ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇರಾನ್ ವಿರುದ್ಧ ತೀವ್ರ ಸಂಘರ್ಷದ ಎಚ್ಚರಿಕೆ ನೀಡಿದ್ದು, ವೆನೆಜುವೆಲಾದಲ್ಲಿನ ಯಶಸ್ವಿ ಕಾರ್ಯಾಚರಣೆಯ ನಂತರ ಈ ದೇಶದಲ್ಲಿ ಪ್ರಮುಖ ಬದಲಾವಣೆಗಳಾಗಲಿವೆ ಎಂದು ಸೂಚಿಸಿದ್ದಾರೆ. ಅಮೆರಿಕದ ಮುಂದಿನ ಗುರಿ ಯಾವುದು ತಿಳಿಯಿರಿ

ವಾಷಿಂಗ್ಟನ್ (ಮಾ.8): ಜಾಗತಿಕ ರಾಜಕೀಯದಲ್ಲಿ ಅಮೆರಿಕದ ಪಾರುಪತ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಲು ಹೊರಟಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇರಾನ್ ವಿರುದ್ಧ ತೀವ್ರ ಸಂಘರ್ಷದ ಎಚ್ಚರಿಕೆ ನೀಡಿದ್ದಾರೆ. ವೆನೆಜುವೆಲಾದಲ್ಲಿನ ಯಶಸ್ವಿ ಕಾರ್ಯಾಚರಣೆಯನ್ನು ಉಲ್ಲೇಖಿಸಿರುವ ಟ್ರಂಪ್, ಮುಂದಿನ ದಿನಗಳಲ್ಲಿ ಕ್ಯೂಬಾ ದೇಶದಲ್ಲಿ ಪ್ರಮುಖ ಬದಲಾವಣೆಗಳಾಗಲಿವೆ ಎಂದು ಭವಿಷ್ಯ ನುಡಿಯುವ ಮೂಲಕ ಸಂಚಲನ ಮೂಡಿಸಿದ್ದಾರೆ.

Add Asianetnews Kannada as a Preferred SourcegooglePreferred

ವೆನೆಜುವೆಲಾದಲ್ಲಿ 'ಆಪರೇಷನ್ ಅಬ್ಸೊಲ್ಯೂಟ್ ರೆಸಲ್ಯೂವ್' ಯಶಸ್ಸು

ಜನವರಿ ತಿಂಗಳಿನಲ್ಲಿ ಅತಿದೊಡ್ಡ ಕಾರ್ಟೆಲ್ ನಾಯಕರಲ್ಲಿ ಒಬ್ಬರಾದ ನಿಕೋಲಸ್ ಮಡುರೊ ವಿರುದ್ಧ ಅಮೆರಿಕ ಮಿಲಿಟರಿ 'ಆಪರೇಷನ್ ಅಬ್ಸೊಲ್ಯೂಟ್ ರೆಸಲ್ಯೂವ್' ಎಂಬ ಕ್ರೂರ ಕಾರ್ಯಾಚರಣೆ ನಡೆಸಿತ್ತು. ಈ ಬಗ್ಗೆ ಮಾತನಾಡಿದ ಟ್ರಂಪ್, 'ಮಡುರೊ ಅವರನ್ನು ನ್ಯಾಯದ ಮುಂದೆ ತರಲು ಈ ಕಾರ್ಯಾಚರಣೆ ಅತ್ಯಗತ್ಯವಾಗಿತ್ತು. ಪ್ರಸ್ತುತ ನಾವು ವೆನೆಜುವೆಲಾದ ಹೊಸ ಅಧ್ಯಕ್ಷರೊಂದಿಗೆ ಉತ್ತಮ ಡೀಲ್ ಮಾಡಿಕೊಂಡಿದ್ದು, ಅವರು ನಮ್ಮೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿದ್ದಾರೆ. ಇದರಿಂದ ಅವರು ಹಿಂದೆಂದಿಗಿಂತಲೂ ಹೆಚ್ಚು ಹಣ ಗಳಿಸುತ್ತಿದ್ದಾರೆ' ಎಂದು ತಿಳಿಸಿದರು.

ಕ್ಯೂಬಾ ಅಮೆರಿಕದ ಮುಂದಿನ ಗುರಿ?

ವೆನೆಜುವೆಲಾದಲ್ಲಿ ಹೊಸ ಸರ್ಕಾರವನ್ನು ಅಧಿಕೃತವಾಗಿ ಗುರುತಿಸಿರುವ ಅಮೆರಿಕ, ಅಲ್ಲಿನ ಚಿನ್ನ ಮತ್ತು ಖನಿಜಗಳ ಮಾರಾಟಕ್ಕೆ ಸಹಕಾರ ನೀಡುವ ಒಪ್ಪಂದಕ್ಕೆ ಸಹಿ ಹಾಕಿದೆ. ಇದರ ಬೆನ್ನಲ್ಲೇ ಕ್ಯೂಬಾದ ಬಗ್ಗೆ ಪ್ರಸ್ತಾಪಿಸಿದ ಟ್ರಂಪ್, 'ಕ್ಯೂಬಾದಲ್ಲಿ ಶೀಘ್ರದಲ್ಲೇ ದೊಡ್ಡ ಬದಲಾವಣೆಗಳು ಬರಲಿವೆ. ಅವರು ನಮ್ಮೊಂದಿಗೆ, ಅದರಲ್ಲೂ ವಿಶೇಷವಾಗಿ ಮಾರ್ಕೊ ರುಬಿಯೊ ಅವರೊಂದಿಗೆ ಮಾತುಕತೆ ನಡೆಸಲು ಬಯಸುತ್ತಿದ್ದಾರೆ. ಕ್ಯೂಬಾದೊಂದಿಗೆ ಒಪ್ಪಂದ ಮಾಡಿಕೊಳ್ಳುವುದು ನಮಗೆ ಸುಲಭ, ಆದರೆ ಸದ್ಯಕ್ಕೆ ನಮ್ಮ ಪೂರ್ಣ ಗಮನ ಇರಾನ್ ಮೇಲೆ ಇದೆ' ಎಂದಿದ್ದಾರೆ.

ಅಮೆರಿಕ 10 ಹೊಸ ಯುದ್ಧನೌಕೆಗಳನ್ನು ನಿರ್ಮಿಸುತ್ತಿದೆ: ಟ್ರಂಪ್

ಅಮೆರಿಕದ ಮಿಲಿಟರಿ ಶಕ್ತಿಯನ್ನು ಆಧುನೀಕರಿಸುವ ಬಗ್ಗೆ ಮಾತನಾಡಿದ ಟ್ರಂಪ್, ದುಬಾರಿ ಕ್ಷಿಪಣಿಗಳಿಗಿಂತ ಭಾರಿ ಸ್ಫೋಟಕಗಳನ್ನು ಹಾರಿಸಬಲ್ಲ ದೊಡ್ಡ ಯುದ್ಧನೌಕೆಗಳ ಅಗತ್ಯವಿದೆ ಎಂದಿದ್ದಾರೆ. 'ನಾವು ಹಿಂದಿನ ಹಡಗುಗಳಿಗಿಂತ 100 ಪಟ್ಟು ಹೆಚ್ಚು ಶಕ್ತಿಶಾಲಿಯಾದ 10 ಹೊಸ ಯುದ್ಧನೌಕೆಗಳನ್ನು ನಿರ್ಮಿಸುತ್ತಿದ್ದೇವೆ. ಇವುಗಳ ಭಯಕ್ಕೆ ಯಾರೂ ಅಮೆರಿಕವನ್ನು ಎದುರಿಸಲು ಧೈರ್ಯ ಮಾಡಬಾರದು. ಈ ಶಕ್ತಿಯನ್ನು ಬಳಸುವ ಪರಿಸ್ಥಿತಿ ಬರಬಾರದು ಎಂಬುದು ನನ್ನ ಆಶಯ' ಎಂದು ಅವರು ಹೇಳಿದರು.

ಇರಾನ್ ವಾಯುಪಡೆ ಮತ್ತು ರಾಡಾರ್ ಸಿಸ್ಟಂ ಧ್ವಂಸ!

ಇರಾನ್ ವಿರುದ್ಧ ಅಮೆರಿಕ ನಡೆಸಿದ ದಾಳಿಯ ಬಗ್ಗೆ ಮಾಹಿತಿ ನೀಡಿದ ಟ್ರಂಪ್, 'ಕೇವಲ ಮೂರು ದಿನಗಳಲ್ಲಿ ಇರಾನ್‌ನ 42 ನೌಕಾ ಹಡಗುಗಳನ್ನು ನಾವು ನಾಶಪಡಿಸಿದ್ದೇವೆ. ಅವರ ವಾಯುಪಡೆ ಮತ್ತು ದೂರಸಂಪರ್ಕ ವ್ಯವಸ್ಥೆಯನ್ನು ಸಂಪೂರ್ಣವಾಗಿ ಧ್ವಂಸಗೊಳಿಸಿದ್ದೇವೆ. ಇರಾನ್ ಪರಮಾಣು ಶಸ್ತ್ರಾಸ್ತ್ರ ತಯಾರಿಕೆಗೆ ಅತ್ಯಂತ ಹತ್ತಿರವಿತ್ತು. ನಮ್ಮ 'ಮಿಡ್‌ನೈಟ್ ಹ್ಯಾಮರ್' ಕಾರ್ಯಾಚರಣೆಯು ಅವರ ಪರಮಾಣು ಕನಸನ್ನು ಭಗ್ನಗೊಳಿಸಿದೆ ಎಂದು ಗುಡುಗಿದ್ದಾರೆ. 

Scroll to load tweet…