Asianet Suvarna News Asianet Suvarna News

ಇದೆಂಥಾ ವಿಚಿತ್ರ... ದಪ್ಪಗಾಗಲೂ 'ಆ ಭಾಗ'ಕ್ಕೆ ಚಿಕನ್‌ ಸೂಪ್‌ ಇಂಜೆಕ್ಟ್ ಮಾಡಿಕೊಳ್ಳುವ ಆಫ್ರಿಕಾ ಮಹಿಳೆಯರು

 

  • ಖಾಸಗಿ ಭಾಗ ದಪ್ಪಗಾಗಲು ವಿಚಿತ್ರ ಉಪಾಯ
  • ಚಿಕನ್‌ ಸೂಪ್ ಇಂಜೆಕ್ಟ್ ಮಾಡಿಕೊಳ್ಳುವ ಆಫ್ರಿಕಾ ಮಹಿಳೆಯರು
African Women Injecting Chicken Stock In Butts to Make Them Bigger akb
Author
Bangalore, First Published Jan 14, 2022, 9:48 PM IST

ದಕ್ಷಿಣ ಆಫ್ರಿಕಾ(ಜ.14): ಸುಂದರವಾದ ದೇಹವನ್ನು ಹೊಂದುವುದು ಪ್ರತಿಯೊಬ್ಬರ ಆಸೆ. ಹಾಗೆಯೇ ಅದನ್ನು ಸಾಧಿಸಲು ಹಲವಾರು ಮಾರ್ಗಗಳನ್ನು ಹುಡುಕುತ್ತಾರೆ. ಕೆಲವರು ಜಿಮ್‌ಗೆ ಹೋದರೆ, ಇನ್ನು ಕೆಲವರು ತಮ್ಮ ಅಪೇಕ್ಷಿತ ದೇಹವನ್ನು ಪಡೆಯಲು ಆಹಾರ ಪದ್ಧತಿ, ಯೋಗ ಮತ್ತು ಮನೆಯಲ್ಲೇ ವ್ಯಾಯಾಮಗಳನ್ನು ಮಾಡುತ್ತಾರೆ. ಆದರೆ ಸರಿಯಾದ ದೇಹವನ್ನು ಪಡೆಯುವ ಈ ಮೋಹವು ಗೀಳಾಗಿ ಬದಲಾದಾಗ, ಈ ವಿಚಾರ ಸ್ವಲ್ಪ ವಿಚಿತ್ರ ಎನಿಸುತ್ತದೆ.  ಹೌದು ದಕ್ಷಿಣ ಆಫ್ರಿಕಾದಲ್ಲಿ ಸುಂದರವಾದ ದೇಹವನ್ನು ಹೊಂದಲು ಮಹಿಳೆಯರು ವಿಚಿತ್ರವಾದ ಮಾರ್ಗವನ್ನು ಅನುಸರಿಸುತ್ತಿದ್ದಾರೆ. ಅಲ್ಲಿನ ಮಹಿಳೆಯರು ತಮ್ಮ ಖಾಸಗಿ ಭಾಗಗಳಿಗೆ ಚಿಕನ್ ಸೂಪ್‌ನ್ನು ಚುಚ್ಚಿಸಿಕೊಳ್ಳುತ್ತಿದ್ದಾರೆ. ಇದು ವಿಚಿತ್ರ, ನಂಬಲಸಾಧ್ಯ ಎನಿಸಿದರು ನಿಜ. 

ಈ ವಿಲಕ್ಷಣವಾದ  ದಾರಿಯ ಮೂಲಕ ಸೌಂದರ್ಯವನ್ನು ಪಡೆಯುವ ಹುಚ್ಚು ಟ್ರೆಂಡ್‌ ಮೂಲತಃ 2018 ರಲ್ಲಿ ಬೆಳಕಿಗೆ ಬಂದಿತ್ತು. ಆದರೆ ಈಗ ಅದು ಮತ್ತೆ ಪ್ರಚಾರಕ್ಕೆ ಬಂದಿದೆ.  ಸರಿಯಾದ ದೇಹದ ಆಕಾರವನ್ನು ಹೊಂದಲು ತಮ್ಮ ದೇಹಕ್ಕೆ ಚಿಕನ್ ಸೂಪ್ ಅನ್ನು ಚುಚ್ಚುವ ಕಾಂಗೋಲೀಸ್ (Congolese) ಜನರು ಅದರಲ್ಲೂ ವಿಶೇಷವಾಗಿ ಮಹಿಳೆಯರ ಬಗೆಗೆ ಈ ವೀಡಿಯೊ ತೋರಿಸುತ್ತಿದೆ.

 

ಚಿಕನ್ ಸೂಪ್‌ನ್ನು ದೇಹದ ಖಾಸಗಿ ಭಾಗಗಳಿಗೆ ಇಂಜೆಕ್ಟ್‌ ಮಾಡಲಾಗುತ್ತದೆ. ಇದು ಚರ್ಮದ ಮೂಲಕ ದೇಹದೊಳಗೆ ಸೇರುತ್ತದೆ. ಬಳಿಕ ಆ ಭಾಗದ ಗಾತ್ರವನ್ನು ಹೆಚ್ಚಿಸುತ್ತದೆ.  ಚಿಕನ್ ಸೂಪ್‌ಗಳ ಹೊರತಾಗಿ, ಜನರು ತಮ್ಮ ದೇಹಕ್ಕೆ ಮ್ಯಾಗಿ, ಉಪ್ಪು, ಸಕ್ಕರೆ, ಕರಿಮೆಣಸು, ಎಣ್ಣೆ ಮತ್ತು ಇತರ ಖಾದ್ಯಗಳಿಂದ ಮಾಡಿದ ಸೂಪನ್ನು ಚುಚ್ಚಿಕೊಳ್ಳುತ್ತಾರೆ ಎಂದು ವರದಿಯಾಗಿದೆ. ಚಿಕನ್‌ ಬೇಯಿಸಿ ಅದನ್ನು ಸೂಪ್‌ ರೂಪಕ್ಕೆ ಇಳಿಸಿ ನಂತರ ದೇಹಕ್ಕೆ ಚುಚ್ಚಲಾಗುತ್ತದೆ.

ಈ ಬೇಸಿಗೆಯಲ್ಲಿ ದೇಹವನ್ನು ತಂಪಾಗಿಸಲು ಟ್ರೈ ಮಾಡಿ ನೋಡಿ 'ಕಡಿ ಪತ್ತಾ ಲಸ್ಸಿ'!

ಆದಾಗ್ಯೂ, ವೈದ್ಯರು ಇದರ  ಸೈಡ್‌ ಎಫೆಕ್ಟ್‌ ಬಗ್ಗೆ ಮಾತನಾಡುತ್ತಿದ್ದು, ಇದು ಮುಂದೆ ತೀವ್ರ ಆರೋಗ್ಯ ಸಮಸ್ಯೆಗೆ ಕಾರಣವಾಗಬಹುದು ಎಂದು  ಎಚ್ಚರಿಕೆ ನೀಡಿದ್ದಾರೆ. ಆದರೆ ಈ ಎಚ್ಚರಿಕೆಗೆ ಜನ ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ. ವೀಡಿಯೋದಲ್ಲಿ, ಮಹಿಳೆಯರು ಎಲ್ಲಾ ಆರೋಗ್ಯದ ತೊಂದರೆಗಳ ಬಗ್ಗೆ ಹೇಗೆ ತಿಳಿದಿದ್ದರೂ ಸಹ ಈ ಚುಚ್ಚುಮದ್ದನ್ನು ತೆಗೆದುಕೊಂಡಿದ್ದರು. ಏಕೆಂದರೆ ಈ ಚುಚ್ಚುಮದ್ದು  ಯಾವುದೇ ಇತರ ಪ್ಲಾಸ್ಟಿಕ್‌ ಸರ್ಜರಿಗಳಿಗಿಂತ ಅಥವಾ ಶಸ್ತ್ರಚಿಕಿತ್ಸೆಗಿಂತ ಅಗ್ಗವಾಗಿದೆ.

Belly button & Health : ನಾಭಿಗೆ ಇದನ್ನು ಹಚ್ಚಿದ್ರೆ ಆರೋಗ್ಯ ಹೆಚ್ಚುತ್ತೆ..

 

Follow Us:
Download App:
  • android
  • ios