ಮನೆ ನವೀಕರಣಕ್ಕೆ ಮುಂದಾದ ಇಂಗ್ಲೆಂಡ್‌ನ ದಂಪತಿಗಳ ಅದೃಷ್ಟವೇ ಬದಲಾಗಿದೆ. ಮನೆ ನವೀಕರಣ ವೇಳೆ ಹೊಂಡ ತೋಡುತ್ತಿದ್ದಾಗ ನಿಧಿ ಸಿಕ್ಕಿದ್ದು, ಇದರಿಂದ ದಂಪತಿಗಳ ಜೀವನ ಬದಲಾಗಿದೆ.

ಮನೆ ನವೀಕರಣಕ್ಕೆ ಮುಂದಾದ ಇಂಗ್ಲೆಂಡ್‌ನ ದಂಪತಿಗಳ ಅದೃಷ್ಟವೇ ಬದಲಾಗಿದೆ. ಮನೆ ನವೀಕರಣ ವೇಳೆ ಹೊಂಡ ತೋಡುತ್ತಿದ್ದಾಗ ನಿಧಿ ಸಿಕ್ಕಿದ್ದು, ಇದರಿಂದ ದಂಪತಿಗಳ ಜೀವನ ಬದಲಾಗಿದೆ. ಇಂಗ್ಲೆಂಡ್‌ನ ಉತ್ತರ ಯಾರ್ಕ್‌ಷೈರ್‌ನಲ್ಲಿ ಈ ಘಟನೆ ನಡೆದಿದೆ. ಹಳೆ ಮನೆಗಳನ್ನು ಕೆಡವುವಾಗ ಅಥವಾ ಹೊಸ ಮನೆಗಳಿಗೆ ಜಾಗ ಮಾಡುವಾಗ ಬಂಗಾರ, ಬೆಳ್ಳಿ ನಾಣ್ಯಗಳಿದ್ದಂತಹ ನಿಧಿ ಸಿಕ್ಕಿದ ಘಟನೆ ಈ ಹಿಂದೆ ನಮ್ಮ ದೇಶದಲ್ಲಿ ಹಲವು ಕಡೆಗಳಲ್ಲಿ ವರದಿ ಆಗಿತ್ತು. ಆದರೆ ವಿದೇಶಗಳಲ್ಲಿ ಇಂತಹ ಘಟನೆ ತೀರಾ ವಿರಳ. ಆದಾಗ್ಯೂ ಈಗ ವಿದೇಶದಲ್ಲಿಯೂ ಈಗ ದಂಪತಿಯೊಬ್ಬರಿಗೆ ನಿಧಿ ಸಿಕ್ಕಿದ್ದು, ಅವರ ಅದೃಷ್ಟ ಬದಲಾಗಿದೆ. 

ಉತ್ತರ ಯಾರ್ಕ್‌ಷೈರ್‌ (North Yorkshire) ಎಲ್ಲರ್ಬಿಯಲ್ಲಿರುವ ತಮ್ಮ 18ನೇ ಶತಮಾನಕ್ಕೆ ಸೇರಿದ್ದ ಮನೆಯನ್ನು ಈ ಬ್ರಿಟಿಷ್ ದಂಪತಿ ನವೀಕರಿಸಲು ನಿರ್ಧರಿಸಿ ಅಡುಗೆ ಮನೆಯಲ್ಲಿ ಹೊಂಡ ಅಗೆಯಲು ಶುರು ಮಾಡಿದ್ದರು. ಹೀಗೆ ಮಣ್ಣನ್ನು ಅಗೆಯುತ್ತ ಹೋದಾಗ ಅವರಿಗೆ ಕಾಂಕ್ರೀಟ್ ಅಡಿಯಲ್ಲಿ ಕೇವಲ ಆರು ಇಂಚುಗಳಷ್ಟು ಕೆಳಗೆ ಲೋಹದ ಡಬ್ಬಿ ಪತ್ತೆಯಾಗಿವೆ. ಮೊದಲಿಗೆ ದಂಪತಿ, ತಾವು ಇಲೆಕ್ಟ್ರಿಕ್ ಕೇಬಲ್‌ಗೆ (electric cable) ತಾಗಿಸಿದ್ದೆವೇನೋ ಎಂದು ಭಾವಿಸಿದ್ದಾರೆ. ಆದರೆ ಮೇಲೆತ್ತಿದ್ದಾಗ ನಾಣ್ಯಗಳು ಪತ್ತೆಯಾಗಿವೆ.

ನಿಗೂಢ ನಿಧಿವನ…. ಇಂದಿಗೂ ಇಲ್ಲಿ ನಡೆಯುತ್ತೆ ಕೃಷ್ಣ - ರಾಧೆಯರ ರಾಸಲೀಲೆ

ಇದರಲ್ಲಿ 400 ವರ್ಷಗಳಷ್ಟು ಹಿಂದಿನದ್ದು ಎನ್ನಲಾದ ಬರೋಬ್ಬರಿ 264 ಚಿನ್ನದ ನಾಣ್ಯಗಳು (gold coins) ಸಿಕ್ಕಿವೆ. ಈ ನಾಣ್ಯಗಳು 18ನೇ ಶತಮಾನಕ್ಕೂ ಹಿಂದಿನವು ಎಂದು ತಿಳಿದು ಬಂದಿದೆ. ಇವುಗಳ ಬೆಲೆ £2,50,000 ಡಾಲರ್ ಎಂದರೆ ಭಾರತದ 2.3 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಈ ಯುಕೆ ಮೂಲದ ದಂಪತಿ ಕಳೆದ 10 ವರ್ಷಗಳಿಂದ ಇದೇ ಮನೆಯಲ್ಲಿ ವಾಸಿಸುತ್ತಿದ್ದರು. ಹೀಗಾಗಿ ಮನೆಯನ್ನು ನವೀಕರಿಸಲು ದಂಪತಿ ಮುಂದಾಗಿದ್ದರು. 

ಈಗ ಚಿನ್ನದ ನಾಣ್ಯ ಸಿಕ್ಕ ಖುಷಿಯಲ್ಲಿರುವ ದಂಪತಿ ಇವುಗಳನ್ನು ಹರಾಜಿನಲ್ಲಿ ಮಾರಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ. ಈ ನಾಣ್ಯಗಳು 1610 ರಿಂದ 1727ರ ಕಾಲಕ್ಕೆ ಸೇರಿದವು ಆಗಿದ್ದು ಜೇಮ್ಸ್-1 ಮತ್ತು ಚಾರ್ಲ್ಸ್-1 ಆಳ್ವಿಕೆಯ ಕಾಲದ ಬ್ರಿಟನ್ ಆಡಳಿತದಲ್ಲಿ ಚಲಾವಣೆಯಲ್ಲಿ ಇದ್ದ ನಾಣ್ಯಗಳಿರಬಹುದು ಎಂದು ಬ್ರಿಟನ್‌ ಸಂಶೋಧಕರು (British researchers) ನಂಬಿದ್ದಾರೆ. ಅಲ್ಲದೇ ಈ ನಾಣ್ಯಗಳು ಹಲ್‌ನ ಪ್ರಭಾವಿ ಹಾಗೂ ಶ್ರೀಮಂತ ವ್ಯಾಪಾರಿ ಕುಟುಂಬದ (merchant family) ಆಸ್ತಿ ಎಂದು ನಂಬಲಾಗಿದೆ. ಸದ್ಯ ದಂಪತಿ ಈ ಚಿನ್ನದ ನಾಣ್ಯಗಳನ್ನು 2.5 ಲಕ್ಷ ಪೌಂಡ್‍ಗೆ (ಸುಮಾರು 2.3ಕೋಟಿ ರೂ.) ಮಾರಾಟ ಮಾಡಲು ನಿರ್ಧರಿಸಿದ್ದಾರೆ. 

ಆಂಜನೇಯ ದೇಗುಲದಲ್ಲಿ ನಿಧಿ ಶೋಧ ಆಂಧ್ರ ಮೂಲದ 5 ಮಂದಿ ಬಂಧನ

ನಮ್ಮ ದೇಶದಲ್ಲಿ ನಿಧಿ ಸಿಕ್ಕರೆ, ಸುದ್ದಿ ತಿಳಿಯುತ್ತಿದ್ದಂತೆ ಸೀದಾ ಪುರಾತತ್ವ ಇಲಾಖೆಯವರು, ಸರ್ಕಾರದ ಅಧಿಕಾರಿಗಳು ಕೂಡಲೇ ಅಲ್ಲಿಗೆ ಬಂದು ಎಲ್ಲವನ್ನು ಎತ್ತಿಕೊಂಡು ಹೋಗಿ ಸರ್ಕಾರದ ಖಜಾನೆಗೆ ಸೇರಿಸಿ ಬಿಡುತ್ತಾರೆ. ಆದರೆ ಇಂಗ್ಲೆಂಡ್‌ನಲ್ಲಿ ಈ ರೀತಿ ಚಿನ್ನ ನಿಧಿ ಸಿಕ್ಕರೆ ಅದು ಯಾರಿಗೆ ಸಿಕ್ಕಿತೋ ಅವರಿಗೆ ಅದರ ಮೇಲೆ ಸಂಪೂರ್ಣ ಹಕ್ಕಿರುತ್ತದೆ. ಕಳೆದ ತಿಂಗಳು ಮಧ್ಯಪ್ರದೇಶದ (Madhya Pradesh) ಧಾರ್‌ (Dhar) ಜಿಲ್ಲೆಯಲ್ಲಿ ಹಳೆಯ ಕಾಲದ ಮನೆಯೊಂದನ್ನು ಕೆಡವುತ್ತಿದ್ದಾಗ ಕಾರ್ಮಿಕರಿಗೆ 60 ಲಕ್ಷ ಮೌಲ್ಯದ 86 ಬಂಗಾರದ ನಾಣ್ಯಗಳು ಸಿಕ್ಕಿದ್ದವು. ಆದರೆ ಇವುಗಳನ್ನು ಸರ್ಕಾರಕ್ಕೊಪ್ಪಿಸದೇ ಮಾರಾಟಕ್ಕೆ ಯತ್ನಿಸಿದ್ದರೆಂದು ಪೊಲೀಸರು ನಂತರ ಕಾರ್ಮಿಕರನ್ನು ಬಂಧಿಸಿದ್ದ ಘಟನೆ ನಡೆದಿತ್ತು.