Asianet Suvarna News Asianet Suvarna News

ನೇಪಾಳ ಜೊತೆ ವಿವಿಧ 7 ಕ್ಷೇತ್ರಗಳ ಒಪ್ಪಂದಕ್ಕೆ ಪ್ರಧಾನಿ ಮೋದಿ- ಪ್ರಚಂಡ ಸಹಿ

ನಾಲ್ಕು ದಿನಗಳ ಕಾಲ ಭಾರತ ಪ್ರವಾಸಲ್ಲಿರುವ ನೇಪಾಳ ಪ್ರಧಾನಿ ಪುಷ್ಪಕಮಲ್‌ ದಹಲ್‌ ಪ್ರಚಂಡ ಅವರೊಂದಿಗೆ ಪ್ರಧಾನಿ ಮೋದಿ ಗುರುವಾರ ಸುದೀರ್ಘ ಸಭೆ ನಡೆಸಿದರು.

Many projects were launched in the presence of the Prime Minister of Nepal prachanda and PM Modi akb
Author
First Published Jun 2, 2023, 8:57 AM IST

ನವದೆಹಲಿ: ನಾಲ್ಕು ದಿನಗಳ ಕಾಲ ಭಾರತ ಪ್ರವಾಸಲ್ಲಿರುವ ನೇಪಾಳ ಪ್ರಧಾನಿ ಪುಷ್ಪಕಮಲ್‌ ದಹಲ್‌ ಪ್ರಚಂಡ ಅವರೊಂದಿಗೆ ಪ್ರಧಾನಿ ಮೋದಿ ಗುರುವಾರ ಸುದೀರ್ಘ ಸಭೆ ನಡೆಸಿದರು. ಬಳಿಕ ಮಾತನಾಡಿದ ಮೋದಿ ‘ಭಾರತ ಭಾರತ ಮತ್ತು ನೇಪಾಳ ತಮ್ಮ ಸಂಬಂಧವನ್ನು ಹಿಮಾಲಯದಷ್ಟು ಎತ್ತರಕ್ಕೆ ಕೊಂಡೊಯ್ಯಲು ಮತ್ತು ಗಡಿ ಸಮಸ್ಯೆ ಸೇರಿದಂತೆ ಎಲ್ಲ ವಿಷಯಗಳನ್ನು ಪರಿಹರಿಸಲು ಶ್ರಮಿಸಲಿವೆ’ ಎಂದು ಹೇಳಿದ್ದಾರೆ. ಬುಧವಾರ ಪ್ರಚಂಡ ಭಾರತಕ್ಕೆ ಬಂದಿಳಿದಿದ್ದಾರೆ.

ಗುರುವಾರ ಸಭೆಯಲ್ಲಿ ಉಭಯ ನಾಯಕರು ‘ಗಡಿಯಾಚೆಗಿನ ಪೆಟ್ರೋಲಿಯಂ ಪೈಪ್‌ಲೈನ್‌ ವಿಸ್ತರಣೆ, ಸಮಗ್ರ ಚೆಕ್‌ಪೋಸ್ಟ್‌ಗಳ ಅಭಿವೃದ್ಧಿ, ಮತ್ತು ಜಲವಿದ್ಯುತ್‌ ಶಕ್ತಿಯಲ್ಲಿ ಸಹಕಾರವನ್ನು ಹೆಚ್ಚಿಸುವುದು, ಭಾರತ- ನೇಪಾಳ ಸಾರಿಗೆ ಒಪ್ಪಂದ’ ಸೇರಿದಂತೆ ವಿವಿಧ 7 ಪ್ರಮುಖ ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ. ಅಲ್ಲದೇ ವ್ಯಾಪಾರ ವಾಣಿಜ್ಯ, ಸಾರಿಗೆ, ಹೂಡಿಕೆ, ವಿದ್ಯುತ್‌, ವಿದ್ಯುತ್‌ ಪ್ರಸರಣ ಮಾರ್ಗ, ನೀರಾವರಿ, ಸಮಗ್ರ ಚೆಕ್‌ಪೋಸ್ಟ್‌ ನಿರ್ಮಾಣ, ಪಟ್ರೋಲಿಯಂ ಪೈಪ್‌ಲೈನ್‌ (petroleum pipeline) ವಿಸ್ತರಣೆ ಸೇರಿದಂತೆ ವಿವಿಧ ಸಹಕಾರಗಳನ್ನು ಬಲಪಡಿಸುವಲ್ಲಿ ಉಭಯ ನಯಕರು ಚರ್ಚಿಸಿದ್ದಾರೆ.

ಪರ್ವತದ ಸುತ್ತಲಿನ ಹುಲ್ಲಿಗೂ ಬಿಲ್ಲು, ಕೈಲಾಸ-ಮಾನಸ ಸರೋವರ ಯಾತ್ರೆಯ ಶುಲ್ಕ ಏರಿಸಿದ ಚೀನಾ!

ಸುದ್ದಿಗಾರರೊಂದಿಗೆ ಮಾತನಾಡಿದ ಬಳಿಕ ಮೋದಿ ಮತ್ತು ಪ್ರಚಂಡ, ಭಾರತದ ರುಪೈದಿಹಾ (Rupaidiha) ಮತ್ತು ನೇಪಾಳದ ನೇಪಾಳಗಂಜ್‌ (Nepalganj) ಪ್ರದೇಶಗಳ ಚೆಕ್‌ಪೋಸ್ಟ್‌ಗಳನ್ನು ವರ್ಚುವಲ್‌ ಆಗಿ ಉದ್ಘಾಟನೆ ಮಾಡಿದರು. ಅಲ್ಲದೇ ಬಿಹಾರದ ಬಾಥ್ನಹಾದಿಂದ ನೇಪಾಳದ ಕಸ್ಟಮ್ಸ್‌ ಯಾರ್ಡ್‌ ಮಾರ್ಗವಾಗಿ ಚಲಿಸಲಿರುವ ರೈಲಿಗೆ ಚಾಲನೆ ನೀಡಿದರು.

ತಮ್ಮ ಸಭೆ ಉಭಯ ನಾಯಕರು ನಡೆಸಿದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮೋದಿ ‘ಹಲವಾರು ಯೋಜನೆಗಳನ್ನು ದೂರದಿಂದಲೇ ಶಂಕು ಸ್ಥಾಪನೆ ಮಾಡಿ, ಉದ್ಘಾಟಿಸಿದರೂ ಸಹ ಭವಿಷ್ಯದಲ್ಲಿ ಉಭಯ ದೇಶಗಳ ನಡುವಿನ ಸಂಬಂಧವನ್ನು ‘ಸೂಪರ್‌ಹಿಟ್‌’ ಮಾಡುವ ಅನೇಕ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ನಮ್ಮ ಸಂಬಂಧವನ್ನು ಹಿಮಾಲಯದ ಎತ್ತರಕ್ಕೆ ಕೊಂಡೊಯ್ಯುವ ಪ್ರಯತ್ನವನ್ನು ಮುಂದುವರೆಸುತ್ತೇವೆ. ಇದೇ ಉತ್ಸಾಹದಲ್ಲಿ ಗಡಿ ಸೇರಿದಂತೆ ಯಾವುದೇ ಸಮಸ್ಯೆಗಳನ್ನು ಬಗೆಹರಿಸುತ್ತೇವೆ. ಸಾಂಸ್ಕೃತಿಕ ಮತ್ತು ಧಾರ್ಮಿಕ ಸಂಬಂಧಗಳನ್ನು ಮತ್ತಷ್ಟು ಬಲಪಡಿಸಲು ರಾಮಾಯಣ ಸಕ್ರ್ಯೂಟ್‌ಗೆ ಸಂಬಂಧಿಸಿದ ಯೋಜನೆಗಳನ್ನು ತ್ವರಿತಗೊಳಿಸಬೇಕೆಂದು ನಾನು ಪ್ರಚಂಡ ನಿರ್ಧರಿಸಿದ್ದೇವೆ’ ಎಂದರು.

ರೇಡಿಯೋ ಸಂಪರ್ಕಕ್ಕೂ ಸಿಗದೆ ನೇಪಾಳದಲ್ಲಿ ನಾಪತ್ತೆಯಾಗಿದ್ದ ಭಾರತದ ಖ್ಯಾತ ಪರ್ವತಾರೋಹಿ ಬಲ್ಜೀತ್‌ ಕೌರ್‌ ರಕ್ಷಣೆ

‘ಪ್ರಧಾನಿ ಮೋದಿಯವರ ಸಮರ್ಥ ನಾಯಕತ್ವದಲ್ಲಿ ಭಾರತ ಆರ್ಥಿಕ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕಾಣುತ್ತಿರುವುದನ್ನು ನೋಡಲು ಸಂತೋಷವಾಗುತ್ತದೆ. ಅಧಿಕಾರ ವಹಿಸಿಕೊಂಡು 9 ವರ್ಷಗಳನ್ನು ಪೂರೈಸಿರುವ ಪ್ರಧಾನಿ ಮೋದಿಯವರಿಗೆ (Prime Minister Modi) ನಾನು ಅಭಿನಂದಿಸುತ್ತೇನೆ’ಎಂದು ಪ್ರಚಂಡ ಹೇಳಿದರು.

Follow Us:
Download App:
  • android
  • ios