ಕರಗುತ್ತಿದೆ ಅಮೆರಿಕಾದಲ್ಲಿರುವ ಅಬ್ರಾಹಂ ಲಿಂಕನ್ ಮೇಣದ ಪ್ರತಿಮೆ
ಅಮೆರಿಕಾದ ಮಾಜಿ ಅಧ್ಯಕ್ಷ ಅಬ್ರಾಹಂ ಲಿಂಕನ್ ಅವರ ಆರು ಅಡಿ ಎತ್ತರದ ಮೇಣದ ಪ್ರತಿಮೆ ಕರಗುತ್ತಿದೆ. ಪ್ರತಿಮೆಯ ತಲೆ ಮತ್ತು ಕಾಲುಗಳು ಹಂತ ಹಂತವಾಗಿ ಕರಗಲು ಆರಂಭಿಸಿದೆ.
ವಾಶಿಂಗ್ಟನ್ ಡಿಸಿ: ಈ ಬಾರಿ ಅಮೆರಿಕಾದಲ್ಲಿಯೂ ತಾಪಮಾನ ಏರಿಕೆಯಾಗುತ್ತಿದೆ. ಸದಾ ಶೀತ ಪ್ರದೇಶದಿಂದ ಕೂಡಿರುತ್ತಿದ್ದ ಅಮೆರಿಕಾದಲ್ಲಿ 37 ರಿಂದ 40 ಡಿಗ್ರಿ ಸೆಲ್ಸಿಯಸ್‌ವರೆಗೂ ತಾಪಮಾನ ದಾಖಲಾಗುತ್ತಿದೆ. ಬಿಸಿಲಿಗೆ ಶಾಲಾ ಆವರಣದಲ್ಲಿ ಇರಿಸಲಾಗಿದ್ದ, ಅಮೆರಿಕಾದ ಮಾಜಿ ಅಧ್ಯಕ್ಷ ಅಬ್ರಾಹಂ ಲಿಂಕನ್ ಅವರ ಆರು ಅಡಿ ಎತ್ತರದ ಮೇಣದ ಪ್ರತಿಮೆ ಕರಗುತ್ತಿದೆ. ಪ್ರತಿಮೆಯ ತಲೆ ಮತ್ತು ಕಾಲುಗಳು ಹಂತ ಹಂತವಾಗಿ ಕರಗಲು ಆರಂಭಿಸಿದೆ. ಸದ್ಯ ಪ್ರತಿಮೆಯ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
ವಾಶಿಂಗ್ಟನ್ ಡಿಸಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಅಬ್ರಾಹಂ ಲಿಂಕನ್ ಮೇಣದ ಪ್ರತಿಮೆಯನ್ನು ಇರಿಸಲಾಗಿತ್ತು. ಬಿಸಿಲು ಹೆಚ್ಚಾಗುತ್ತಿರುವ ಕಾರಣ ಪ್ರತಿಮೆಯಿಂದ ತಲೆ ಭಾಗ ಬೇರೆಯಾಗುತ್ತಿದೆ. ಉಳಿದಂತೆ ಪ್ರತಿಮೆ ಗಾತ್ರ ಇಳಿಕೆಯಾಗುತ್ತಿದೆ. ಶನಿವಾರ ವಾಶಿಂಗ್ಟನ್ ಡಿಸಿಯಲ್ಲಿ 38 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು. ಈ ಮೇಣದ ಪ್ರತಿಮೆಯನ್ನು ಸ್ಯಾಂಡಿ ವಿಲಿಯಮ್ಸ್ IV ನಿರ್ಮಿಸಿದ್ದರು. ಇದೇ ವರ್ಷ ಫೆಬ್ರವರಿಯಿಂದ ಅಬ್ರಾಹಿಂ ಲಿಂಕನ್ ಪ್ರತಿಮೆಯನ್ನು ನಾರ್ಥ್‌ವೆಸ್ಟ್ ವಾಶೀಂಗ್ಟನ್ ಶಾಲೆಯ ಆವರಣದಲ್ಲಿ ಇರಿಸಲಾಗಿತ್ತು.
ಮಾಡಿದ್ದುಣ್ಣೋ ಮಾರಾಯ; ಛೇಡಿಸಿದ ಯುವಕನನ್ನ ICUಗೆ ಸೇರಿಸಿದ ಇಬ್ಬರು ಹುಡುಗಿಯರು
ಅತಿಯಾದ ಬಿಸಿಲಿನಿಂದ ಪ್ರತಿಮೆ ಕರಗಲು ಆರಂಭಿಸುತ್ತಿದ್ದಂತೆ ನಮ್ಮ ಸಿಬ್ಬಂದಿಯೇ ವಾಲಿದ್ದ ತಲೆ ಭಾಗವನ್ನು ತೆಗೆದಿರಿಸಿದ್ದಾರೆ. ಪ್ರತಿಮೆಯನ್ನು ರವಾನಿಸುವ ಕೆಲಸ ಮಾಡಲಾಗುವುದು ಎಂದು ಮೂರ್ತಿ ಸ್ಥಾಪನೆ ಮತ್ತು ನಿರ್ವಹಣೆ ಜವಾಬ್ದಾರಿ ಹೊತ್ತಿರುವ ಎನ್‌ಜಿಓ ಸಂಸ್ಥೆ ಹೇಳಿಕೆ ಬಿಡುಗಡೆ ಮಾಡಿದೆ.
ಅಮೆರಿಕಾದ ಹಲವು ಭಾಗಗಳಲ್ಲಿ ವಿಪರೀತ ತಾಪಮಾನ ದಾಖಲಾಗುತ್ತಿದೆ. ಕೆಲವು ಭಾಗದಲ್ಲಿ ಹೀಟ್ ವೇವ್ ಅಲರ್ಟ್ ಸಹ ಪ್ರಕಟಿಸಲಾಗಿದೆ. ತಾಪಮಾನ ಏರಿಕೆ ಪ್ರಮಾಣ ಲಿಂಕನ್ ಪ್ರತಿಮೆ ಮೇಲೆಯೂ ಪರಿಣಾಮ ಬೀರಿದೆ ಎಂದು ಕಲ್ಚರಲ್ ಡಿಸಿ ಹೇಳಿಕೆ ನೀಡಿದ್ದಾರೆ. ಈ ತಿಂಗಳು ಬಿಸಿ ಗಾಳಿಗೆ ಸಿದ್ಧರಾಗಿ ಎಂದು ಹವಾಮಾನ ಇಲಾಖೆಯು ಮಧ್ಯ ಮತ್ತು ಪೂರ್ವ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಎಚ್ಚರಿಕೆ ನೀಡಿದೆ. ಬಿಸಿಲಿಗೆ ಸಂಬಂಧಿಸಿದಂತಹ ಮುನ್ನೇಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.
Same-sex Marriage: ಮೇಕಪ್ ಮಾಡೋಕೆ ಬಂದಾಗ ನಟಿ ಮೇಲೆ ಲವ್ವಾಯ್ತು; 4 ವರ್ಷ ಪ್ರೀತಿಸಿ ಗಂಡ-ಹೆಂಡ್ತಿಯಾದ್ರು!