ಕಾಲುವೆ ಕ್ಲೀನಿಂಗ್‌ಗೆ ಹಿಟಾಚಿ ಇಳಿಸಿದ್ರೆ ಬರೀ ಸೈಕಲ್ ಸ್ಕೂಟರ್‌ಗಳೇ ಸಿಕ್ತು... ವಿಡಿಯೋ ವೈರಲ್
ಕಾಲುವೆ ಸ್ವಚ್ಛತೆಗೆ ಹಿಟಾಚಿ ಇಳಿಸಿದ ಅಧಿಕಾರಿಗಳಿಗೆ ಶಾಕ್ ಆಗಿತ್ತು. ಕಾರಣ ಅಲ್ಲಿ ಸಿಕ್ಕಿದ್ದು, ಕಸವಲ್ಲ. ರಾಶಿ ರಾಶಿ ಸೈಕಲ್, ಸ್ಕೂಟರ್, ಬೈಕ್, ಏನಿದು ಸ್ಟೋರಿ ಇಲ್ಲಿದೆ ಓದಿ
ಅಮಸ್ಟರ್‌ಡಾಮ್: ನಮ್ಮಲ್ಲೇನಾದರೂ ಕಾಲುವೆ ಕ್ಲೀನಿಂಗ್ ಮಾಡೋಕೆ ಅಂತ ಹಿಟಾಚಿ ಕಾಲುವೆಗೆ ಇಳಿಸಿದ್ರೆ ಏನ್ ಸಿಗ್ಬಹುದು ಹೇಳಿ... ಅದು ಡಿಪೆಂಡ್ಸ್! ಬೆಂಗಳೂರಿನ ರಾಜಾ ಕಾಲುವೆ ಆದ್ರೆ ಬರೀ ಪ್ಲಾಸ್ಟಿಕ್ ವೇಸ್ಟ್, ಕಸ ಸಿಗ್ಬಹುದು ನಮ್ ಹಳಿ ಕಡೆ ಇರುವ ತೋಟ ಹೊಲ ಗದ್ದೆಗಳಿಗೆ ನೀರುಣಿಸುವ ಕಾಲುವೆ ಆದ್ರೆ ಕೆಸರು ಮಣ್ಣಿನಿಂದ ತುಂಬಿದ ಹೂಳು ಸಿಗ್ಬಹುದು. ಆದರೆ ಇಲ್ಲೊಂದು ಕಡೆ ಏನ್ ಸಿಕ್ಕಿದೆ ಗೊತ್ತಾ... ಸಾವಿರಾರುಗಟ್ಟಲೇ ಸೈಕಲ್‌ಗಳು ಸ್ಕೂಟರ್‌ಗಳು ಕಾಲುವೆ ಕೆಳಗೆ ಸಿಕ್ಕಿವೆ. ಇದೆಲ್ಲಿ ಗೊತ್ತಾ ನೆದರ್ಲ್ಯಾಂಡ್‌ನ ಅಮಸ್ಟರ್‌ಡಾಮ್‌ನಲ್ಲಿ.
ಹೌದು ಕಾಲುವೆ ಸ್ವಚ್ಛತೆಗಿಳಿದ ಹಿಟಾಚಿಯೊಂದು ಸಾವಿರ ಸಾವಿರ ಸಂಖ್ಯೆಯಲ್ಲಿ ಸೈಕಲ್‌ಗಳನ್ನು(Bycicle) ಮೇಲಕ್ಕೆಳೆದಿದೆ. ಇದರ ವಿಡಿಯೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, 80 ಲಕ್ಷಕ್ಕೂ ಹೆಚ್ಚು ಜನ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. @Cosasdevida_12 ಎಂಬ ಟ್ವಿಟ್ಟರ್ ಬಳಕೆದಾರರು ಈ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದು, ವಿಡಿಯೋ ನೋಡಿದ ಜನ ಒಂದು ಕ್ಷಣ ಶಾಕ್ ಆಗಿದ್ದಾರೆ.
ನೀರಿನ ಹರಿವೆಗೆ ಸುಗಮ ಹಾದಿ ಮಾಡಿಕೊಡುವ ಸಲುವಾಗಿ ಅಲ್ಲಿನ ಅಧಿಕಾರಿಗಳು ಹಿಟಾಚಿ ರೀತಿಯ ಮೆಷಿನ್ ಅನ್ನು ಕಾರ್ಯಾಚರಣೆಗೆ ಇಳಿಸಿದ್ದರು. ಈ ವೇಳೆ ಸಾವಿರಾರು ಸೈಕಲ್ ಹಾಗೂ ಸ್ಕೂಟರ್‌ಗಳು ಬೈಕ್‌ಗಳು ಹೊರ ಬಂದಿವೆ. 16 ಸೆಕೆಂಡ್‌ಗಳ ಈ ವಿಡಿಯೋವನ್ನು ಆಕ್ಟೋಬರ್ 8 ರಂದು ಪೋಸ್ಟ್ ಮಾಡಲಾಗಿದ್ದು, 8 ಮಿಲಿಯನ್‌ಗೂ ಹೆಚ್ಚು ಜನ ಈ ವಿಡಿಯೋ ವೀಕ್ಷಿಸಿದ್ದಾರೆ. ಅಮಸ್ಟರ್‌ಡಾಮ್‌ನ (Amsterdam) ಕಾಲುವೆಗಳ ಸ್ವಚ್ಛತಾಕಾರ್ಯ ಎಂದು ಈ ವಿಡಿಯೋಗೆ ಕ್ಯಾಪ್ಷನ್ ನೀಡಲಾಗಿದೆ.
ಇನ್ನು ವಿಡಿಯೋ ನೋಡಿದ ಅನೇಕರು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಹಲವು ವರ್ಷಗಳ ಹಿಂದೆ ನಾವು ಅಲ್ಲಿ ಸುಂದರವಾದ ಬೋಟಿಂಗ್ ನಡೆಸಿದ್ದೆವು ಆಗ ನಮ್ಮ ಪ್ರವಾಸಿ ಗೈಡ್, ಈ 'ಕಾಲುವೆಯ ತಳದಲ್ಲಿ ಮುಕ್ಕಾಲು ಭಾಗದಷ್ಟು ಬಹುಮಟ್ಟಿಗೆ ಚೆನ್ನಾಗಿಯೇ ಇರುವ ಸೈಕಲ್‌ಗಳಿವೆ' ಎಂದು ಹೇಳಿದ್ದರು. ಈ ವಿಡಯೋ ನೋಡಿದರೆ ಆಕೆ ಹೇಳಿದ್ದು ಸರಿಯಾಗಿಯೇ ಇದೆ ಎಂದು ಒಬ್ಬರು ತಮ್ಮ ಅನುಭವವನ್ನು ಬಿಚ್ಚಿಟ್ಟಿದ್ದಾರೆ. ನಾನು ಅಲ್ಲಿಗೆ ಮೊದಲ ಬಾರಿಗೆ ಭೇಟಿ ನೀಡಿದಾಗ ಭೂಮಿಯ ಮೇಲಿನ ಎಲ್ಲಾ ರೀತಿಯ ಸೈಕಲ್‌ಗಳು ಇಲ್ಲೇ ಇವೆ ಎಂದು ಭಾವಿಸಿದ್ದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ಯಾದಗಿರಿಯಲ್ಲಿ ಪ್ರವಾಸೋದ್ಯಮ ದಿನ ಆಚರಣೆ: ಸೈಕಲ್ ತುಳಿದು ಹುರುಪು ತುಂಬಿದ ಡಿಸಿ ಸ್ನೇಹಲ್..!
ಅಮ್‌ಸ್ಟರ್‌ಡಾಮ್‌ನಲ್ಲಿ 160ಕ್ಕೂ ಹೆಚ್ಚು ಕಾಲುವೆಗಳಿದ್ದು, ಅವುಗಳಲ್ಲಿ ಹೆಚ್ಚಿನವು 17ನೇ ಶತಮಾನದಲ್ಲಿ ನಿರ್ಮಾಣವಾದವುಗಳಾಗಿವೆ. ಹಾಗೆಯೇ ಇಡೀ ಅಮಸ್ಟರ್‌ಡಾಮ್‌ನಲ್ಲಿ ಒಟ್ಟು 8 ಲಕ್ಷ ಬೈಸಿಕಲ್‌ಗಳಿವೆ. ಪ್ರತಿ ವರ್ಷವೂ 10 ಸಾವಿರಕ್ಕೂ ಹೆಚ್ಚು ಬೈಸಿಕಲ್‌ಗಳನ್ನು ಜನ ಕಾಲುವೆಗೆ ತಳ್ಳುತ್ತಾರೆ ಎಂದು ಮತ್ತೊಬ್ಬರು ಕಾಮೆಂಟ್‌ನಲ್ಲಿ ಮಾಹಿತಿ ನೀಡಿದ್ದಾರೆ.
ಗಾರ್ಡಿಯನ್ ಪತ್ರಿಕೆಯ ವರದಿ ಪ್ರಕಾರ, 'ಪ್ರತಿವರ್ಷ ಇಲ್ಲಿ ಸಾವಿರಾರು ಬೈಕ್‌ಗಳನ್ನು ನದಿಗಳು (rivers), ಕೊಳಗಳು (ponds), ಸರೋವರಗಳು (lakes)ಮತ್ತು ಕಾಲುವೆಗಳಿಗೆ(canals) ಎಸೆಯಲಾಗುತ್ತದೆ. ಹೇಗೆ ಈ ಬೈಸಿಕಲ್‌ಗಳು ಕಾಲುವೆ ಸೇರುತ್ತವೆ? ಏಕೆ ಕಾಲುವೆಗೆ ಎಸೆಯಲಾಗುತ್ತದೆ ಎಂಬ ಬಗ್ಗೆ ಯಾರಿಗೂ ಖಚಿತತೆ ಇಲ್ಲ. ಸರಳವಾಗಿ ಆಮ್‌ಸ್ಟರ್‌ಡ್ಯಾಮ್‌ನಲ್ಲಿನ ಪರಿಸ್ಥಿತಿಯನ್ನು ವಿವರಿಸುವುದಾದರೆ, ನಗರದಲ್ಲಿ ಅಂದಾಜು 2 ಮಿಲಿಯನ್ ಬೈಸಿಕಲ್‌ಗಳು ಮತ್ತು 30 ಮೈಲುಗಳುದ್ದಕ್ಕೂ ಕಾಲುವೆಗಳಿವೆ, ಇವುಗಳು ಒಂದರಿಂದ ಇನ್ನೊಂದಕ್ಕೆ ಸಂಪರ್ಕ ಒದಗಿಸುತ್ತವೆ ಎಂದು ನಂಬಲಾಗಿದೆ. ಆಮಸ್ಟರ್‌ಡ್ಯಾಂನ ನಿವಾಸಿಗಳು ತಮ್ಮ ಹಳೆ ಬೈಸಿಕಲ್ ಬಗ್ಗೆ ಜಿಗುಪ್ಸೆ ಬಂದಾಗ, ಅವರಿಗೆ ಈ ನೀರಿನ ಮೂಲಗಳು ಅವುಗಳನ್ನು ಎಸೆಯಲು ಪ್ರಮುಖ ಸ್ಥಳವಾಗಿ ಕಾಣಿಸುತ್ತದೆ' ಎಂದು ಹೇಳಿದೆ.
ರಾಯಚೂರು: ತುಂಗಭದ್ರಾ ಎಡದಂಡೆ ಕಾಲುವೆಗೆ ಉರುಳಿದ ಕಾರು: ಇಬ್ಬರು ಬಲಿ
ಹಾಗೆಯೇ ಡಚ್ ಪತ್ರಿಕೆ ಟ್ರೌವ್ ಒಮ್ಮೆ ಅಮಸ್ಟರ್‌ಡ್ಯಾಮ್‌ನ ಕಾಲುವೆಗಳನ್ನು ಕಸದ ತೊಟ್ಟಿಗೆ ಹೋಲಿಸಿತ್ತು. ನಾವು ಪ್ರವಾಸಿಗರನ್ನು ದೋಣಿ ವಿಹಾರಕ್ಕೆ ಕರೆದೊಯ್ಯುವ ಸಂಪ್ರದಾಯಿಕ ಕಸದ ತೊಟ್ಟಿಗಳಿವು ಎಂದು ಪತ್ರಿಕೆ ಬರೆದಿತ್ತು. ಅದೇನೆ ಇರಲಿ ನಮ್ಮ ಭಾರತೀಯರು ಈ ವಿಡಿಯೋ ನೋಡಿ ಹೌಹಾರೊಂದತು ಪಕ್ಕಾ, ನಮ್ಗಾದ್ರೂ ಕೊಟ್ಟಿದ್ರೆ ನಾಲ್ಕು ದಿನ ಓಡ್ಸಿ ಆಮೇಲಿ ಗುಜರಿ (ಚಿಂದಿ) ಅವರಿಗೆ ಕೊಟ್ಟು ನಾಲ್ಕು ಕಾಸು ಗಳಿಸ್ತಿದ್ವೆನೋ ಅಂತ ಒಳಗೊಳಗೆ ಬೇಸರಿಸೋದು ನಿಜ.