ಆಫ್ಘಾನಿಸ್ತಾನ ಬಿಕ್ಕಟ್ಟು; ವಿಮಾನದ ರೆಕ್ಕೆ ಕೆಳಗೆ ಕುಳಿತು ಜೀವ ತೆತ್ತ ಮೂವರಲ್ಲಿ ಓರ್ವ ಡಾಕ್ಟರ್!
- ಆಫ್ಘಾನಿಸ್ತಾನ ತೊರೆಯಲು ಹಾತೊರೆಯುತ್ತಿದ್ದಾರೆ ಜನ
- ತಾಲಿಬಾನ್ ಆಡಳಿತದಲ್ಲಿ ನಕರ ಖಚಿತ ಎಂದು ಇತರ ದೇಶ ಪ್ರವೇಶಿಸಲು ಯತ್ನ
- ವಿಮಾನದ ರೆಕ್ಕೆ ಕೆಳೆಗೆ ಕುಳಿತು ಕೆಳಕ್ಕೆ ಬಿದ್ದ ಮೂವರಲ್ಲಿ ಓರ್ವ ವೈದ್ಯ
ಕಾಬೂಲ್(ಆ.19): ತಾಲಿಬಾನ್ ಉಗ್ರರು ಆಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ಬಳಿಕ ಕಾಬೂಲ್ ಸೇರಿದಂತೆ ಆಫ್ಗಾನ್ ರಾಷ್ಟ್ರದಲ್ಲಿ ನಡೆಯುತ್ತಿರುವ ಬೆಳವಣಿಗೆ ಮನಕಲುಕುವಂತಿದೆ. ಆಯಾ ದೇಶಗಳು ತಮ್ಮ ತಮ್ಮ ಸಿಬ್ಬಂದಿಗಳನ್ನು, ನಾಗರೀಕರನ್ನು ಕರೆತರುವ ಪ್ರಯತ್ನ ಮಾಡುತ್ತಿದೆ. ಇನ್ನು ಆಫ್ಘಾನಿಸ್ತಾನದ ಜನ ದೇಶ ತೊರೆಯಲು ಇನ್ನಿಲ್ಲದ ಹರಸಾಹಸ ಮಾಡುತ್ತಿದ್ದಾರೆ. ಹೀಗೆ ಅಮೆರಿಕ ವಿಮಾನದ ಏರಿ ಮೇಲಿನಿಂದ ಕೆಳಕ್ಕೆ ಬಿದ್ದ ಘಟನೆ ಏರ್‌ಲೈನ್ಸ್ ಇತಿಹಾಸದಲ್ಲೇ ಮೊದಲು. ಇದೀಗ ಹೀಗೆ ಕಳೆಕ್ಕೆ ಬಿದ್ದ ಮೂವರಲ್ಲಿ ಓರ್ವ ವೈದ್ಯ ಅನ್ನೋ ಮಾಹಿತಿ ಹೊರಬಿದ್ದಿದೆ.
ಆಫ್ಘಾನಿಸ್ತಾನ ಸ್ವಾತಂತ್ರ್ಯ ದಿನಾಚರಣೆ; ಧ್ವಜ ಹಿಡಿದವರ ಮೇಲೆ ತಾಲಿಬಾನ್ ಗುಂಡಿನ ದಾಳಿ!
ಆಫ್ಘಾನ್ ತಾಲಿಬಾನ್ ಕೈವಶವಾಗುತ್ತಿದ್ದಂತೆ ಕಾಬೂಲ್ ವಿಮಾನ ನಿಲ್ದಾಣ ರೈಲು ನಿಲ್ದಾಣಕ್ಕಿಂತ ಕಡೆಯಾಗಿತ್ತು. ಅಮೆರಿಕದ ಸೇನಾ ವಿಮಾನ ಹತ್ತಲು ನೂಕು ನುಗ್ಗಲು ಏರ್ಪಟ್ಟಿತ್ತು. ಈ ಮೂಲಕ ಆಫ್ಘಾನಿಸ್ತಾನ ಎಂಬ ನರಕ ದೇಶಕ್ಕಿಂತ ಇತರ ಯಾವುದೇ ದೇಶದಲ್ಲಿ ನಿರಾಶ್ರಿತ ಜೀವನವನೇ ಲೇಸು. ಜೀವ ಉಳಿಸಿಕೊಂಡರೆ ಸಾಕು ಎಂದು ಜನ ಸಿಕ್ಕ ಸಿಕ್ಕ ವಿಮಾನ ಹತ್ತುತ್ತಿದ್ದಾರೆ. ಹೀಗಾಗಿ ಅಮೆರಿಕ ವಿಮಾನ ರನ್‌ವೇ ನತ್ತ ತಿರುಗುತ್ತಿದ್ದರೂ ಜನ ವಿಮಾನದ ರೆಕ್ಕೆ, ಚಕ್ರದ ಮೇಲೆ ಕುಳಿತು ಪ್ರಯಾಣಿಸುವ ಪ್ರಯತ್ನ ಮಾಡಿದ್ದರು.
ತಾಲಿಬಾನ್ ಉಗ್ರರಿಂದ ತಪ್ಪಿಸಿಕೊಳ್ಳಲು ರೈಲಿನಂತೆ ಓಡೋಡಿ ವಿಮಾನ ಹತ್ತಿದ ಮಂದಿ ಸಾವು!
ವಿಮಾನ ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ರೆಕ್ಕೆ ಕೆಳಗ ಕುಳಿತಿದ್ದ ಮೂವರು ಮೇಲಿನಿಂದ ಕೆಳಕ್ಕೆ ಬಿದ್ದು ಸಾವನ್ನಪ್ಪಿದ್ದರು. ಹೀಗೆ ಕೆಳಕ್ಕೆ ಬಿದ್ದು ಸಾವನ್ನಪ್ಪಿದ ಓರ್ವ ಡಾಕ್ಟರ್ ಅನ್ನೋದು ಬಯಲಾಗಿದೆ. ಕಾಬೂಲ್‌ನಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿರುವ ವಾಲಿ ಸಲೇಕ್ ಮನೆ ಮೇಲೆ ಈ ವೈದ್ಯ ಬಿದ್ದಿದ್ದಾನೆ.
ವಾಲಿ ಸಲೇಕ್ ಕುಟಂಬದೊಂದಿಗೆ ಕಾಬೂಲ್‌ನಿಂದ ನಾಲ್ಕು ಕಿಲೋಮೀಟರ್ ದೂರದಲ್ಲಿ ವಾಸವಾಗಿದ್ದಾನೆ. ಕೆಲಸ ಮುಗಿಸಿ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿರುವ ವೇಳೆ ಟೈಯರ್ ಸ್ಫೋಟದ ಶಬ್ದದಂತೆ ಕೇಳಿಸಿದೆ. ಏನಾಗುತ್ತಿದೆ ಎಂದು ಮನೆಯಿಂದ ಹೊರಂಬಂದು ಟರೇಸ್ ಮೇಲೆ ಹತ್ತಿದಾಗ ಮೃತದೇಹ ಛಿದ್ರ ಛಿದ್ರವಾಗಿ ಬಿದ್ದಿರುವುದು ಪತ್ತೆಯಾಗಿದೆ.
Video: ಸ್ಮಶಾನಗಳ ಸಾಮ್ರಾಜ್ಯ ಅಫ್ಘಾನ್: ಕಾಬೂಲ್ ಏರ್‌ಪೋರ್ಟ್‌ನಲ್ಲಿ ಶವವಾದ ನಾಗರಿಕರು!
ಈ ದೃಶ್ಯ ನೋಡಿದ ವಾಲಿ ಸಲೇಕ್ ಪತ್ನಿ ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ. ಹಿತ್ತರ ಮಸೀದಿಗೆ ಮಾಹಿತಿ ನೀಡಿದ ವಾಲಿ ಸಲೇಕ್ ಛಿದ್ರಗೊಂಡಿದ್ದ ಮೃತದೇಹದ ಭಾಗಗಳನ್ನು ಸಂಗ್ರಹಿಸಿ ಶವವನ್ನು ಮಸೀದಿಗೆ ಸಾಗಿಸಿದ್ದಾನೆ. ಈ ವೇಳೆ ಮೃತ ದೇಗದ ಬಟ್ಟೆಯಲ್ಲಿ ಜನನ ಪ್ರಮಾಣ ಪತ್ರ ಹಾಗೂ ಐಡಿ ಕಾರ್ಡ್ ಪತ್ತೆಯಾಗಿದೆ. ಈ ಮೂಲಕ ಈ ಮೃತದೇಹ ಸಫೀಉಲ್ಲ ಹಾಟಕ್ ಅನ್ನೋ ವೈದ್ಯ ಅನ್ನೋದು ಬಹಿರಂಗವಾಗಿದೆ.
ಸ್ಥಳವಿಲ್ಲದಿದ್ದರೂ ವಿಮಾನವೇರಿದ ಅಫ್ಘನ್ನರು: ಟೇಕ್ ಆಫ್ ಆಗ್ತಿದ್ದಂತೆಯೇ ಮೂವರು ಕೆಳಕ್ಕೆ!
ಈಗಲೂ ಕಾಬೂಲ್ ವಿಮಾನ ನಿಲ್ದಾಣದಲ್ಲಿ ಜನಸಾಗರವೇ ಇದೆ. ಯಾವ ವಿಮಾನ ಸಿಕ್ಕರೂ ಹತ್ತುವ ಪರಿಸ್ಥಿತಿಯಲ್ಲಿ ಅವರಿದ್ದಾರೆ. ಪಾಸ್‌ಪೋರ್ಟ್, ವೀಸಾ ಮಾತು ಬದಿಗಿರಲಿ, ಒಂದು ಹೊತ್ತಿನ ಊಟ ಸಿಕ್ಕರೆ ಸಾಕು ಅನ್ನೋ ಸ್ಥಿತಿ ಆಫ್ಘಾನಿಸ್ತಾನದ ಜನತೆಯದ್ದಾಗಿದೆ.