ರಾಮ ಮಂದಿರ ಫೌಂಡೇಷನ್ ಕೆಳಗೇ ಸರಯೂ ತೊರೆ: ಗಟ್ಟಿ ಅಡಿಪಾಯಕ್ಕಾಗಿ IIT ನೆರವು

ಉದ್ದೇಶಿ ರಾಮ ಮಂದಿರ ನಿರ್ಮಾಣದ ಸ್ಥಳದಲ್ಲಿಯೇ ಸರಯೂ ನದಿಯ ತೊರೆ | ಗಟ್ಟಿ ಅಡಿಪಾಯಕ್ಕೆ ಐಐಟಿ ಐಡಿಯಾ ಕೇಳಿದ ಟ್ರಸ್ಟ್

Saryu river stream found below proposed foundation of Ram Temple trust seeks IITs help dpl

ನವದೆಹಲಿ(ಡಿ.31): ರಾಮ ಮಂದಿರ ನಿರ್ಮಿಸಲು ಉದ್ದೇಶಿಸಿದ ಸ್ಥಳದಲ್ಲಿಯೇ ಸರಯೂ ನದಿಯ ತೊರೆಯೊಂದು ಹಾದು ಹೋಗುವುದರಿಂದ ಗಟ್ಟಿಯಾದ ಫೌಂಡೇಷನ್ ಮಾಡೆಲ್ ಮಾಡಿಕೊಡುವಂತೆ ರಾಮ ಮಂದಿರ ಟ್ರಸ್ಟ್ ಐಐಟಿ ನೆರವು ಕೋರಿದೆ. ಪ್ರಧಾನಿಯ ಪ್ರಧಾನ ಕಾರ್ಯದರ್ಶಿಯಾಗಿದ್ದ ನೃಪೇಂದ್ರ ಮಿಶ್ರಾ ನಿರ್ಮಾಣ ಸಮಿತಿಯ ನೇತೃತ್ವ ವಹಿಸಿದ್ದು, ಈ ಸಂಬಂಧ ಚರ್ಚೆ ನಡೆಸಿದ್ದಾರೆ.

ಚರ್ಚೆಯ ಸಂದರ್ಭ ಈಗಿರುವ ಮಂದಿರದ ಮಾದರಿಯ ಕೆಳಗೆಯೇ ಸರಯೂ ನದಿಯ ತೊರೆ ಬರುವ ಬಗ್ಗೆಯೂ ಚರ್ಚೆಯಾಗಿದೆ..  ಹೀಗಾಗಿ ಮಂದಿರಕ್ಕೆ ಇನ್ನಷ್ಟು ಗಟ್ಟಿಯ ಫೌಂಡೇಷನ್ ಸಿಗುವಂತೆ ಮಾಡೆಲ್ ನಿರ್ಮಿಸಿಕೊಡುವಂತೆ ಐಐಟಿಯ ನೆರವು ಕೇಳಿರುವುದಾಗಿ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ತಿಳಿಸಿದೆ.

ಜ.15ರಿಂದ ರಾಮಮಂದಿರಕ್ಕೆ ದೇಣಿಗೆ ಸಂಗ್ರಹ: ವಿಎಚ್‌ಪಿ

ರಾಮ ಮಂದಿರವನ್ನು 2023 ರಲ್ಲಿ ಪೂರ್ಣಗೊಳ್ಳಲು ನಿರ್ಧರಿಸಲಾಗಿದೆ. ದೇವಾಲಯದ ಟ್ರಸ್ಟ್‌ನ ನಿರ್ಮಾಣ ಸಮಿತಿಯು ಎರಡು ಆಯ್ಕೆಗಳ ಬಗ್ಗೆ ಚರ್ಚಿಸುತ್ತಿದೆ.0 ಕಲ್ಲುಗಳನ್ನು ಇಡಬಹುದಾದ ರಾಫ್ಟ್‌ಗಳನ್ನು ಬೆಂಬಲಿಸಲು ವೈಬ್ರೊ ಕಲ್ಲಿನ ಕಾಲಮ್‌ಗಳನ್ನು ಬಳಸುವುದು, ಮತ್ತು ಇನ್ನೊಂದು ಎಂಜಿನಿಯರಿಂಗ್ ಮಿಶ್ರಣವನ್ನು ಸೇರಿಸುವ ಮೂಲಕ ಮಣ್ಣಿನ ಗುಣಮಟ್ಟ ಮತ್ತು ಹಿಡಿತವನ್ನು ಸುಧಾರಿಸುವುದರ ಬಗ್ಗೆ ಚರ್ಚಿಸಲಾಗುತ್ತಿದೆ.

Latest Videos
Follow Us:
Download App:
  • android
  • ios