Asianet Suvarna News Asianet Suvarna News

ಪಾತಾಳಲೋಕ ನೋಡಲು ಹೋದವರಿಗಾಯ್ತು ಕೆಲವೇ ಕ್ಷಣದಲ್ಲಾಯ್ತು ಪಶ್ಚಾತ್ತಾಪ: ಹೊರಬಂತು ಭಯಾನಕ ವಿಡಿಯೋ!

ನಿಷೇಧಿತ ಕಂದಕ ಪ್ರದೇಶದೊಳಗೆ ಹೋಗಿ ಅಲ್ಲಿಯ ಭಯಾನಕತೆ ಅರಿತು ಯುವಕನೊಬ್ಬ ಕ್ಷಣಾರ್ಧದಲ್ಲಿ ಹಿಂದುರಿಗುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಜೀವಕ್ಕಿಂತ ಯಾವುದೂ ಮುಖ್ಯವಲ್ಲ ಎಂದು ಸಾಹಸ ಪ್ರದರ್ಶನ ಮಾಡದಂತೆ ಎಚ್ಚರಿಸಿದ್ದಾರೆ.

people entering mysterious pit and see patal lok they feel terrifying moment watch video mrq
Author
First Published Sep 1, 2024, 4:55 PM IST | Last Updated Sep 1, 2024, 4:57 PM IST

ನವದೆಹಲಿ: ನಮ್ಮ ಧರ್ಮಗೃಂಥಗಳಲ್ಲಿ ಭೂಮಿಯ ಕೆಳಗೆ ಪಾತಾಳಲೋಕವಿದೆ ಎಂದು ಹೇಳಲಾಗುತ್ತದೆ. ಪೌರಾಣಿಕ ಸಿನಿಮಾಗಳಲ್ಲಿ ಪಾತಾಳಲೋಕದ ಕಲ್ಪನೆಯನ್ನು ತೋರಿಸಲಾಗುತ್ತಿತ್ತು. ಬಬ್ರುವಾಹನ ಭೂಮಿಯನ್ನು ಸೀಳಿ ಪಾತಾಳಲೋಕಕ್ಕೆ ಹೋಗಿ ಅಡಗಿಸಿಡಲಾಗಿದ್ದ ತಂದೆಯ ಶಿರವನ್ನು ತರುತ್ತಾನೆ. ಅದೇ ರೀತಿ ಪಾತಾಳಲೋಕದ ಬಗ್ಗೆ ನಮ್ಮ ಧರ್ಮಗ್ರಂಥ ಹಾಗೂ ಅಜ್ಜಿ ಹೇಳುವ ಕಥೆಯಲ್ಲಿಯೂ ಇರುತ್ತದೆ. ಹಾಗಾಗಿ ಇಂದಿನ ಯುವ ಜನರು ಭೂಮಿಯ ಒಡಲಾಳದಲ್ಲಿ ಏನಿದೆ ಎಂದು ತಿಳಿದುಕೊಳ್ಳಲು ಪ್ರಯತ್ನಿಸುತ್ತಿರುತ್ತಾರೆ. ಈ ಕೆಟ್ಟ ಕುತೂಹಲದಿಂದ ಅಪಾಯವನ್ನು ಲೆಕ್ಕಿಸದೇ ನಿಷೇಧಿತ ಕಂದಕ ಪ್ರದೇಶದೊಳಗೆ ಹೋಗಿ ಅಲ್ಲಿಯ ಭಯಾನಕತೆ ಅರಿವಾಗುತ್ತಲೇ ಕ್ಷಣಾರ್ಧದಲ್ಲಿ ಹಿಂದುಗಿರುತ್ತಾರೆ. ಇಂತಹ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. 

ವೈರಲ್ ಆಗಿರುವ ವಿಡಿಯೋ @60saniyedebilimm  ಹೆಸರಿನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಅಪ್ಲೋಡ್ ಮಾಡಲಾಗಿದೆ. ಈ ವಿಡಿಯೋ ನೋಡಿದ ನೆಟ್ಟಿಗರು, ಎಂದಿಗೂ ಈ ತಪ್ಪನ್ನು ಮಾಡಲು ಹೋಗಬೇಡಿ. ಪ್ರಕೃತಿ ತನ್ನೊಡಲೊಳಗೆ ಸಾವಿರಾರು ರಹಸ್ಯಗಳಿರುತ್ತವೆ. ಇಂತಹ ರಹಸ್ಯಗಳಿಂದ ದೂರವಿದ್ದಷ್ಟೇ ಮಾನವಕುಲಕ್ಕೆ ಒಳ್ಳೆಯದು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ನಮ್ಮ ಸುತ್ತಮುತ್ತಲೇ ಇಂತಹ ನಿಗೂಢ ಪ್ರದೇಶಗಳಿರೋದು ಎಲ್ಲರ ಗಮನಕ್ಕೆ ಬಂದಿರುತ್ತದೆ. ಬೆಟ್ಟ-ಗುಡ್ಡ, ಕಲ್ಲು ಬಂಡೆಯ ಪ್ರದೇಶದಲ್ಲಿ ಸಣ್ಣ ಸಣ್ಣ ಕಂದಕಗಳಿರುತ್ತವೆ. ಈ ಕಂದಕ ಎಷ್ಟು ಆಳವಿದೆ? ಒಳಗಡೆ ಏನಿದೆ ಎಂಬುದರ ಬಗ್ಗೆ ಯಾರಿ ಗೊತ್ತಿರಲ್ಲ. ಇಂತಹ ಕಂದಕದಲ್ಲಿ ಬಿದ್ದರೋ ಯಾರೂ ಹೊರ ಬಂದಿಲ್ಲ ಎಂಬ ಕಥೆಗಳು ಸ್ಥಳೀಯವಾಗಿ ಕೇಳುತ್ತಿರುತ್ತವೆ. 

ತಾಜ್‌ಮಹಲ್ ಮುಂದೆ ರೀಲ್ಸ್ ಮಾಡಿ, ಭಾರತಕ್ಕೆ ಬರಬೇಡಿ ಅಂತ ಹೇಳಿದ್ಯಾಕೆ ವಿದೇಶಿ ಮಹಿಳೆ?

ಇಂದು ಸಾಹಸಿ ಗುಣ ಹೊಂದಿರುವ ಯುವ ಸಮುದಾಯ ನಿಗೂಢ ಸ್ಥಳಗಳ ರಹಸ್ಯವನ್ನು ತಿಳಿದುಕೊಳ್ಳಲು ಉತ್ಸುಕರಾಗಿರುತ್ತಾರೆ. ಅತ್ಯಾಧುನಿಕ ಕ್ಯಾಮೆರಾ ಸೇರಿದಂತೆ ಎಲ್ಲಾ ಮುಂಜಾಗ್ರತಕ್ರಮ ತೆಗೆದುಕೊಂಡರೂ ಕೆಲವೊಮ್ಮೆ ಅಪಾಯಕ್ಕೆ ಸಿಲುಕುತ್ತಾರೆ. ಇನ್ನು ಕೆಲವರು ಪ್ರಪಾತಕ್ಕೆ ಇಳಿದ ಕೆಲವೇ ಸಮಯದಲ್ಲಿಯ ಅಲ್ಲಿಯ ಅಪಾಯವನ್ನು ಅರಿತು ಹಿಂದಿರುಗುತ್ತಾರೆ. 

ಇಂತಹ ಸಾಹಸಿ ಪ್ರದರ್ಶನದ ವಿಡಿಯೋವನ್ನು @60saniyedebilimm  ಖಾತೆಯಲ್ಲಿ  ಮೂರು ದಿನಗಳ ಹಿಂದೆ ಶೇರ್ ಮಾಡಿಕೊಳ್ಳಲಾಗಿದ್ದು, 5 ಕೋಟಿಗೂ ಅಧಿಕ ವ್ಯೂವ್ ಪಡೆದುಕೊಂಡಿದೆ. ಇದರ ಜೊತೆಗೆ ಮೂರು ಸಾವಿರಕ್ಕೂ ಅಧಿಕ ಕಮೆಂಟ್‌ಗಳು ಬಂದಿವೆ. ವಿಡಿಯೋ ನೋಡಿದ ನೆಟ್ಟಿಗರು, ಜೀವಕ್ಕಿಂತ ಯಾವುದೂ ಮುಖ್ಯವಲ್ಲ. ಇಷ್ಟೊಂದು ಅಪಾಯಕಾರಿ ಸಾಹಸ ಮಾಡೋದರಿಂದ ಏನು ಲಾಭ ಎಂದು ಪ್ರಶ್ನೆ ಮಾಡಿದ್ದಾರೆ. ನನ್ನಂತಹ ಕ್ಲಾಸ್ಟ್ರೋಫೋಬಿಕ್ (ಹೆದರುವ) ವ್ಯಕ್ತಿಗೆ ಈ ರೀಲ್ ಏಕೆ ಸಿಕ್ಕಿತು ಎಂದು ತಮ್ಮ ಭಯವನ್ನು ಹೊರಹಾಕಿದ್ದಾರೆ. ಅಮೆರಿಕದಲ್ಲಿ ತಲೆಕೆಳಗಾದ ಮನೆ ಇದೆ. ಅದರಲ್ಲಿ ವ್ಯಕ್ತಿಯೊಬ್ಬ ಸಿಲುಕಿಕೊಂಡಿದ್ದು, ಅಗ್ನಿಶಾಮಕ ದಳದವರಿಗೂ ಅಲ್ಲಿಂದ ರಕ್ಷಿಸಲು ಸಾಧ್ಯವಾಗದ ಕಾರಣ ಅವರು ಮೃತರಾದರು. ಇಂತಹ ಉದಾಹರಣೆಗಳು ನಮ್ಮ ಮುಂದಿದ್ರೆ ಅಪಾಯವನ್ನು ಎದುರಿಸೋದು ಏಕೆ ಅಂತಾನೂ ಕೇಳಿದ್ದಾರೆ. 

ಸೈಕಲ್‌ನಲ್ಲಿ ಪಾರ್ಸೆಲ್ ತಂದ ಡೆಲಿವರಿ ಬಾಯ್‌ಗೆ  ಗ್ರಾಹಕ ಮಾಡಿದ್ದೇನು? ನೆಟ್ಟಿಗರು ಭಾವುಕ

Latest Videos
Follow Us:
Download App:
  • android
  • ios