Asianet Suvarna News Asianet Suvarna News

3ನೇ ಸಲ ಬಾಹ್ಯಾಕಾಶಕ್ಕೆ ಸುನೀತಾ ವಿಲಿಯಮ್ಸ್ ಪ್ರಯಾಣ

ಸತತ 2 ವೈಫಲ್ಯಗಳ ಬಳಿಕ ಭಾರತೀಯ ಮೂಲದ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಮೂರನೇ ಬಾರಿಗೆ ಬುಧವಾರ ಬಾಹ್ಯಾಕಾಶ ಪ್ರಯಾಣಕ್ಕೆ ಕೈಗೊಂಡಿದ್ದಾರೆ. 

after two failed attempts Sunita Williams travels to space for the 3rd time with Butch Wilmore akb
Author
First Published Jun 6, 2024, 9:30 AM IST

ನವದೆಹಲಿ: ಸತತ 2 ವೈಫಲ್ಯಗಳ ಬಳಿಕ ಭಾರತೀಯ ಮೂಲದ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಮೂರನೇ ಬಾರಿಗೆ ಬುಧವಾರ ಬಾಹ್ಯಾಕಾಶ ಪ್ರಯಾಣಕ್ಕೆ ಕೈಗೊಂಡಿದ್ದಾರೆ. ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾದ ಬೋಯಿಂಗ್ ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆಯಲ್ಲಿ ಬಾಹ್ಯಾಕಾಶಕ್ಕೆ ಯಶಸ್ವಿಯಾಗಿ ಪ್ರಯಾಣ ಬೆಳೆಸಿದ್ದಾರೆ. 

ಕಳೆದ ತಿಂಗಳ 6ರಂದೇ ಸುನೀತಾ ಅಂತರಿಕ ಪ್ರಯಾಣ ಕೈಗೊಳ್ಳಬೇಕಿತ್ತು. ಆದರೆ ರಾಕೆಟ್‌ನಲ್ಲಿ ಲೀಕ್ ಸಮಸ್ಯೆ ಹಾಗೂ ಕೆಲ ತಾಂತ್ರಿಕ ಕಾರಣದಿಂದ ಪ್ರಯಾಣವನ್ನು ಮುಂದೂಡಲಾಗಿತ್ತು. ಮತ್ತೊಂದು ಪ್ರಯತ್ನದಲ್ಲಿ ಕಳೆದ ಶನಿವಾರ ಪ್ರಯಾಣ ಆಗಬೇಕಿತ್ತು. ಆದರೆ ಕಂಪ್ಯೂಟರ್ ಸಮಸ್ಯೆಯಿಂದಾಗಿ ಕೊನೆ ಕ್ಷಣದಲ್ಲಿ ಪ್ರಯಾಣ ರದ್ದಾಗಿತ್ತು. ಆದರೆ ಬುಧವಾರ ಯಶಸ್ವಿಯಾಗಿ ನಭಕ್ಕೆ ಜಿಗಿದಿದ್ದಾರೆ. ಸುನೀತಾ ವಿಲಿಯಮ್ ಹೊರತಾಗಿ ಬುಚ್  ವಿಲ್ಮೋರ್ ಕೂಡ ಅಂತರಿಕ್ಷಕ್ಕೆ ಪ್ರಯಾಣ ಕೈಗೊಂಡಿದ್ದಾರೆ. ಸುನೀತಾ ಮತ್ತು ಬುಚ್ ವಿಲ್ಮೋರ್ ಒಂದು ವಾರ ಬಾಹ್ಯಾಕಾಶದಲ್ಲಿಯೇ ಉಳಿಯಲಿದ್ದಾರೆ.

NASA News: ಮೂರನೇ ಬಾರಿ ಬಾಹ್ಯಾಕಾಶಕ್ಕೆ ಸುನಿತಾ ವಿಲಿಯಮ್ಸ್ ಪ್ರಯಾಣ

ಇದರಿಂದಾಗಿ ಅಮೆರಿಕಾದಲ್ಲಿ ಎಲಾನ್ ಮಸ್ಕರ ಸ್ಟಾರ್‌ಲಿಂಕ್ ನಂತರ ಬಾಹ್ಯಾ ಕಾಶಕ್ಕೆ ಹಾರಿದ 2ನೇ ಖಾಸಗಿ ಬೋಯಿಂಗ್ ಇದಾಗಿದೆ. ಇವರು ಮೊದಲ ಬಾರಿಗೆ 2006ರಲ್ಲಿ ಎಕ್ಸಪೆಡಿಷನ್ 14/15ನಲ್ಲಿ ಬಾಹ್ಯಾಕಾಶಕ್ಕೆ ತೆರಳಿದರು. ನಂತರ 2012ರಲ್ಲಿ ಎಕ್ಸ್‌ ಪೆಡಿಷನ್ 32/33 ಕಾರ್ಯಕ್ರಮದಲ್ಲಿ ಮತ್ತೆ ನಭಕ್ಕೆ ಹಾರಿದ್ದರು. ಅಲ್ಲದೇ ಬಾಹ್ಯಾಕಾಶದಲ್ಲಿ ಹೆಚ್ಚು ಹೆಜ್ಜೆ ಇಟ್ಟಿರುವ ಕೀರ್ತಿ ಸುನೀತಾ ಹೆಸರಿನಲ್ಲಿದೆ.

ಇಂದು ಮತ್ತೊಮ್ಮೆ ಸುನೀತಾ ವಿಲಿಯಮ್ಸ್ ಗಗನಯಾತ್ರೆ: ಜೊತೆಗಿರಲಿದೆ ಗಣೇಶನ ವಿಗ್ರಹ, ಭಗವದ್ಗೀತೆ !

Latest Videos
Follow Us:
Download App:
  • android
  • ios