ಸ್ಥಳವಿಲ್ಲದಿದ್ದರೂ ವಿಮಾನವೇರಿದ ಅಫ್ಘನ್ನರು: ಟೇಕ್ ಆಫ್ ಆಗ್ತಿದ್ದಂತೆಯೇ ಮೂವರು ಕೆಳಕ್ಕೆ!
* ಅಪ್ಘಾನಿಸ್ತಾನದಲ್ಲಿ ತಾಲಿಬಾನ್ ಸಕ್ರಿಯ
* ತಾಲಿಬಾನ್ ಕಾಬೂಲ್‌ಗೆ ಪ್ರವೇಶಿಸುತ್ತಿದ್ದಂತೆಯೇ ಜನರಲ್ಲಿ ಆತಂಕ
* ವಿಮಾನದಿಂದ ಕೆಳಕ್ಕೆ ಬಿದ್ದ ಮೂವರು ನಾಗರಿಕರು
ಕಾಬೂಲ್(ಆ.16): ಅಮೆರಿಕ ಪಡೆ ಅಫ್ಘಾನಿಸ್ತಾನದಿಂದ ತೆರಳಿದ ಬೆನ್ನಲ್ಲೇ ಸಕ್ರಿಯಗೊಂಡ ತಾಲಿಬಾನಿಯರು ಸದ್ಯ ಇಡೀ ದೇಶವನ್ನು ವಶಪಡಿಸಿಕೊಂಡಿದ್ದಾರೆ. ಒಂದಾದ ಬಳಿಕ ಮತ್ತೊಂದರಂತೆ ಎಲ್ಲಾ ಪ್ರದೇಶಗಳನ್ನು ಆಕ್ರಮಿಸಿ, ನಿನ್ನೆ ಭಾನುವಾರ ರಾಜಧಾನಿ ಕಾಬೂಲ್‌ಗೆ ಲಗ್ಗೆ ಇಟ್ಟಿದ್ದಾರೆ. ಭಯೋತ್ಪಾದಕರು ಕಾಬೂಲ್ ಆಕ್ರಮಿಸಿಕೊಂಡ ಬೆನ್ನಲ್ಲೇ ಭದ್ರತೆ, ರಕ್ಷಣೆಯ ಮಾತುಗಳನ್ನಾಡುತ್ತಿದ್ದ ಅಧ್ಯಕ್ಷ ಅಶ್ರಫ್ ಘನಿ ಖುದ್ದು ದೇಶ ಬಿಟ್ಟು ಓಡಿ ಹೋಗಿದ್ದಾರೆ. ಇದರಿಂದ ನಾಗರಿಕರಲ್ಲಿ ಭಾರೀ ಆತಂಕ ಮನೆ ಮಾಡಿದೆ.
Video: ಸ್ಮಶಾನಗಳ ಸಾಮ್ರಾಜ್ಯ ಅಫ್ಘಾನ್: ಕಾಬೂಲ್ ಏರ್‌ಪೋರ್ಟ್‌ನಲ್ಲಿ ಶವವಾದ ನಾಗರಿಕರು!
ತಾಲಿಬಾನಿಯರ ಕೈಕೆಳಗಿದ್ದರೆ ಸಾವೇ ಗತಿ ಎಂಬ ಭಯದಲ್ಲಿ ಸದ್ಯ ಇಲ್ಲಿನ ನಾಗರಿಕರು ದೇಶ ಬಿಟ್ಟು ಓಡಿ ಹೋಗಲು ಯತ್ಬಿಸುತ್ತಿದ್ದಾರೆ. ತಾಲಿಬಾನಿಯರು ಕಾಬೂಲ್ ಪ್ರವೇಶಿಸಿದ ಬೆನ್ನಲ್ಲೇ ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನೂಗು ನುಗ್ಗಲು ಉಂಟಾಗಿದ್ದು, ವಿಮಾನವೇರಲು ಜನರು ಜಗಳವಾಡತೊಡಗಿದ್ದಾರೆ. ಇಲ್ಲಿನ ಕೆಲ ದೃಶ್ಯಗಳು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದ್ದು, ನೋಡುಗರನ್ನು ಆಘಾತಕ್ಕೀಡು ಮಾಡಿದೆ.
ಹೌದು ಒಂದೆಡೆ ಕಾಬೂಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಾಗರಿಕರನ್ನು ನಿಯಂತ್ರಿಸಲು ಅಮೆರಿಕ ಸೇನಾ ಪಡೆ ನಡೆಸಿದ ಗುಂಡಿನ ದಾಳಿ ನಡೆಸಿದ್ದಾರೆ. ಈ ದಾಳಿಗೆ ಐವರು ನಾಗರಿಕರು ಶವವಾಗಿದ್ದಾರೆ. ಹೀಗಿದ್ದರೂ ಸುಮ್ಮನಾಗದ ಜನರು ತಾಲಿಬಾನಿಯರಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದಾರೆ. ಇನ್ನು ರನ್‌ವೇಗೇ ಹೋಗಲು ಅನುಮತಿ ಇಲ್ಲದ ಕಡೆ ಜನರು ವಿಮಾನಕ್ಕೆ ಬಲವಂತವಾಗಿ ಹತ್ತುತ್ತಿದ್ದಾರೆ. ವಿಮಾನ ಹಾರಾಟಕ್ಕೆ ಸಜ್ಜಾಗುವಾಗ, ಅದರೊಂದಿಗೇ ಓಡುತ್ತಿದ್ದಾರೆ. ಇವೆಲ್ಲಕ್ಕೂ ಭಯಾನಕ ಎಂಬಂತೆ ಹಾರಾಟ ಆರಂಭಿಸಿದ್ದ ವಿಮಾನದಿಂದ ಮೂವರು ನಾಗರಿಕರು ಬೀಳುತ್ತಿರುವ ದೃಶ್ಯ ಕಂಡು ಬಂದಿದೆ.
Video: ಸಾವಿನ ಭಯ: ಅಪ್ಘಾನಿಸ್ತಾನ ತೊರೆಯಲು ವಿಮಾನದಲ್ಲಿ ನೂಕು ನುಗ್ಗಲು!
ವಿಮಾನದಲ್ಲಿ ಸ್ಥಳವಿಲ್ಲದಿದ್ದರೂ, ಬಲವಂತವಾಗಿ ಹತ್ತಿದ ಕೆಲವರು ವಿಮಾನ ಹಾರಾಟ ಆರಂಭವಾಗುತ್ತಿದ್ದಂತೆಯೇ ಮೇಲಿನಿಂದ ಕೆಳಕ್ಕೆ ಬಿದ್ದಿದ್ದಾರೆ. ಕೆಳಬಿದ್ದ ಮೂವರು ವಿಮಾನದ ರೆಕ್ಕೆಯಡಿ ಯಾರಿಗೂ ಕಾಣದಂತೆ ಕುಳಿತಿದ್ದರು. ಆದರೆ ಹಾರಾಟದ ವೇಳೆ ನಿಯಂತ್ರಣ ಸಿಗದೇ ಕೆಳ ಬಿದ್ದು ಸಾವನ್ನಪ್ಪಿದ್ದಾರೆನ್ನಲಾಗಿದೆ.