ಅಮೆರಿಕದ ಪೊಲೀಸರು ಹಾರ್ವರ್ಡ್ ಬಳಿಯ ಐಷಾರಾಮಿ ವೇಶ್ಯಾವಾಟಿಕೆ ಜಾಲವನ್ನು ಭೇದಿಸಿದ್ದಾರೆ. ಸಿಇಒಗಳು, ವೈದ್ಯರು, ವಕೀಲರು ಇಲ್ಲಿಗೆ ಬರುತ್ತಿದ್ದರು. ಪ್ರತಿ ಗಂಟೆಗೆ 50 ಸಾವಿರ ರೂ. ನೀಡಲಾಗುತ್ತಿತ್ತು. ಗ್ರೇಡಿಯಂಟ್‌ನ ಸಿಇಒ ಅನುರಾಗ್ ಬಾಜ್‌ಪೇಯಿ ಸೇರಿದಂತೆ 30ಕ್ಕೂ ಹೆಚ್ಚು ಪ್ರಮುಖರ ಮಾಹಿತಿ ಬಹಿರಂಗವಾಗಿದೆ. 2025ರಲ್ಲಿ ಬಾಜ್‌ಪೇಯಿ ಬಂಧನವಾಗಿದ್ದು, ಗ್ರೇಡಿಯಂಟ್ ಸಂಸ್ಥೆ ಬೆಂಬಲ ನೀಡಿದೆ. ಬಾಜ್‌ಪೇಯಿ ಭಾರತೀಯ ಮೂಲದವರಾಗಿದ್ದು, MITಯಿಂದ ಪಿಎಚ್‌ಡಿ ಪದವಿ ಪಡೆದಿದ್ದಾರೆ.

ನ್ಯೂಯಾರ್ಕ್‌ (ಏ.11): ವಿಶ್ವದ ಅತ್ಯಂತ ಪ್ರಖ್ಯಾತ ಯುನಿವರ್ಸಿಟಿಗಳಲ್ಲಿ ಒಂದಾದ ಹಾರ್ವರ್ಡ್‌ ಯುನಿವರ್ಸಿಟಿಯ ಸನಿಹ ಇರುವ ಐಷಾರಾಮಿ ಅಪಾರ್ಟ್‌ಮೆಂಟ್‌ಗಳಲ್ಲಿ ನಡೆಯುತ್ತಿದ್ದ ಐಷಾರಾಮಿ ವೇಶ್ಯಾವಾಟಿಕೆ ಜಾಲವನ್ನು ಅಮೆರಿಕದ ಪೊಲೀಸರು ಬೇಧಿಸಿದ್ದಾರೆ. ವಿಶ್ವದ ಪ್ರಖ್ಯಾತ ಕಂಪನಿಗಳ ಸಿಇಒಗಳು, ವೈದ್ಯರು, ವಕೀಲರು ಹಾಗೂ ರಾಜಕಾರಣಿಗಳಿಗೆ ಇದು ತಾಣವಾಗಿತ್ತು ಎನ್ನಲಾಗಿದೆ.

ಐಷಾರಾಮಿ ವೇಶ್ಯಾವಾಟಿಕೆ ತಾಣದ ಒಳಹೊಕ್ಕಲು ಇವರುಗಳು ತಮ್ಮ ಐಡಿ, ವರ್ಕ್‌ ಬ್ಯಾಡ್ಜ್‌ ಹಾಗೂ ವೈಯಕ್ತಿಕ ರೆಫರೆನ್ಸ್‌ಗಳನ್ನೂ ನೀಡಿದ್ದರು ಎಂದು ವಾಲ್‌ ಸ್ಟ್ರೀಟ್‌ ಜರ್ನಲ್‌ ಪತ್ರಿಕೆ ವರದಿಯಲ್ಲಿ ತಿಳಿಸಿದೆ. ಇಲ್ಲಿ ಪ್ರತಿ ಗಂಟೆಯ ಸೆಕ್ಸ್‌ಗೆ 600 ಡಾಲರ್‌ ಅಂದರೆ 50 ಸಾವಿರ ರೂಪಾಯಿ ಪಾವತಿ ಮಾಡಲಾಗುತ್ತಿತ್ತು. ಇದು ಇರಿಸಿಕೊಂಡಿದ್ದ ವಿವರವಾದ ದಾಖಲೆಗಳು ಈಗ "ದಿ ಕೇಂಬ್ರಿಡ್ಜ್ ವೇಶ್ಯಾಗೃಹ ವಿಚಾರಣೆಗಳು" ಎಂದು ಕರೆಯಲ್ಪಡುವ ಕ್ರಿಮಿನಲ್ ವಿಚಾರಣೆಗಳ ಸರಣಿಯ ಕೇಂದ್ರಬಿಂದುವಾಗಿದೆ.

ಲೈಂಗಿಕತೆಗೆ ಹಣ ನೀಡಿದ 30 ಕ್ಕೂ ಹೆಚ್ಚು ಪ್ರಮುಖ ಪುರುಷರ ಮಾಹಿತಿಯನ್ನು ಬಹಿರಂಗ ಮಾಡಲಾಗಿದೆ. ಅವರಲ್ಲಿ $1 ಬಿಲಿಯನ್‌ಗಿಂತಲೂ ಹೆಚ್ಚು ಮೌಲ್ಯದ ತ್ಯಾಜ್ಯನೀರಿನ ಸಂಸ್ಕರಣಾ ಸಂಸ್ಥೆಯಾದ ಗ್ರೇಡಿಯಂಟ್‌ನ ಸಿಇಒ ಅನುರಾಗ್ ಬಾಜ್‌ಪೇಯಿ ಕೂಡ ಒಬ್ಬರಾಗಿದ್ದಾರೆ. ಇವರು ಭಾರತದ ಲಕ್ನೋ ಮೂಲದವರಾಗಿದ್ದಾರೆ.

2025 ರ ಆರಂಭದಲ್ಲಿ ನಡೆದ ಸ್ಟಿಂಗ್‌ ಆಪರೇಷನ್‌ ಸಂದರ್ಭದಲ್ಲಿ ಅನುರಾಗ್ ಬಾಜಪೇಯಿ ಅವರನ್ನು ಬಂಧಿಸಲಾಗಿತ್ತು. ಅವರು ಐಷಾರಾಮಿ ವೇಶ್ಯಾಗೃಹದಲ್ಲಿ ಲೈಂಗಿಕತೆಗೆ ಹಲವಾರು ಬಾರಿ ಹಣ ಪಾವತಿಸಿದ್ದಾರೆ ಎಂದು ಆರೋಪಿಸಲಾಗಿದೆ. ಬೋಸ್ಟನ್ ಪ್ರದೇಶದಲ್ಲಿ ಡಜನ್‌ಗಟ್ಟಲೆ ಪುರುಷರೊಂದಿಗೆ ಬಾಜಪೇಯಿ ಅವರನ್ನು ದುಷ್ಕೃತ್ಯದ ಆರೋಪದ ಮೇಲೆ ಬಂಧಿಸಲಾಯಿತು. ಕಳೆದ ತಿಂಗಳು ನ್ಯಾಯಾಲಯದ ದಾಖಲೆಗಳಲ್ಲಿ ಹೆಸರಿಸಲಾದ ಹಲವಾರು ಇತರ ಸಿಇಒಗಳಲ್ಲಿ ಅವರೂ ಒಬ್ಬರಾಗಿದ್ದಾರೆ.

ಆದರೆ, ಬೋಸ್ಟನ್ ವೇಶ್ಯಾಗೃಹ ಹಗರಣದಲ್ಲಿ ಗ್ರೇಡಿಯಂಟ್ ತನ್ನ ಸಿಇಒ ಬೆಂಬಲಕ್ಕೆ ನಿಂತಿದೆ. "ನಾವು ನ್ಯಾಯ ವ್ಯವಸ್ಥೆಯಲ್ಲಿ ನಂಬಿಕೆ ಇಡುತ್ತೇವೆ ಮತ್ತು ಇದು ಸರಿಯಾದ ಸಮಯದಲ್ಲಿ ಅನುಕೂಲಕರವಾಗಿ ಪರಿಹರಿಸಲ್ಪಡುತ್ತದೆ ಎಂಬ ವಿಶ್ವಾಸ ನಮಗಿದೆ" ಎಂದು ಗ್ರೇಡಿಯಂಟ್ ಪ್ರತಿನಿಧಿ ಫೆಲಿಕ್ಸ್ ವಾಂಗ್ ಹೇಳಿದ್ದಾರೆ. "ಇದಕ್ಕೆ ಸಂಬಂಧಿಸದೆ, ಗ್ರೇಡಿಯಂಟ್ ತಾಂತ್ರಿಕ ನಾವೀನ್ಯತೆಯಲ್ಲಿ ಶ್ರೇಷ್ಠತೆಯನ್ನು ಮುಂದುವರಿಸುತ್ತದೆ ಮತ್ತು ಎಲ್ಲಾ ಸಮಾಜಕ್ಕೂ ಶುದ್ಧ ನೀರನ್ನು ಖಚಿತಪಡಿಸಿಕೊಳ್ಳುವ ನಮ್ಮ ಧ್ಯೇಯದತ್ತ ಶ್ರಮಿಸುತ್ತದೆ." ಎಂದಿದ್ದಾರೆ.

ಚೀನಾ ಮೇಲೆ ಅಮೆರಿಕದ 90 ದಿನ ತೆರಿಗೆ ತಡೆ ಏಕಿಲ್ಲ ? ತಂತ್ರಗಾರಿಕೆ ತೆರಿಗೆ ಏರಿಕೆ ಹಿಂದೆ ವ್ಯೂಹಾತ್ಮಕ ಕಾರಣ

ಯಾರಿವರು ಅನಿರಾಗ್‌ ಬಾಜಪೇಯಿ: ಅನುರಾಗ್ ಬಾಜಪೇಯಿ ಅವರು ಭಾರತೀಯ ಮೂಲದವರು, ಅಮೆರಿಕದ ಪ್ರಖ್ಯಾತ ತ್ಯಾಜ್ಯ ನೀರು ಸಂಸ್ಕರಣಾ ಸಂಸ್ಥೆಯಾದ ಗ್ರೇಡಿಯಂಟ್‌ನ ಸಹ-ಸಂಸ್ಥಾಪಕ ಮತ್ತು ಸಿಇಒ ಆಗಿದ್ದಾರೆ. ಅವರು ಪ್ರತಿಷ್ಠಿತ ಮ್ಯಾಸಚೂಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (MIT) ಯಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಪಿಎಚ್‌ಡಿ ಪದವಿ ಪಡೆದಿದ್ದಾರೆ, ಕೈಗಾರಿಕಾ ಉಪ್ಪುನೀರಿನ ಸಂಸ್ಕರಣೆ ಮತ್ತು ನೀರಿನ ಸಂಸ್ಕರಣೆಯ ಮೇಲೆ ಕೇಂದ್ರೀಕರಿಸಿದ್ದಾರೆ. ಬಾಜಪೇಯಿ ಅವರ ಲಿಂಕ್ಡ್‌ಇನ್ ಪ್ರೊಫೈಲ್ ಅವರು MIT ಯಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ ಎಂದು ಸೂಚಿಸುತ್ತಿದೆ. ಅವರು 2008 ರಲ್ಲಿ ಪದವಿ ಪಡೆದಿದ್ದಾರೆ ಎನ್ನಲಾಗಿದೆ.

ರಾಣಾ ಗಡೀಪಾರಿಗಾಗಿ ಅಮೆರಿಕದಲ್ಲಿ ಹೋರಾಟ ನಡೆಸಿದ್ದು ನ್ಯಾ.ಸಂತೋಷ್ ಹೆಗ್ಡೆ ಶಿಷ್ಯ!