾ ಒಪೆರಾ ಬಾಲ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಟಿ ಲಿಂಡ್ಸಿ ಲೋಹನ್‌ಗೂ ಅವರು ಒಂದೂವರೆ ಲಕ್ಷ ಡಾಲರ್ ಹಣ ನೀಡಿದ್ದರು ಎಂದು ವರದಿಯಾಗಿತ್ತು. ಬರೀ ಇವರಷ್ಟೇ ಅಲ್ಲದೇ ಪ್ರೆಸಿಲ್ಲ ಪ್ರೆಸ್ಲಿ, ತಮ್ಮ ಮಾಜಿ ಪತ್ನಿ ಎಲ್ವೀಸ್ ಪ್ರೆಸ್ಲಿ ಮುಂತಾದವರನ್ನು ಅವರು ಈ ಕಾರ್ಯಕ್ರಮಕ್ಕೆ ಕರೆತಂದಿದ್ದರು. 

1990ರಲ್ಲಿ ಮೊದಲ ಬಾರಿಗೆ ರಾಜಕೀಯ ಪ್ರವೇಶ ಮಾಡಿದ್ದ ಅವರು 1998ರಲ್ಲಿ ಅಧ್ಯಕ್ಷೀಯ ಚುನಾವಣೆಯಲ್ಲಿ  ಶೇಕಡಾ 10ರಷ್ಟು ಮತಗಳನ್ನು ಗಳಿಸಿದ್ದರು.

Latest Videos
Follow Us:
Download App:
  • android
  • ios