ಮನೆಗಳ್ಳತನಕ್ಕೆ ಬಂದ ಖದೀಮನ ಕೊಲೆ ಕೊಲೆ ಮಾಡಿ 15 ವರ್ಷ ಮೃತದೇಹ ಮನೆಯಲ್ಲಿಟ್ಟುಕೊಂಡಿದ್ದ ವ್ಯಕ್ತಿ ಪೊಲೀಸರು ತನಿಖೆ ನಡೆಸಿದಾಗ  ಮನೆಯಲ್ಲಿ ಹೆಣ ಅಡಗಿಸಿಟ್ಟಿದ್ದು ಬಯಲು

ಸಿಡ್ನಿ (ಮೇ.21): ಮನೆಗಳ್ಳತನಕ್ಕೆ ಬಂದ ಖದೀಮನನ್ನು ಕೊಲೆಗೈದಿರುವ ವ್ಯಕ್ತಿಯೋರ್ವ, ಆ ಹೆಣವನ್ನು 15 ವರ್ಷಗಳ ಕಾಲ ಯಾರಿಗೂ ತಿಳಿಯದಂತೆ ರಹಸ್ಯವಾಗಿ ಇಟ್ಟಿದ್ದ ಅಪರೂಪದ ಘಟನೆ ಆಸ್ಪ್ರೇಲಿಯಾದಲ್ಲಿ ನಡೆದಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

2002ರಲ್ಲಿ ಮನೆಗೆ ಕನ್ನ ಹಾಕಲು ಬಂದಿದ್ದ ಕಳ್ಳನನ್ನು ಸಿಡ್ನಿಯ ಬ್ರೂಸ್‌ ರಾಬರ್ಟ್‌ ಗನ್‌ನಿಂದ ಹತ್ಯೆ ಮಾಡಿ ಆ ಮೃತದೇಹವನ್ನು ಅಡಗಿಸಿಟ್ಟಿದ್ದ. 

ಒಂದು ಸಣ್ಣ ಜಗಳಕ್ಕೆ ಕೊಲ್ಲೋದೆ ಕೊನೆ: ಇದು ಡಬ್ಬಲ್ ಮರ್ಡರ್ ಸ್ಟೋರಿ ...

ಕೊನೆಗೆ 2017ರಲ್ಲಿ ರಾಬರ್ಟ್‌ ಸಹ ವಯೋಸಹಜ ಕಾರಣಕ್ಕೆ ಸಾವಿಗೀಡಾಗಿದ್ದು, ಈ ವೇಳೆ ಸ್ಥಳಕ್ಕಾಗಮಿಸಿದ ಪೊಲೀಸರು ತನಿಖೆ ನಡೆಸಿದಾಗ ರಾಬರ್ಟ್‌ ಮನೆಯಲ್ಲಿ ಹೆಣ ಅಡಗಿಸಿಟ್ಟಿದ್ದು, ಗೊತ್ತಾಗಿದೆ. ಜೊತೆಗೆ ಆ ಹೆಣದ ವಾಸನೆ ಇತರೆಡೆ ಹಬ್ಬದಂತೆ 70 ಏರ್‌ ಫ್ರೆಶ್ನರ್‌ಗಳನ್ನು ಇಟ್ಟಿದ್ದ ಎಂದಿದ್ದಾರೆ ಪೊಲೀಸರು.