Asianet Suvarna News Asianet Suvarna News

Queen Funeral: 14 ಗಂಟೆಗಳ ನಿರಂತರ ಕೆಲಸ: ಲೈವ್‌ನಲ್ಲೇ ನಿದ್ದೆಗೆ ಜಾರಿದ ನಿರೂಪಕಿ

14 ಗಂಟೆಗಳ ನಿರಂತರ ಕಾರ್ಯಕ್ರಮ ಪ್ರಸಾರದಿಂದ (broadcast) ದಣಿದಿದ್ದ ಟಿವಿ ಚಾನೆಲ್‌ನ ನಿರೂಪಕಿಯೊಬ್ಬರು ತನಗೆ ಅರಿವಿಲ್ಲದೇ ಲೈವ್‌ನಲ್ಲೇ ನಿದ್ದೆಗೆ ಜಾರಿದ ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿದೆ.

Australian TV presenter Allison falling asleep on live after lengthy coverage of Queen Elizabeth IIs funeral akb
Author
First Published Sep 20, 2022, 4:14 PM IST

ಇಂಗ್ಲೆಂಡ್:  14 ಗಂಟೆಗಳ ನಿರಂತರ ಕಾರ್ಯಕ್ರಮ ಪ್ರಸಾರದಿಂದ (broadcast) ದಣಿದಿದ್ದ ಟಿವಿ ಚಾನೆಲ್‌ನ ನಿರೂಪಕಿಯೊಬ್ಬರು ತನಗೆ ಅರಿವಿಲ್ಲದೇ ಲೈವ್‌ನಲ್ಲೇ ನಿದ್ದೆಗೆ ಜಾರಿದ ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿದೆ. ಇತ್ತೀಚೆಗೆ ನಿಧನರಾದ ರಾಣಿ ಎಲಿಜಬೆತ್ ಅಂತ್ಯಸಂಸ್ಕಾರವನ್ನು ನಿನ್ನೆ ನೆರವೇರಿಸಲಾಗಿತ್ತು. ಈ ಕಾರ್ಯಕ್ರಮವನ್ನು ನೇರ ಪ್ರಸಾರ ಮಾಡಲಾಗಿತ್ತು. ಈ ಸುದೀರ್ಘ ಪ್ರಸಾರ ಕಾರ್ಯದಲ್ಲಿ ಭಾಗಿಯಾಗಿದ್ದ ಆಸ್ಟ್ರೇಲಿಯಾದ ಟಿವಿ ಚಾನೆಲ್‌ವೊಂದರ ನಿರೂಪಕಿ ಅಲಿಸನ್ ಲಂಗ್ಡನ್ (Allison Langdon) ಅವರು ಲೈವ್‌ನಲ್ಲೇ ತನಗರಿವಿಲ್ಲದೇ ನಿದ್ದೆಗೆ ಜಾರಿದ್ದಾರೆ. 

ಬ್ರಿಟಿಷ್ ಸಾಮ್ರಾಜ್ಯವನ್ನು ಸುಧೀರ್ಘ ಕಾಲ ಆಳಿದ ಹೆಗ್ಗಳಿಕೆಗೆ ಪಾತ್ರರಾಗಿದ್ದ ರಾಣಿ ಎಲಿಜಬೆತ್ II (Queen Elizabeth) ಅವರ ಅಂತ್ಯಸಂಸ್ಕಾರ ಸರ್ವ ರೀತಿಯ ರಾಜ ಮರ್ಯಾದೆಯೊಂದಿಗೆ ನಿನ್ನೆ ಇಂಗ್ಲೆಂಡ್‌ನ ಸೇಂಟ್‌ ಜಾರ್ಜ್‌ ಚಾಪೆಲ್‌ನ ರಾಯಲ್‌ ವಾಲ್ಟ್‌ನಲ್ಲಿ(Royal Vault) ನಡೆದಿದೆ. ಸೆಪ್ಟೆಂಬರ್ 8 ರಂದು ನಿಧನರಾದ ರಾಣಿಯ ಅಂತ್ಯಸಂಸ್ಕಾರವನ್ನು ಹಲವು ಸಂಪ್ರದಾಯಗಳನ್ನು ಪೂರೈಸಿದ ಬಳಿಕ 11 ದಿನಗಳ ನಂತರ ಮಾಡಲಾಯಿತು. ರಾಣಿ ನಿಧನವಾದಾಗಿನಿಂದ ಅಂತ್ಯಸಂಸ್ಕಾರದವರೆಗಿನ ಎಲ್ಲಾ ದೃಶ್ಯಗಳನ್ನು ಬ್ರಿಟನ್‌ನ ಟಿವಿ ಮಾಧ್ಯಮಗಳು (British TV media) ಸೇರಿದಂತೆ, ಬ್ರಿಟನ್ ವಸಾಹತುಶಾಹಿಯನ್ನು ಇಂದಿಗೂ ಒಪ್ಪಿಕೊಂಡಿರುವ ಕೆಲ ದೇಶಗಳ ಟಿವಿ ಚಾನೆಲ್‌ಗಳು ನಿರಂತರ ಪ್ರಸಾರ ಮಾಡಿದ್ದವು. ಅದೇ ರೀತಿ ಆಸ್ಟ್ರೇಲಿಯಾದ ಟಿವಿ ನಿರೂಪಕಿಯೊಬ್ಬರು ಕೂಡ ಈ ಪ್ರಸಾರ ಕಾರ್ಯಕ್ರಮದ ಭಾಗವಾಗಿದ್ದರು. 

ಎಲಿಜಬೆತ್ ಸಾವು : ಡಯಾನಗಾಗಿ ಮಿಡಿಯುತ್ತಿರುವ ಬ್ರಿಟನ್ ಜನ

ಪ್ರಪಂಚದಾದ್ಯಂತ ಹಲವು ಮಾಧ್ಯಮಗಳು ರಾಣಿ ಎಲಿಜಬೆತ್ ಅಂತ್ಯಸಂಸ್ಕಾರವನ್ನು ನೇರ ಪ್ರಸಾರ ಮಾಡಿದ್ದವು. ಹಾಗೆಯೇ ಆಸ್ಟ್ರೇಲಿಯಾದ(Australia) ನೈನ್ ನೆಟ್‌ವರ್ಕ್‌ ನ  ನಿರೂಪಕಿ ಅಲಿಸನ್ ಲಂಗ್ಡನ್ ಕೂಡ ಈ ಪ್ರಸಾರ ಕಾರ್ಯದಲ್ಲಿ ಭಾಗಿಯಾಗಿದ್ದರು. ನಿರಂತರ ಸುದ್ದಿ ಪ್ರಸಾರದಿಂದ ದಣಿದ ಇವರು ಅಚಾನಕ್ ಆಗಿ ಲೈವ್‌ನಲ್ಲೇ ನಿದ್ದೆಗೆ ಜಾರಿದ್ದಾರೆ. ಇದನ್ನು ನೋಡಿದ ಟಿವಿ ವೀಕ್ಷಕರು, ಸಾಮಾಜಿಕ ಜಾಲತಾಣದಲ್ಲಿ ಆಕೆ ಲೈವ್‌ನಲ್ಲೇ ನಿದ್ದೆ ಮಾಡುತ್ತಿರುವ ಫೋಟೋಗಳನ್ನು ಹಂಚಿಕೊಂಡಿದ್ದರು. ಇದನ್ನು ಈಗ ಈ ನಿರೂಪಕಿ ಕೂಡ ತನ್ನ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದು, 14 ಗಂಟೆ, ಎಲ್ಲವೂ ಚೆನ್ನಾಗಿತ್ತು ಎಂದು ಕ್ಯಾಪ್ಷನ್ ನೀಡಿದ್ದಾರೆ. 

ಕೃಷ್ಣ ತೀರದಿಂದ ಲಂಡನ್ ತಲುಪಿದ್ದು ಹೇಗೆ ಕೋಹಿನೂರು ವಜ್ರ? ರಾಣಿ ಎಲಿಜಬೆತ್ ತೆರೆದಿಟ್ಟ ಸತ್ಯವೇನು?

ಆ ದಿನದ ಆರಂಭದಲ್ಲಿ ಅಲಿಸನ್ ಲಂಗ್ಡನ್ ಪೋಸ್ಟೊಂದನ್ನು ಹಾಕಿ, ರಾಣಿ ಎಲಿಜಬೆತ್ ಅವರ ಅಂತ್ಯಸಂಸ್ಕಾರದ(funeral) ಕ್ಷಣವನ್ನು ಪ್ರಸಾರ ಮಾಡುತ್ತಿರುವ ಅವಕಾಶ ಸಿಕ್ಕಿದ್ದು ನನ್ನ ಪುಣ್ಯ ಎಂದು ಬರೆದುಕೊಂಡಿದ್ದರು. ಬಂಕಿಂಗ್ ಹ್ಯಾಮ್ ಪ್ಯಾಲೇಸ್‌ನಿಂದ ರಾಣಿ ಎಲಿಜಬೆತ್ ಅವರ ವಿದಾಯದ ಕ್ಷಣ ನೋಡಲು ಸಿಕ್ಕಿರುವುದು ಪುಣ್ಯ, ಎಷ್ಟೋ ಜನರಿಗೆ ಎಷ್ಟೋ ವಿಚಾರಗಳನ್ನು ತಿಳಿಸಿದ ಮಹಿಳೆ ಅವರು, ಎಂಥಾ ವಿದಾಯ ಎಂದು ಬರೆದುಕೊಂಡಿದ್ದರು.

ಸೆಪ್ಟೆಂಬರ್ 8 ರಂದು 96 ನೇ ವಯಸ್ಸಿನಲ್ಲಿ ನಿಧನರಾದ ಬ್ರಿಟನ್ ರಾಣಿ ಎಲಿಜಬೆತ್ ಅವರನ್ನು, ಕಳೆದ ವರ್ಷ ನಿಧನರಾದ ಅವರ  ದಿವಂಗತ ಪತಿ ಪ್ರಿನ್ಸ್ ಫಿಲಿಪ್ ಅವರೊಂದಿಗೆ ಸಮಾಧಿ ಮಾಡಲಾಯಿತು. ವಿಶ್ವದ ವಿವಿಧ ದೇಶಗಳ ನಾಯಕರು, ಯುರೋಪಿಯನ್ ರಾಜಮನೆತನದ ಕುಟುಂಬಗಳು ಮತ್ತು ಲಕ್ಷಾಂತರ ಸಾರ್ವಜನಿಕರು ಅವರ ಅಂತಿಮ ದರ್ಶನ ಪಡೆದಿದ್ದರು.

ರಾಣಿಯ‌ ಅಂತ್ಯ ಸಂಸ್ಕಾರ ವೀಕ್ಷಣೆಗೆ ಬ್ರಿಟನ್‌ನಾದ್ಯಂತ ವ್ಯವಸ್ಥೆ ಮಾಡಲಾಗಿತ್ತು. ಪ್ರಮುಖ ನಗರಗಳ ಆಯಕಟ್ಟಿನ ಸ್ಥಳಗಳಲ್ಲಿ ಬೃಹತ್‌ ಪರದೆಗಳನ್ನು ಅಳವಡಿಸಿ ಅಲ್ಲಿ ವೆಸ್ಟ್‌ಮಿನಿಸ್ಟರ್‌ ಅಬೆಯಲ್ಲಿ ನಡೆಯುವ ಅಂತ್ಯಸಂಸ್ಕಾರ ಪ್ರಕ್ರಿಯೆಯನ್ನು ನೇರ ಪ್ರಸಾರ ಮಾಡಲಾಗಿತ್ತು. ಜೊತೆಗೆ ಬಹುತೇಕ ಎಲ್ಲಾ ಸಿನೆಮಾ ಥಿಯೇಟರ್‌ಗಳಲ್ಲೂ ಬೆಳಗ್ಗೆಯಿಂದ ರಾತ್ರಿಯವರೆಗೂ ಅಂತ್ಯಸಂಸ್ಕಾರ ಪ್ರಕ್ರಿಯೆಯ ನೇರ ಪ್ರಸಾರ ಮಾಡಲಾಗಿತ್ತು.
 

Follow Us:
Download App:
  • android
  • ios