400 ಪಾಕಿಸ್ತಾನಿಯರು ಸೇರಿದಂತೆ 750ಕ್ಕೂ ಹೆಚ್ಚು ವಲಸಿಗರನ್ನು ಕೊಂಡೊಯ್ಯುತ್ತಿದ್ದ ಬೋಟೊಂದು ಗ್ರೀಸ್‌ ದೇಶದ ಕಡಲ ತೀರದಲ್ಲಿ ಮುಳುಗಿದ ಕಾರಣ, 300ಕ್ಕೂ ಹೆಚ್ಚು ಪಾಕಿಸ್ತಾನಿ ಪ್ರಜೆಗಳು ಸಾವನ್ನಪ್ಪಿರುವ ಭೀತಿ ಎದುರಾಗಿದೆ.

ಅಥೆನ್ಸ್‌: 400 ಪಾಕಿಸ್ತಾನಿಯರು ಸೇರಿದಂತೆ 750ಕ್ಕೂ ಹೆಚ್ಚು ವಲಸಿಗರನ್ನು ಕೊಂಡೊಯ್ಯುತ್ತಿದ್ದ ಬೋಟೊಂದು ಗ್ರೀಸ್‌ ದೇಶದ ಕಡಲ ತೀರದಲ್ಲಿ ಮುಳುಗಿದ ಕಾರಣ, 300ಕ್ಕೂ ಹೆಚ್ಚು ಪಾಕಿಸ್ತಾನಿ ಪ್ರಜೆಗಳು ಸಾವನ್ನಪ್ಪಿರುವ ಭೀತಿ ಎದುರಾಗಿದೆ. ಘಟನೆಯಲ್ಲಿ ಈವರೆಗೆ 78 ಜನರನ್ನು ಮಾತ್ರವೇ ರಕ್ಷಿಸಲಾಗಿದೆ. ಉಳಿದ 500ಕ್ಕೂ ಹೆಚ್ಚು ನಾಪತ್ತೆಯಾಗಿರುವ ಕಾರಣ ಸಾವಿನ ಸಂಖ್ಯೆ 600 ದಾಟುವ ಆತಂಕ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಸೋಮವಾರ ಪಾಕಿಸ್ತಾನ ಸರ್ಕಾರ ಒಂದು ದಿನದ ರಾಷ್ಟ್ರೀಯ ಶೋಕಾಚರಣೆ ಘೋಷಿಸಿತ್ತು. ಅಲ್ಲದೆ ಅಕ್ರಮ ವಲಸೆಗೆ ನೆರವಾಗಿದ್ದ 12 ಜನರನ್ನು ಬಂಧಿಸಿದೆ. ಜೊತೆಗೆ ಇಂಥ ಮಾನವ ಕಳ್ಳಸಾಗಣೆ ಕೃತ್ಯದಲ್ಲಿ ತೊಡಗಿಸಿಕೊಂಡಿರುವವರ ವಿರುದ್ಧ ಕಠಿಣ ಕ್ರಮಕ್ಕೆ ಆದೇಶಿಸಿದೆ.

ಏನಾಯ್ತು?:

ದೇಶದ ಕೆಟ್ಟಆರ್ಥಿಕ ಪರಿಸ್ಥಿತಿ (bad economic situation), ಹಣದುಬ್ಬರ (inflation) ಮೊದಲಾದ ಸಮಸ್ಯೆಯಿಂದ ಕಂಗೆಟ್ಟ ಸಾವಿರಾರು ಪಾಕಿಸ್ತಾನಿ ಪ್ರಜೆಗಳು ಪ್ರತಿವರ್ಷ ಉತ್ತಮ ಬದುಕು ಅರಸಿ ಅಕ್ರಮ ಮಾರ್ಗದ ಮೂಲಕ ಯುರೋಪ್‌ ದೇಶಗಳನ್ನು (European countries) ಪ್ರವೇಶಿಸುತ್ತಾರೆ. ಇದಕ್ಕಾಗಿ ಪ್ರತಿ ಕುಟುಂಬ 25 ಲಕ್ಷ ರು.ಗಳನ್ನು ವ್ಯಯಿಸುತ್ತದೆ. ಇಂಥ ಪ್ರಯಾಣದ ಭಾಗವಾಗಿ 400 ಪಾಕಿಸ್ತಾನಿ ಪ್ರಜೆಗಳು ಸೇರಿದಂತೆ 750 ಜನರನ್ನು ಹೊತ್ತ ಬೋಟೊಂದು ಕಳೆದ ವಾರ ಟರ್ಕಿಯಿಂದ ಇಟಲಿಯತ್ತ ಪ್ರಯಾಣಿಸುತ್ತಿತ್ತು. ಸಮುದ್ರದಲ್ಲಿ ಕಿಕ್ಕಿರಿದು ತುಂಬಿದ್ದ ಬೋಟನ್ನು ಕಂಡ ಗ್ರೀಕ್‌ ಕರಾವಳಿ ಪಡೆಯ ಸಿಬ್ಬಂದಿ, ಜನರಿಗೆ ನೆರವಿನ ಹಸ್ತ ಚಾಚಿದರೂ ಬೋಟ್‌ನಲ್ಲಿದ್ದ ಜನತೆ ಅದನ್ನು ತಿರಸ್ಕರಿಸಿ ತಮ್ಮ ಪ್ರಯಾಣ ಮುಂದುವರೆಸಿದ್ದಾರೆ.

ಮೆಡಿಟರೇನಿಯನ್ ಸಮುದ್ರದಲ್ಲಿ ದುರಂತ, 90 ಮಂದಿ ಸಾವು, ನಾಲ್ವರು ಗಂಭೀರ!

ಇದಾದ ಕೆಲ ಹೊತ್ತಿನಲ್ಲೇ ಸಮುದ್ರದ ಅಲೆಗಳ ಹೊಡೆತಕ್ಕೆ ಸಿಕ್ಕಿ ಮಾರ್ಗ ಬಿಟ್ಟು ಬೇರೆ ಕಡೆ ಚಲಿಸುತ್ತಿದ್ದ ಬೋಟ್‌ಗೆ ನೆರವಾಗಲು ಮತ್ತೊಂದು ಬೋಟ್‌ನ ಸಿಬ್ಬಂದಿ ಮುಂದಾಗಿದ್ದರು. ಹೀಗೆ ನೆರವಿನ ಯತ್ನದ ವೇಳೆ ಬೋಟನ್ನು ಎಳೆದಾಗ ಅದು ಮಗುಚಿ ಬಿದ್ದು ದುರ್ಘಟನೆ ಸಂಭವಿಸಿದೆ. ಬಳಿಕ ಘಟನಾ ಸ್ಥಳದಿಂದ 12 ಪಾಕಿಸ್ತಾನಿ ಪ್ರಜೆಗಳು ಸೇರಿದಂತೆ 78 ಜನರನ್ನು ಮಾತ್ರವೇ ರಕ್ಷಿಸಲಾಗಿದೆ. ಉಳಿದ 500ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ. ಘಟನೆ ನಡೆದು ನಾಲ್ಕೈದು ದಿನಗಳು ಸಂಭವಿಸಿರುವ ಹಿನ್ನೆಲೆಯಲ್ಲಿ ನಾಪತ್ತೆಯಾಗಿರುವವರು ಬದುಕಿರುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.

ಕೆಳ​ಮ​ಹ​ಡಿಗೆ ಪಾಕಿಗ​ಳನ್ನು ದಬ್ಬಿದ್ದೇ ಅವರ ಸಾವಿಗೆ ಕಾರ​ಣ?

ದೋಣಿ ಮುಳು​ಗು​ತ್ತಿದೆ ಎಂದು ಗೊತ್ತಾ​ಗು​ತ್ತಿ​ದ್ದಂತೆಯೇ ಬೋಟ್‌ನ ಕೆಳ ಮಹಡಿಗೆ ಅವ​ರನ್ನು ಕಳಿ​ಸ​ಲಾ​ಗಿದೆ. ಏಕೆಂದರೆ ಮುಳು​ಗು​ವು​ದ​ರಿಂದ ಹೆಚ್ಚು ಬಾಧಿ​ತ​ವಾ​ಗು​ವುದು ಕೆಳ​ಮ​ಹಡಿ. ಹೀಗಾಗಿ ದುರ್ಘಟನೆಯಲ್ಲಿ ಪಾಕಿಸ್ತಾನಿ ಪ್ರಜೆಗಳ ಸಾವೇ ಹೆಚ್ಚಿದೆ. ಅವ​ರು ಬದುಕಿರುವ ಸಾಧ್ಯತೆ ಕಡಿಮೆ. ಕಾರಣ, ಅಲ್ಲಿ ಇದ್ದವರು ತಪ್ಪಿಸಿಕೊಳ್ಳುವ ಸಾಧ್ಯತೆ ತೀರಾ ಕಡಿಮೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಉಡುಪಿ ಕೊಡೇರಿ ಬೋಟ್ ದುರಂತ: ನಾಪತ್ತೆಯಾಗಿದ್ದ ನಾಲ್ವರ ಶವ ಪತ್ತೆ

ಕುಡಿಯಲೂ ನೀರಿಲ್ಲ:

ಬೋಟ್‌ನಲ್ಲಿ ಕುಡಿಯುವ ನೀರು ಕೂಡಾ ಖಾಲಿಯಾಗಿತ್ತು ಸಮುದ್ರದಲ್ಲಿ ದೊಡ್ಡ ಹಡಗಿನ ನಾವಿಕರು ನೀಡಿದ ಸ್ವಲ್ಪ ನೀರನ್ನು ಬಳಸಿ ಜೀವ ಉಳಿಸಿಕೊಂಡಿದ್ದೆವು. ಆದರೆ ಕಳೆದ 5 ದಿನಗಳಿಂದ ಬೋಟ್‌ ತನ್ನ ನಿರ್ಧರಿತ ಮಾರ್ಗ ಬಿಟ್ಟು ಅಲೆಗಳ ಹೊಡೆತಕ್ಕೆ ಬೇರೆಡೆ ಚಲಿಸುತ್ತಿತ್ತು ಎಂದು ಘಟನೆಯಲ್ಲಿ ಬದುಕುಳಿದ ಪಾಕಿಸ್ತಾನಿ ವ್ಯಕ್ತಿಯೊಬ್ಬ ತನ್ನ ಕುಟುಂಬಕ್ಕೆ ಕರೆ ಮಾಡಿ ಮಾಹಿತಿ ನೀಡಿದ್ದಾನೆ.