ಭಾರತ ಮೇಲೆ ಯುದ್ಧ ನಡೆದರೆ ಪಾಕಿಸ್ತಾನಕ್ಕೆ ಸೌದಿ ನೆರವಾಗುತ್ತಾ?ಒಪ್ಪಂದ ಸೀಕ್ರೆಟ್ ಬಿಚ್ಚಿಟ್ಟ ಸಚಿವ, ಇತ್ತೀಚೆಗೆ ಸೌದಿ ಅರೇಬಿಯಾ ಹಾಗೂ ಪಾಕಿಸ್ತಾನ ನ್ಯಾಟೋ ರೀತಿಯ ಒಪ್ಪಂದಕ್ಕೆ ಸಹಿ ಹಾಕಿದೆ. ಇದರ ಬೆನ್ನಲ್ಲೇ ಪಾಕ್ ರಕ್ಷಣಾ ಸಚಿವ ಸ್ಫೋಟಕ ಸೀಕ್ರೆಟ್ ಬಹಿರಂಗಪಡಿಸಿದ್ದಾರೆ.

ಇಸ್ಲಾಮಾಬಾದ್ (ಸೆ.20) ಪಾಕಿಸ್ತಾನ ಹಾಗೂ ಸೌದಿ ಅರೆಬಿಯಾ ಇತ್ತೀಚೆಗೆ ಡಿಫೆನ್ಸ್ ಪ್ಯಾಕ್ಟ್ ಒಪ್ಪಂದಕ್ಕೆ ಸಹಿ ಹಾಕಿದೆ. ಈ ಒಪ್ಪಂದ ಭಾರಿ ಸದ್ದು ಮಾಡುತ್ತಿದೆ. ಹಲವು ರಕ್ಷಣಾ ನೆರವು, ಜಂಟಿ ಸಮರಾಭ್ಯಾಸ ಸೇರಿದಂತೆ ಹಲವು ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಪಾಕಿಸ್ತಾನ ರಕ್ಷಣಾ ಸಚಿವ ಖವಾಜಾ ಆಸಿಫ್ ನೀಡಿದ ಉತ್ತರ ಡೀಲ್ ಸೀಕ್ರೆಟ್ ಬಯಲು ಮಾಡಿದೆ. ಇಷ್ಟೇ ಅಲ್ಲ ಭಾರತಕ್ಕೆ ಬೆದರಿಕೆಯನ್ನೂ ನೀಡಿದ್ದಾರೆ. ಪಾಕಿಸ್ತಾನ ಭಾರತದ ಮೇಲೆ ಯುದ್ಧ ನಡೆಸಿದರೆ, ಪಾಕಿಸ್ತಾನ ಸೇನೆಗೆ ಸೌದಿ ಅರೇಬಿಯಾ ನೆರವು ನೀಡುತ್ತಾ ಎಂದು ಪ್ರಶ್ನೆ ಕೇಳಲಾಗಿತ್ತು. ಇದಕ್ಕೆ ಉತ್ತರಿಸಿದ ಖವಾಜಾ ಆಸೀಫ್, ಖಂಡಿತವಾಗಿಯೂ ನೆರವಾಗಲಿದೆ ಎಂದು ವಿವರಣೆ ನೀಡಿದ್ದಾರೆ.

ಪಾಕಿಸ್ತಾನಕ್ಕೆ ಸೌದಿ ಸೇನಾ ಬಲ

ಇಸ್ಲಾಮಾಬಾದ್‌ನಲ್ಲ ನಡೆದ ಸುದ್ದಿಗೋಷ್ಠಿಯಲ್ಲಿ ಉತ್ತರ ನೀಡಿದ ಖವಾಜಾ ಆಸೀಫ್, ಖಂಡಿತವಾಗಿಯೂ ಸೌದಿ ಅರೇಬಿಯಾ ಪಾಕಿಸ್ತಾನಕ್ಕೆ ಬೆಂಬಲ ನೀಡಲಿದೆ. ಇದರಲ್ಲಿ ಯಾವುದೇ ಅನುಮಾನ ಬೇಡ. ಈ ಒಪ್ಪಂದದ ಮಹತ್ವವೇ ಇದೇ ಆಗಿದೆ. ಒಪ್ಪಂದ ರಾಷ್ಟ್ರಗಳ ಮೇಲೆ ದಾಳಿಯಾದರೆ, ಸಂಘಟಿತವಾಗಿ ಪ್ರತಿದಾಳಿ ನಡೆಸಲಿದೆ. ಸಂಘಟಿತ ಡಿಫೆನ್ಸ್ ಒಪ್ಪಂದ ಇದಾಗಿದೆ. ಒಬ್ಬರು ನಮ್ಮ ಮೇಲೆ ದಾಳಿ ನಡೆಸಿದರೆ, ಪ್ರತಿಯಾಗಿ ಒಪ್ಪಂದ ರಾಷ್ಟ್ರಗಳು ಒಟ್ಟಾಗಿ ಪ್ರತಿದಾಳಿ ನಡೆಸಲಿದೆ ಎಂದು ಖವಾಜಾ ಆಸೀಫ್ ಹೇಳಿದ್ದಾರೆ.

ನ್ಯಾಟೋಗೆ ಪ್ರತಿಯಾದ ಡೀಲ್

ಸೌದಿ ಅರೆಬಿಯಾ ಹಾಗೂ ಪಾಕಿಸ್ತಾನದ ನಡುವಿನ ಡಿಫೆನ್ಸ್ ಪ್ಯಾಕ್ಟ್ ಡೀಲ್ , ನ್ಯಾಟೋ ರೀತಿಯಲ್ಲಿ ಪ್ರವರ್ತಿಸಲಿದೆ. ಹೀಗಾಗಿ ಸೌದಿ ಅರೆಬಿಯಾ ಅಥವಾ ಪಾಕಿಸ್ತಾನ ಮೇಲೆ ದಾಳಿಯಾದರೆ ಎರಡು ದೇಶ ಸಂಘಟಿತವಾಗಿ ಪ್ರತಿದಾಳಿ ನಡೆಸಲಿದೆ. ಇದರಿಂದ ರಕ್ಷಣಾ ಕ್ಷೇತ್ರದಲ್ಲಿ ಬಲ ಹೆಚ್ಚಲಿದೆ ಎಂದು ಖವಾಜಾ ಆಸೀಫ್ ಹೇಳಿದ್ದಾರೆ.

ಸೌದಿ ಅರೆಬಿಯಾಗೆ ಪಾಕಿಸ್ತಾನ ಅಣ್ವಸ್ತ್ರ ಬಳಕೆಗೆ ಗ್ರೀನ್ ಸಿಗ್ನಲ್

ಭಾರತದ ವಿರುದ್ಧ ಪಾಕಿಸ್ತಾನ ಪದೇ ಪದೇ ನ್ಯೂಕ್ಲಿಯರ್ ಬಾಂಬ್ ಬೆದರಿಕೆ ಹಾಕುತ್ತದೆ. ಇದೀಗ ಈ ಒಪ್ಪಂದದ ಬಳಿಕ ಪಾಕಿಸ್ತಾನದ ನ್ಯೂಕ್ಲೀಯರ್ ಬಾಂಬ್ ಅಸ್ತ್ರವನ್ನು ಸೌದಿ ಅರೆಬಿಯಾ ಬಳಸಲು ಮುಕ್ತವಾಗಿದೆ ಎಂದು ಆಸಿಫ್ ಖವಾಜಾ ಹೇಳಿದ್ದಾರೆ. ಈ ಕುರಿತು ಪಾಕಿಸ್ತಾನ ಮಾಜಿ ಅಧಿಕಾರಿಯೊಬ್ಬರು ಈ ಕುರಿತು ವಿವರಣೆ ನೀಡಿದ್ದಾರೆ. ಈ ನ್ಯೂಕ್ಲಿಯರ್ ಬಾಂಬ್ ಭಾರತದ ವಿರುದ್ದ ಬಳಸಲು ಮಾತ್ರ ಎಂದಿದ್ದಾರೆ. ಈ ಮೂಲಕ ಸೌದಿ ಅರೆಬಿಯಾ ಒಪ್ಪಂದ ಬಳಿಕ ಪಾಕಿಸ್ತಾನ ಹಿರಿ ಹಿರಿ ಹಿಗಿದ್ದು ಮಾತ್ರವಲ್ಲ, ಭಾರತಕ್ಕೆ ನೇರ ಎಚ್ಚರಿಕೆ ನೀಡುವ ಪ್ರಯತ್ನ ಮಾಡುತ್ತಿದೆ.