ನೇಪಾಳ ಪ್ರಧಾನಿ ಪುಷ್ಪ ಕಮಲ್ ದಹಲ್ ಪ್ರಚಂಡ ಅವರು, ತಾವು ಪ್ರಧಾನಿ ಆಗಲು ಭಾರತ ಮೂಲದ ಉದ್ಯಮಿ ಕಾರಣ ಎಂದು ಹೇಳಿಕೆ ನೀಡಿರುವುದು ನೇಪಾಳದಲ್ಲಿ ಭಾರಿ ವಿವಾದಕ್ಕೆ ಕಾರಣವಾಗಿದೆ.

ಕಾಠ್ಮಂಡು: ನೇಪಾಳ ಪ್ರಧಾನಿ ಪುಷ್ಪ ಕಮಲ್ ದಹಲ್ ಪ್ರಚಂಡ ಅವರು, ತಾವು ಪ್ರಧಾನಿ ಆಗಲು ಭಾರತ ಮೂಲದ ಉದ್ಯಮಿ ಕಾರಣ ಎಂದು ಹೇಳಿಕೆ ನೀಡಿರುವುದು ನೇಪಾಳದಲ್ಲಿ ಭಾರಿ ವಿವಾದಕ್ಕೆ ಕಾರಣವಾಗಿದೆ. ಪ್ರಚಂಡ ರಾಜೀನಾಮೆಗೆ ವಿಪಕ್ಷಗಳು ಆಗ್ರಹಿಸಿವೆ. ಆದರೆ ರಾಜೀನಾಮೆಗೆ ಪ್ರಚಂಡ ನಿರಾಕರಿಸಿದ್ದಾರೆ. ಸಮಾರಂಭವೊಂದರಲ್ಲಿ ಮಾತನಾಡಿದ ಪ್ರಚಂಡ,‘ನಾನು ಇಲ್ಲಿವರೆಗೆ ಬಂದಿರುವುದಕ್ಕೆ ಭಾರತ ಮೂಲದ ಉದ್ಯಮಿ ಸರ್ದಾರ್‌ ಪ್ರೀತಮ್‌ ಸಿಂಗ್‌ ಅವರ ಕೊಡುಗೆ ಅಪಾರ. ಅವರು ಹಲವಾರು ಬಾರಿ ದೆಹಲಿಯಲ್ಲಿ ಹಾಗೂ ಕಾಠ್ಮಂಡುವಿನಲ್ಲಿ ಸಭೆ ನಡೆಸಿ ನನಗೆ ಸಹಾಯ ಮಾಡಿದ್ದಾರೆ. ಅದರಿಂದಾಗಿ ನಾನು ಪ್ರಧಾನಿ ಆಗಲು ಸಾಧ್ಯವಾಗಿದೆ ಎಂದರು.

ಇದಕ್ಕೆ ಕೆಂಡಾಮಂಡಲಗೊಂಡ ನೇಪಾಳ ವಿಪಕ್ಷಗಳು,ನಮಗೆ ದೆಹಲಿಯಿಂದ ಆಯ್ಕೆಯಾದ ಪ್ರಧಾನಿ ಬೇಕಿಲ್ಲ. ನೇಪಾಳದ ಆಂತರಿಕದಲ್ಲಿ ಭಾರತದ ಹಸ್ತಕ್ಷೇಪ ಇರುವುದು ಬೇಡ. ಪ್ರಚಂಡರಿಂದ ದೇಶದ ಸಾರ್ವಭೌಮತೆಗೆ ಧಕ್ಕೆ ಬಂದಿದೆ. ಅವರು ಕೂಡಲೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿವೆ.

ನೇಪಾಳ ಜೊತೆ ವಿವಿಧ 7 ಕ್ಷೇತ್ರಗಳ ಒಪ್ಪಂದಕ್ಕೆ ಪ್ರಧಾನಿ ಮೋದಿ- ಪ್ರಚಂಡ ಸಹಿ

ಚೀನಾ ಬೆಂಬಲಿತ ಒಲಿ ಟೀಮ್‌ಗೆ ಶಾಕ್‌, ರಾಮಚಂದ್ರ ಪೌದೆಲ್‌ ನೇಪಾಳದ ರಾಷ್ಟ್ರಪತಿಯಾಗಿ ಆಯ್ಕೆ!