ಸಿಡ್ನಿ(ಮೇ  14)  ಇದು ದುಷ್ಯಂತ-ಶಾಕುಂತಲೆ ಕತೆ ಅಲ್ಲ.. ಆಸ್ಪ್ರೇಲಿಯಾದಲ್ಲಿ ನಡೆದ ಘಟನೆ ವರದಿ.  ಕಳೆದ ವರ್ಷ ಆಸ್ಟ್ರೇಲಿಯಾದ ವ್ಯಕ್ತಿಯೊಬ್ಬ ತನ್ನ ಮದುವೆ ರಿಂಗ್ ಕಳೆದುಕೊಂಡಿದ್ದ.  ಅದೀಗ ಮೀನಿನ ಕುತ್ತಿಗೆಯಲ್ಲಿ ಪತ್ತೆಯಾಗಿದೆ!

ಕಳೆದ ವರ್ಷ ಡಿಸೆಂಬರ್‌ನಲ್ಲಿ, ನಾಥನ್ ರೀವ್ಸ್ ಮತ್ತು ಅವರ ಪತ್ನಿ ಸುಜೀ ಕ್ವಿಂಟಾಲ್ ನಾರ್ಫೋಕ್ ದ್ವೀಪದ ಕರಾವಳಿಯಲ್ಲಿ ಈಜಲು ಹೋಗಿದ್ದರು.  ಈ ಸಂದರ್ಭ ಅವರು ಉಂಗುರ ಕಳೆದುಕೊಂಡಿದ್ದರು. ವಿವಾಹ ವಾರ್ಷಿಕೋತ್ಸದ ಎರಡನೇ ದಿನವೇ ಅವರಿಗೆ ಇಂಥ ಆಘಾತವಾಗಿತ್ತು.

ಉಂಗುರ ಹುಡುಕಲು ಮಾಡಿದ ಎಲ್ಲ ಯತ್ನಗಳು ವಿಫಲವಾಗಿದ್ದವು. ಆದರೆ ಈಗ  ಈಜಿನಲ್ಲಿ ಪರಿಣತಿ ಪಡೆದ ಸುಸಾನ್ ಪ್ರಿಯತರ್ ಎಂಬಾಕೆಗೆ ಈ ಉಂಗುರ ಮೀನಿನ ಕುತ್ತಿಗೆಯೊಂದರಲ್ಲಿ ಇರುವುದು ಕಂಡಿದೆ. ಆಕೆ ಸೋಶಿಯಲ್ ಮೀಡಿಯಾ ಮೂಲಕ ವಿಚಾರ ಹಂಚಿಕೊಂಡಿದ್ದು ಅಸಲಿ ಮಾಲೀಕರ ಪತ್ತೆಯಾಗಿದೆ.

ಸೋಂಕಿದ್ದಾಗ ಊಟ ಕೊಟ್ಟವರಿಗೆ ಚಿನ್ನದ ಬಳೆ ಧನ್ಯವಾದ

ರಿಂಗ್ ನ್ನು ಇನ್ನು ಮೀನಿನಿಂದ ಬೇರ್ಪಡಿಸಲಾಗಿಲ್ಲ.  ಮೀನುಗಳಿಗೆ ಪ್ಲಾಸ್ಟಿಕ್ ಸಹ ಸುತ್ತಿಕೊಂಡಿವೆ ಎಂಬ ಅಂಶವನ್ನು ಪ್ರಿಯರ್ ಹೇಳಿದ್ದು ಪರಿಸರ ಕಾಪಾಡಬೇಕಾದ್ದು ನಮ್ಮ ಹೊಣೆ ಎಂದು ನೆನಪಿಸುತ್ತಾರೆ.

ಒಟ್ಟಿನಲ್ಲಿ ಕಳೆದು ಹೋದ ಉಂಗುರ ಕಂಡಿದ್ದರೂ ಕೈಗೆ ಸಿಕ್ಕಿಲ್ಲ. ಆ ಮೀನನ್ನು ಹಿಡಿಯುವ ಸಾಹಸ  ಇನ್ನು ಯಾರೋ ಮಾಡುತ್ತಾರೋ ಗೊತ್ತಿಲ್ಲ.