ಪ್ರಾಣಿಗಳನ್ನು ನೋಡಲು ಮೃಗಾಲಯವೊಂದಕ್ಕೆ ತೆರಳಿದ್ದ ಬಾಲಕ ಕಾಲು ಜಾರಿ ಬೋನೊಳಗೆ ಬಿದ್ದು, ಹಸಿದ ಸಿಂಹಗಳಿಗೆ ಆಹಾರವಾದ ಆಘಾತಕಾರಿ ಘಟನೆ ಪ್ಯಾಲೇಸ್ತೀನ್‌ನ  ಗಾಝಾ ಸಮೀಪ ನಡೆದಿದೆ.

ಗಾಝಾ: ಪ್ರಾಣಿಗಳನ್ನು ನೋಡಲು ಮೃಗಾಲಯವೊಂದಕ್ಕೆ ತೆರಳಿದ್ದ ಬಾಲಕ ಕಾಲು ಜಾರಿ ಬೋನೊಳಗೆ ಬಿದ್ದು, ಹಸಿದ ಸಿಂಹಗಳಿಗೆ ಆಹಾರವಾದ ಆಘಾತಕಾರಿ ಘಟನೆ ಪ್ಯಾಲೇಸ್ತೀನ್‌ನ ಗಾಝಾ ಸಮೀಪ ನಡೆದಿದೆ. ಆರು ವರ್ಷದ ಹಮದಾ ಇಕ್ಟಿಯೆಟ್ ಎಂಬಾತನೇ ಸಿಂಹಗಳಿಗೆ ಆಹಾರವಾದ ನತದೃಷ್ಟ ಬಾಲಕ ಮೃಗಾಲಯದ ತಡೆಗೋಡೆಯನ್ನು ಏರಿದ ಬಾಲಕ ಅಯಾತಪ್ಪಿ ಸಿಂಹಗಳಿರುವ ಜಾಗಕ್ಕೆ ಬಿದ್ದಿದ್ದು, ಹಸಿದ ಸಿಂಹಗಳು ಈತನನ್ನು ಕಚ್ಚಿ ಎಳೆದಾಡಿ ಕೊಂದೇ ಬಿಟ್ಟಿವೆ. ಗಾಝಾದಲ್ಲಿರುವ ಅಸ್ದಾ ಪಾರ್ಕ್‌ ಮೃಗಾಲಯದಲ್ಲಿ ಈ ಆತಂಕಕಾರಿ ಘಟನೆ ನಡೆದಿದೆ.

ಈ ಬಗ್ಗೆ ಯುಕೆಯ ಮೆಟ್ರೋ ವೆಬ್‌ಸೈಟ್ ವರದಿ ಮಾಡಿದ್ದು, ಕಂಬಿಗಳ ಮಧ್ಯೆ ಸಿಕ್ಕ ರಕ್ತಸಿಕ್ತ ಬಾಲಕನ ಫೋಟೋಗಳನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿಲ್ಲ ಎಂದು ಹೇಳಿದೆ. ಈ ಬಾಲಕ ಮೃಗಾಲಯದ ರಕ್ಷಣಾತ್ಮಕ ಬೇಲಿಯನ್ನು (protective fence) ಏರಿದ ನಂತರ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ಬಾಲಕನ ಪೋಷಕರು ಈ ಆರೋಪವನ್ನು ನಿರಾಕರಿಸಿದ್ದಾರೆ. ಬಾಲ ಕೇವಲ ಹೊರವಲಯದ ಬೇಲಿಯ ಸಮೀಪವಷ್ಟೇ ತಲುಪಿದ್ದ. ಆದರೆ ಅಲ್ಲೇ ಸಿಂಹ ನಿಂತಿತ್ತು ಎಂದು ಅವರು ಆರೋಪಿಸಿದ್ದಾರೆ. 

Shivamogga: ಭಯ ಹುಟ್ಟಿಸಿದ್ದ ಚಿರತೆ ಕೊನೆಗೂ ಬೋನಿಗೆ; ನಿಟ್ಟುಸಿರು ಬಿಟ್ಟ ಗ್ರಾಮಸ್ಥರು

ಘಟನೆಯ ಬಳಿಕ ಈ ಮೃಗಾಲಯಕ್ಕೆ (Zoo) ಪ್ರವಾಸಿಗರ ವೀಕ್ಷಣೆಯನ್ನು ಸ್ಥಗಿತಗೊಳಿಸಲಾಗಿದ್ದು, ಪೊಲೀಸ್ ತನಿಖೆಯ ನಂತರವಷ್ಟೇ ಮೃಗಾಲಯಕ್ಕೆ ಪ್ರವಾಸಿಗರ ಭೇಟಿಗೆ ಅವಕಾಶ ನೀಡಲಾಗುತ್ತದೆ ಎಂದು ಪೊಲೀಸರು ಹೇಳಿದ್ದಾರೆ. ಈ ದಾಳಿಯಿಂದಾಗಿ ಆ ಪ್ರದೇಶದಲ್ಲಿರುವ ಹಲವಾರು ಖಾಸಗಿ ಮೃಗಾಲಯಗಳನ್ನು ಮುಚ್ಚಲು ಆಗ್ರಹ ಕೇಳಿ ಬಂದಿದೆ. ಏಕೆಂದರೆ ಬಡತನ ಹಾಗೂ ಇಸ್ರೇಲ್ ಜೊತೆಗಿನ ಸದಾ ಸಂಘರ್ಷದಿಂದಾಗಿ ಆರ್ಥಿಕ ಸಂಕಷ್ಟದಲ್ಲಿರುವ ಪ್ಯಾಲೇಸ್ತೀನ್‌ನಲ್ಲಿ ಮನುಷ್ಯರಿಗೇ ಹೊಟ್ಟೆ ತುಂಬುವಷ್ಟು ಆಹಾರವಿಲ್ಲ. ಹೀಗಿರುವಾಗ ಪ್ರಾಣಿಗಳಿಗೆ ಹೊಟ್ಟೆ ತುಂಬಾ ಆಹಾರ ನೀಡಲು ಹೇಗೆ ಸಾಧ್ಯ ಹೀಗಾಗಿ ಅಲ್ಲಿ ಪ್ರಾಣಿಗಳನ್ನು ಚೆನ್ನಾಗಿ ನೋಡಿಕೊಳ್ಳುತ್ತಿಲ್ಲ.ಬೋನುಗಳಲ್ಲಿ ಹಾಕಿ ಉಪವಾಸ ಕೆಡವಲಾಗುತ್ತಿದೆ ಎಂಬ ಆರೋಪವಿದೆ. 

ಬೆಳಗಾವಿ: ಗಂಡು ಚಿರತೆ ಸರೆಗೆ ಬೋನುಗಳಿಗೆ ಹೆಣ್ಣು ಚಿರತೆ ಯೂರಿನ್‌ ಸ್ಪ್ರೇ

ಇಸ್ರೇಲ್ (Israel) ಮತ್ತು ಗಾಜಾದ (Gaza) ಹಮಾಸ್ ಬಂಡುಕೋರರ (Hamas ruler) ನಡುವಿನ ಪುನರಾವರ್ತಿತ ಕಲಹದ ಪರಿಣಾಮ ಈ ಪ್ರಾಣಿಗಳು ಆಹಾರವಿಲ್ಲದೇ ಬಳಲುತ್ತಿವೆ ಎಂಬ ಆರೋಪ ಕೇಳಿ ಬಂದಿದೆ. ಈ ಯುದ್ಧದಿಂದಾಗಿ ಪ್ರಾಣಿಗಳು ನಿರ್ಲಕ್ಷ್ಯಕ್ಕೆ ಒಳಗಾಗಿದ್ದು, ಹಸಿವು ಹಾಗೂ ವೈದ್ಯಕೀಯ ಸೌಲಭ್ಯದ ಕೊರತೆಯಿಂದ ಬಳಲುತ್ತಿವೆ. ಆದಾಗ್ಯೂ ಇಲ್ಲಿ ಕೆಲವು ಪ್ರಾಣಿ ಕಲ್ಯಾಣ ಸಂಸ್ಥೆಗಳು (animal rights welfare group) ಅನೇಕ ರಕ್ಷಣಾ ಕಾರ್ಯಾಚರಣೆ ನಡೆಸಿ ಪ್ರಾಣಿಗಳನ್ನು ಬಿಡುಗಡೆಗೊಳಿಸಿವೆ. ಆದರೆ ಕೆಲವು ಪ್ರಾಣಿಗಳು ಇನ್ನು ಬಂಧನದಲ್ಲಿದ್ದು, ಆಹಾರವಿಲ್ಲದೇ ಕಂಗೆಟ್ಟಿವೆ. ಕಳೆದ ಆಗಸ್ಟ್‌ನಲ್ಲಿ ಆಫ್ರಿಕಾ ದೇಶವಾದ ಘಾನಾದಲ್ಲಿರುವ (Ghana) ಅಕ್ರಾ ಮೃಗಾಲಯದಲ್ಲಿ ಸಿಂಹವೊಂದು ತನ್ನನ್ನು ಬಂಧನದಲ್ಲಿರಿಸಿದ ಮೃಗಾಲಯದಿಂದ ತಪ್ಪಿಸಿಕೊಂಡು ಬಂದು ವ್ಯಕ್ತಿಯೋರ್ವನನ್ನು ಹತ್ಯೆ ಮಾಡಿತ್ತು. ಮಧ್ಯ ವಯಸ್ಸಿನ ವ್ಯಕ್ತಿಯೋರ್ವ ಸಂರಕ್ಷಣಾ ಬೇಲಿಯನ್ನು ಹತ್ತಿ ಸಿಂಹಗಳಿರುವ ಪ್ರದೇಶಕ್ಕೆ ಇಳಿದಿದ್ದನ್ನು ಭದ್ರತಾ ಸಿಬ್ಬಂದಿ ಗಮನಿಸಿದ್ದರು.