Asianet Suvarna News Asianet Suvarna News

ಟೈಟಾನಿಕ್ ಅವಶೇಷಗಳ ವೀಕ್ಷಣೆಗೆ ಪ್ರವಾಸಿಗರ ಕರೆದೊಯ್ದ ಜಲಂತರ್ಗಾಮಿ ನೌಕೆ ನಾಪತ್ತೆ

1912 ರಲ್ಲಿ ಮುಳುಗಡೆಯಾಗಿ 1500ಕ್ಕೂ ಹೆಚ್ಚು ಜನರನ್ನು ಬಲಿ ಪಡೆದ ಟೈಟಾನಿಕ್ ಹಡಗಿನ ಅವಶೇಷಗಳಿರುವ ಸಮುದ್ರದಾಳಕ್ಕೆ ಪ್ರವಾಸ ಹೋದ ಜಲಂತರ್ಗಾಮಿ ಪ್ರವಾಸಿ ನೌಕೆಯೊಂದು ನಾಪತ್ತೆಯಾಗಿದ್ದು, ಅದರ ಪತ್ತೆಗೆ ತೀವ್ರ ಹಡುಕಾಟ ನಡೆಯುತ್ತಿದೆ.

A submarine carrying tourists to see the remains of the Titanic has gone missing in middle atlantic sea akb
Author
First Published Jun 20, 2023, 9:17 AM IST

ಉತ್ತರ ಅಟ್ಲಾಂಟಿಕಾ: 1912 ರಲ್ಲಿ ಮುಳುಗಡೆಯಾಗಿ 1500ಕ್ಕೂ ಹೆಚ್ಚು ಜನರನ್ನು ಬಲಿ ಪಡೆದ ಟೈಟಾನಿಕ್ ಹಡಗಿನ ಅವಶೇಷಗಳಿರುವ ಸಮುದ್ರದಾಳಕ್ಕೆ ಪ್ರವಾಸ ಹೋದ ಜಲಂತರ್ಗಾಮಿ ಪ್ರವಾಸಿ ನೌಕೆಯೊಂದು ನಾಪತ್ತೆಯಾಗಿದ್ದು, ಅದರ ಪತ್ತೆಗೆ ತೀವ್ರ ಹಡುಕಾಟ ನಡೆಯುತ್ತಿದೆ. ಮಧ್ಯ ಅಟ್ಲಾಂಟಿಕದಲ್ಲಿ ಭಾನುವಾರ ಈ ಜಲಂತರ್ಗಾಮಿ ನೌಕೆ ಪ್ರವಾಸಿಗರನ್ನು ಹೊತ್ತು ಸಮುದ್ರದಾಳಕ್ಕೆ ಜಿಗಿದಿದ್ದು ನಂತರ ನಾಪತ್ತೆಯಾಗಿದೆ. ಸಮುದ್ರದಾಳಕ್ಕೆ ಪ್ರವಾಸ ಆರಂಭಿಸಿ ಒಂದು ಮುಕ್ಕಾಲು ಗಂಟೆಯ ನಂತರ ಈ ಅವಘಡ ಸಂಭವಿಸಿದೆ ಎಂದು ಅಮೆರಿಕಾದ ಕೋಸ್ಟ್‌ ಗಾರ್ಡ್‌ ಸಿಬ್ಬಂದಿಯೊಬ್ಬರು ತಿಳಿಸಿದ್ದಾರೆ. 

ಟೈಟಾನಿಕ್‌ ಅವಶೇಷಗಳ ವೀಕ್ಷಣೆಗೆ ಅವಕಾಶ ಸೇರಿದಂತೆ  3,800m (12,500 ಅಡಿ) ಆಳ ಸಮುದ್ರದಲ್ಲಿ 8 ದಿನಗಳ ಈ ಪ್ರವಾಸಕ್ಕೆ ಒಬ್ಬರಿಗೆ ತಗಲುವ ವೆಚ್ಚ 250,000 ಡಾಲರ್ ಅಂದರೆ 2,05,11,575 ಭಾರತೀಯ ರೂಪಾಯಿಗಳು. ಇಷ್ಟೊಂದು ವೆಚ್ಚ ಮಾಡಿ ಟೈಟಾನಿಕ್ ಅವಶೇಷಗಳ ನೋಡುವ ಕನಸಿನೊಂದಿಗೆ ತೆರಳಿದ ಪ್ರವಾಸಿಗರನ್ನು ಹೊತ್ತೊಯ್ದ ಜಲಂತರ್ಗಾಮಿ ನೌಕೆ ನಾಪತ್ತೆಯಾಗಿದ್ದು ಎಲ್ಲರಲ್ಲಿ ಆತಂಕ ಮೂಡಿಸಿದೆ. 

ಟೈಟಾನಿಕ್‌ ಹಡಗು ಮುಳುಗಿದ ದಿನ ಪ್ರಯಾಣಿಕರು ತಿಂದಿದ್ದೇನು? 111 ವರ್ಷ ಹಳೆಯ ಮೆನು ವೈರಲ್

ಈ ಹಡಗಿನಲ್ಲಿದ್ದ ಎಲ್ಲಾ ಐದು ಜನರನ್ನು ರಕ್ಷಿಸಲು ಸಾಧ್ಯವಾದ ಎಲ್ಲ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಈ ಪ್ರವಾಸ ಆಯೋಜಿಸಿರುವ ಪ್ರವಾಸಿ ಸಂಸ್ಥೆ ಓಷನ್‌ಗೇಟ್ ಹೇಳಿದೆ. ಈ ಸಮುದ್ರದಾಳದ ಪ್ರವಾಸ ಯೋಜನೆಗಾಗಿ ಸಂಸ್ಥೆ ಒಬ್ಬರಿಂದ 250,000 ಡಾಲರ್ ಹಣ ಪಡೆದಿದೆ.  ನಾಪತ್ತೆಯಾದ ಜಲಂತರ್ಗಾಮಿ ನೌಕೆಗಾಗಿ ಅಮೆರಿಕಾದ ಸರ್ಕಾರಿ ಏಜೆನ್ಸಿಗಳು, ಯುಎಸ್ (US) ಮತ್ತು ಕೆನಡಾದ ನೌಕಾಪಡೆಗಳು (Canadian navies) ಮತ್ತು ಆಳ ಸಮುದ್ರದಲ್ಲಿ ಕಾರ್ಯಾಚರಣೆ ನಡೆಸುವ ವಾಣಿಜ್ಯ ಸಂಸ್ಥೆಗಳು  ಸಹಾಯ ಮಾಡುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಟೈಟಾನಿಕ್  ಹಡಗಿನ ಅವಶೇಷವೂ ಸೇಂಟ್ ಜಾನ್ಸ್‌ನ (St John) ದಕ್ಷಿಣಕ್ಕೆ ನ್ಯೂಫೌಂಡ್‌ಲ್ಯಾಂಡ್‌ನ  (Newfoundland)ಸುಮಾರು 435 ಮೈಲಿ (700 ಕಿಮೀ) ದೂರದಲ್ಲಿ ಇದೆ,  ಆದರೂ ರಕ್ಷಣಾ ಕಾರ್ಯಾಚರಣೆಯನ್ನು ಮ್ಯಾಸಚೂಸೆಟ್ಸ್‌ನ ಬೋಸ್ಟನ್‌ನಿಂದ ನಡೆಸಲಾಗುತ್ತಿದೆ.  ಇತ್ತ ನಾಪತ್ತೆಯಾದ ಜಲಂತರ್ಗಾಮಿ ಹಡಗನ್ನು ಓಷನ್‌ಗೇಟ್‌ನ ಟೈಟಾನ್ ಸಬ್‌ಮರ್ಸಿಬಲ್ ಎಂದು ನಂಬಲಾಗಿದೆ,  ಇದು ಟ್ರಕ್-ಗಾತ್ರದ ವಾಹಕವಾಗಿದ್ದು,  ಅದು ಐದು ಜನರನ್ನು ತನ್ನೊಳಗೆ ಏಕ ಕಾಲಕ್ಕೆ ಇರಿಸಿಕೊಳ್ಳಬಹುದು. ಇದರಲ್ಲಿ ನಾಲ್ಕು ದಿನಗಳ ತುರ್ತು ಆಮ್ಲಜನಕ ಪೂರೈಕೆ ಇರುತ್ತದೆ.

ಸೋಮವಾರ ಮಧ್ಯಾಹ್ನ, ಯುಎಸ್ ಕೋಸ್ಟ್ ಗಾರ್ಡ್‌ನ ರಿಯರ್ ಅಡ್ಮ್ ಜಾನ್ ಮೌಗರ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಹಡಗು  70 ಮತ್ತು ಪೂರ್ಣ 96 ಗಂಟೆಗಳ ನಡುವಿನಲ್ಲಿ ಎಲ್ಲೋ ಇದೆ ಎಂದು ನಾವು ನಿರೀಕ್ಷಿಸುತ್ತೇವೆ ಎಂದು ಹೇಳಿದ್ದಾರೆ.  ಹಡಗಿನ ಹುಡುಕಾಟದಲ್ಲಿ ಎರಡು ವಿಮಾನಗಳು, ಒಂದು ಜಲಾಂತರ್ಗಾಮಿ ಮತ್ತು ಸೋನಾರ್ ಬೋಯ್‌ಗಳು (sonar buoys) ತೊಡಗಿಸಿಕೊಂಡಿವೆ ಆದರೆ ಹುಡುಕಾಟ ನಡೆಯುತ್ತಿರುವ ಪ್ರದೇಶದಿಂದ ಈ ನಾಪತ್ತೆಯಾದ ನೌಕೆ ದೂರದಲ್ಲಿದೆ  ಇದು ಕಾರ್ಯಾಚರಣೆಯನ್ನು ಕಷ್ಟಕರವಾಗಿಸಿದೆ. ರಕ್ಷಣಾ ತಂಡಗಳು ಇದನ್ನು ವೈಯಕ್ತಿಕವಾಗಿ ತೆಗೆದುಕೊಂಡು ಕಾರ್ಯಾಚರಣೆ ನಡೆಸುತ್ತಿವೆ.  ಮತ್ತು ನಾಪತ್ತೆಯಾದ ನೌಕೆಯಲ್ಲಿರುವವರನ್ನು ಸುರಕ್ಷಿತವಾಗಿ ಕರೆತರಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತಿವೆ ಎಂದು ರಿಯರ್ ಅಡ್ಮ್ ಮೌಗರ್ ಹೇಳಿದ್ದಾರೆ.

Follow Us:
Download App:
  • android
  • ios