Asianet Suvarna News Asianet Suvarna News

20 ಸಾವಿರ ಜನ ವಾಸ ಮಾಡುವ ಚೀನಾದ ಬೃಹತ್ ಅಪಾರ್ಟ್‌ಮೆಂಟ್ ವೀಡಿಯೋ ಸಖತ್ ವೈರಲ್

ಚೀನಾ ಹೇಳಿ ಕೇಳಿ ಕುತಂತ್ರದ ಜೊತೆ ತಂತ್ರಜ್ಞಾನಕ್ಕೂ ಹೆಸರಾದ ದೇಶ, ಇಂತಹ ಚೀನಾ ದೇಶದ ಬೃಹತ್ ಅಪಾರ್ಟ್‌ಮೆಂಟ್‌ನ ವೀಡಿಯೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. 

A video of a huge apartment in China, where 20 thousand people live, has gone viral akb
Author
First Published Feb 5, 2024, 2:07 PM IST | Last Updated Feb 5, 2024, 2:07 PM IST

ವಿಶ್ವದ ಜನಸಂಖ್ಯೆಯಲ್ಲಿ ಚೀನಾದ ಜನಸಂಖ್ಯೆ ಅತೀ ಹೆಚ್ಚು, ಜನಸಂಖ್ಯೆಗೆ ತಕ್ಕಂತೆ ಚೀನಾ ದೇಶ ದೊಡ್ಡದಿದೆ. ಒಂದು ದೇಶದ ಜನಸಂಖ್ಯೆ ಹೆಚ್ಚಾದಂತೆಲ್ಲಾ ಅವರ ವಸತಿ ಮೂಲಸೌಕರ್ಯದ ಪ್ರಶ್ನೆಯೂ ಕಾಡುತ್ತದೆ. ಆದರೆ ಚೀನಾ ಹೇಳಿ ಕೇಳಿ ಕುತಂತ್ರದ ಜೊತೆ ತಂತ್ರಜ್ಞಾನಕ್ಕೂ ಹೆಸರಾದ ದೇಶ, ಇಂತಹ ಚೀನಾ ದೇಶದ ಬೃಹತ್ ಅಪಾರ್ಟ್‌ಮೆಂಟ್‌ನ ವೀಡಿಯೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. non aesthetic things ಎಂಬ ಟ್ವಿಟ್ಟರ್ ಪೇಜ್‌ನಿಂದ ಈ ವೀಡಿಯೋ ಅಪ್‌ಲೋಡ್ ಆಗಿದ್ದು, 9 ಮಿಲಿಯನ್‌ಗೂ ಹೆಚ್ಚು ಜನ ಈ ವೀಡಿಯೋವನ್ನು ವೀಕ್ಷಿಸಿದ್ದಾರೆ. 

ಚೀನಾದಲ್ಲಿ 20 ಸಾವಿರ ಜನ ವಾಸ ಮಾಡುವ ಬೃಹತ್ ಅಪಾರ್ಟ್‌ಮೆಂಟ್‌ನ ಚಿತ್ರ ಇದು ಎಂದು ವೀಡಿಯೋ ಶೇರ್ ಮಾಡಿ ಬರೆದುಕೊಂಡಿದ್ದಾರೆ.  ಈ ವೀಡಿಯೋ ನೋಡಿ ನೆಟ್ಟಿಗರೊಬ್ಬರು ಪ್ರತಿಕ್ರಿಯಿಸಿದ್ದು, ಚೀನಾದ ಹ್ಯಾಂಗ್‌ಝೌನಲ್ಲಿ ಈ ಬಿಲ್ಡಿಂಗ್ ಇದ್ದು, 'ದಿ ರೀಜೆಂಟ್ ಇಂಟರ್‌ನ್ಯಾಶನಲ್ ಬಿಲ್ಡಿಂಗ್' ಎಂದೂ ಇದನ್ನು ಕರೆಯುತ್ತಾರೆ ಎಂದು ಕಾಮೆಂಟ್ ಮಾಡಿದ್ದಾರೆ. ಜೊತೆಗೆ ಈ ಬೃಹತ್ ಗಗನಚುಂಬಿ ಕಟ್ಟಡದ ಒಳಾಂಗಣದ ಫೋಟೋಗಳನ್ನು ಶೇರ್ ಮಾಡಿದ್ದಾರೆ. ವೀಡಿಯೋ ನೋಡಿದ ಜನ ಮಾತ್ರ ತರಹೇವಾರಿ ಕಾಮೆಂಟ್ ಮಾಡಿದ್ದಾರೆ. ಇಂತಹ ಗಗನಚುಂಬಿ ಕಟ್ಟಡದಲ್ಲಿ ಲಿಫ್ಟ್ ಹಾಳಾದೆ ಏನು ಗತಿ ಎಂಬುದನ್ನು ನೆನಪಿಸಿಕೊಳ್ಳಿ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಈ ಕಟ್ಟಡದ ಲಿಫ್ಟ್‌ನಲ್ಲಿ ಅದೆಷ್ಟು ಜನ ತುಂಬಿರುತ್ತಾರೋ ಏನೋ ಎಂದು ಕುತೂಹಲ ವ್ಯಕ್ತಪಡಿಸಿದ್ದಾರೆ. ಮತ್ತೆ ಕೆಲವರು ಇಂತಹ ಕಟ್ಟಡದಲ್ಲಿ ಯಾವತ್ತೂ ಬೆಂಕಿ ಬೀಳದಿರಲಿ ಎಂದು ಪ್ರಾರ್ಥಿಸಿದ್ದಾರೆ. 

ಮೊಹಮ್ಮದ್‌ ಮುಯಿಜು ಭಾರತ ವಿರೋಧಿ ಧೋರಣೆಗೆ ಮಾಲ್ಡೀವ್ಸ್‌ನಲ್ಲೇ ವಿರೋಧ: ಅಭಿವೃದ್ಧಿಗೆ ಮಾರಕವೆಂದು ಎಚ್ಚರಿಕೆ

ಇನ್ನು ಕೆಲವರು ಈ ಬೃಹತ್ ಅಪಾರ್ಟ್‌ಮೆಂಟ್‌ನಲ್ಲಿ ಯಾವೆಲ್ಲಾ ವ್ಯವಸ್ಥೆಗಳು ಇರಬಹುದು ಎಂಬುದರ ಬಗ್ಗೆ ಕುತೂಹಲಿಗರಾಗಿದ್ದಾರೆ. ಸಾಮಾನ್ಯವಾಗಿ ಅಪಾರ್ಟ್‌ಮೆಂಟ್‌ಗಳಲ್ಲಿ ಜಿಮ್‌, ಈಜುಕೊಳ, ಕಿರಾಣಿ ಅಂಗಡಿ, ಸಣ್ಣ ಮಾರ್ಕೆಟ್ ಎಲ್ಲವೂ ಇರುತ್ತದೆ. ಆದರೆ ಇಲ್ಲಿ ಕಟ್ಟಡದಲ್ಲಿ ಸಿನಿಮಾ ಥಿಯೇಟರ್ ಕೂಡ ಇದ್ದರೆ ಆಶ್ಚರ್ಯವೇನಿಲ್ಲ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ಆದರೆ ಇಲ್ಲಿ ಎಲ್ಲವೂ ಇದ್ದು ಹೊರಾಂಗಣ ಮೈದಾನವಿಲ್ಲದೇ ಹೋದಲ್ಲಿ ನಾನು ಅಲ್ಲಿ ಮಕ್ಕಳೊಂದಿಗೆ ಎಂದಿಗೂ ವಾಸ ಮಾಡಲು ಬಯಸುವುದಿಲ್ಲ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.

ಮಾಲ್ಡೀವ್ಸ್‌ನತ್ತ ಚೀನಾ ಗೂಢಚರ್ಯೆ ನೌಕೆ: ಭಾರತ-ಮಾಲ್ಡೀವ್ಸ್‌ ಸಂಘರ್ಷದ ಬೆನ್ನಲ್ಲೇ ಈ ಬೆಳವಣಿಗೆ

ಒಟ್ಟಿನಲ್ಲಿ 20 ಸಾವಿರ ಜನ ವಾಸ ಮಾಡುತ್ತಾರೆ ಎನ್ನಲಾದ ಈ ಅಪಾರ್ಟ್‌ಮೆಂಟ್ ಕಟ್ಟಡದ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗ್ತಿದೆ. 

 

 

Latest Videos
Follow Us:
Download App:
  • android
  • ios