ಅಮೆರಿಕದ ಪ್ರಮುಖ ಲಾಟರಿಯಾದ ಪವರ್‌ಬಾಲ್‌ ಜಾಕ್‌ಪಾಟ್‌ನಲ್ಲಿ ವ್ಯಕ್ತಿಯೊಬ್ಬ ಬರೋಬ್ಬರಿ 16.5 ಸಾವಿರ ಕೋಟಿ ರು. ಗೆದ್ದಿದ್ದಾನೆ. ಇದು ಅಮೆರಿಕದ ಲಾಟರಿ ಇತಿಹಾಸದಲ್ಲೇ ಅತಿ ದೊಡ್ಡ ಮೊತ್ತ ಎನಿಸಿಕೊಂಡಿದೆ.

ನ್ಯೂಯಾರ್ಕ್: ಅಮೆರಿಕದ ಪ್ರಮುಖ ಲಾಟರಿಯಾದ ಪವರ್‌ಬಾಲ್‌ ಜಾಕ್‌ಪಾಟ್‌ನಲ್ಲಿ ವ್ಯಕ್ತಿಯೊಬ್ಬ ಬರೋಬ್ಬರಿ 16.5 ಸಾವಿರ ಕೋಟಿ ರು. ಗೆದ್ದಿದ್ದಾನೆ. ಇದು ಅಮೆರಿಕದ ಲಾಟರಿ ಇತಿಹಾಸದಲ್ಲೇ ಅತಿ ದೊಡ್ಡ ಮೊತ್ತ ಎನಿಸಿಕೊಂಡಿದೆ. ಆದರೆ ಲಾಟರಿಯಲ್ಲಿ ಗೆದ್ದಿರುವ ಎಡ್ವಿನ್‌ ಕ್ಯಾಸ್ಟ್ರೊ ತಕ್ಷಣವೇ ಒಂದೇ ಸಲಕ್ಕೆ ಹಣ ಬೇಕು ಎಂದು ಕೇಳಿರುವುದರಿಂದ ಕಂಪನಿಯ ನಿಯಮದಂತೆ ಅರ್ಧದಷ್ಟು ಹಣ ಅಂದರೆ 8 ಸಾವಿರ ಕೋಟಿ ರು. ಮಾತ್ರ ಪಡೆದುಕೊಳ್ಳಲಿದ್ದಾನೆ. ಗೆದ್ದ ಪೂರ್ತಿ ಹಣವನ್ನು ಪಡೆದುಕೊಳ್ಳಬೇಕಾದರೆ ಕಂಪನಿಯ ನಿಯಮದಂತೆ 30 ವರ್ಷಗಳ ಕಾಲ ಹಂತಹಂತವಾಗಿ ಹಣವನ್ನು ಪಡೆದುಕೊಳ್ಳಬೇಕಿತ್ತು.

160 ರೂ. ಕೊಟ್ಟು ಕಳೆದ ನವೆಂಬರ್‌ನಲ್ಲಿ ಎಡ್ವಿನ್‌ ಈ ಲಾಟರಿಯನ್ನು ಖರೀದಿಸಿದ್ದ. ಎಡ್ವಿನ್‌ ಕೊಂಡಿದ್ದ 6 ಅಂಕಿ ಲಾಟರಿಗೂ ಡ್ರಾ ಆದ ಸಂಖ್ಯೆಗೂ ಮ್ಯಾಚ್‌ ಆಗಿ ಆತ ಜಾಕ್‌ಪಾಟ್‌ ಹೊಡೆದಿದ್ದಾನೆ. ಗೆದ್ದ ಬಳಿಕ ಪ್ರತಿಕ್ರಿಯಿಸಿರುವ ಎಡ್ವಿನ್‌ ಇಷ್ಟೊಂದು ಹಣ ಗೆದ್ದಿರುವಕ್ಕೆ ಆಘಾತಕ್ಕೊಳಗಾಗಿದ್ದೇನೆ ಎಂದು ಹೇಳಿದ್ದಾನೆ. ಆದರೆ, ಸಾರ್ವಜನಿಕವಾಗಿ ಹಣ ಸ್ವೀಕರಿಸಲು ನಿರಾಕರಿದ್ದಾನೆ. ಅಮೆರಿಕದ 45 ರಾಜ್ಯಗಳಲ್ಲಿ ಕಾರ‍್ಯನಿರ್ವಹಿಸುವ ಈ ಲಾಟರಿ ಕಂಪನಿ ಗೆದ್ದಿರುವ ವ್ಯಕ್ತಿ ಹೆಸರನ್ನಷ್ಟೇ ಘೋಷಿಸಿದ್ದು, ಇತರ ವಿವರ ನೀಡುವುದಿಲ್ಲ.

ಅಜ್ಜನ ಸಲಹೆಯಂತೆ 18ನೇ ವರ್ಷದ ಹುಟ್ಟುಹಬ್ಬಕ್ಕೆ ಲಾಟರಿ ಖರೀದಿ, 290 ಕೋಟಿ ರೂ ಗೆದ್ದ ಯುವತಿ!

ವೃದ್ಧಾಪ್ಯದಲ್ಲಿ ಒಲಿದ ಲಕ್ಷ್ಮಿ: 5 ಕೋಟಿಯ ಲಾಟರಿ ಗೆದ್ದ 88ರ ಅಜ್ಜ