ಸಮುದ್ರ ತೀರದಲ್ಲಿ ನೀರಿನಲ್ಲಿ ಮುಳುಗುತ್ತಿದ್ದ ಮಗನನ್ನು ರಕ್ಷಿಸಲು ಹೋಗಿ ಟೆಕ್ಕಿ ತಂದೆಯೋರ್ವ ಸಾವನ್ನಪ್ಪಿದ ಘಟನೆ ಅಮೆರಿಕಾದ ಪ್ಲೋರಿಡಾದಲ್ಲಿ ನಡೆದಿದೆ, ಆಂಧ್ರ ಮೂಲದ ಪೊಟ್ಟಿ ವೆಂಕಟ ರಾಜೇಶ್ ಕುಮಾರ್ ಸಾವಿಗೀಡಾದ ತಂದೆ.  

ಪ್ಲೋರಿಡಾ: ಸಮುದ್ರ ತೀರದಲ್ಲಿ ನೀರಿನಲ್ಲಿ ಮುಳುಗುತ್ತಿದ್ದ ಮಗನನ್ನು ರಕ್ಷಿಸಲು ಹೋಗಿ ಟೆಕ್ಕಿ ತಂದೆಯೋರ್ವ ಸಾವನ್ನಪ್ಪಿದ ಘಟನೆ ಅಮೆರಿಕಾದ ಪ್ಲೋರಿಡಾದಲ್ಲಿ ನಡೆದಿದೆ, ಆಂಧ್ರ ಮೂಲದ ಪೊಟ್ಟಿ ವೆಂಕಟ ರಾಜೇಶ್ ಕುಮಾರ್ ಸಾವಿಗೀಡಾದ ತಂದೆ. ಸಾಫ್ಟ್‌ವೇರ್ ಇಂಜಿನಿಯರ್ ಆದ ರಾಜೇಶ್‌ ಕಳೆದ ವರ್ಷ ಜನವರಿಯಲ್ಲಿ ಅಮೆರಿಕಾಗೆ ತೆರಳಿದ್ದರು. ಇವರ ಪತ್ನಿ ಹಾಗೂ ಮಕ್ಕಳು ಈ ವರ್ಷದ ಮೇ ತಿಂಗಳಲ್ಲಿ ಅಮೆರಿಕಾಗೆ ತೆರಳಿ ಅಪ್ಪನನ್ನು ಸೇರಿಕೊಂಡಿದ್ದರು. 

ಪತ್ನಿ ಮಕ್ಕಳು ಬಂದ ಹಿನ್ನೆಲೆಯಲ್ಲಿ ಫ್ಲೋರಿಡಾದ (Florida) ಜಾಕ್ಸನ್‌ವಿಲ್ಲೆ ಬೀಚ್‌ಗೆ (Jacksonville Beach) ಹೋಗಲು ಪ್ಲಾನ್ ಮಾಡಿದ ಕುಟುಂಬ, ಜುಲೈ 4 ರಂದು ಅಮೆರಿಕಾದ ಸ್ವಾತಂತ್ರ ದಿನಾಚರಣೆ ಇದ್ದುದರಿಂದ ರಾಜೇಶ್‌ ಕುಮಾರ್ ಅವರಿಗೆ ರಜೆಯೂ ಇದ್ದುದರಿಂದ ಅಂದು ಬೀಚ್‌ಗೆ ಹೊರಟಿದ್ದಾರೆ. ಬೀಚ್‌ನಲ್ಲಿ ಮಗ ಹಾಗೂ ಮಗಳಿಬ್ಬರು ಸಮುದ್ರದ ಅಲೆಗಳ ಸಮೀಪ ಸಮೀಪ ಹೋಗುತ್ತಿದ್ದಿದ್ದರಿಂದ ಮಗ ಸಮುದ್ರದಲೆಗೆ ಸಿಲುಕಿದ್ದು, ಈ ವೇಳೆ ಮಗನ ರಕ್ಷಣೆಗ ತಂದೆ ಹೋಗಿದ್ದಾರೆ. ಈ ವೇಳೆ ತಂದೆ ಮಗ ಇಬ್ಬರೂ ನೀರಲ್ಲಿ ಮುಳುಗಿದ್ದ ಅಲ್ಲಿನ ಸ್ಥಳೀಯರು ಈ ಅಪ್ಪ ಮಗನ ರಕ್ಷಣೆಗೆ ಬಂದಿದ್ದಾರೆ. ಸಮುದ್ರದಿಂದ ರಕ್ಷಿಸಿ ತಂದ ರಾಜೇಶ್‌ ಅವರಿಗೆ ಅಲ್ಲೇ ಇದ್ದವರೊಬ್ಬರು ಸಿಪಿಆರ್ ಮಾಡಿದ್ದಾರೆ. ಪ್ರಜ್ಞಾಹೀನರಾಗಿದ್ದ ಅವರನ್ನು ಕೂಡಲೇ ಆಸ್ಪತ್ರೆಗೆ ಕರೆತಂದಿದ್ದಾರೆ. ಅಲ್ಲಿ ವೈದ್ಯರು ರಾಜೇಶ್‌ ಆಸ್ಪತ್ರೆಗೆ ಬರುವಾಗಲೇ ರಾಜೇಶ್ ಪ್ರಾಣ ಹೋಗಿದೆ ಎಂದು ಘೋಷಿಸಿದ್ದಾರೆ. ಆದರೆ ರಾಜೇಶ್ ಅವರ 12 ವರ್ಷದ ಪುತ್ರನಿಗೂ ಸಿಪಿಆರ್ ಮಾಡಿದ್ದು, ಆತ ಆಸ್ಪತ್ರೆಯಲ್ಲಿ ಶಾಕ್ ಟ್ರಿಟ್‌ಮೆಂಟ್ ವೇಳೆ ಎಚ್ಚೆತ್ತಿದ್ದಾನೆ. ಪ್ರಸ್ತುತ ಆತ ಐಸಿಯೂನಲ್ಲಿದ್ದು, ಆತನ ಆರೋಗ್ಯ ಸ್ಥಿರವಾಗಿದೆ ಎಂದು ರಾಜೇಶ್ ಸಹೋದರ ವಿಜಯ್‌ಕುಮಾರ್ ಹೇಳಿದ್ದಾರೆ. 

ಲಂಡನ್‌ನಲ್ಲಿ ಮತ್ತೋರ್ವ ಭಾರತೀಯನ ಹತ್ಯೆ: ಚಾಕು ಇರಿದು ಕೇರಳದ ಅರವಿಂದ್ ಕೊಲೆ

ಆಂಧ್ರಪ್ರದೇಶದ ರಾಜೇಶ್‌ಕುಮಾರ್ (Potti Venkata Rajesh Kumar) ಅಮೆರಿಕಾದ ಸ್ಟಾರ್ಟ್‌ಅಪ್ ವೊಂದರಲ್ಲಿ ಕೆಲಸ ಮಾಡುತ್ತಿದ್ದರು. ಅಮೆರಿಕಾದಲ್ಲಿರುವ ತೆಲುಗು ಸಂಘ ರಾಜೇಶ್ ಅವರ ಮೃತದೇಹವನ್ನು ತವರಿಗೆ ಕಳುಹಿಸಲು ವ್ಯವಸ್ಥೆ ಮಾಡುತ್ತಿದೆ. ಅಲ್ಲದೇ ಆಂಧ್ರಪ್ರದೇಶದ ನಾನ್ ರೆಸಿಡೆಂಟ್ ತೆಲುಗು ಸೊಸೈಟಿ ಕೂಡ ಕುಟುಂಬವನ್ನು ಸಂಪರ್ಕಿಸಿದ್ದು, ಸ್ಥಳೀಯವಾಗಿ ಸಹಾಯ ಮಾಡುವುದಾಗಿ ಹೇಳಿದೆ. ತೆಲುಗು ದೇಶಂ ಪಾರ್ಟಿ ಮುಖ್ಯಸ್ಥ ಚಂದ್ರಬಾಭು ನಾಯ್ಡು ಅವರು ವಿದೇಶಾಂಗ ವ್ಯವಹಾರಗಳ ಸಚಿವ ಜೈ ಶಂಕರ್ ಅವರಿಗೆ ಈ ಕುರಿತು ಪತ್ರ ಬರೆದಿದ್ದು, ರಾಜೇಶ್‌ ಕುಮಾರ್ ಮೃತದೇಹ ವಾಪಸ್ ತರಲು ಸಹಾಯ ಮಾಡುವಂತೆ ಮನವಿ ಮಾಡಿದ್ದಾರೆ. ಜೊತೆಗೆ ಮೃತರ ಕುಟುಂಬದವರಿಗೆ ಸಂತಾಪ ಸೂಚಿಸಿದ್ದಾರೆ. 

ಲಂಡನ್‌ನಲ್ಲಿ ಚಾಕು ಇರಿತ: ಭಾರತೀಯ ಯುವತಿಯ ಬರ್ಬರ ಹತ್ಯೆ