ಅಬಾರ್ಷನ್ ಕಾನೂನು ಬದ್ಧ..! ದಶಕದ ಹೋರಾಟಕ್ಕೆ ಜಯ

ಗರ್ಭಧಾರಣೆಯ 14 ನೇ ವಾರದವರೆಗೆ ಗರ್ಭಪಾತಕ್ಕೆ ಅವಕಾಶ | ಅತ್ಯಾಚಾರ ಅಥವಾ ತಾಯಿಯ ಜೀವಕ್ಕೆ ಅಪಾಯದ ಸಂದರ್ಭಗಳಲ್ಲಿ ಕಾನೂನು ಬದ್ಧ ಅಬಾರ್ಷನ್

Argentine Senate approves bill legalizing abortion after marathon 12-hour session dpl

ಅರ್ಜೆಂಟೈನಾದ ಸೆನೆಟ್ ಸುಮಾರು 12 ಗಂಟೆಯ ಸೆಷನ್ ನಂತರ ಅಬಾರ್ಷನ್ ಕಾನೂನುಬದ್ಧಗೊಳಿಸುವ ಕಾನೂನನ್ನು ಅನುಮೋದಿಸಿದೆ. ಈ ಮೂಲಕ ದಶಕಗಳಿಂದ ಇದಕ್ಕಾಗಿ ಹೋರಾಡುತ್ತಿದ್ದ ಮಹಿಳಾ ಚಳುವಳಿಗೆ ಗೆಲುವು ದೊರೆತಂದಾಗಿದೆ.

ಗರ್ಭಧಾರಣೆಯ 14 ನೇ ವಾರದವರೆಗೆ ಪೋಪ್ ಫ್ರಾನ್ಸಿಸ್ ಅವರ ತಾಯ್ನಾಡಿನಲ್ಲಿ ಗರ್ಭಪಾತವನ್ನು ಕಾನೂನುಬದ್ಧಗೊಳಿಸಲಾಗಿದೆ. ಅತ್ಯಾಚಾರ ಅಥವಾ ತಾಯಿಯ ಜೀವಕ್ಕೆ ಅಪಾಯದ ಸಂದರ್ಭಗಳಲ್ಲಿ ಅಬಾರ್ಷನ್ ಕಾನೂನುಬದ್ಧವಾಗಿರುತ್ತದೆ. ಅಬಾರ್ಷನ್ ಎಂದರೆ ಅದು ಕಾನೂನುಬಾಹಿರ ಎಂದು ಬಲವಾಗಿ ಜಾರಿಯಲ್ಲಿದ್ದ ಖಂಡದಾದ್ಯಂತ ಇದು ಹೊಸ ಬದಲಾವಣೆ ತರಲಿದೆ.

ರಾಮ ಮಂದಿರ ಫೌಂಡೇಷನ್ ಕೆಳಗೇ ಸರಯೂ ತೊರೆ: ಗಟ್ಟಿ ಅಡಿಪಾಯಕ್ಕಾಗಿ IIT ನೆರವು

ಮಂಗಳವಾರ ತಡವಾಗಿ ಪ್ರಾರಂಭವಾದ ಅಧಿವೇಶನದ ನಂತರ ಈ ಹೊಸ ನಿಯಮದ ಪರವಾಗಿ 38 ಮತಗಳು, ವಿರುದ್ಧವಾಗಿ 29 ಮತಗಳಿದ್ದವು.
ಇದನ್ನು ಅರ್ಜೆಂಟೀನಾ ಚೇಂಬರ್ ಆಫ್ ಡೆಪ್ಯೂಟೀಸ್ ಅನುಮೋದಿಸಿದೆ.

ಅರ್ಜೆಂಟೀನಾ ಗರ್ಭಪಾತವನ್ನು ಕಾನೂನುಬದ್ಧಗೊಳಿಸಿದ ಅತಿದೊಡ್ಡ ಲ್ಯಾಟಿನ್ ಅಮೆರಿಕನ್ ರಾಷ್ಟ್ರವಾಗಲಿದೆ. ಉರುಗ್ವೆ, ಕ್ಯೂಬಾ, ಮೆಕ್ಸಿಕೊ ನಗರ, ಮೆಕ್ಸಿಕೊದ ಓಕ್ಸಾಕ ರಾಜ್ಯ, ಆಂಟಿಲೀಸ್ ಮತ್ತು ಫ್ರೆಂಚ್ ಗಯಾನಾಗಳನ್ನು ಹೊರತುಪಡಿಸಿ, ಗರ್ಭಪಾತವು ಈ ಪ್ರದೇಶದಾದ್ಯಂತ ಕಾನೂನುಬಾಹಿರವಾಗಿ ಉಳಿದಿದೆ.

ಆಕ್ಸ್‌ಫರ್ಡ್‌ ಲಸಿಕೆಗೆ ಬ್ರಿಟನ್‌ ಒಪ್ಪಿಗೆ: ಸಂಗ್ರಹಕ್ಕೆ ಮೈನಸ್‌ 70 ಡಿಗ್ರಿ ಬೇಕಿಲ್ಲ, ಬೆಲೆಯೂ ಅಗ್ಗ

ಅರ್ಜೆಂಟೀನಾ ಇಲ್ಲಿಯವರೆಗೆ ಮಹಿಳೆಯರಿಗೆ ಗರ್ಭಪಾತಕ್ಕೆ ಸಹಾಯ ಮಾಡುವವರಿಗೆ ದಂಡ ವಿಧಿಸಿತ್ತು. ಅತ್ಯಾಚಾರ ಅಥವಾ ತಾಯಿಯ ಆರೋಗ್ಯಕ್ಕೆ ಅಪಾಯವನ್ನು ಒಳಗೊಂಡಿರುವ ಪ್ರಕರಣಗಳು ಮಾತ್ರ ಇದಕ್ಕೆ ಹೊರತಾಗಿವೆ, ಮತ್ತು ಕೆಲವು ಪ್ರಾಂತ್ಯಗಳಲ್ಲಿ ಈ ವಿನಾಯಿತಿಗಳನ್ನು ಪರಿಗಣಿಸುವುದಿಲ್ಲ ಎಂದು ಕಾರ್ಯಕರ್ತರು ದೂರಿದ್ದಾರೆ.

Latest Videos
Follow Us:
Download App:
  • android
  • ios