ಆನ್‌ಲೈನ್‌ ಗೇಮ್‌ ಗೀಳಿನಿಂದ ಸಾಲ: ಯುವಕ ಆತ್ಮಹತ್ಯೆ

.ಪೀಣ್ಯ ದಾಸರಹಳ್ಳಿ: ರಿಯಲ್‌ ಎಸ್ಟೇಟ್‌ವೊಂದರ ಆಫೀಸ್‌ನಲ್ಲಿ ಕೆಲಸ ಮಾಡಿಕೊಂಡಿದ್ದ ಯುವಕನೊಬ್ಬ, ಕಡಿಮೆ ಅವಧಿಯಲ್ಲಿ ಹೆಚ್ಚು ಹಣ ಗಳಿಸಬೇಕೆಂಬ ಹಂಬಲಕ್ಕೆ ಬಿದ್ದು ಆನ್‌ಲೈನ್‌ ಆಟದ ಗೀಳಿನಿಂದಾಗಿ ಸಾಲ ಮಾಡಿಕೊಂಡು ಈಗ ತನ್ನ ಜೀವನವನ್ನೇ ಕಳೆದುಕೊಂಡಿರುವ ಘಟನೆ ಮಾದನಾಯಕನಹಳ್ಳಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

A young man died in a bike accident while going to church bengaluru rav

ಬೆಂಗಳೂರು (ಡಿ.26) : ಪೀಣ್ಯ ದಾಸರಹಳ್ಳಿ: ರಿಯಲ್‌ ಎಸ್ಟೇಟ್‌ವೊಂದರ ಆಫೀಸ್‌ನಲ್ಲಿ ಕೆಲಸ ಮಾಡಿಕೊಂಡಿದ್ದ ಯುವಕನೊಬ್ಬ, ಕಡಿಮೆ ಅವಧಿಯಲ್ಲಿ ಹೆಚ್ಚು ಹಣ ಗಳಿಸಬೇಕೆಂಬ ಹಂಬಲಕ್ಕೆ ಬಿದ್ದು ಆನ್‌ಲೈನ್‌ ಆಟದ ಗೀಳಿನಿಂದಾಗಿ ಸಾಲ ಮಾಡಿಕೊಂಡು ಈಗ ತನ್ನ ಜೀವನವನ್ನೇ ಕಳೆದುಕೊಂಡಿರುವ ಘಟನೆ ಮಾದನಾಯಕನಹಳ್ಳಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ನಾಗರಾಜು (19) ಆತ್ಮಹತ್ಯೆ ಮಾಡಿಕೊಂಡ ಯುವಕ. ಮೂಲತಃ ಮಾಗಡಿ ರಸ್ತೆಯ ಸೀಗೆಹಳ್ಳಿಯಲ್ಲಿ ಕುಟುಂಬ ಸಮೇತ ವಾಸವಾಗಿದ್ದ. ಬಡ ಕುಟುಂಬದಲ್ಲಿ ಹುಟ್ಟಿತಂದೆ ಇಲ್ಲದಿದ್ದರೂ ತಾಯಿಯ ಮಮತೆ ಮತ್ತು ಆರೈಕೆಯಲ್ಲಿ ಬೆಳೆದ ನಾಗರಾಜು ಮನೆಯಲ್ಲಿ ಯಾರು ಇಲ್ಲದ ವೇಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆನ್‌ಲೈನ್‌ ಗೇಮ… ಗೀಳಿಗೆ ಬಿದ್ದು ಬೆಟ್ಟಿಂಗ್‌, ಆನ್‌ಲೈನ್‌ ಹೀಗೆ ಲಕ್ಷಾಂತರ ಹಣ ಹೂಡಿ ಜೇಬು ಖಾಲಿ ಮಾಡ್ಕೊಂಡು ಯುವಕ ಸಾಲದ ಶೂಲಕ್ಕೆ ಸಿಲುಕಿದ್ದ ಎಂದು ತಿಳಿದುಬಂದಿದೆ.

Bengaluru crime: ಕಲರ್ ಜೆರಾಕ್ಸ್ ನೋಟು ಕೊಟ್ಟು ವಂಚನೆ; ಮೂವರು ಕಿಲಾಡಿ ಕಳ್ಳರು ಪೊಲೀಸರ ಬಲೆಗೆ

ವಸತಿ ಶಾಲೆಯಲ್ಲಿ ವಿದ್ಯುತ್‌ ಸ್ಪರ್ಶದಿಂದ ಬಾಲಕ ಸಾವು

ನಂಜನಗೂಡು: ವಿದ್ಯುತ್‌ ಸ್ಪರ್ಶಿಸಿ ಏಳು ವರ್ಷದ ಬಾಲಕ ಮೃತಪಟ್ಟಿರುವ ಘಟನೆ ತಾಲೂಕಿನ ಮಹದೇವ ನಗರದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಭಾನುವಾರ ನಡೆದಿದೆ. ಶಾಲೆಯಲ್ಲಿ ದೈಹಿಕ ಶಿಕ್ಷಕರಾಗಿ ಕೆಲಸ ಮಾಡುತ್ತಿರುವ ಚಾಮರಾಜನಗರ ತಾಲೂಕಿನ ದೊಡ್ಡರಾಯಪೇಟೆ ನಿವಾಸಿ ಬಸವಣ್ಣ ಅವರ ಪುತ್ರ ಯುವೀನ್‌(7) ಮೃತ ಬಾಲಕ. ಈತ ನಂಜನಗೂಡಿನ ದಳವಾಯಿ ಸರ್ಕಾರಿ ಬಾಲಕರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2ನೇ ತರಗತಿ ವ್ಯಾಸಂಗ ಮಾಡುತ್ತಿದ್ದ. ವಸತಿ ಶಾಲೆಯ ವಸತಿಗೃಹದಲ್ಲೇ ವಾಸವಿದ್ದ ಬಸವಣ್ಣ ಅವರು ಪುತ್ರ ಯುವೀನ್‌ ಜತೆ ಬೆಳಗ್ಗೆ ಶಾಲೆ ಭೋಜನಾಲಯದ ಶುದ್ಧ ಕುಡಿಯುವ ನೀರಿನ ಘಟಕದಲ್ಲಿ ನೀರು ತರಲು ಹೋಗಿದ್ದರು. ನೀರು ಸಣ್ಣದಾಗಿ ಬರುತ್ತಿದ್ದರಿಂದ ಕ್ಯಾನ್‌ ಇಟ್ಟು ಮನೆಗೆ ಬಂದಿದ್ದರು. ಸ್ವಲ್ಪ ಹೊತ್ತಿನ ನಂತರ ಕ್ಯಾನ್‌ ತುಂಬಿದೆಯೇ ಎಂದು ನೋಡಲು ಹೋದ ಯುವೀನ್‌ ನೀರಿನ ಪೈಪ್‌ ಹೊರಗಿಡುವಾಗ ವಿದ್ಯುತ್‌ ಸ್ಪರ್ಶವಾಗಿ ಮೃತಪಟ್ಟಿದ್ದಾನೆ

ಜಗುಲಿ ಮೇಲೆ ಮಲಗಿದ್ದ ವ್ಯಕ್ತಿ ಕಾಲು ಕಚ್ಚಿದ ಚಿರತೆ

ಟಿ. ನರಸೀಪುರ: ಮೈಸೂರು ಜಿಲ್ಲೆ ಟಿ.ನರಸೀಪುರ ತಾಲೂಕಿನ ಮುತ್ತತ್ತಿಯಲ್ಲಿ ಶನಿವಾರ ರಾತ್ರಿ ಮನೆಯ ಮುಂದಿನ ಜಗುಲಿಯ ಮೇಲೆ ಮಲಗಿದ್ದ ವ್ಯಕ್ತಿಯ ಕಾಲನ್ನು ಚಿರತೆಯೊಂದು ಕಚ್ಚಿ ಗಾಯಗೊಳಿಸಿದೆ. ಕರೋಹಟ್ಟಿಗ್ರಾಮದ ಮಹದೇವ ಗಾಯಗೊಂಡವರು. ಇವರು ಮುತ್ತತ್ತಿಯ ತಮ್ಮ ಮಗಳ ಮನೆಗೆ ಬಂದಿದ್ದರು. ರಾತ್ರಿ ಮಲಗಿದ್ದಾಗ ಯಾವುದೋ ಪ್ರಾಣಿ ಇವರ ಕಾಲನ್ನು ಕಚ್ಚಿದಂತಾಗಿ ಎಚ್ಚರಗೊಂಡು ನೋಡಿದಾಗ, ಚಿರತೆ ಕಂಡು ಬಂತು. ತಕ್ಷಣವೇ ಜೋರಾಗಿ ಕಿರುಚಿಕೊಂಡರು. ಇವರ ಚೀರಾಟ ಕೇಳಿ, ಜನ ಮನೆಯಿಂದ ಈಚೆ ಬರುತ್ತಿದ್ದಂತೆ ಚಿರತೆ ಕಾಡಿನ ಕಡೆ ಓಡಿ ಹೋಯಿತು.

ಗಾಯಗೊಂಡ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು. ವಿಷಯ ತಿಳಿದು ಅರಣ್ಯಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ, ಪರಿಶೀಲನೆ ನಡೆಸಿದರು. ತಾಲೂಕಿನಲ್ಲಿ ಈಗಾಗಲೇ ಎರಡು ಚಿರತೆಗಳು ಬೋನಿಗೆ ಬಿದ್ದಿವೆ. ಉಳಿದ ಚಿರತೆಗಳನ್ನು ಹಿಡಿಯಲು 16 ಕಡೆ ಬೋನ್‌ ಇರಿಸಲಾಗಿದೆ ಎಂದು ವಲಯ ಅರಣ್ಯಾಧಿಕಾರಿ ಮಂಜುನಾಥ್‌ ತಿಳಿಸಿದ್ದಾರೆ.

ಸ್ಪಿರೀಟ್ ಗೇಮ್ ಆಡಲು ಹೋಗಿ ಆಸ್ಪತ್ರೆ ಸೇರಿದ ಮಕ್ಕಳು

ತಾಲೂಕಿನಲ್ಲಿ ಇತ್ತೀಚೆಗೆ ಚಿರತೆಗಳ ಹಾವಳಿ ಹೆಚ್ಚಾಗಿದೆ. ಡಿ.1 ರಂದು ತಾಲೂಕಿನ ಎಸ್‌.ಕಬ್ಬೆಹುಂಡಿಯಲ್ಲಿ 23 ವರ್ಷದ ಕಾಲೇಜು ವಿದ್ಯಾರ್ಥಿನಿಯನ್ನು ಚಿರತೆಯೊಂದು ಕೊಂದು ಹಾಕಿತ್ತು. ಅ.31ರಂದು ಎಂ.ಎಚ್‌.ಹುಂಡಿ ಗ್ರಾಮದಲ್ಲಿ ಮಂಜುನಾಥ ಎಂಬುವರನ್ನು ಚಿರತೆಯೊಂದು ಬಲಿ ಪಡೆದಿತ್ತು

Latest Videos
Follow Us:
Download App:
  • android
  • ios