Dense Forest and Cave: ದಟ್ಟಾರಣ್ಯದ ಗುಹೆಯೊಳಗೆ ಹೋದ ಮಹಿಳೆ ಹೊಸ ಲೋಕವನ್ನೇ ಕಂಡುಕೊಂಡಿದ್ದಾಳೆ. ಗುಹೆಯೊಳಗೆ ಮನೆಯಂತಹ ರಚನೆ, ದಿನಬಳಕೆ ವಸ್ತುಗಳು ಮತ್ತು ಮೆಟ್ಟಿಲುಗಳಿದ್ದು, ಹಿಂದೆ ಜನರು ವಾಸವಾಗಿದ್ದ ಕುರುಹುಗಳು ಕಂಡುಬಂದಿವೆ.
ಸಾಮಾಜಿಕ ಜಾಲತಾಣದಲ್ಲಿನ ಕೆಲವೊಂದು ವಿಡಿಯೋಗಳು ರೋಮಾಂಚಕಾರಿಯಾದ ಅನುಭವವನ್ನು ನೀಡುತ್ತವೆ. ಇಂತಹ ಭಯಾನಕ ಸ್ಥಳಗಳು ಭೂಮಿ ಮೇಲಿವೆಯಾ ಎಂಬ ಪ್ರಶ್ನೆ ಮೂಡುತ್ತದೆ. ಮಹಿಳೆಯೊಬ್ಬಳು ದಟ್ಟಾರಣ್ಯದಲ್ಲಿರುವ ಗುಹೆಯಂತಿರುವ ಪ್ರದೇಶದೊಳಗೆ ಹೋಗುತ್ತಾಳೆ. ಅಲ್ಲಿ ಆ ಮಹಿಳೆ ಹೊಸ ಲೋಕಕ್ಕೆ ಎಂಟ್ರಿ ಕೊಡುತ್ತಾಳೆ. ಅಲ್ಲಿ ಆ ಮಹಿಳೆ ಏನು ನೋಡಿದಳು ಎಂಬುದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ನಿಗೂಢ ಪ್ರದೇಶದ ಗುಹೆಯಲ್ಲಿ ಇಂತಹ ವಿಸ್ಮಯವಾದ ಲೋಕ ಇದೆಯಾ ಎಂದು ನೋಡಗರು ಕಮೆಂಟ್ ಮಾಡಿದ್ದಾರೆ. ಇಂದು ಜನರು ಎಲ್ಲೇ ಹೋದರೂ ಆ ಪ್ರದೇಶದ ವಿಡಿಯೋವನ್ನು ಮೊಬೈಲ್‌ನಲ್ಲಿ ಸೆರೆಹಿಡಿದುಕೊಂಡು ಶೇರ್ ಮಾಡಿಕೊಳ್ಳುತ್ತಿರುತ್ತಾರೆ.
ಇನ್ನು ಕೆಲವರು ದೇಶ-ವಿದೇಶಗಳಿಗೆ ಭೇಟಿ ನೀಡಿ ಅಲ್ಲಿಯ ಸ್ಥಳವನ್ನು ಜಗತ್ತಿಗೆ ತೋರಿಸುವ ಕೆಲಸ ಮಾಡುತ್ತಾರೆ. ಇಂತಹ ವ್ಲಾಗರ್‌ಗಳು ಯಾರೂ ಭೇಟಿ ನೀಡದ ಪ್ರದೇಶಗಳಿಗೆ ತೆರಳುತ್ತಿರುತ್ತಾರೆ. ಕೆಲವೊಮ್ಮೆ ಅಪಾಯಕಾರಿ ಸ್ಥಳಗಳಿಗೂ ಭೇಟಿ ನೀಡುತ್ತಾರೆ. ಇದೀಗ ವೈರಲ್ ಆಗಿರುವ ವಿಡಿಯೋವನ್ನು ಅಂಡರ್‌ಗ್ರೌಂಡ್ ಬರ್ಮಿಂಗ್ಹ್ಯಾಮ್ (@undergroundbirmingham) ಹೆಸರಿನ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾಗಿದೆ. ಈ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶತಮಾನಗಳಷ್ಟು ಹಳೆಯದಾದ ಗುಹೆಗಳು ಮತ್ತು ಬಂಕರ್‌ಗಳ ಕುರಿತ ಮಾಹಿತಿಯನ್ನು ನೀಡುತ್ತಿರುತ್ತಾರೆ. ತಮ್ಮ ವೀಕ್ಷಕರಿಗೆ ಅಚ್ಚರಿಯ ವಿಸ್ಮಯ ಲೋಕವನ್ನು ಪರಿಚಯಿಸುತ್ತಿರುತ್ತಾರೆ.
ಅಂಡರ್‌ಗ್ರೌಂಡ್ ಬರ್ಮಿಂಗ್ಹ್ಯಾಮ್ ಪೇಜ್ ಸದಸ್ಯರು ಅಚ್ಚರಿಯನ್ನೊಳಗೊಂಡ ಗುಹೆಯನ್ನು ತೋರಿಸಿದ್ದಾರೆ. ಗುಹೆಯೊಳಗಿನ ನೋಟ ನಿಜಕ್ಕೂ ನಿಮ್ಮನ್ನು ಬೆರಗುಗೊಳಿಸುತ್ತದೆ. ಗುಹೆಯೊಳಗಿನ ವಸ್ತುಗಳನ್ನು ಗಮನಿಸಿದ್ರೆ ಈ ಹಿಂದೆ ಇಲ್ಲಿ ಜನರು ವಾಸವಾಗಿರೋದನ್ನು ಖಚಿತಪಡಿಸುತ್ತದೆ. ಆದ್ರೆ ಇಲ್ಲಿಯ ಜನರು ಎಲ್ಲಿ ಹೋದರು ಎಂಬುದರ ಬಗ್ಗೆ ತಿಳಿದು ಬಂದಿಲ್ಲ.
ವೈರಲ್ ವಿಡಿಯೋದಲ್ಲಿ ಏನಿದೆ?
ಮಹಿಳೆಯೊಬ್ಬಳು ಗುಹೆಯೊಳಗೆ ಪ್ರವೇಶಿಸುತ್ತಿರೋದು ಮೊದಲು ಕಾಣಿಸುತ್ತದೆ. ಒಳಗೆ ಹೋಗುತ್ತಿದ್ದಂತೆ ಇದ್ಯಾವುದೋ ಮನೆಯ ರೀತಿಯಲ್ಲಿ ಕಾಣಿಸುತ್ತದೆ. ಮೊದಲು ಫ್ರಿಡ್ಜ್ ಸೇರಿದಂತೆ ಒಂದಿಷ್ಟು ದಿನಬಳಕೆಯ ವಸ್ತುಗಳನ್ನು ನೋಡಬಹುದು. ಗುಹೆಯ ಬಲಭಾಗಕ್ಕೆ ಹೋದಂತೆ ಕೆಳಗೆ ಮೆಟ್ಟಿಲುಗಳು ಕಾಣಿಸುತ್ತವೆ. ಮಹಿಳೆಯ ಆ ಮೆಟ್ಟಿಲುಗಳನ್ನು ಇಳಿದು ಕೆಳಗೆ ಹೋಗುತ್ತಾಳೆ. ನಂತರ ಹೀಗೆ ಒಳಗೆ ಮೆಟ್ಟಿಲುಗಳ ಕಿರಿದಾದ ರಸ್ತೆಗಳು ಇರುತ್ತವೆ. ಮಹಿಳೆ ತನಗೆ ಎಷ್ಟು ಸಾಧ್ಯವಾಗುತ್ತೋ ಅಲ್ಲಿಯವರೆಗೆ ಹೋಗುತ್ತಾರೆ.
ಐದು ದಿನಗಳ ಹಿಂದೆ ಪೋಸ್ಟ್ ಮಾಡಿಕೊಳ್ಳಲಾದ ಈ ವಿಡಿಯೋಗೆ ಲಕ್ಷಕ್ಕೂ ಅಧಿಕ ಲೈಕ್ಸ್ ಮತ್ತು ಸಾವಿರಾರು ಕಮೆಂಟ್‌ಗಳು ಬಂದಿವೆ. ನಾವು ಗುಹೆಯಲ್ಲಿ ಅಡಗಿರುವ ಪರಿತ್ಯಕ್ತ ಮನೆಯನ್ನು ಹುಡುಕಿದ್ದೇವೆ ಎಂಬ ಶೀರ್ಷಿಕೆಯಡಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋಗೆ ಕಮೆಂಟ್ ಮಾಡಿರುವ ನೆಟ್ಟಿಗರು, ಈ ರಹಸ್ಯಮಯ ಸ್ಥಳ ಎಲ್ಲಿದೆ? ಈ ವಿಡಿಯೋ ನೋಡುತ್ತಾ ನಾನು ಒಂದು ಕ್ಷಣ ಕಳೆದುಹೋದೆ? ನಿಜವಾಗಿಯೂ ಇದೊಂದು ವಿಸ್ಮಯವಾದ ಲೋಕ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಪಾತಾಳ ಲೋಕಕ್ಕೆ ಇಳಿದಿದ್ರು!
ಕೆಲ ದಿನಗಳ ಹಿಂದೆ ಸೋಶಿಯಲ್ ಮೀಡಿಯಾದಲ್ಲಿ ಕೆಲ ಸಾಹಸಿ ಯುವಕರು ಬೆಟ್ಟದ ಮೇಲಿರುವ ಆಳವಾದ ಗುಹೆಯೊಳಗೆ ಉಳಿದಿದ್ದರು. ತಲೆಗೆ ಕ್ಯಾಮೆರಾ ಕಟ್ಟಿಕೊಂಡು ಇಳಿಯುವ ಜನರು, ಸ್ವಲ್ಪ ದೂರ ಹೋಗುತ್ತಾರೆ. ಮುಂದೆ ಕುತ್ತಿಗೆಯವರೆಗೂ ನೀರು ಆವರಿಸಿಕೊಳ್ಳುತ್ತೆ ಭಯದಿಂದ ಹಿಂದಿರುಗಿ ಬರುತ್ತಾರೆ. ಭಾರತದಲ್ಲಿಯೂ ಈ ರೀತಿಯ ಅನೇಕ ಭಯಾನಕ ಗುಹೆಗಳಿವೆ.
ಭೂಮಿ ಮೇಲಿನ ಪಾತಾಳ ಲೋಕ
ಚೀನಾದ ಗುಯಿಝೌ ಪ್ರಾಂತ್ಯದಲ್ಲಿರುವ ಝೊಂಗ್ಡಾಂಗ್ (zhongdong) ಎಂಬ ಗ್ರಾಮ ಮುದ್ರ ಮಟ್ಟದಿಂದ 1800 ಮೀಟರ್ ಎತ್ತರದಲ್ಲಿದೆ. ಇಲ್ಲಿ ಸಾವಿರಾರು ಜನರು ವಾಸಿಸುತ್ತಿದ್ದರು. ಗುಹೆಯಲ್ಲಿ ವಾಸಿಸುವುದು ಚೀನಾದ ನಾಗರಿಕತೆಯ ಭಾಗವಲ್ಲ ಎಂದು ಹೇಳಿ 2008 ರಲ್ಲಿ ಚೀನಾ ಸರ್ಕಾರವು ಇಲ್ಲಿನ ಶಾಲೆಯನ್ನು ಮುಚ್ಚಿಸಿತ್ತು. 2008ರ ನಂತರ ಇಲ್ಲಿನ ಜನರು ಸುತ್ತಮುತ್ತಲಿನ ಗ್ರಾಮಗಳಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ.