MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • World News
  • ಮೇಯರ್ ಜೋಹ್ರಾನ್ ಮಮ್ದಾನಿ ಮನೆಯ ಹೊರಗೆ ಬಾಂಬ್ ದಾಳಿಗೆ ಯತ್ನ; ಇಬ್ಬರು ಪೊಲೀಸರ ವಶಕ್ಕೆ

ಮೇಯರ್ ಜೋಹ್ರಾನ್ ಮಮ್ದಾನಿ ಮನೆಯ ಹೊರಗೆ ಬಾಂಬ್ ದಾಳಿಗೆ ಯತ್ನ; ಇಬ್ಬರು ಪೊಲೀಸರ ವಶಕ್ಕೆ

ನ್ಯೂಯಾರ್ಕ್ ಮೇಯರ್ ಜೊಹ್ರಾನ್ ಮಮ್ದಾನಿ ಅವರ ನಿವಾಸದ ಬಳಿ ಬಾಂಬ್ ದಾಳಿಗೆ ಯತ್ನಿಸಿದ ಇಬ್ಬರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ. ಇಸ್ಲಾಂ ವಿರೋಧಿ ಪ್ರತಿಭಟನೆಯ ಸಂದರ್ಭದಲ್ಲಿ ಈ ಘಟನೆ ನಡೆದಿದ್ದು, ಬಂಧಿತರಿಂದ ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ. ಮೇಯರ್ ಮತ್ತು ಅವರ ಕುಟುಂಬ ಸುರಕ್ಷಿತವಾಗಿದ್ದಾರೆ.

2 Min read
Author : Mahmad Rafik
Published : Mar 08 2026, 12:44 PM IST
Share this Photo Gallery
  • FB
  • TW
  • Linkdin
  • Whatsapp
15
ನ್ಯೂಯಾರ್ಕ್ ಮೇಯರ್ ಜೊಹ್ರಾನ್ ಮಮ್ದಾನಿ
Image Credit : Getty

ನ್ಯೂಯಾರ್ಕ್ ಮೇಯರ್ ಜೊಹ್ರಾನ್ ಮಮ್ದಾನಿ

ನ್ಯೂಯಾರ್ಕ್ ಮೇಯರ್ ಜೊಹ್ರಾನ್ ಮಮ್ದಾನಿ ನಿವಾಸ ಗ್ರೇಸಿ ಮ್ಯಾನ್ಷನ್ ಸಮೀಪದಲ್ಲಿ ಬಾಂಬ್ ದಾಳಿಗೆ ಯತ್ನಿಸಿದ ಇಬ್ಬರು ಶಂಕಿತರನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ಸಂಬಂಧ ಆತಂಕಕಾರಿ ವಿಡಿಯೋವೊಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಒರ್ವ ತನ್ನೊಂದಿಗಿರುವ ಮತ್ತೋರ್ವನಿಗೆ ಬಾಂಬ್ ಹಸ್ತಾಂತರ ಮಾಡೋದನ್ನು ಕಾಣಬಹದು. ಈ ವಿಡಿಯೋವನ್ನು ಸುದ್ದಿ ಸಂಸ್ಥೆ ಫ್ರೀಡಂನ್ಯೂಸ್ ಪೋಸ್ಟ್ ಮಾಡಿದೆ.

25
18 ಮತ್ತು 19 ವರ್ಷದ ಯುವಕರು
Image Credit : @zohran mamdani

18 ಮತ್ತು 19 ವರ್ಷದ ಯುವಕರು

ಶಂಕಿತ ಬಂಧಿತರ ಬಳಿಯಲ್ಲಿ ಕಪ್ಪು ಟೇಪ್‌ನಲ್ಲಿ ಸುತ್ತಿದ್ದ ನಟ್, ಬೋಲ್ಟ್, ಸ್ಕ್ರೂ ಮತ್ತು ಫ್ಯೂಸ್ ಹೊಂದಿರುವ ಜಾರ್ ವಶಪಡಿಸಿಕೊಳ್ಳಲಾಗಿದೆ ಎಂದು ಸಿಎನ್ಎನ್ ವರದಿ ಮಾಡಿದೆ. ಬಂಧಿತರಿಬ್ಬರು 18 ಮತ್ತು 19 ವರ್ಷದ ಯುವಕರಾಗಿದ್ದಾರೆ. ಸದ್ಯ ಇಬ್ಬರು ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ನ್ಯೂಯಾರ್ಕ್‌ನ ಬಲಪಂಥೀಯ ನಾಯಕರಾಗಿರುವ ಜೇಕ್ ಲ್ಯಾಂಗ್, ರಂಜಾನ್ ತಿಂಗಳಲ್ಲಿಯೇ ಇಸ್ಲಾಂ ವಿರೋಧಿ ಪ್ರತಿಭಟನೆ ಆಯೋಜಿಸಿದ್ದರು. ಈ ಸಂದರ್ಭದಲ್ಲಿ ಈ ಘಟನೆ ನಡೆದಿದೆ.

Related Articles

Related image1
ಮುಸ್ಲಿಂ ಮೇಯರ್‌ ಜೊಹ್ರಾನ್‌ ಮಮ್ದಾನಿ ಬಂದ ಮೇಲೆ ನ್ಯೂಯಾರ್ಕ್‌ ಸ್ಥಿತಿ ಭಯಾನಕ: ಡೊನಾಲ್ಡ್ ಟ್ರಂಪ್
Related image2
ಚರ್ಚೆಗೆ ಗ್ರಾಸವಾದ ಜೋಹ್ರಾನ್ ಮಮ್ದಾನಿ ಬಿರಿಯಾನಿ ತಿನ್ನೋ ಸ್ಟೈಲ್; ಕೈಯಿಂದ ಊಟ ಮಾಡೋದು ಕೊಳಕೇ?
35
ನ್ಯೂಯಾರ್ಕ್ ಪೊಲೀಸ್ ಕಮಿಷನರ್ ಹೇಳಿಕೆ
Image Credit : Getty

ನ್ಯೂಯಾರ್ಕ್ ಪೊಲೀಸ್ ಕಮಿಷನರ್ ಹೇಳಿಕೆ

ಇನ್ನು ಈ ಘಟನೆ ಕುರಿತು ನ್ಯೂಯಾರ್ಕ್ ಪೊಲೀಸ್ ಕಮಿಷನರ್ ಜೆಸ್ಸಿಕಾ ಎಸ್. ಟಿಶ್ ಪ್ರತಿಕ್ರಿಯಿಸಿದ್ದಾರೆ. ವಶಕ್ಕೆ ಪಡೆಯಲಾಗಿರುವ ವಸ್ತುಗಳು ಫುಟ್‌ಬಾಲ್‌ಗಿಂತ ಚಿಕ್ಕದಾಗಿವೆ. ಈ ವಸ್ತುಗಳು ನಿಜವಾದ ಸ್ಪೋಟಕಗಳಾ ಎಂಬುದರ ಬಗ್ಗೆ ಪರಿಶೀಲನೆ ನಡೆಸಲಾಗುವುದು. ಪ್ರತಿಭಟನಾ ಸ್ಥಳದಲ್ಲಿ ಬೆಂಕಿ ಮತ್ತು ಹೊಗೆ ಕಾಣಿಸಿಕೊಂಡಿರೋದನ್ನು ನೋಡಿದ್ದೇವೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ತನಿಖೆ ಮುಂದುವರಿದಿದೆ ಎಂದು ಹೇಳಿಕೆ ನೀಡಿದ್ದಾರೆ.

45
ಘಟನೆ ಬಗ್ಗೆ ವರದಿ
Image Credit : Getty

ಘಟನೆ ಬಗ್ಗೆ ವರದಿ

18 ವರ್ಷದ ಯುವಕನೋರ್ವ ಪ್ರತಿಭಟನಾಕಾರತ್ತ ಸುಡುತ್ತಿರುವ ವಸ್ತುವೊಂದನ್ನು ಎಸೆದನು. ಆ ವಸ್ತು ಕ್ರಾಸಿಂಗ್‌ನಲ್ಲಿ ಬಿತ್ತು. ಅದನ್ನು ಎಸೆದ ನಂತರ, ಶಂಕಿತನು ತನ್ನ 19 ವರ್ಷದ ಸಹಚರನಿಗೆ ಇನ್ನೊಂದು ಸಾಧನವನ್ನು ತರಲು ಹೇಳಿದನು. ಆ ಯುವಕ ಅದಕ್ಕೂ ಬೆಂಕಿ ಹಚ್ಚಿದನು. ಅಷ್ಟರಲ್ಲಿ ಪೊಲೀಸರು ಬಂದಿದ್ದರಿಂದ ಅದು ರಸ್ತೆಗೆ ಬಿತ್ತು. ಈ ದಾಳಿಯಲ್ಲಿ ಒಟ್ಟು ಆರು ಜನರು ಭಾಗಿಯಾಗಿದ್ದು, ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಇದನ್ನೂ ಓದಿ: US-Iran conflict: ಇಸ್ರೇಲ್-ಇರಾನ್ ಯುದ್ಧ ತೀವ್ರಗೊಂಡ ಬೆನ್ನಲ್ಲೇ ಭಾರತದ ಸಹಕಾರ ಕೋರಿದ ಚೀನಾ!

55
 ಮೇಯರ್ ಮಮ್ದಾನಿ ಸೇಫ್
Image Credit : Getty

ಮೇಯರ್ ಮಮ್ದಾನಿ ಸೇಫ್

ಇತ್ತ ಮೇಯರ್ ಮಮ್ದಾನಿ ಮತ್ತು ಅವರ ಪತ್ನಿ ರಮಾ ದುವಾಜಿ ಸುರಕ್ಷಿತವಾಗಿದ್ದಾರೆ ಎಂದು ಪೊಲೀಸರು ಖಚಿತಪಡಿಸಿದ್ದಾರೆ. ಜೇಕ್ ಲ್ಯಾಂಗ್ ಆಯೋಜನೆಯ ಪ್ರತಿಭಟನೆ ದ್ವೇಷಪೂರಿತ ಮತ್ತು ಇಸ್ಲಾಮಿಕ್ ವಿರೋಧಿ ಎಂದು ಮೇಯರ್ ವಕ್ತಾರರು ಖಂಡಿಸಿದ್ದಾರೆ.

ಇದನ್ನೂ ಓದಿ: ಯುದ್ಧಕ್ಕೆ ಧುಮುಕಲು ರೆಡಿ ಎಂದ ಪಾಕಿಸ್ತಾನ: ಇರಾನ್ ಸಂಘರ್ಷದ ನಡುವೆ ಆಪ್ತ ದೇಶ ಸೌದಿಗೆ ಪಾಕ್ ನೆರವಿನ ಅಭಯ

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಅಂತರರಾಷ್ಟ್ರೀಯ ಸುದ್ದಿ
ಅಮೇರಿಕಾ

Latest Videos
Recommended Stories
Recommended image1
US-Iran conflict: ಇಸ್ರೇಲ್-ಇರಾನ್ ಯುದ್ಧ ತೀವ್ರಗೊಂಡ ಬೆನ್ನಲ್ಲೇ ಭಾರತದ ಸಹಕಾರ ಕೋರಿದ ಚೀನಾ!
Recommended image2
ಮಧ್ಯಪ್ರಾಚ್ಯ ಸಂಘರ್ಷ: ಇರಾನ್‌ ತೈಲ ಡಿಪೋಗಳ ಮೇಲೆ ಇಸ್ರೇಲ್ ಬಾಂಬ್ ದಾಳಿ: ಆಕಾಶದೆತ್ತರಕ್ಕೆ ಎದ್ದ ಬೆಂಕಿ ಜ್ವಾಲೆ
Recommended image3
ಗೂಗಲ್‌ ಸಿಇಒಪಿಚೈಗೆ 3 ವರ್ಷಕ್ಕೆ 6300 ಕೋಟಿ ರು. ವೇತನ, ಭತ್ಯೆ !
Related Stories
Recommended image1
ಮುಸ್ಲಿಂ ಮೇಯರ್‌ ಜೊಹ್ರಾನ್‌ ಮಮ್ದಾನಿ ಬಂದ ಮೇಲೆ ನ್ಯೂಯಾರ್ಕ್‌ ಸ್ಥಿತಿ ಭಯಾನಕ: ಡೊನಾಲ್ಡ್ ಟ್ರಂಪ್
Recommended image2
ಚರ್ಚೆಗೆ ಗ್ರಾಸವಾದ ಜೋಹ್ರಾನ್ ಮಮ್ದಾನಿ ಬಿರಿಯಾನಿ ತಿನ್ನೋ ಸ್ಟೈಲ್; ಕೈಯಿಂದ ಊಟ ಮಾಡೋದು ಕೊಳಕೇ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved