ಆ್ಯಂಟನೋ ಗುಟೆರಸ್ ಮರು ಆಯ್ಕೆ ಮುಂದಿನ 5 ವರ್ಷಗಳ ಕಾಲ ಯುನೈಟೆಡ್ ನೇಶನ್ಸ್ ಸೆಕ್ರೆಟರಿ ಜನರಲ್ ಆಗಿ ಆಯ್ಕೆ ಜನವರಿ1, 2022ರಿಂದ 2ನೇ ಅವಧಿ ಆರಂಭ

ನ್ಯೂಯಾರ್ಕ್(ಜೂ.18); ವಿಶ್ವ ಸಂಸ್ಥೆ ಪ್ರಧಾನ ಕಾರ್ಯದರ್ಶಿಯಾಗಿ ಆ್ಯಂಟನೋ ಗುಟೆರಸ್ 2ನೇ ಅವಧಿಗೆ ಆಯ್ಕೆಯಾಗಿದ್ದಾರೆ. 193 ಸದಸ್ಯ ರಾಷ್ಟ್ರಗಳ ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಸರ್ವಾನುಮತದಿಂದ ಗುಟೆರಸ್ ಅವರನ್ನು ಮರು ಆಯ್ಕೆ ಮಾಡಲಾಗಿದೆ. ಗುಟೆರಸ್ 2ನೇ ಅವಧಿ ಜನವರಿ 1, 2022ರಿಂದ ಆರಂಭಗೊಳ್ಳಲಿದೆ. 

2.6 ಕೋಟಿ ಹೆಕ್ಟೇರ್‌ ಬಂಜರು ಭೂಮಿ ಅಭಿವೃದ್ಧಿ ಗುರಿ: ಪ್ರಧಾನಿ ಮೋದಿ

72 ವರ್ಷದ ಆ್ಯಂಟನೋ ಗುಟೆರಸ್ ಮರು ಆಯ್ಕೆನ್ನು ವಿಶ್ವಸಂಸ್ಥೆ ಅಸೆಂಬ್ಲಿ ಅಧ್ಯಕ್ಷ ವೋಲ್ಕಾನ್ ಬೊಜ್ಕಿರ್ ಘೋಷಿಸುತ್ತಿದ್ದಂತೆ ಸದಸ್ಯ ರಾಷ್ಟ್ರಗಳ ಪ್ರತನಿಧಿಗಳು ಅಭಿನಂದನೆ ಸಲ್ಲಿಸಿದರು. ಗುಟೇರಸ್ ಮರು ಆಯ್ಕೆಯನ್ನು ಭಾರತ ಕೂಡ ಬೆಂಬಲಿಸಿತ್ತು. 

Scroll to load tweet…

ಜೂನ್ 8 ರಂದು ನಡೆದ ವಿಶ್ವ ಸಂಸ್ಥೆ ಭದ್ರತಾ ಮಂಡಳಿ 15 ಸದಸ್ಯ ರಾಷ್ಟ್ರಗಳ ಸಭೆಯಲ್ಲಿ ಗುಟೆರಸ್ ಅವರನ್ನು ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಮರು ಆಯ್ಕೆ ಮಾಡಲು ಶಿಫಾರಸು ಮಾಡಲಾಗಿತ್ತು. ಇದೀಗ ಮತ್ತೆ 5 ವರ್ಷಗಳ ಕಾಲ ಗುಟೆರಸ್ ಪ್ರಧಾನ ಕಾರ್ಯದರ್ಶಿಯಾಗಿ ಮುಂದುವರಿಯಲಿದ್ದಾರೆ.

ಭಾರತದ ಸ್ಥಿತಿ ಹೃದಯ ವಿದ್ರಾವಕ: ವಿಶ್ವಸಂಸ್ಥೆ ಕಳವಳ

2017ರ ಜನವರಿ 1ರಂದು ಆ್ಯಂಟನೋ ಗುಟೆರಸ್ ವಿಶ್ವ ಸಂಸ್ಥೆ ಪ್ರಧಾನ ಕಾರ್ಯದರ್ಶಿಯಾಗಿ ಮೊದಲ ಬಾರಿಗೆ ಪ್ರಮಾಣವಚ ಸ್ವೀಕರಿಸಿದ್ದರು. ಮೊದಲ ಅವದಿ ಡಿಸೆಂಬರ್ 31, 2021ಕ್ಕೆ ಕೊನೆಗೊಳ್ಳಲಿದೆ. ಜನವರಿ 1, 2022ರಿಂದ 2ನೇ ಅವಧಿ ಆರಂಭಗೊಳ್ಳಲಿದ್ದು, ಡಿಸೆಂಬರ್ 31, 2026ರಕ್ಕೆ ಅಂತ್ಯಗೊಳ್ಳಲಿದೆ.

ಸಾಂಕ್ರಾಮಿಕ ರೋಗ, ಕಳೆದ ಸಾಲಿನಲ್ಲಿ ಎದುರಿಸಿದ ಸವಾಲುಗಳಿಂದ ಹಲವು ಪಾಠಗಳನ್ನು ಕಲಿತಿದ್ದೇವೆ. ಏಕಾಂಗಿಯಾಗಿ ಏನೂ ಸಾಧಿಸಲು ಸಾಧ್ಯವಿಲ್ಲ. ನಾವು ಒಗ್ಗಟ್ಟಾಗಿ ನಿಲ್ಲಬೇಕಿದೆ. ನಮ್ಮೊಳಗೆ ನಂಬಿಕೆಯನ್ನು ಮರುಸ್ಥಾಪಿಸಬೇಕಿದೆ ಎಂದು ಗುಟೆರಸ್ ಹೇಳಿದ್ದಾರೆ.

ವಿಶ್ವಸಂಸ್ಥೆಯೊಂದಿಗೆ ಬಲವಾದ ಹಾಗೂ ರಚನಾತ್ಮಕ ಸಂಬಂಧ ಮುಂದುವರಿಸಲು ನಾವು ಬದ್ಧರಾಗಿದ್ದೇವೆ. ಈ ನಿಟ್ಟಿನಲ್ಲಿ ಗುಟೆರಸ್ ಮರು ಆಯ್ಕೆ ಪ್ರಮುಖವಾಗಿದೆ ಎಂದು ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕೆನ್ ಹೇಳಿದರು. ಇದೇ ವೇಳೆ ಗುಟೆರಸ್ ಅವರನ್ನು ಅಭಿನಂದಿಸಿದರು.