ಹಿಂದೂ ಯುವತಿಯ ಪೀಸ್ ಪೀಸ್ ಮಾಡಿದ ಬಾಂಗ್ಲಾದ ಅಬು ಬಕ್ರ್, ಮತ್ತೊಬ್ಬಳ ಜೊತೆ ಪರಾರಿ!

ದೆಹಲಿಯ ಶ್ರದ್ಧಾ ಹತ್ಯೆ ಪ್ರಕರಣದ ತನಿಖೆಯಲ್ಲಿ ಸ್ಫೋಟಕ ಮಾಹಿತಿ ಬಹಿರಂಗವಾಗುತ್ತಿದೆ. ಶ್ರದ್ಧಾಳನ್ನು 36 ತುಂಡು ಮಾಡಿದ ಗೆಳೆಯ ಅಫ್ತಾಬ್ ಹತ್ಯೆ ಹಿಂದೆ ಲವ್ ಜಿಹಾದ್ ಅನ್ನೋ ಅನುಮಾನಗಳು ಬಲಗೊಳ್ಳುತ್ತಿದೆ. ಈ ಘಟನೆ ಕಣ್ಣಮುಂದಿರುವಾಗಲೇ ಇದೀಗ ಬಾಂಗ್ಲಾದೇಶದಲ್ಲಿ ಇದೇ ರೀತಿಯ ಹತ್ಯೆ ನಡೆದಿದೆ. ಆದರೆ ಈ ಪ್ರಕರಣದಲ್ಲಿ ಒಂದು ಟ್ವಿಸ್ಟ್ ಇದೆ.

Hindu girl killed and chopped into pieces by boyfriend and escaped with live in partner in Bangladesh ckm

ಢಾಕಾ(ನ.18): ದೆಹಲಿಯ ಶ್ರದ್ಧಾ ಮರ್ಡರ್ ಕೇಸ್ ಕುರಿತು ಬಹಿರಂಗವಾಗುತ್ತಿರುವ ಸ್ಫೋಟಕ ಮಾಹಿತಿ ಬೆಚ್ಚಿ ಬೀಳಿಸುವಂತಿದೆ. ಘಟನೆ ಭಾರತ ಮಾತ್ರವಲ್ಲ ಇತರ ದೇಶಗಳಲ್ಲೂ ಪ್ರತಿಧ್ವನಿಸಿದೆ. ಈ ಕೇಸ್ ಹಚ್ಚ ಹಸುರಾಗಿರುವಾಗಲೇ ಇದೀಗ ಬಾಂಗ್ಲಾದೇಶದಲ್ಲಿ ಇದೇ ರೀತಿಯ ಪ್ರಕರಣ ವರದಿಯಾಗಿದೆ. ಇಲ್ಲೂ ಕೂಡ ಬಲಿಯಾಗಿರುವುದು ಹಿಂದೂ ಯುವತಿ. ಅಬು ಬಕ್ರ್ ಅನ್ನೋ ಮುಸ್ಲಿಮ್ ಯುವಕ, ಹಿಂದೂ ಯುವಕಿ ಕವಿತಾ ರಾಣಿಯನ್ನು ಮೋಸದಿಂದ ಪ್ರೀತಿಯ ಬಲೆಗೆ ಕೆಡವಿದ್ದ. ಬಳಿಕ ಢಾಕಾದಲ್ಲಿನ ತನ್ನ ಮನೆಗೆ ಆಹ್ವಾನಿಸಿದ ಕವಿತಾ ರಾಣಿಯನ್ನು ಲೈಂಗಿಕವಾಗಿ ಬಳಸಿಕೊಳ್ಳಲು ಯತ್ನಿಸಿದ್ದಾನೆ. ಇದೇ ವೇಳೆ ಮದುವೆಯಾಗಲು ಕವಿತಾ ರಾಣಿ ಒತ್ತಾಯಿಸಿದ್ದಾರೆ. ಮಾತಿಗೆ ಮಾತು ಬೆಳೆದು ರೊಚ್ಚಿಗೆದ್ದ ಅಬು ಬಕ್ರ್ ಕವಿತಾ ರಾಣಿಯನ್ನು ಕೊಚ್ಚಿ ಕೊಲೈಗೆದಿದ್ದಾನೆ. ತಲೆ, ಕೈ ಹಾಗೂ ಕಾಲುಗಳನ್ನು ದೇಹದಿಂದ ಬೇರ್ಪಡಿಸಿದ್ದಾನೆ. ಈ ಪ್ರಕರಣ ಇಷ್ಟಕ್ಕೆ ಅಂತ್ಯವಾಗಲ್ಲ. ಕವಿತಾ ರಾಣಿಯನ್ನು ಕೊಚ್ಚಿ ಕೊಂದ ಅಬು ಬಕ್ರ್, ಕಳೆದ ನಾಲ್ಕು ವರ್ಷಗಳಿಂದ ಮತ್ತೊಬ್ಬ ಹಿಂದೂ ಯುವತಿ ಸಪ್ನಾ ಜೊತೆ ಲಿವ್ ಇನ್ ರಿಲೇಶನ್‌ನಲ್ಲಿದ್ದ. ಕವಿತಾಳನ್ನು ಹತ್ಯೆ ಮಾಡಿದ ಅಬು ಬಕ್ರ್, ಸಪ್ನಾ ಜೊತೆ ಪರಾರಿಯಾಗಿದ್ದಾನೆ. ಆದರೆ ಢಾಕಾ ಪೊಲೀಸರು ಚಾಲಾಕಿ ಅಬು ಬಕ್ರ್‌ನನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ.

ಅಬು ಬಕ್ರ್ ಖಾಸಗಿ ಟ್ರಾನ್ಸ್‌ರೋರ್ಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ನವೆಂಬರ್ 5 ಹಾಗೂ  6 ರಂದು ಅಬು ಬಕ್ರ್ ಕೆಲಸಕ್ಕೆ ಹಾಜರಾಗಿಲ್ಲ. ಈತನ ಫೋನ್ ಕೂಡ ಸ್ವಿಚ್ ಆಫ್ ಆಗಿದೆ. ಹೀಗಾಗಿ ಕಂಪನಿ ಮಾಲೀಕ ಮತ್ತೊಬ್ಬ ಕೆಲಸಗಾರನನ್ನು ಅಬು ಬಕ್ರ್ ಬಾಡಿಗೆ ಮನೆಯಲ್ಲಿದ್ದ ವಿಳಾಸಕ್ಕೆ ಕಳುಹಿಸಿ ವಿಚಾರಿಸುವಂತೆ ಹೇಳಿದ್ದಾನೆ. ಅಬು ಬಕ್ರ್ ಮನೆಗೆ ಬಂದಾಗ ಎರಡು ದಿನಗಳಿಂದ ಅಬು ಬಕ್ರ್ ಕಾಣುತ್ತಿಲ್ಲ ಎಂದು ಮನೆ ಮಾಲೀಕ ಹೇಳಿದ್ದಾನೆ. 

ಶ್ರದ್ಧಾ ಹತ್ಯೆ ಪ್ರಕರಣ: ತಲೆಬುರಡೆ ಸಿಗದಿದ್ದರೆ ಅಫ್ತಾಬ್‌ಗೆ ಗಲ್ಲು ಶಿಕ್ಷೆ ಆಗಲ್ವಾ?

ಅಬು ಬಕ್ರ್ ನಾಪತ್ತೆಯಾಗಿದ್ದಾನೆ ಎಂದು ಮನೆ ಮಾಲೀಕ ಪೊಲೀಸರಿಗೆ ದೂರು ನೀಡಿದ್ದಾನೆ. ಇತ್ತ ಪೊಲೀಸರು ಆಗಮಿಸಿ ಬೀಗ ಹಾಕಿದ್ದ ಮನೆಯ ಬಾಗಿಲನ್ನು ಒಡೆದಿದ್ದಾರೆ. ಈ ವೇಳೆ ಭೀಕರ ದೃಶ್ಯ ಪೊಲೀಸರನ್ನೇ ಬೆಚ್ಚಿ ಬೀಳಿಸಿದೆ. ಕೋಣೆಯೊಳಗೆ ಯುವತಿಯ ರುಂಡ, ದೇಹ, ಕೈಗಳು ಪತ್ತೆಯಾಗಿದೆ. ರುಂಡವನ್ನು ಬ್ಯಾಗ್‌ನಲ್ಲಿ ಸುತ್ತಿಟ್ಟಿದ್ದರೆ, ದೆಹವನ್ನು ಬಾಕ್ಸ್‌ನೊಳಗ ಇಡಲಾಗಿದೆ. 

ಪೊಲೀಸರು ಹಾಗೂ ಅಧಿಕಾರಿಗಳ ತಂಡ ಸ್ಥಳಕ್ಕೆ ಧಾವಿಸಿ ಪ್ರಕರಣದ ತನಿಖೆ ಚುರುಕುಗೊಳಿಸಿದ್ದಾರೆ. ಈ ವೇಳೆ ಈ ಮೃತದೇಹ ಕವಿತಾ ರಾಣಿಯದ್ದು ಅನ್ನೋದು ಪತ್ತೆಯಾಗಿದೆ. ಇಷ್ಟೇ ಅಲ್ಲ ಈ ಪ್ರಕರಣದ ಹಿಂದೆ ಲವ್ ಜಿಹಾದ್ ವಾಸನೆಗಳು ಪೊಲೀಸರಿಗೆ ಬಂದಿದೆ. ಹೀಗಾಗಿ ಮತ್ತಷ್ಟು ತನಿಖೆ ನಡೆಸಿದ್ದಾರೆ. ಕವಿತಾ ರಾಣಿಯನ್ನು ಕೇವಲ 5 ದಿನಗಳ ಹಿಂದೆ ಭೇಟಿಯಾಗಿದ್ದ ಅಬು ಬಕ್ರ್, ಆಕೆಯನ್ನು ಪ್ರೀತಿಯ ಬಲೆಗೆ ಬೀಳಿಸಿದ್ದಾನೆ. ಮದುವೆಯಾಗುವುದಾಗಿ ಮಾತುಕೊಟ್ಟಿದ್ದಾನೆ. 

 

ಶ್ರದ್ಧಾ ರೀತಿ ಮತ್ತೊಂದು ಪ್ರಕರಣ, ಲೀವ್ ಇನ್ ಸಂಗಾತಿಯ ನೀರಿನ ಟ್ಯಾಂಕ್‌ಗೆ ತಳ್ಳಿದ ಪಾಪಿ!

ನವೆಂಬರ್ 5 ರಂದು ಕವಿತಾಳನ್ನು ತನ್ನ ಬಾಡಿಗೆ ಮನೆಗೆ ಕರೆದಿದ್ದಾನೆ. ಬಳಿಕ ಲೈಂಗಿಕವಾಗಿ ಬಳಸಿಕೊಳ್ಳಲು ಯತ್ನಿಸಿದ್ದಾನೆ. ಇದಕ್ಕೆ ಕವಿತಾ ವಿರೋಧ ವ್ಯಕ್ತಪಡಿಸಿದ್ದಾಳೆ. ಇದರಿಂದ ಕೋಪಗೊಂಡ ಅಬು ಬಕ್ರ್ ಆಕೆಯನ್ನು ಕೊಚ್ಚಿ ಕೊಂದಿದ್ದಾನೆ. ಬಳಿಕ ಕಳೆದ ನಾಲ್ಕು ವರ್ಷದಿಂದ ಸಪ್ನಾ ಅನ್ನೋ ಮತ್ತೊಬ್ಬ ಹಿಂದೂ ಯುವತಿ ಜೊತೆ ಢಾಕಾ ತೊರೆದಿದ್ದಾನೆ. ಸಪ್ನಾ ಜೊತೆ ನಾಲ್ಕು ವರ್ಷಗಳಿಂದ ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದ. ಈಕೆಯನ್ನು ಮದುವೆಯಾಗುವುದಾಗಿ ಹೇಳಿ ತನ್ನ ಬಯಕೆಗಳನ್ನು ತೀರಿಸಿಕೊಂಡಿದ್ದ. ದಿಢೀರ್ ಸಪ್ನಾಗೆ ಕರೆ ಮಾಡಿ ನಾವು ಇದೇ ನಗರದಲ್ಲಿದ್ದರೆ ನಮ್ಮ ಮದುವೆಗೆ ಹಲವರು ಅಡ್ಡಿಯಾಗುತ್ತಾರೆ. ಹೀಗಾಗಿ ನಗರ ತೊರೆದೆ ಬೇರೆಡೆ ತೆರಳಿ ಜೀವನ ನಡೆಸೋಣ ಎಂದು ಆಕೆಯ ಜೊತೆ ಢಾಕಾ ತೊರೆದಿದ್ದಾನೆ. 

ಸಪ್ನಾ ಹಾಗೂ ಅಬು ಬಕ್ರ್ ಇದೇ ಮನೆಯಲ್ಲಿ ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದರು. ಸಪ್ನಾ ಕೆಲಸದ ನಿಮಿತ್ತ ತೆರಳಿದ್ದಳು. ಈಕೆ ವಾಪಸ್ ಬರುವ ಮುನ್ನವೇ ಇದೇ ಮನೆಯಲ್ಲಿ ಹತ್ಯೆ ನಡೆದಿದೆ.ಹೀಗಾಿಗ ಸಪ್ನಾ ಸಂಜೆ ಹಿಂತುರಿಗುತ್ತಿದ್ದಂತೆ ಆಕೆಯನ್ನು ಕರೆದುಕೊಂಡು ನೇರವಾಗಿ ರುಪ್ಸಾ ನದಿ ದಾಡಿ ಸಾಗಿರುವುದು ಸಿಸಿಟಿವಿಯಲ್ಲಿ ಪತ್ತೆಯಾಗಿತ್ತು. ಈ ಜಾಡನ್ನ ಹಿಡಿದು ಪೊಲೀಸರು ಅಬು ಬಕ್ರ್ ಹಾಗೂ ಸಪ್ನಾ ಪತ್ತೆ ಹಚ್ಚಿದ್ದಾರೆ. ಇದೀಗ ಅಬು ಬಕ್ರ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಈ ವೇಳೆ ಈ ರೀತಿಯ ಕ್ಯತ್ಯ ನಡೆದಿದೆ ಅನ್ನೋ ಸಣ್ಣ ಸುಳಿವುವ ಸಪ್ನಾಗೆ ಇರಲಿಲ್ಲ. ಇದೀಗ ತನ್ನನ್ನು ಮದುವೆಯಾಗುವುದಾಗಿ ನಂಬಿಸಿದ್ದ ಎಂದು ಸಪ್ನಾ ಅಳಲು ತೋಡಿಕೊಂಡಿದ್ದಾಳೆ.
 

Latest Videos
Follow Us:
Download App:
  • android
  • ios