ಅಬ್ಬಾ ಈ ಸಿಟ್ಟು ಅಸೂಯೆ, ಸಂಶಯ ಎಂತಹ ದುರಂತವನ್ನು ತಂದಿಡುತ್ತೆ ನೋಡಿ, ಬಾಯ್‌ಫ್ರೆಂಡ್ ಮನೆಯನ್ನು ದೋಚಿ ನಂತರ ಬೆಂಕಿ ಹಚ್ಚಿದ ಕಾರಣಕ್ಕೆ ಅಮೆರಿಕಾದಲ್ಲಿ ಯುವತಿಯೊಬ್ಬಳನ್ನು ಪೊಲೀಸರು ಬಂಧಿಸಿದ್ದಾರೆ.

ಅಮೆರಿಕಾ: ಅಬ್ಬಾ ಈ ಸಿಟ್ಟು ಅಸೂಯೆ, ಸಂಶಯ ಎಂತಹ ದುರಂತವನ್ನು ತಂದಿಡುತ್ತೆ ನೋಡಿ, ಬಾಯ್‌ಫ್ರೆಂಡ್ ಮನೆಯನ್ನು ದೋಚಿ ನಂತರ ಬೆಂಕಿ ಹಚ್ಚಿದ ಕಾರಣಕ್ಕೆ ಅಮೆರಿಕಾದಲ್ಲಿ ಯುವತಿಯೊಬ್ಬಳನ್ನು ಪೊಲೀಸರು ಬಂಧಿಸಿದ್ದಾರೆ. ಇದಕ್ಕೆ ಕಾರಣವಾಗಿದ್ದು, ಒಂದೇ ಒಂದು ಫೋನ್ ಕಾಲ್, ಯುವತಿ ತನ್ನ ಗೆಳೆಯನಿಗೆ ಮಧ್ಯರಾತ್ರಿ ಕರೆ ಮಾಡಿದ್ದಾಳೆ. ಆದರೆ ಈ ಕರೆಯನ್ನು ಆತನ ಸ್ವೀಕರಿಸುವ ಬದಲು ಯುವಕನ ಸಂಬಂಧಿಯಾದ ಮಹಿಳೆಯೊಬ್ಬರು ಸ್ವೀಕರಿಸಿದ್ದಾರೆ. ಇದರಿಂದ ತನ್ನ ಗೆಳೆಯ ಮತ್ತೊಬ್ಬಳ ಜೊತೆ ಇದ್ದಾನೆ ಎಂದು ಸಂಶಯಗೊಂಡ ಆಕೆ ಮನೆಗೆ ಬೆಂಕಿ ಹಚ್ಚಿದ್ದು, ಪರಿಣಾಮ ಇಡೀ ಮನೆಯೇ ಬೆಂಕಿಗಾಹುತಿಯಾಗಿದೆ. 

ಬಾಯ್‌ಫ್ರೆಂಡ್‌ (Boyfriend) ಮನೆಗೆ ಬೆಂಕಿ ಇಟ್ಟ ಕಾರಣಕ್ಕೆ ಟೆಕ್ಸಾಸ್‌ನ (Texas woman) ಯುವತಿಯೊಬ್ಬಳನ್ನು ಬಂಧಿಸಲಾಗಿದೆ ಎಂದು ಬೆಕ್ಸರ್ ಕೌಂಟಿ ಶೆರಿಫ್ ಕಚೇರಿ ತಿಳಿಸಿದೆ. ಬಂಧಿತ ಮಹಿಳೆಯನ್ನು 23 ವರ್ಷದ ಸೆನೈಡಾ ಮಾರಿ ಸೊಟೊ (Senaida Marie Soto) ಎಂದು ಗುರುತಿಸಲಾಗಿದೆ. ಈಕೆಯ ವಿರುದ್ಧ ಮನೆಗೆ ಬೆಂಕಿ ಇಟ್ಟಿದ್ದಲ್ಲದೇ ಮನೆ ದೋಚಿದ ಆರೋಪವನ್ನು ಹೊರಿಸಲಾಗಿದೆ. ಪೊಲೀಸರು ಫೇಸ್‌ಬುಕ್‌ನಲ್ಲಿ (Facebook) ರಿಲೀಸ್ ಮಾಡಿದ ನ್ಯೂಸ್ ಬುಲೆಟಿನ್‌ನಲ್ಲಿ ಈ ವಿಚಾರವನ್ನು ತಿಳಿಸಲಾಗಿದೆ. 

ಪೊಲೀಸರು ಹೇಳುವಂತೆ, 23 ವರ್ಷದ ಯುವತಿ ಸೊಟೊ ಆಕೆಯ ಬಾಯ್‌ಫ್ರೆಂಡ್‌ಗೆ ಇಂಟರ್‌ನೆಟ್ (FaceTimed) ಮೂಲಕ ಫೋನ್ ಕರೆ ಮಾಡಿದ್ದಾಳೆ. ಈ ವೇಳೆ ಕರೆಯನ್ನು ಆತನ ಸಂಬಂಧಿ ಮಹಿಳೆಯೊಬ್ಬಳು ಸ್ವೀಕರಿಸಿದ್ದಾಳೆ. ಇದರಿಂದ ಈ ಯುವತಿ ತನ್ನ ಗೆಳೆಯ ಇನ್ಯಾರೋ ಮಹಿಳೆಯ ಜೊತೆ ಇದ್ದಾಳೆ ಎಂದು ಸಂಶಯ ಹಾಗೂ ಅಸೂಯೆಯಿಂದ ಆತನ ಮನೆಯ ಲೀವಿಂಗ್ ರೂಮ್‌ನಲ್ಲಿದ್ದ ಮಂಚಕ್ಕೆ ಬೆಂಕಿ ಹಚ್ಚಿದ್ದಾಳೆ. ಪರಿಣಾಮ ಇಡೀ ಮನೆಗೆ ಬೆಂಕಿ ಕ್ಷಣದಲ್ಲಿ ಆವರಿಸಿಕೊಂಡಿದ್ದು, ಗರ್ಲ್‌ಫ್ರೆಂಡ್‌ನ (Girlfriend) ಈ ಕೃತ್ಯ ಸಿಸಿಟಿವಿಯಲ್ಲಿ ಸೆರೆ ಆಗಿದೆ. ಈ ಬೆಂಕಿಯಿಂದಾಗಿ 50 ಸಾವಿರ ಮೌಲ್ಯದ ವಸ್ತು ನಾಶವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದಾದ ಬಳಿಕ ಅಗ್ನಿಶಾಮಕ ಸಿಬ್ಬಂದಿ ಬಂದು ಬೆಂಕಿ ನಂದಿಸಿದ್ದು, ನಂತರ ತನಿಖೆ ನಡೆಸಿ ಬೆಂಕಿ ಹಚ್ಚಿದ ಗರ್ಲ್‌ಫ್ರೆಂಡ್‌ನನ್ನು ಬಂಧಿಸಿದ್ದಾರೆ. 

ಹಿಂದೂ ಯುವತಿಯ ಪೀಸ್ ಪೀಸ್ ಮಾಡಿದ ಬಾಂಗ್ಲಾದ ಅಬು ಬಕ್ರ್, ಮತ್ತೊಬ್ಬಳ ಜೊತೆ ಪರಾರಿ!

ಅಬ್ಬಾ ಪ್ರೇಮಿಗಳ ಸಂಬಂಧವೇ ಹಾಗೆ ಆಗಾಧ ಪ್ರೀತಿಯ ಜೊತೆ ಜೊತೆಗೆ ಸಂಶಯವೂ ಹೊಗೆಯಾಡುತ್ತಿರುತ್ತದೆ. ಇಬ್ಬರಿಗೂ ತಮ್ಮ ಸಂಗಾತಿಯ ವರ್ತನೆಯಲ್ಲಿ ಸ್ವಲ್ಪ ಹೆಚ್ಚು ಕಡಿಮೆಯಾದರೂ ಅದು ಕೂಡಲೇ ಗಮನಕ್ಕೆ ಬಂದು, ಮನಸ್ಸಿನೊಳಗೆ ಸಂಶಯ ಶುರುವಾಗಿ ಎಲ್ಲೋ ಅಸಮಾಧಾನದ ಬೆಂಕಿ ಸಣ್ಣಗೆ ಉರಿಯಲಾರಂಭಿಸುತ್ತದೆ. ಆದರೆ ಇಲ್ಲಿ ಈ ಮಹಿಳೆ ಒಂದು ಹೆಜ್ಜೆ ಮುಂದೆ ಹೋಗಿದ್ದು, ಮನಸ್ಸಿಗೆ ಬಿದ್ದ ಬೆಂಕಿಯನ್ನು ಮನೆಗೆ ಹಚ್ಚಿ ತೀರಿಸಿಕೊಂಡಿದ್ದಾಳೆ. 

ಇದಪ್ಪ ಲವ್‌ ಅಂದರೆ..! ಗರ್ಲ್‌ಫ್ರೆಂಡ್‌ ಕೊನೆಯಾಸೆ ಈಡೇರಿಸಲು ಆಕೆಯ ಮೃತದೇಹಕ್ಕೆ ತಾಳಿ ಕಟ್ಟಿದ ಪ್ರೇಮಿ..!