2 ದೇಶಗಳಿಗೆ ಭಾರತದ ಕುಲಾಂತರಿ ತಳಿಯಿಂದ ಹೊಸ ಆತಂಕ
- ಭಾರತದಲ್ಲಿ ಮೊದಲ ಬಾರಿ ಪತ್ತೆಯಾದ ಕೊರೋನಾ ವೈರಸ್‌ನ ಅಪಾಯಕಾರಿ ರೂಪಾಂತರ
- ಡೆಲ್ಟಾ(ಬಿ.1.617.2) ವೈರಸ್ ಇದೀಗ ಬ್ರಿಟನ್ ಮತ್ತು ಅಮೆರಿಕಕ್ಕೆ ತೀವ್ರ ತಲೆನೋವು
- ಪ್ರತಿ 11 ದಿನಕ್ಕೊಮ್ಮೆ ದುಪ್ಪಟ್ಟಾಗುತ್ತಿರುವ ಡೆಲ್ಟಾ ವೈರಸ್
ಲಂಡನ್/ ವಾಷಿಂಗ್ಟನ್ (ಜೂ.18): ಭಾರತದಲ್ಲಿ ಮೊದಲ ಬಾರಿ ಪತ್ತೆಯಾದ ಕೊರೋನಾ ವೈರಸ್‌ನ ಅಪಾಯಕಾರಿ ರೂಪಾಂತರವಾಗಿರುವ ಡೆಲ್ಟಾ(ಬಿ.1.617.2) ವೈರಸ್ ಇದೀಗ ಬ್ರಿಟನ್ ಮತ್ತು ಅಮೆರಿಕಕ್ಕೆ ತೀವ್ರ ತಲೆನೋವು ತಂದಿಟ್ಟಿದೆ. ಬ್ರಿಟನ್ನಿನಲ್ಲಿ ಈ ವೈರಸ್ ಪ್ರತಿ 11 ದಿನಕ್ಕೊಮ್ಮೆ ದುಪ್ಪಟ್ಟಾಗುತ್ತಿದ್ದರೆ, ಅಮೆರಿಕದಲ್ಲಿ ಈ ವೈರಸ್‌ನ ಅಪಾಯವನ್ನು ಅರಿತು ‘ಆತಂಕಕಾರಿ ರೂಪಾಂತರಿ’ ವರ್ಗಕ್ಕೆ ಸೇರಿಸಲಾಗಿದೆ.
ಕೊಪ್ಪಳ: ಕೋವಿಡ್ ನಿರ್ವಹಣೆ, ದೇಶಕ್ಕೆ ಮುನಿರಾಬಾದ್ ಮಾದರಿ..! ...
ಅತ್ಯಂತ ವೇಗವಾಗಿ ಹರಡುತ್ತದೆ, ಸೋಂಕಿತರಲ್ಲಿ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಹೆಚ್ಚಿಸುತ್ತದೆ ಹಾಗೂ ಲಸಿಕೆಯ ಪ್ರಭಾವದಿಂದಲೂ ನುಣುಚಿಕೊಳ್ಳುತ್ತದೆ ಎಂದು ಹೇಳಲಾದ ಡೆಲ್ಟಾರೂಪಾಂತರಿ ವೈರಸ್ ಭಾರತದಲ್ಲಿ 2ನೇ ಅಲೆಯಲ್ಲಿ ಅತಿಹೆಚ್ಚು ಸಾವು-ನೋವು ಉಂಟಾಗಲು ಕಾರಣ ಎಂದು ಹೇಳಲಾಗಿತ್ತು. ಈ ವೈರಸ್ ಈಗ ಬ್ರಿಟನ್ನಿನಲ್ಲಿ ವೇಗವಾಗಿ ಹರಡುತ್ತಿದ್ದು, ಪ್ರತಿ 11 ದಿನಕ್ಕೊಮ್ಮೆ ದುಪ್ಪಟ್ಟಾಗುತ್ತಿದೆ ಎಂದು ಇಂಪೀರಿಯಲ್ ಕಾಲೇಜ್ ಆಫ್ ಲಂಡನ್ ನಡೆಸಿದ ಅಧ್ಯಯನದಲ್ಲಿ ತಿಳಿದುಬಂದಿದೆ. ಮೇ 20 ಹಾಗೂ ಜೂನ್ 7ರ ನಡುವೆ ನಡೆಸಿದ 1 ಲಕ್ಷ ಸ್ವಾಬ್ ಟೆಸ್ಟ್‌ಗಳನ್ನು ವಿಶ್ಲೇಷಿಸಿದಾಗ ಶೇ.0.15 ಜನರಲ್ಲಿ ಅಥವಾ 670 ಜನರ ಪೈಕಿ ಒಬ್ಬರಲ್ಲಿ ಡೆಲ್ಟಾವೈರಸ್ ಕಂಡುಬಂದಿದೆ. ಅದರಿಂದಾಗಿಯೇ ಏಪ್ರಿಲ್ ನಂತರ ಬ್ರಿಟನ್ನಿನಲ್ಲಿ ಆಸ್ಪತ್ರೆಗೆ ದಾಖಲಾಗುವ ಕೋವಿಡ್ ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ ಎಂದು ಸಮೀಕ್ಷೆ ತಿಳಿಸಿದೆ.
2-4 ವಾರದಲ್ಲಿ 3ನೇ ಅಲೆ! 2ನೇ ಅಲೆಗಿಂತ ಭೀಕರ ...
ಇದೇ ವೇಳೆ, ಅಮೆರಿಕದ ಜೋ ಬೈಡೆನ್ ಸರ್ಕಾರ ಇಷ್ಟುದಿನ ‘ಗಮನಿಸಬೇಕಾದ ರೂಪಾಂತರಿ’ ಪಟ್ಟಿಯಲ್ಲಿರಿಸಿದ್ದ ಡೆಲ್ಟಾವೈರಸ್ಸನ್ನು ಈಗ ‘ಆತಂಕಕಾರಿ ರೂಪಾಂತರಿ’ ಪಟ್ಟಿಗೆ ಸೇರ್ಪಡೆ ಮಾಡಿದೆ. ವಿಶ್ವ ಆರೋಗ್ಯ ಸಂಸ್ಥೆಯು ಮೇ 10ರಂದೇ ಈ ವೈರಸ್ಸನ್ನು ಅಪಾಯಕಾರಿ ವೈರಸ್ ವರ್ಗಕ್ಕೆ ಸೇರ್ಪಡೆ ಮಾಡಿತ್ತು.