ವುಹಾನ್(ಜ.11)‌: ಇಡೀ ವಿಶ್ವವನ್ನು ಕಾಡುತ್ತಿರುವ ಕೊರೋನಾ ವೈರಸ್‌ಗೆ ಮೊದಲ ಸಾವು ಸಂಭವಿಸಿ ಸೋಮವಾರ ಒಂದು ವರ್ಷ ತುಂಬಲಿದೆ. ಕೊರೋನಾ ಸೋಂಕು ಕಾಣಿಸಿಕೊಂಡು ಒಂದು ವರ್ಷವೇ ಕಳೆದಿದ್ದರೂ ಈದುವರೆಗೂ ವಿಜ್ಞಾನ ಜಗತ್ತಿಗೆ ಈ ವೈರಸ್‌ ನಿಗೂಢವಾಗಿಯೇ ಉಳಿದಿದೆ. ವೈರಸ್‌ನ ಉಪಟಳಕ್ಕೆ ಕಡಿವಾಣ ಬಿದ್ದಿಲ್ಲ.

ಚೀನಾದ ವುಹಾನ್‌ ಪ್ರಾಂತ್ಯದಲ್ಲಿ 2020 ಜ.11ರಂದು 61 ವರ್ಷದ ವ್ಯಕ್ತಿಯೊಬ್ಬನ ಸಾವಿನನೊಂದಿಗೆ ಕೊರೋನಾ ಸಾವಿನ ಸರಣಿ ಆರಂಭಗೊಂಡಿತ್ತು. ಈ ವರೆಗೆ ಈ ಮಹಾಮಾರಿಗೆ 19 ಲಕ್ಷಕ್ಕೂ ಅಧಿಕ ಮಂದಿ ಪ್ರಾಣಕಳೆದುಕೊಂಡಿದ್ದು, 9 ಕೋಟಿಗೂ ಅಧಿಕ ಮಂದಿ ಸೋಂಕಿಗೆ ತುತ್ತಾಗಿದ್ದಾರೆ. ಅಂಟಾಕ್ರ್ಟಿಕಾ ಸೇರಿದಂತೆ ವಿಶ್ವದ ಎಲ್ಲಾ ಭೂಖಂಡಗಳಿಗೂ ಕೊರೋನಾ ಸೋಂಕು ಹರಡಿದೆ.

2019ರ ಡಿಸೆಂಬರ್‌ನಲ್ಲಿ ಚೀನಾದ ವುಹಾನ್‌ನಲ್ಲಿ ಕೊರೋನಾದ ಮೊದಲ ಕೇಸ್‌ ಪತ್ತೆ ಆತ್ತು. ಹೀಗಾಗಿ ಚೀನಾವೇ ಕೊರೋನಾದ ಮೂಲ ಎಂದು ಭಾವಿಸಲಾಗಿದೆ. ಆದರೆ, ವೈರಸ್‌ ಉಗಮವಾಗಿದ್ದು, ವುಹಾನ್‌ನ ಮಾಂಸ ಮಾರುಕಟ್ಟೆಯಿಂದ ಎಂಬುದನ್ನು ಸಾಬೀತುಪಡಿಸಲು ಇದುವರೆಗೂ ಸಾಧ್ಯವಾಗಿಲ್ಲ. ಅಲ್ಲದೇ ಪ್ರಾಣಿಯಿಂದ ಮನುಷ್ಯನಿಗೆ ಈ ವೈರಸ್‌ ಹಬ್ಬಿದ್ದು ಹೇಗೆ ಎಂಬ ಪ್ರಶ್ನೆಗೂ ಉತ್ತರ ಸಿಕ್ಕಿಲ್ಲ.