ಮೆಕ್ಸಿಕೋ ಸಂಸತ್ತಿನಲ್ಲಿ ಪ್ರದರ್ಶಿಸಿದ ಏಲಿಯನ್ಸ್‌ ಜೀವಂತವಾಗಿತ್ತು, ಬೆಚ್ಚಿ ಬೀಳಿಸಿದ ವೈದ್ಯರ ಪರೀಕ್ಷೆ!

ಮೆಕ್ಸಿಕೋ ಅಸೆಂಬ್ಲಿಯಲ್ಲಿ ಇತ್ತೀಚೆಗೆ ಎಲಿಯನ್ಸ್ ಕಳೇಬರಹವನ್ನು ಪ್ರದರ್ಶಿಸಲಾಗಿತ್ತು. ಬಳಿಕ ಏಲಿಯನ್ಸ್ ಕುರಿತು ಅಧ್ಯಯನದ ವರದಿಯನ್ನು ಚರ್ಚಿಸಲಾಗಿತ್ತು. ಆದರೆ ಇದು ನಕಲಿ ಅನ್ನೋ ಮಾತುಗಳು ಕೇಳಿಬಂದಿತ್ತು. ಇದೀಗ ಮೆಕ್ಸಿಕೋ ವೈದ್ಯರು ಅಧ್ಯಯನ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ಈ ಪೈಕಿ ಒಂದು ಏಲಿಯನ್ಸ್‌ಗೆ ಜೀವಂತವಾಗಿತ್ತು ಅನ್ನೋದು ಪರೀಕ್ಷೆಯಿಂದ ಬಹಿರಂಗವಾಗಿದೆ.

Aliens corpses unveiled in Mexico assembly is real found that one was alive Doctors reveals lab test report ckm

ಮೆಕ್ಸಿಕೋ(ಸೆ.20) ಅನ್ಯಗ್ರಹ ಜೀವಿಗಳ ಕುರಿತು ಮತ್ತೆ ಚರ್ಚೆ ಜೋರಾಗಿದೆ. ಇತ್ತೀಚೆಗೆ ಮೆಕ್ಸಿಕೋ ಅಸೆಂಬ್ಲಿಯಲ್ಲಿ ಎರಡು ಏಲಿಯನ್ಸ್ ಕಳೇಬರಹವನ್ನು ಪ್ರಸ್ತುತಪಡಿಸಲಾಗಿತ್ತು. ಈ ಫೋಟೋ,ವಿಡಿಯೋಗಳು ಭಾರಿ ಸಂಚಲನ ಸೃಷ್ಟಿಸಿತ್ತು. ಇದರ ಬೆನ್ನಲ್ಲೇ ಇದು ಮಾನವ ನಿರ್ಮಿತ, ನಕಲಿ ಎಂಬ ವ್ಯಾಖ್ಯಾನಗಳು ಕೇಳಿಬಂದಿತ್ತು. ಆದರೆ ಮೆಕ್ಸಿಕೋ ಆರೋಗ್ಯ ವಿಜ್ಞಾನ ಸಂಸ್ಥೆ ನಿರ್ದೇಶಕ ಡಾ. ಜೋಸ್ ಡೇ ಜೀಸಸ್ ಝಾಲ್ಸ್ ಬೆನಿಟೆಜ್ ಸ್ಫೋಟಕ ಮಾಹಿತಿ ಬಹಿರಂಗಪಡಿಸಿದ್ದಾರೆ. ಇದರಲ್ಲಿ ಒಂದು ಏಲಿಯನ್ಸ್‌ಗೆ ಜೀವವಂತವಾಗಿತ್ತು ಎಂದಿದ್ದಾರೆ. ಈ ಹೇಳಿಕೆ ಇದೀಗ ವಿಜ್ಞಾನ ಲೋಕ ಮಾತ್ರವಲ್ಲ ಏಲಿಯನ್ಸ್ ಕುರಿತು ಕುತೂಹಲದಿಂದ ಅಧ್ಯಯನ ಮಾಡುತ್ತಿದ್ದ ಹಲವು ಸಂಶೋಧಕರನ್ನೂ ಬೆಚ್ಚಿ ಬೀಳಿಸಿದೆ.

ಅನ್ಯಗ್ರಹ ಜೀವಿಗಳ ಅಸ್ಥಿಪಂಜರದ ಎಕ್ಸ್‌ರೇ, ಸಿಟಿ ಸ್ಕಾನ್, ಡಿಎನ್ಎ ಸೇರಿದಂತೆ ಹಲವು ಪರೀಕ್ಷೆಗಳನ್ನು ಮಾಡಲಾಗಿದೆ. ಕಳೇಬರದ ಎಲುಬುಗಳು, ತಲೆಬುರುಡೆ ಸೇರಿದಂತೆ ಎಲ್ಲವನ್ನು ಕೂಲಂಕುಷವಾಗಿ ಮೆಕ್ಸಿಕೋ ಸರ್ಕಾರಿ ಲ್ಯಾಬ್‌ನಲ್ಲಿ ಪರೀಕ್ಷೆ ಮಾಡಲಾಗಿದೆ. ಸೆಪ್ಟೆಂಬರ್ 19 ರಂದು ಎಲ್ಲಾ ಪರೀಕ್ಷೆಗಳು ಮುಗಿದೆ. ಬಳಿಕ ಡಾ. ಡಾ. ಜೋಸ್ ಡೇ ಜೀಸಸ್ ಝಾಲ್ಸ್ ಬೆನಿಟೆಜ್, ಮೆಕ್ಸಿಕೋ ಸಂಸತ್ತಿನಲ್ಲಿ ಪ್ರದರ್ಶಿಸಿದ ಅನ್ಯಗ್ರಹ ಜೀವಿಗಳ ಅಸ್ಥಿಪಂಜರ ಅಸಲಿ ಎಂದಿದ್ದಾರೆ. 

1,000 ವರ್ಷಗಳಷ್ಟು ಹಳೆಯದಾದ ವಿಚಿತ್ರ ಶವಗಳ ಪಳೆಯುಳಿಕೆ ಪತ್ತೆ: ಏಲಿಯೆನ್ಸ್‌ ಎಂದು ತಜ್ಞರ ವಾದ!

ಮೆಕ್ಸಿಕೋ ದೇಶದ ಸಂಸತ್ತಿನಲ್ಲಿ ವಿಜ್ಞಾನಿಯೊಬ್ಬರು ಅನ್ಯಗ್ರಹ ಜೀವಿಗಳದು ಎಂದು ಹೇಳಲಾಗುವ ಎರಡು ಅಸ್ಥಿಪಂಜರಗಳನ್ನು ಪ್ರದರ್ಶನಕ್ಕೆ ಇರಿಸಿರುವುದು ಜಗತ್ತಿನಾದ್ಯಂತ ತೀವ್ರ ಚರ್ಚೆಗೆ ಕಾರಣವಾಗಿದೆ. ಇದು 1000 ವರ್ಷಗಳಷ್ಟು ಹಳೆಯ ಅಸ್ಥಿಪಂಜರ ಎಂದು ವಿಜ್ಞಾನಿ ಹೇಳಿಕೊಂಡಿದ್ದರು. ಈ ಸುದ್ದಿ ಜಗತ್ತಿನಾದ್ಯಂತ ಭಾರಿ ಸಂಚಲನ ಮೂಡಿಸಿತ್ತು. ಕಾರಣ ಒಂದಡೆ ಇದು ನಕಲಿ, ಮಾನವ ನಿರ್ಮಿತ ಅಸ್ಥಿಪಂಜರ ಎಂಬ ಚರ್ಚೆಗಳು ಜೋರಾಗಿತ್ತು. ಇದರ ಬೆನ್ನಲ್ಲೇ ಉದ್ಯಮಿ ಎಲಾನ್ ಮಸ್ಕ್ ಕೂಡ ಇದು ನಕಲಿ ಎಂದಿದ್ದರು.

ಅಸಲಿ ನಕಲಿ ಚರ್ಚೆಗಳ ನಡುವೆ ಡಾ. ಜೋಸ್ ಡೇ ಜೀಸಸ್ ಝಾಲ್ಸ್ ಬೆನಿಟೆಜ್ ಕೆಲ ಸ್ಪಷ್ಟನೆ ನೀಡಿದ್ದಾರೆ. ಮೆಕ್ಸಿಕೋ ಸಂಸತ್ತಿನಲ್ಲಿ ಪ್ರಸ್ತುತಪಡಿಸಿದ ಅನ್ಯಗ್ರಹ ಜೀವಿಗಳ ಅಸ್ಥಿಪಂಜರ ನಕಲಿ ಅಲ್ಲ. ಈ ಅಸ್ಥಿಪಂಜರದ ವಿವರವಾದ ಅಧ್ಯಯನ ನಡೆಸಲಾಗಿದೆ. ಮಮ್ಮಿಗಳಲ್ಲಿ ಶೇಖರಿಸಿಟ್ಟ ಅಸ್ಥಿಪಂಜರದಲ್ಲಿದ್ದ ಈ ಏಲಿಯನ್ಸ್ ಅಧ್ಯಯನದ ಮೂಲಕ ಹೊರತೆಗೆದು ಸಂಸತ್ತಿನಲ್ಲಿ ಪ್ರದರ್ಶಿಸಲಾಗಿದೆ. ಈ ಅಸ್ಥಿಪಂಜರಗಳು ನಕಲಿ ಅಲ್ಲ, ಮಾನವ ನಿರ್ಮಿತವೂ ಅಲ್ಲ. ವಿಶೇಷ ಅಂದರೆ ಈ ಪೈಕಿ ಒಂದು ಏಲಿಯನ್ಸ್‌ಗೆ ಜೀವವಂತವಾಗಿತ್ತು ಎಂದು ಡಾ. ಜೋಸ್ ಡೇ ಜೀಸಸ್ ಝಾಲ್ಸ್ ಬೆನಿಟೆಜ್ ಹೇಳಿದ್ದಾರೆ.ಜೀವಂತವಾಗಿರುವಾಗಲೇ ಮಮ್ಮಿ ಪೆಟ್ಟಿಗೆ ಸೇರಿದೆ. ಹೀಗಾಗಿ ಈ ಅಸ್ಥಿಪಂಜರ ಅಖಂಡ ಹಾಗೂ ಗರ್ಭಾವಸ್ಥೆಯಲ್ಲಿದೆ. ಅನ್ಯಗ್ರಹ ಜೀವಿಯ ಹೊಟ್ಟೆಯೊಳಗೆ ಉಂಡೆಗಳನ್ನು ನಾವು ನೋಡಬಹುದು. ಇದು ಮೊಟ್ಟೆಗಳಾಗಿರಬಹುದು ಎಂದು ಅಂದಾಜಿಸಿದ್ದಾರೆ.  

ಮೆಕ್ಸಿಕೋದಲ್ಲಿ ಪತ್ತೆಯಾದ ಏಲಿಯೆನ್ಸ್‌ ಅವಶೇಷದ ನಿಜರೂಪ ಬಹಿರಂಗಪಡಿಸಿದ ಎಲಾನ್ ಮಸ್ಕ್‌!

ಈ ಅನ್ಯಗ್ರಹ ಜೀವಿಗಳ ಅಸ್ಥಿಪಂಜರಗಳ ಎಲುಬುಗಳು ಮಾನವ ಅಥವಾ ಭೂಮಿ ಮೇಲಿನ ಯಾವುದೇ ಪ್ರಾಣಿಯ ಎಲುಬುಗಳಿಗೆ ಹೋಲಿಕೆಯಾಗುತ್ತಿಲ್ಲ. ಈ ಜೀವಿಗಳ ಅಸ್ಥಿಪಂಜರ ಅಧ್ಯಯನದಲ್ಲಿ ಕೆಲ ಮಹತ್ವದ ಅಂಶಗಳು ಬಯಲಾಗಿದೆ. ಭೂಮಿ ಮೇಲಿನ ಯಾವುದೇ ಜೀವಿಗಳಿಗೆ ಈ ಅಸ್ಥಿಪಂಜರದಲ್ಲಿನ ಅಂಶಗಳು ಹೋಲಿಕೆಯಾಗುತ್ತಿಲ್ಲ ಎಂದಿದ್ದಾರೆ. ಕಾರ್ಬನ್ ಟೆಸ್ಟಿಂಗ್ ಮೂಲಕ ಈ ಅಸ್ಥಿಪಂಜರ 1,000 ವರ್ಷ ಹಿಂದಿನವು ಎಂದು ಸಾಬೀತಾಗಿದೆ. ಆದರೆ ಎಲಿಯನ್ಸ್ ಅಸ್ಥಿಪಂಜರ ಅನ್ನೋದನ್ನು ಹಲವರು ಒಪ್ಪಿಕೊಳ್ಳುತ್ತಿಲ್ಲ. ಈ ಕುರಿತು ಭಾರಿ ಚರ್ಚೆಗಳ ನಡೆಯುತ್ತಿದೆ. 

ಈ ಅಸ್ಥಿಪಂಜರಗಳು ಹೆಚ್ಚುಕಮ್ಮಿ ಮನುಷ್ಯನನ್ನೇ ಹೋಲುತ್ತವೆ. ಆದರೆ ಇವುಗಳ ಕೈ ಮತ್ತು ಕಾಲಿನಲ್ಲಿ ತಲಾ ಮೂರು ಬೆರಳುಗಳಿವೆ. ಹಾರುವ ತಟ್ಟೆಗಳ (ಯುಎಫ್‌ಒ) ಬಗ್ಗೆ ಸಂಶೋಧನೆ ನಡೆಸುವ ವಿಜ್ಞಾನಿ ಜೇಮಿ ಮೌಸನ್‌ ಎಂಬುವರು ಮೆಕ್ಸಿಕೋ ಸಂಸತ್ತಿನಲ್ಲಿ ಹಾರುವ ತಟ್ಟೆಗಳ ಬಗ್ಗೆ ಏರ್ಪಡಿಸಿರುವ ವೈಜ್ಞಾನಿಕ ಪ್ರದರ್ಶನದಲ್ಲಿ ಈ ಎರಡು ಅಸ್ಥಿಪಂಜರಗಳನ್ನು ಇರಿಸಿದ್ದಾರೆ. ಇವುಗಳ ಬಗ್ಗೆ ಮೆಕ್ಸಿಕೋದ ಸಂಸದರು ಸದನದಲ್ಲಿ ಚರ್ಚೆಯನ್ನೂ ನಡೆಸಿದ್ದಾರೆ.
 

Latest Videos
Follow Us:
Download App:
  • android
  • ios