ತಾಲಿಬಾನ್ ಉಗ್ರರು ಕಲ್ಲೆಸೆದು ಕೊಲ್ಲೋ ಮೊದಲು ಸಾವಿಗೆ ಶರಣಾದ ಮಹಿಳೆ

ಮನೆಬಿಟ್ಟು ವಿವಾಹಿತನೊಂದಿಗೆ ಓಡಿ ಹೋದ ಮಹಿಳೆಯೊಬ್ಬಳು, ಇನ್ನೇನು ತಾಲಿಬಾನ್‌ ಉಗ್ರರ ಕೈಗೆ ಸಿಗುವ ಮುನ್ನ ಆತ್ಮಹತ್ಯೆ ಮಾಡಿಕೊಂಡ ಘಟನೆ ಅಪ್ಘಾನಿಸ್ತಾನದಲ್ಲಿ ವರದಿ ಆಗಿದೆ.

afghanistan woman who running behind married man self killed before taliban terror could kill her by stone pelting akb

ಕಾಬೂಲ್: ಮನೆಬಿಟ್ಟು ವಿವಾಹಿತನೊಂದಿಗೆ ಓಡಿ ಹೋದ ಮಹಿಳೆಯೊಬ್ಬಳು, ಇನ್ನೇನು ತಾಲಿಬಾನ್‌ ಉಗ್ರರ ಕೈಗೆ ಸಿಗುವ ಮುನ್ನ ಆತ್ಮಹತ್ಯೆ ಮಾಡಿಕೊಂಡ ಘಟನೆ ಅಪ್ಘಾನಿಸ್ತಾನದಲ್ಲಿ ವರದಿ ಆಗಿದೆ. ಖಮ್ಮ ಪ್ರೆಸ್ ಪ್ರಕಾರ, ಈ ಮಹಿಳೆ ಮೇಲೆ ತಾಲಿಬಾನ್ ಉಗ್ರರು ನಡುಬೀದಿಯಲ್ಲಿ ನಿಲ್ಲಿಸಿ ಕಲ್ಲೆಸೆದು ಕೊಲ್ಲಲು ಮುಂದಾಗಿದ್ದರು. ಆದರೆ ಈ ರೀತಿ ಸಾರ್ವಜನಿಕವಾಗಿ ಅವಮಾನಕ್ಕೊಳಗಾಗಿ ಸಾಯುವ ಬದಲು ಆತ್ಮಹತ್ಯೆಯೇ ಸರಿ ಎಂದು ಆಕೆ ತನ್ನ ಜೀವ ತೆಗೆದುಕೊಂಡಿದ್ದಾಳೆ. ಇನ್ನು ಮಹಿಳೆ ಯಾರೊಂದಿಗೆ ಓಡಿ ಹೋದಳೋ ಆತನನ್ನು ಆಕ್ಟೋಬರ್ 13 ರಂದು ಗುರುವಾರವೇ ಗಲ್ಲಿಗೇರಿಸಲಾಗಿದೆ ಎಂದು ತಾಲಿಬಾನ್ ಅಧಿಕಾರಿಗಳು ಹೇಳಿದ್ದಾರೆ. 

ಅಫ್ಘಾನಿಸ್ತಾನದಲ್ಲಿ ಮಹಿಳಾ ಕಾರಾಗೃಹದ ಕೊರತೆಯಿಂದಾಗಿ ಈ ಓಡಿ ಹೋದ ಮಹಿಳೆಗೆ ಸಾರ್ವಜನಿಕವಾಗಿ ಕಲ್ಲೆಸೆದು ಕೊಲ್ಲುವ ಶಿಕ್ಷೆ ವಿಧಿಸಲಾಗಿದೆ ಎಂದು ತಾಲಿಬಾನ್ ಘೋರ್‌ನ ಪ್ರಾಂತೀಯ ಪೊಲೀಸ್ ಮುಖ್ಯಸ್ಥರ ಹಂಗಾಮಿ ವಕ್ತಾರ ಅಬ್ದುಲ್ ರಹಮಾನ್ ಹೇಳಿದ್ದಾರೆ ಎಂದು ಖಾಮಾ ಪ್ರೆಸ್ ವರದಿ ಮಾಡಿದೆ.ತಾಲಿಬಾನ್‌ನ ಭದ್ರತಾ ಅಧಿಕಾರಿ ಹೇಳುವ ಪ್ರಕಾರ, ಹೀಗೆ ಓಡಿ ಹೋದ ಮಹಿಳೆ ತನ್ನ ಸ್ಕಾರ್ಫ್‌ನಿಂದಲೇ ಕತ್ತು ಬಿಗಿದುಕೊಂಡು ತನ್ನ ಬದುಕನ್ನು ಅಂತ್ಯ ಮಾಡಿಕೊಂಡಿದ್ದಾಳೆ. 

ತಾಲಿಬಾನ್ ಆಡಳಿತವೂ ಮಹಿಳೆಯರ ಮೇಲೆ ಉಸಿರುಕಟ್ಟುವಂತಹ ಹಲವು ನಿರ್ಬಂಧಗಳನ್ನು ಹೇರಿದ ಬಳಿಕ ಅಫ್ಘಾನಿಸ್ತಾನದಲ್ಲಿ ಮಹಿಳೆಯರು ಮನೆಬಿಟ್ಟು ಓಡಿಹೋಗುವ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಹೀಗೆ ಮನೆಬಿಟ್ಟು ಓಡಿ ಹೋಗುವ ಮಹಿಳೆಯರನ್ನು ಸಾರ್ವಜನಿಕವಾಗಿ ಕಲ್ಲೆಸೆದು ಕೊಲ್ಲಲು ಅಥವಾ ಥಳಿಸಲು ತಾಲಿಬಾನ್ ಆಡಳಿತ ನಿರ್ಧರಿಸಿದೆ. ತಾಲಿಬಾನ್ ಮಹಿಳೆಯರಿಗೆ ಶಿಕ್ಷಣವನ್ನು(education) ನಿರ್ಬಂಧಿಸಿದೆ. ಆರನೇ ತರಗತಿಗಿಂತ ಮುಂದಕ್ಕೆ ಓದುವುದಕ್ಕೆ ತಡೆಯೊಡ್ಡಿದೆ. 

ಭೂತದ ಬಾಯಲ್ಲಿ ಭಗವದ್ಗೀತೆ! PUBG-TikTokನಿಂದ ಯುವಸಮೂಹ ಹಾಳು, ಬ್ಯಾನ್‌ ಮಾಡಿದ ಅಫ್ಘಾನಿಸ್ತಾನ

ಕಳೆದ ವರ್ಷ ಆಗಸ್ಟ್‌ನಲ್ಲಿ ತಾಲಿಬಾನ್ ಉಗ್ರರು ಕಾಬೂಲ್‌ (Kabul)ನ್ನು ವಶಕ್ಕೆ ಪಡೆದುಕೊಂಡು ಅಲ್ಲಿನ ಪ್ರಜಾಪ್ರಭುತ್ವವನ್ನು ನಾಶಪಡಿಸಿದವು. ಅಫ್ಘಾನಿಸ್ತಾನ ತಾಲಿಬಾನ್ ಉಗ್ರರ ಕಪಿಮುಷ್ಠಿಗೆ ಸಿಕ್ಕ ಬಳಿಕ ಮಹಿಳೆಯರ ಹಕ್ಕುಗಳು ಮತ್ತು ಸ್ವಾತಂತ್ರ್ಯಗಳನ್ನು ಮೊಟಕುಗೊಳಿಸಿದೆ, ಆರ್ಥಿಕ ಬಿಕ್ಕಟ್ಟು ಮತ್ತು ನಿರ್ಬಂಧಗಳಿಂದಾಗಿ ಮಹಿಳೆಯರನ್ನು ಹೆಚ್ಚಾಗಿ ಉದ್ಯೋಗ ಸ್ಥಳಗಳಿಂದ ಹೊರಗಿಟ್ಟಿದೆ. 

ಇದರಿಂದ ಅಫ್ಘಾನಿಸ್ತಾನದಲ್ಲಿ(Afghanistan) ಎಲ್ಲಾ ಮಹಿಳೆಯರು ಆರ್ಥಿಕ ಬಿಕ್ಕಟ್ಟಿಗೆ ಒಳಗಾಗಿದ್ದಾರೆ. ಮಾನಸಿಕ ಹಿಂಸೆಗೆ ಒಳಗಾಗಿದ್ದಾರೆ. ಮಾನವ ಹಕ್ಕುಗಳ ಕೊರತೆಯಿಂದ ಬಳಲುತ್ತಿದ್ದಾರೆ. ತಾರತಮ್ಯದ ಜೊತೆ ಶಿಕ್ಷಣ, ಕೆಲಸ, ಸಾರ್ವಜನಿಕ ಭಾಗವಹಿಸುವಿಕೆ ಮತ್ತು ಆರೋಗ್ಯದ ಮೂಲಭೂತ ಹಕ್ಕುಗಳಿಲ್ಲದೇ (fundamental rights)ಸಂಕಷ್ಟಕ್ಕೀಡಾಗಿದ್ದಾರೆ. 

ಪರಿಸ್ಥಿತಿ ಎಷ್ಟು ದುಸ್ತರವಾಗಿದೆ ಎಂದರೆ ನಗರ ಸಾರಿಗೆ ಸೇವೆ ನೀಡುವ ಟಾಕ್ಸಿಗಳಾಗಲಿ, ಇತರ ವಾಹನಗಳಾಗಲಿ ತಾಲಿಬಾನ್‌ನ ಭದ್ರತೆ ಅಥವಾ ಆ ಮಹಿಳೆಯ ಕುಟುಂಬಕ್ಕೆ ಸಂಬಂಧಿಸಿದ ಓರ್ವ ಗಂಡಸು (Mahram) ಜೊತೆಗಿಲ್ಲದೇ ಮಹಿಳೆಯರನ್ನು(women) ಕರೆದೊಯ್ಯುವಂತಿಲ್ಲ. ಅಲ್ಲದೇ ಮಹಿಳೆಯರಿಗೆ ವಿಪರೀತವೆನಿಸಿದ ಡ್ರೆಸ್‌ಕೋಡ್ ಹೇರಲಾಗಿದೆ. 

ತಾಲಿಬಾನ್ ಸರ್ಕಾರಕ್ಕೆ ಒಂದು ವರ್ಷ: 365 ದಿನದಲ್ಲಿ ಗಾಂಧಾರದಲ್ಲಿ ಬದಲಾಗಿದ್ದೇನೇನು?

ದೇಶದ ಮಾಧ್ಯಮಗಳಲ್ಲಿ ಕೆಲಸ ಮಾಡುವ ಶೇ.80 ಪ್ರತಿಶತದಷ್ಟು ಮಹಿಳೆಯರು ತಮ್ಮ ಕೆಲಸ ಕಳೆದುಕೊಂಡಿದ್ದು, ದೇಶದಲ್ಲಿ ಸುಮಾರು 18 ಮಿಲಿಯನ್ ಮಹಿಳೆಯರು ಆರೋಗ್ಯ, ಶಿಕ್ಷಣ ಮತ್ತು ತಮ್ಮ ಸಾಮಾಜಿಕ ಹಕ್ಕುಗಳಿಂದ ವಂಚಿತರಾಗಿ ಪರದಾಡುತ್ತಿದ್ದಾರೆ. ದೇಶದಲ್ಲಿ ತಾಲಿಬಾನಿಗರು (Taliban) ಇಸ್ಲಾಮಿಕ್ ಎಮಿರೇಟ್ ಅನ್ನು ಮರು ಸ್ಥಾಪಿಸಿದ ನಂತರ ಅನೇಕ ಮಹಿಳೆಯರು, ವಿಶೇಷವಾಗಿ ಭದ್ರತಾ ಏಜೆನ್ಸಿಗಳಲ್ಲಿ ಕೆಲಸ ಮಾಡುವವರು ತಮ್ಮ ಉದ್ಯೋಗವನ್ನು ಕಳೆದುಕೊಂಡಿದ್ದಾರೆ. 

ಆಗಸ್ಟ್‌ ತಿಂಗಳಲ್ಲಿ ವಿಶ್ವಸಂಸ್ಥೆಯ ಅಸಿಸ್ಟೆನ್ಸ್ ಮಿಷನ್ ಅಫ್ಘಾನಿಸ್ತಾನ ((UNAMA)) ಬಿಡುಗಡೆ ಮಾಡಿದ ವರದಿಯ ಪ್ರಕಾರ ದೇಶದ ಮಾನವ ಹಕ್ಕು (human rights) ಹೇಗೆ ಕಡೆಗಣಿಸಲ್ಪಟ್ಟಿದೆ ಎಂಬುದನ್ನು ವಿವರಿಸಿದೆ. ನಾಗರಿಕರ ರಕ್ಷಣೆ, ಕಾನೂನು ಬಾಹಿರ ಹತ್ಯೆಗಳು, ಚಿತ್ರಹಿಂಸೆ ಮತ್ತು ಕೆಟ್ಟ ವರ್ತನೆ, ಅನಿಯಂತ್ರಿತ ಬಂಧನ,  ಅಫ್ಘಾನಿಸ್ತಾನದಲ್ಲಿ ಮಹಿಳೆಯರು ಮತ್ತು ಹುಡುಗಿಯರ ಹಕ್ಕುಗಳು, ಮೂಲಭೂತ ಸ್ವಾತಂತ್ರ್ಯದ ಪರಿಸ್ಥಿತಿಗೆ ಸಂಬಂಧಿಸಿದಂತೆ ವಿಶ್ವಸಂಸ್ಥೆಯ ವರದಿ ಬೆಚ್ಚಿಬೀಳಿಸುತ್ತಿದೆ. 
 

Latest Videos
Follow Us:
Download App:
  • android
  • ios