Asianet Suvarna News Asianet Suvarna News
breaking news image

ಮಾಡಿದ್ದುಣ್ಣೋ ಮಾರಾಯ; ಛೇಡಿಸಿದ ಯುವಕನನ್ನ ICUಗೆ ಸೇರಿಸಿದ ಇಬ್ಬರು  ಹುಡುಗಿಯರು 

ಮೊಹಮ್ಮದ್ ಶಾಹಿದ್ ಶೇಖ್ ಎಂಬಾತದ ಕುಡಿದು ಮದ್ಯದ ನಶೆಯಲ್ಲಿ ಕುಳಿತಿದ್ದನು. ಆತನ ಮುಂದೆ ಹೋಗುತ್ತಿದ್ದ ಯುವತಿಯ ಬಟ್ಟೆ ಹಿಡಿದು ಎಳೆದಿದ್ದಾನೆ.

boy-beaten-by-two-girls-after-teasing-them at bhilwara mrq
Author
First Published Jun 26, 2024, 5:35 PM IST

ಜೈಪುರ: ಹುಡುಗಿಯರನ್ನು ಛೇಡಿಸಿದ (Teasing Girl) ರೋಡ್‌ ರೋಮಿಯೋನನ್ನು ಐಸಿಯು ಸೇರುವಂತೆ ಇಬ್ಬರು ಯುವತಿಯರು (Two Girls) ಮಾಡಿದ್ದಾರೆ. ಸದ್ಯ ಯುವಕನ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿದು ಬಂದಿದೆ. ತಲೆ ಹಾಗೂ ದೇಹದ ಕೆಲವು ಭಾಗಗಳಲ್ಲಿ ಗಾಯವಾಗಿದ್ದು, ಮೂಳೆಗಳ ಮುರಿತವುಂಟಾಗಿದೆ. ಇಂದು ಬೆಳಗ್ಗೆ ಸುಮಾರು 10 ಗಂಟೆಗೆ ಸುಭಾಶ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. 

ಸಾಯಿ ಮಂದಿರದ ಬಳಿಯ ಮೆಡಿಕಲ್ ಶಾಪ್‌ನಿಂದ ಯುವತಿಯೊಬ್ಬಳು ಹೊರಟಿದ್ದಳು. ಇದೇ ಜಾಗದಲ್ಲಿ ಮೊಹಮ್ಮದ್ ಶಾಹಿದ್ ಶೇಖ್ ಎಂಬಾತದ ಕುಡಿದು ಮದ್ಯದ ನಶೆಯಲ್ಲಿ ಕುಳಿತಿದ್ದನು. ಆತನ ಮುಂದೆ ಹೋಗುತ್ತಿದ್ದ ಯುವತಿಯ ಬಟ್ಟೆ ಹಿಡಿದು ಎಳೆದಿದ್ದಾನೆ. ಯುವತಿ ಮಾರುಕಟ್ಟೆಗೆ ತಾಯಿ ಹಾಗೂ ತನ್ನ ತಂಗಿ ಜೊತೆ ಬಂದಿದ್ದಳು.ಮೆಡಿಕಲ್‌ನಿಂದ ಯುವತಿ ಹಿಂದಿರುಗಿ ಮನೆಗೆ ತೆರಳುತ್ತಿರುವ ಸಂದರ್ಭದಲ್ಲಿ ಯುವತಿಯನ್ನು ಛೇಡಿಸಿದ್ದಾನೆ.

ಸಾರ್ವಜನಿಕರಿಂದಲೂ ಶಾಹಿದ್ ಮೇಲೆ ಹಲ್ಲೆ

ಶಾಹಿದ್ ಯುವತಿ ಜೊತೆ ಅಸಭ್ಯವಾಗಿ ವರ್ತಿಸಿದ್ದಾನೆ. ಇದರಿಂದ ಕೋಪಗೊಂಡ ಯುವತಿ ಮತ್ತು ಆಕೆಯ ತಂಗಿ ಶಾಹಿದ್‌ನನ್ನು ಕೆಳಗೆ ಬೀಳಿಸಿ ಹೊಡೆದಿದ್ದಾರೆ. ಇದೇ ವೇಳೆ ಸ್ಥಳದಲ್ಲಿದ್ದ ಜನರು ಸಹ ಶಾಹಿದ್ ಮೇಲೆ ಹಲ್ಲೆ ನಡೆಸಿ ಆಕ್ರೋಶ ಹೊರ ಹಾಕಿದ್ದಾರೆ. ಗಲಾಟೆ ಜೋರಾಗುತ್ತಿದ್ದಂತೆ ಕೆಲ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. 

ಮೊಬೈಲ್‌ನಲ್ಲಿ ಏನು ಡೌನ್‌ಲೋಡ್ ಮಾಡಿದ್ದೀಯಾ? ತಂದೆ ಬೈದಿದ್ದಕ್ಕೆ ನೇಣಿಗೆ ಕೊರಳೊಡ್ಡಿದ ಮಗಳು 

ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಸುಭಾಶ್ ನಗರ ಠಾಣೆಯ ಪೊಲೀಸರು ಹಲ್ಲೆಗೊಳಗಾದ ಶಾಹಿದ್‌ನನ್ನು ಅಂಬುಲೆನ್ಸ್ ಮುಖಾಂತರ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇತ್ತ ಯುವತಿಯರಿಬ್ಬರು ಪೊಲೀಸ್ ಠಾಣೆಗೆ ತೆರಳಿ ಶಾಹಿದ್ ವಿರುದ್ಧ ದೂರು ದಾಖಲಿಸಿದ್ದಾರೆ. 

ಯುವತಿಯರು ದಾಖಲಿಸಿದ ದೂರಿನಲ್ಲಿ ಏನಿದೆ?

ರಸ್ತೆಯಲ್ಲಿ ತೆರಳುತ್ತಿರುವಾಗ ಶಾಹಿದ್ ನಮ್ಮ ಮೇಲೆ ದಾಳಿ ಮಾಡಿದನು. ಆತನಿಂದ ರಕ್ಷಿಸಿಕೊಳ್ಳಲು ನಾವು ಪ್ರತಿ ದಾಳಿ ಮಾಡಿದ್ದೇವೆ ಎಂದು ಯುವತಿಯರು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಪೊಲೀಸರು ಸಹ ಯುವತಿಯರು ರಕ್ಷಣೆಗಾಗಿ ಶಾಹಿದ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ಸದ್ಯ ಮಹಾತ್ಮ ಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು, ಹೇಳಿಕೆ ನೀಡುವ ಸ್ಥಿತಿಯಲ್ಲಿ ಶಾಹಿದ್ ಇಲ್ಲ. ಸದ್ಯ ಆತನ ಆರೋಗ್ಯ ಸ್ಥಿರವಾಗಿದ್ದು, ಚಿಕಿತ್ಸೆ ಮುಂದುವರಿದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಅಜ್ಜನ 90 ಲಕ್ಷ ಕದ್ದು, ದೇವರ ಹುಂಡಿಗೆ 1 ಲಕ್ಷ ಹಾಕಿ ಎಂಜಾಯ್ ಮಾಡಲು ಮನಾಲಿಗೆ ಹೋದಳು!

boy-beaten-by-two-girls-after-teasing-them at bhilwara mrq

Latest Videos
Follow Us:
Download App:
  • android
  • ios