Asianet Suvarna News Asianet Suvarna News

ISIS: ಅಮೆರಿಕಾದ ಮಾಸ್ಟರ್ ಪ್ಲ್ಯಾನ್, ವ್ಯವಸ್ಥಿತ ಕಾರ್ಯಾಚರಣೆ, ಐಸಿಸ್‌ ಬಾಸ್‌ ಹತ್ಯೆ

ಜಗತ್ತಿನ ಕುಖ್ಯಾತ ಉಗ್ರಗಾಮಿ ಸಂಘಟನೆಗಳಲ್ಲಿ ಮುಂಚೂಣಿಯಲ್ಲಿರುವ ಐಸಿಸ್‌ (ISIS) ಮುಖ್ಯಸ್ಥ ಅಬು ಇಹ್ರಾಹಿಂ ಅಲ್‌ ಹಶೇಮಿ ಅಲ್‌- ಖುರೇಶಿ ಹತ್ಯೆಗೆ ಬರೋಬ್ಬರಿ 2 ತಿಂಗಳಿನಿಂದ ಅಮೆರಿಕ ಪ್ಲ್ಯಾನ್‌ ಮಾಡಿತ್ತು ಎಂಬ ಸಂಗತಿ ಬೆಳಕಿಗೆ ಬಂದಿದೆ. 

 

ವಾಷಿಂಗ್ಟನ್‌ (ಫೆ. 05): ಜಗತ್ತಿನ ಕುಖ್ಯಾತ ಉಗ್ರಗಾಮಿ ಸಂಘಟನೆಗಳಲ್ಲಿ ಮುಂಚೂಣಿಯಲ್ಲಿರುವ ಐಸಿಸ್‌ (ISIS) ಮುಖ್ಯಸ್ಥ ಅಬು ಇಹ್ರಾಹಿಂ ಅಲ್‌ ಹಶೇಮಿ ಅಲ್‌- ಖುರೇಶಿ ಹತ್ಯೆಗೆ ಬರೋಬ್ಬರಿ 2 ತಿಂಗಳಿನಿಂದ ಅಮೆರಿಕ ಪ್ಲ್ಯಾನ್‌ ಮಾಡಿತ್ತು ಎಂಬ ಸಂಗತಿ ಬೆಳಕಿಗೆ ಬಂದಿದೆ. ಶರಣಾಗುವ ಬದಲು ಆತ್ಮಾಹುತಿ ಸ್ಫೋಟ ಮಾಡಿಕೊಂಡ ಖುರೇಶಿ ಕೊಲ್ಲಲು ಅಮೆರಿಕ ನಡೆಸಿದ ಕಾರ್ಯಾಚರಣೆಯ ಕುತೂಹಲಕಾರಿ ಮಾಹಿತಿಗಳು ಈಗ ಬಯಲಾಗಿವೆ.

Parappana Agrahara Expose: ಬಚ್ಚನ್ ಉಪಟಳಕ್ಕೆ ಬೇಸತ್ತ ಖಾಕಿ: ರೌಡಿ ಎನ್‌ಕೌಂಟರ್ ಆಗೋದು ಗ್ಯಾರಂಟಿ.?

ಟರ್ಕಿ ಗಡಿಯಲ್ಲಿರುವ ಸಿರಿಯಾದ ಅಟ್ಮೆ ಪಟ್ಟಣದ ಕಟ್ಟಡವೊಂದರಲ್ಲಿ ಕುಟುಂಬ ಸಮೇತ ಖುರೇಶಿ ಅಡಗಿದ್ದಾನೆ ಎಂಬ ಮಾಹಿತಿ ಅಮೆರಿಕಕ್ಕೆ ಡಿಸೆಂಬರ್‌ ಮೊದಲ ವಾರ ಗೊತ್ತಾಗಿತ್ತು. ಹೀಗಾಗಿ ಆತನನ್ನು ಕೊಲ್ಲಲು ಆಗಿನಿಂದಲೇ ಅಮೆರಿಕ ಯೋಜನೆ ರೂಪಿಸಲು ಆರಂಭಿಸಿತು.  ಹೆಲಿಕಾಪ್ಟರ್‌ ಮೂಲಕ ಕಾರ್ಯಾಚರಣೆಗೆ ನಿರ್ಧರಿಸಲಾಯಿತು. ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಅವರು ಮಂಗಳವಾರ ಅನುಮತಿ ನೀಡಿದರು. ಬಳಿಕ ಕಾರ್ಯಾಚರಣೆ ಆರಂಭವಾಯಿತು. ಕಟ್ಟಡದ ಎರಡನೇ ಮಹಡಿಗೆ ಯೋಧರು ಪ್ರವೇಶಿಸಿದಾಗ ಖುರೇಶಿ ಪತ್ನಿ ಹಾಗೂ ಆತನ ಬಂಟರು ಅಮೆರಿಕ ಯೋಧರ ಮೇಲೆ ಗುಂಡು ಹಾರಿಸಿದರು. ಈ ವೇಳೆಗೆ ತನಗೆ ಶರಣಾಗದೆ ಬೇರೆ ದಾರಿ ಇಲ್ಲ ಎಂದು ಗ್ರಹಿಸಿದ ಖುರೇಶಿ ಆತ್ಮಾಹುತಿ ಬಾಂಬ್‌ ಸ್ಫೋಟ ಮಾಡಿಕೊಂಡ. ಈ ಕಾರ್ಯಾಚರಣೆಯ ಸಂಪೂರ್ಣ ಡಿಟೇಲ್ಸ್ ಇಲ್ಲಿದೆ. 

 

Video Top Stories