Asianet Suvarna News Asianet Suvarna News

ಸಾಲಗಾರರಿಂದ ತಪ್ಪಿಸಿಕೊಳ್ಳಲು ಮೂಗಿಗೆ ಹತ್ತಿ ಇಟ್ಟು ಫೇಸ್‌ಬುಕ್‌ಗೆ ಫೋಟೋ ಹಾಕಿದ ಮಹಿಳೆ

ಸಾಲ ನೀಡಿದ ಮಹಿಳೆ ವಾಪಸ್ ಕೇಳಿದಾಗ ಮಹಿಳೆಯೊಬ್ಬರು ಸತ್ತಂತೆ ನಾಟಕವಾಡಿದ ವಿಚಿತ್ರ ಘಟನೆ ಇಂಡೋನೇಷಿಯಾದಲ್ಲಿ ನಡೆದಿದೆ.

An Indonesian woman pretended to be dead to escape creditors akb
Author
First Published Dec 28, 2022, 10:01 PM IST

ಹಣ ಕಂಡ್ರೆ ಹೆಣ ಕೂಡ ಬಾಯ್ಬಿಡುತ್ತೆ ಎಂಬ ಗಾದೆಯನ್ನು ನೀವು ಕೇಳಿರಬಹುದು. ಅದೇ ರೀತಿ ಇಲ್ಲೊಬ್ಬಳು ಮಹಿಳೆ ಮೈತುಂಬಾ ಸಾಲ ಮಾಡಿ ಅದನ್ನು ತೀರಿಸಲಾಗದೇ ಸಾಲದಿಂದ ಪಾರಾಗುವ ಸಲುವಾಗಿ ತನ್ನ ಮೂಗಿಗೆ ತಾನೇ ಹತ್ತಿ ಇಟ್ಟುಕೊಂಡಿದ್ದಾಳೆ. ಇದೇನು ಸುಸೈಡ್ ಮಾಡ್ಕೊಂಡ್ಲ ಅಂತ ಗಾಬರಿಯಾಗ್ಬೇಡಿ ಅಂತದ್ದೇನು ಆಕೆ ಮಾಡ್ಕೊಂಡಿಲ್ಲ. ತನ್ನೆರಡು ಮೂಗಿಗೆ ಹತ್ತಿ ಇಟ್ಟುಕೊಂಡು ಮುಖ ಹೊರತುಪಡಿಸಿ ಇಡೀ ದೇಹಕ್ಕೆ ಶವದಂತೆ ಬಿಳಿವಸ್ತ್ರ ಸುತ್ತಿಕೊಂಡು ಹೆಣದಂತೆ ಮಲಗಿದ್ದಾಳೆ. ಅಲ್ಲದೇ ಯಾರದೋ ಸಹಾಯದಿಂದ ಅದರ ಫೋಟೋ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿಕೊಂಡಿದ್ದಾಳೆ. ಆದರೆ ಈಕೆಯ ಈ ನಾಟಕ ಸಾಲ ನೀಡಿದವಳಿಗೂ ತಿಳಿದಿದ್ದು, ಈಗ ಖತರ್ನಾಕ್ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಅಂದಹಾಗೆ ಈ ಘಟನೆ ನಡೆದಿದ್ದು, ನಮ್ಮ ದೇಶದಲ್ಲಿ ಅಲ್ಲ, ಇಂಡೋನೇಷ್ಯಾದಲ್ಲಿ. 

ಸಾಲವನು ಕೊಂಬಾಗ ಹಾಲೋಗರುಂಡಂತೆ, ಸಾಲಿಗನು ಬಂದು ಎಳೆವಾಗ  ಕಿಬ್ಬದಿಯ ಕೀಲು ಮುರಿದಂತೆ ಎಂದು ಸರ್ವಜ್ಞರ ವಚನವನ್ನು ನೀವು ಕೇಳಿರಬಹುದು. ಸಾಲದ ಮಹಿಮೆ ಅಂಥದ್ದು, ಅದೇ ರೀತಿ ಇಲ್ಲಿ ಮಹಿಳೆ ಸಾಲವನ್ನು ಖುಷಿ ಖುಷಿಯಿಂದಲೇ ಮಾಡಿದ್ದು, ಸಾಲ ನೀಡಿದವರು ಆಕೆಯ ಬಳಿ ಹಣ ಮರಳಿ ಕೇಳಿದಾಗ ಈ ರೀತಿ ನಾಟಕವಾಡಿದ್ದಾಳೆ. ಲಿಝಾ ದೇವಿ ಪ್ರಮೀತಾ(Liza Dewi Pramita) ಎಂಬಾಕೆಯೇ ಹೀಗೆ ನಾಟಕ ಮಾಡಿದ ಮಹಿಳೆ. ಇವಳ ನಾಟಕವನ್ನು ಸಾಲ ಕೊಟ್ಟ ಮಾಯಾ ಗುಣವನ್ (Maya Gunawan) ಎಂಬುವವರು ಬಯಲು ಮಾಡಿದ್ದಾರೆ. 

ತಾನು ಸತ್ತಿದ್ದೇನೆ ಎಲ್ಲರೂ ಅಂದುಕೊಳ್ಳಲಿ ಅದರಲ್ಲೂ ಮುಖ್ಯವಾಗಿ ಸಾಲ ನೀಡಿದವರಿಗೆ ನನ್ನ ಸಾವು ಗೊತ್ತಾಗಲಿ ಎಂದು ತಿಳಿಯುವುದಕ್ಕಾಗಿ ಈಕೆ ಸಾಮಾಜಿಕ ಜಾಲತಾಣದಲ್ಲಿ ತನ್ನ ಶವದಂತೆ ಕಾಣುವ ಫೋಟೋವನ್ನು ಪೋಸ್ಟ್ ಮಾಡಿದ್ದಾಳೆ. ಇತ್ತ ಮಹಿಳೆಗೆ ಸಾಲ ನೀಡಿದ ಮಾಯಾ ಗುಣವನ್ ಅವರು ಲಿಝಾ ದೇವಿ ಪ್ರಮೀತಾಳ ಬಣ್ಣದಾಟವನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದು, ಅದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಆನ್‌ಲೈನ್‌ ಗೇಮ್‌ ಗೀಳಿನಿಂದ ಸಾಲ: ಯುವಕ ಆತ್ಮಹತ್ಯೆ

ಈ ಬಗ್ಗೆ ಸಾಲ ನೀಡಿದ ಮಾಯಾ ಗುಣವನ್ (Maya Gunawan) ಹೇಳಿಕೆ ಪ್ರಕಾರ ಲೀಜಾ ದೇವಿ ಪ್ರಮೀತಾಗೆ (Liza Dewi Pramita) ಮಾಯಾ ಅವರು 30216 ರೂಪಾಯಿಗಳನ್ನು ಸಾಲ ನೀಡಿದ್ದರು. ಆದರೆ ಇವರಿಬ್ಬರು ಪರಸ್ಪರ ಭೇಟಿಯಾಗಿರಲಿಲ್ಲ. ಆನ್‌ಲೈನ್ ಮೂಲಕ ಈ ವ್ಯವಹಾರ ನಡೆದಿತ್ತು. ಆನ್‌ಲೈನ್ ಅರಿಸನ್ ಗುಂಪಿನ ಮೂಲಕ ಲಿಜಾಳ ಪರಿಚಯವಾಯಿತು. ಈ ಗುಂಪು ವಿವಿಧ ಕಾರಣಗಳಿಗಾಗಿ ಹಣವನ್ನು ಸಂಗ್ರಹಿಸುತ್ತವೆ ಮತ್ತು ಒಟ್ಟುಗೂಡಿಸುತ್ತವೆ. ಇಲ್ಲಿ ಪರಿಚಯವಾದ ಬಳಿಕ ಮಾಯ ಸಂಪೂರ್ಣ ಅಪರಿಚಿತಳೆನಿಸಿದ ಲೀಸಾಗೆ ಹಣ ಸಾಲ ನೀಡಿದರು. 

ಅಪಘಾತದಲ್ಲಿ ಸಾವು.!

ಸಾಲ ಪಡೆದ ಬಳಿಕ ಲೀಝಾಗೆ ಸಾಲವನ್ನು ಹಿಂತಿರುಗಿಸುವುದು ಹೇಗೆ ಎಂದು ತಿಳಿಯದಾಗಿದೆ. ನಿಯಮದಂತೆ ಆಕೆ ನವಂಬರ್ 20, 2022ರಂದು ಸಾಲದ ಹಣ ಮರಳಿಸಬೇಕಿತ್ತು. ಆದರೆ ಆಕೆ ತನಗೆ ಸಾಲ ತೀರಿಸಲು ಸಮಯ ಬೇಕೆಂದು ಕೇಳಿದ್ದಾಳೆ. ಅಲ್ಲದೇ ಡಿಸೆಂಬರ್ 6, 2022ರಂದು ಗಡುವು ನೀಡಿದ್ದಾಳೆ. ಆದರೆ ಡಿಸೆಂಬರ್ ಆರು ಕಳೆದರು ಸಾಲ ಮರಳಿ ಬಂದಿಲ್ಲ. ಆದರೆ ಡಿಸೆಂಬರ್ 11 ರಂದು ಲೀಜಾ ಸಾವಿನ ಸುದ್ದಿ ಬಂದಿದೆ. 

ಲೀಜಾಳ ಮಕ್ಕಳು ಲೀಜಾ ಮೆಡನ್‌ನ (Medan) ಸೇತುವೆ ಬಳಿ ನಡೆದ ಕಾರು ಅಪಘಾತದಲ್ಲಿ (car crash) ಮೃತಪಟ್ಟಿರುವುದಾಗಿ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದರ ಜೊತೆಗೆ ಹಲವು ಫೋಟೋಗಳನ್ನು ಕೂಡ ಹರಿಬಿಟ್ಟಿದ್ದಾರೆ. ಅದರಲ್ಲಿ ಲೀಜಾ ಬಿಳಿ ಬಟ್ಟೆ ಸುತ್ತಿ ಶವದಂತೆ ಮಲಗಿರುವ ಫೋಟೋ ಕೂಡ ಇತ್ತು. ಇತ್ತ ಲೀಜಾ ಸಾವಿನ ಬಗ್ಗೆ ಬೇಸರಪಟ್ಟ ಮಾಯಾ ಸುಮ್ಮನಾಗಿದ್ದಾರೆ.

Bengaluru Crime: ಸಾಲ ಮರಳಿಸಿಲ್ಲವೆಂದು ಮನಸೋ ಇಚ್ಛೆ ಥಳಿಸಿ ಕೊಲೆ: ನರಕವನ್ನೂ ಮೀರಿಸುವಂತಿದೆ ಹಿಂಸೆ

ಆದರೆ ಫೇಸ್‌ಬುಕ್ ಫೋಸ್ಟ್‌ನಲ್ಲಿ ಲೀಜಾಳನ್ನು Aceh Tamiang ಎಂಬಲ್ಲಿ ಸಮಾಧಿ ಮಾಡಲಾಯಿತು ಎಂಬ ವಿಚಾರವನ್ನು ಬರೆಯಲಾಗಿತ್ತು. ಈ ಪ್ರದೇಶವೂ ಮಾಯಾ ವಾಸಿಸುವ ಪ್ರದೇಶಕ್ಕಿಂತ ಸ್ವಲ್ಪವೇ ದೂರದಲ್ಲಿತ್ತು. ಹೀಗಾಗಿ ಅನುಮಾನದಿಂದ ಶವದ ಫೋಟೋಗಳನ್ನು ಮತ್ತಷ್ಟು ಸೂಕ್ಷ್ಮವಾಗಿ ಹತ್ತಿರದಿಂದ ಪರಿಶೀಲಿಸಿದಾಗ ಇದು ಶವದಂತಿಲ್ಲ ಎಂಬುದು ಆಕೆಗೆ ಖಚಿತವಾಯ್ತು. ಇದರಿಂದ ಸಿಟ್ಟಿಗೆದ್ದ ಮಾಯಾ ಫೇಸ್‌ಬುಕ್‌ನಲ್ಲಿ (Facebook) ಈ ವಿಚಾರವನ್ನು ಹೇಳಿಕೊಂಡಿದ್ದಾಳೆ. ಆದರೆ ನಂತರದಲ್ಲಿ ಈ ತಾಯಿ ಮಗಳು ಇಡೀ ಘಟನೆ ಫೇಕ್ ಎಂಬುದಾಗಿಯೂ ತಾವು ಬದುಕಿರುವುದಾಗಿಯೂ ಲೀಸಾ ಬಳಿ ಒಪ್ಪಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
 

Follow Us:
Download App:
  • android
  • ios