ಅಕ್ಷತಾ ಮೂರ್ತಿ ತೆರಿಗೆ ವಿನಾಯಿತಿ ವಿವಾದ: ಸ್ವತಂತ್ರ ತನಿಖೆ ನಡೆಸಲು ಪತಿ ರಿಷಿ ಆಗ್ರಹ

  • ಸ್ವತಂತ್ರ ತನಿಖೆ ನಡೆಸಲು ಇನ್ಫಿ ಮೂರ್ತಿ ಅಳಿಯ ರಿಷಿ ಆಗ್ರಹ
  • ಬ್ರಿಟನ್‌ ಪ್ರಧಾನಿ ಬೋರಿಸ್‌ಗೆ ಅಕ್ಷತಾ ಪತಿ ಪತ್ರ
  • ಪರಿಶೀಲನೆ ವಿವರಗಳನ್ನು ಬಹಿರಂಗವಾಗಿ ತಿಳಿಸಿ
Akshatha Murthy's tax exemption controversy: husband Rishi urges independent probe akb

ಲಂಡನ್‌(ಏ.12) ತಮ್ಮ ಪತ್ನಿ ಅಕ್ಷತಾ ಮೂರ್ತಿ ಅವರ ತೆರಿಗೆ ವ್ಯವಹಾರಗಳು ಬ್ರಿಟನ್‌ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿರುವ ಹಿನ್ನೆಲೆಯಲ್ಲಿ ಪ್ರಧಾನಿ ಬೋರಿಸ್‌ ಜಾನ್ಸನ್‌ (Boris Johnson) ಅವರಿಗೆ ಇಸ್ಫೋಸಿಸ್‌ ಕಂಪನಿಯ ಸಂಸ್ಥಾಪಕ ನಾರಾಯಣಮೂರ್ತಿ (Narayana Moorthy) ಅವರ ಅಳಿಯ ರಿಷಿ ಸುನಾಕ್‌ ಪತ್ರ ಬರೆದಿದ್ದಾರೆ. ಸಚಿವರಾಗಿ ತಾವು ಮಾಡಿರುವ 'ಹಿತಾಸಕ್ತಿ ಘೋಷಣೆ'ಗಳನ್ನು ಸ್ವತಂತ್ರ ಪರಿಶೀಲನೆಗೆ ಒಳಪಡಿಸುವಂತೆ ಬ್ರಿಟನ್‌ನ ಹಣಕಾಸು ಸಚಿವರೂ ಆಗಿರುವ ಅವರು ಆಗ್ರಹಪಡಿಸಿದ್ದಾರೆ.

ಬ್ರಿಟನ್‌ ಸಂಸತ್ತಿನ ಮೇಲ್ಮನೆಯಾಗಿರುವ ಹೌಸ್‌ ಆಫ್‌ ಲಾರ್ಡ್ಸ್‌ (House of Lord) ಸದಸ್ಯ ಕ್ರಿಸ್ಟೋಫರ್‌ ಗೈಟ್‌ (Christopher Gait)ಅವರಿಂದ ತಾವು ಸಚಿವರಾಗಿ ಘೋಷಣೆ ಮಾಡಿರುವ ಹಿತಾಸಕ್ತಿಗಳನ್ನು ವಿಶ್ಲೇಷಣೆಗೆ ಒಳಪಡಿಸಬೇಕು. ಗೈಟ್‌ ಅವರು ತಮ್ಮ ಪರಿಶೀಲನೆಯ ಫಲಿತಾಂಶವನ್ನು ಸಾರ್ವಜನಿಕವಾಗಿ ಹೇಳಬೇಕು. ಹೀಗಾದಲ್ಲಿ ನಾನು ಮಾಡಿರುವ ಘೋಷಣೆಗಳು ಸರಿಯಾಗಿವೆ ಎಂಬುದು ಜನತೆಗೂ ಗೊತ್ತಾಗುತ್ತದೆ ಎಂದು ಅವರು ಮನವಿ ಮಾಡಿದ್ದಾರೆ.

ಬ್ರಿಟನ್ ರಾಣಿಗಿಂತಲೂ ಶ್ರೀಮಂತೆ ಇನ್ಫಿ ಮೂರ್ತಿ ಮಗಳು, ಇಲ್ಲಿದೆ ಅವರ ಆಸ್ತಿ ವಿವರ!

‘ಸಚಿವನಾದಾಗಿನಿಂದಲೂ ಆಸ್ತಿ ಹಾಗೂ ಘೋಷಣೆಗೆ ಸಂಬಂಧಿಸಿದಂತೆ ಅಧಿಕಾರಿಗಳು ನೀಡಿರುವ ಸಲಹೆಯನ್ನು ಪಾಲಿಸಿಕೊಂಡು ಬಂದಿದ್ದೇನೆ. ಅದನ್ನು ಮುಂದುವರಿಸುತ್ತೇನೆ ಎಂದು ಹೇಳಿದ್ದಾರೆ. ರಿಷಿ ಸುನಾಕ್‌ ಆಗ್ರಹದ ಹಿನ್ನೆಲೆಯಲ್ಲಿ ಬೋರಿಸ್‌ ಜಾನ್ಸನ್‌ ಅವರು ಗೈಟ್‌ ಅವರಿಗೆ ವಿಚಾರಣೆ ನಡೆಸಲು ಸೂಚಿಸುವ ನಿರೀಕ್ಷೆ ಇದೆ. ಈ ಪ್ರಕ್ರಿಯೆ ಮುಗಿಯಲು ಹಲವು ತಿಂಗಳುಗಳು ಬೇಕಾಗುತ್ತವೆ ಎಂದು ಹೇಳಲಾಗಿದೆ.

ಬ್ರಿಟನ್‌ ಹಾಗೂ 15 ಕಾಮನ್‌ವೆಲ್ತ್‌ ರಾಷ್ಟ್ರಗಳಿಗೆ ರಾಣಿಯಾಗಿರುವ ಕ್ವೀನ್‌ ಎಲಿಜಬೆತ್‌ ಅವರಿಗಿಂತ ಬೆಂಗಳೂರಿನ ಇಸ್ಫೋಸಿಸ್‌ ಕಂಪನಿ ಸಂಸ್ಥಾಪಕ ಎನ್‌.ಆರ್‌. ನಾರಾಯಣಮೂರ್ತಿ ಅವರ ಪುತ್ರಿ, ಬ್ರಿಟನ್‌ನ ಹಣಕಾಸು ಸಚಿವ ರಿಶಿ ಸುನಾಕ್‌ ಅವರ ಪತ್ನಿ ಅಕ್ಷತಾ ಮೂರ್ತಿ ಅವರು ಅಧಿಕ ಆಸ್ತಿ ಹೊಂದಿರುವ ಸಂಗತಿ ಇತ್ತೀಚೆಗೆ ಬೆಳಕಿಗೆ ಬಂದಿತ್ತು. ಆದರೆ ಪತ್ನಿಯ ಹೆಸರಿನಲ್ಲಿರುವ ಆಸ್ತಿಯನ್ನು ಘೋಷಣೆ ಮಾಡಿಕೊಳ್ಳದ ಕಾರಣ ರಿಶಿ ಸುನಾಕ್‌ ಅವರು ಬ್ರಿಟನ್‌ನಲ್ಲಿ ವಿವಾದಕ್ಕೆ ಸಿಲುಕಿದ್ದಾರೆ.

ಅಕ್ಷತಾ ಮೂರ್ತಿ ತೆರಿಗೆ ಸ್ಥಾನಮಾನ ಸೋರಿಕೆ: ತನಿಖೆಗೆ ಬ್ರಿಟನ್‌ ಆದೇಶ

ಈ ಮಧ್ಯೆ ಇಸ್ಫೋಸಿಸ್‌ ಸಂಸ್ಥಾಪಕ ನಾರಾಯಣ ಮೂರ್ತಿ (Narayana Murthy) ಪುತ್ರಿ ಅಕ್ಷತಾ (Akshata) ಅವರು ಬ್ರಿಟನ್ನಿನಲ್ಲಿ ನಾನ್‌-ಡಾಮಿಸಿಲ್‌ (ನಿವಾಸೇತರ )ಸ್ಥಾನಮಾನ ಪಡೆಯುವ ಮೂಲಕ ವಿದೇಶದಲ್ಲಿ ಗಳಿಸುವ ಆಸ್ತಿಗೆ ತೆರಿಗೆ ವಿನಾಯಿತಿ ಪಡೆದಿರುವ ಮಾಹಿತಿ ಸೋರಿಕೆಯಾಗಿದ್ದು ಹೇಗೆ ಎಂಬ ಬಗ್ಗೆ ಬ್ರಿಟನ್‌ ಸರ್ಕಾರ (British government) ಆಂತರಿಕ ತನಿಖೆಗೆ ಆದೇಶಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಚಾನ್ಸಲರ್‌ ರಿಷಿ ಸುನಾಕ್‌ (Rishi Sunak) ಅವರ ಪತ್ನಿಯ ತೆರಿಗೆ ಸ್ಥಾನಮಾನದ ಕುರಿತ ಗೌಪ್ಯ ಮಾಹಿತಿ (confidential information) ಸೋರಿಕೆಯಾಗಿ ‘ದ ಇಂಡಿಪೆಂಡೆಂಟ್‌’ ದಿನಪತ್ರಿಕೆಗೆ ಲಭ್ಯವಾಗಿದ್ದು ಹೇಗೆ?, ಅಕ್ಷತಾ ಅವರ ತೆರಿಗೆ ಸ್ಥಾನಮಾನದ ಬಗ್ಗೆ ಯಾರಿಗೆ ಮಾಹಿತಿ ಇತ್ತು ಮತ್ತು ಯಾರಾದರೂ ಆ ಮಾಹಿತಿಯನ್ನು ಕೋರಿದ್ದರೇ ಎಂಬುದರ ಕುರಿತು ತನಿಖೆ ನಡೆಯಲಿದೆ. ವಿಪಕ್ಷ ಲೇಬರ್‌ ಪಕ್ಷವನ್ನು ಬೆಂಬಲಿಸುವ ಸರ್ಕಾರಿ ಅಧಿಕಾರಿಯಿಂದ ಮಾಹಿತಿ ಸೋರಿಕೆಯಾಗಿರಬಹುದು ಎಂದು ಮಾಧ್ಯಮಗಳು ವರದಿ ಮಾಡಿವೆ.

ಇತ್ತೀಚೆಗೆ ರಿಷಿ ಸುನಾಕ್‌ ಬ್ರಿಟನ್‌ ನಾಗರಿಕರ ಆದಾಯ ತೆರಿಗೆಯನ್ನು (income tax) ಹೆಚ್ಚಿಸಿದ್ದರು. ಈ ನಡುವೆ ಪತ್ನಿ ಅಕ್ಷತಾ ಮೂರ್ತಿ ಅವರು ವಿದೇಶಿ ಗಳಿಕೆಗೆ ತೆರಿಗೆ ವಿನಾಯ್ತಿ ಪಡೆದಿರುವ ವಿಷಯ ಮಾಧ್ಯಮದ ಮೂಲಕ ಬಹಿರಂಗವಾಗಿತ್ತು. ಹೀಗಾಗಿ ಈ ಬಗ್ಗೆ ವಿವರಣೆ ನೀಡಬೇಕು ಎಂದು ಪ್ರತಿಪಕ್ಷಗಳು ಒತ್ತಾಯಿಸಿದ್ದವು. ಈ ಬೆನ್ನಲ್ಲೇ ತಮ್ಮ ತೆರಿಗೆ ಸ್ಥಾನಮಾನ ಪತಿಯ ರಾಜಕೀಯ ಜೀವನಕ್ಕೆ ಅಡ್ಡಿಯಾಗಬಾರದು ಎಂಬ ಕಾರಣಕ್ಕೆ ಕಾನೂನಿನ ಪ್ರಕಾರ ತೆರಿಗೆ ವಿನಾಯ್ತಿ ಇದ್ದರೂ ಭಾರತದಲ್ಲಿ ಗಳಿಸುವ ಆಸ್ತಿಗೆ ತೆರಿಗೆ ಪಾವತಿಸುವುದಾಗಿ ಅಕ್ಷತಾ ಘೋಷಿಸಿದ್ದಾರೆ.

Latest Videos
Follow Us:
Download App:
  • android
  • ios