Asianet Suvarna News Asianet Suvarna News

3 ಸೂರ್ಯರ ಸುತ್ತ ಸುತ್ತುವ ಗ್ರಹ ಪತ್ತೆ... ಭೂಮಿಯ ರಹಸ್ಯಕ್ಕೆ ಉತ್ತರ!

* ಭೂಮಿಯನ್ನು ಹೋಲುವ ಗ್ರಹ ಪತ್ತೆ ಮಾಡಿದ ತಂಡ
* ಮೂರು ಸೂರ್ಯರ ಸುತ್ತ ಸುತ್ತುವ ಗ್ರಹ
* ಭೂಮಿಯ ಉಗಮದ ಕತೆಗೆ ಉತ್ತರ ಸಿಗುವುದೆ?

A planet orbiting three suns discovered for the first time in distant universe mah
Author
Bengaluru, First Published Oct 4, 2021, 9:12 PM IST
  • Facebook
  • Twitter
  • Whatsapp

ನ್ಯೂಯಾರ್ಕ್(ಅ. 04) ಸೌರಮಂಡಲ ( solar system) ಮತ್ತು ಖಗೋಳ ವಿಸ್ಮಯಗಳ ತಾಣ.  ಭೂಮಿಯಲ್ಲಿ (Earth) ಮಾತ್ರ ಜೀವಿಗಳ ವಾಸವಿದೆ ಎನ್ನುವುದು ನಂಬಿಕೆ. ಹಲವು ಸಂದರ್ಭಗಳಲ್ಲಿ ಅಚ್ಚರಿಗಳು ಕಾಣಿಸುತ್ತವೇ.. ಸುದ್ದಿಗಳನ್ನು ಕೇಳುತ್ತಲೇ ಇರುತ್ತೇವೆ.

ಇದೀಗ ವಿಜ್ಞಾನಿಗಳು ಗ್ರಹವೊಂದನ್ನು ಪತ್ತೆ ಮಾಡಿದ್ದು  ಮೂರು ನಕ್ಷತ್ರಗಳನ್ನು(Star) ಸುತ್ತುತ್ತಿದೆ ಎಂದು ಹೇಳಿದ್ದಾರೆ.  ಭೂಮಿಯಿಂದ 1300  ಜ್ಯೋತಿರ್ ವರ್ಷ (1300 light-years)ದೂರದಲ್ಲಿ ಸೂರ್ಯರ ಪತ್ತೆಯಾಗಿದೆ. ಅಮೆರಿಕದ  ನೆವಡಾ ಯುನಿವರ್ಸಿಟಿ ಅಚ್ಚರಿ ಸುದ್ದಿಯೊಂದನ್ನು ನೀಡಿದೆ.

ಮೂರು ಸೂರ್ಯರ ಸಿಸ್ಟಮ್:  ಸಂಶೋಧಕರು ಅಟಕಾಮಾ ಲಾರ್ಜ್ ಮಿಲಿಮೀಟರ್/ಸಬ್‌ಮಿಮೀಮೀಟರ್ ಅರೇ (ALMA) ಟೆಲಿಸ್ಕೋಪ್ ಅನ್ನು ಬಳಸಿ ಅಚ್ಚರಿ ಪತ್ತೆ ಮಾಡಿದ್ದಾರೆ.  ಮೂರು ನಕ್ಷತ್ರಗಳ ಸುತ್ತ ಧೂಳಿನ ಕಣಗಳು ಇವೆ ಎಂಬುದನ್ನು ಪತ್ತೆ ಮಾಡಿದ್ದಾರೆ.   ಆದರೆ ಇದು ಗುರುತ್ವದ ಕಾರಣಕ್ಕೆ ಸೃಷ್ಟಿಯಾಗಿರುವ ರಿಂಗ್ ಎಂಬುದನ್ನು ಅಧ್ಯಯನ ವರದಿ ಹೇಳಿದೆ.

ಬಾನಂಗಳದಲ್ಲಿ ಉಲ್ಕೆಗಳು.. ಇದೊಂದು ದೊಡ್ಡ ಕೌತುಕ

ತಿಂಗಳ ಅಂತ್ಯದ ಮ್ಯಾಗ್ ಜೀನ್ ನಲ್ಲಿ ಮೂರು ನಕ್ಷತ್ರಗಳ ವಿವರಣೆಯನ್ನು ನೀಡಲಾಗಿದೆ.  ಈ ಬಗ್ಗೆ ವಿವರಣೆ ನೀಡಿರುವ ವಿಜ್ಞಾನಿ ಜೆರೆಮಿ ಸ್ಮಾಲ್ ವುಡ್,  ನಮ್ಮ ತಂಡ ಪತ್ತೆ ಮಾಡಿದ ಹೊಸ ಗ್ರಹದ ಅಧ್ಯಯನ ಮಾಡಲಾಗುತ್ತಿದೆ.  ಶನಿ ಗ್ರಹವನ್ನೇ ಹೋಲುವ ಗ್ರಹ ಪತ್ತೆಯಾಗಿದ್ದು ಅದು ಮೂರು ಸೂರ್ಯರನ್ನು ಸುತ್ತುತ್ತಿದೆ ಎಂದು ಹೇಳಿದ್ದಾರೆ.

ಭೂಮಿಯ ಉಗಮ ರಹಸ್ಯದ ಬಗೆಗಿನ ಹಲವು ಪ್ರಶ್ನೆಗಳಿಗೆ ಇದು ಉತ್ತರ ನೀಡಲಿದೆ.  ಭೂಮಿಯಂತೆ ಆಕ್ಟೀವ್ ಆಗಿರುವ ಇನ್ನೊಂದು ಗ್ರಹ ಸಿಗಬಹುದೆ? ಎನ್ನುವುದು ನಮ್ಮ ಮುಂದಿನ ಪ್ರಶ್ನೆ ಎಂದು ತಿಳಿಸಿದ್ದಾರೆ.

ನಮ್ಮ ಸಂಶೋಶನೆ ಮುಂದುವರಿಯುತ್ತಲೇ ಇದೆ. ಜೀವಿಗಳು ಇರುವ ಸಾಧ್ಯತೆ ಇದೆಯೇ? ವಾತಾವರಣ ಹೇಗಿದೆ? ಭೂಮಿಗೆ  ಹೋಲಿಕೆ ಹೇಗಿದೆ? ನಮ್ಮ ಸೋಲಾರ್ ಸಿಸ್ಟಮ್ ಗೂ ಅಲ್ಲಿರುವ ಸಿಸ್ಟಮ್ ಗೂ ಏನು ಸಾಮ್ಯತೆ? ಹೀಗೆ ಎಲ್ಲ ವಿಚಾರಗಳನ್ನು ಆಧಾರವಾಗಿ ಇಟ್ಟುಕೊಂಡು ಅಧ್ಯಯನ ನಡೆಸಲಾಗುತ್ತದೆ ಎಂದು ತಿಳಿಸಿದೆ.  ಒಟ್ಟಿನಲ್ಲಿ ಮೂರು ನಕ್ಷತ್ರಗಳ ಸುತ್ತ ಸುತ್ತುವ ಗ್ರಹದ ಅಧ್ಯಯನವನ್ನು ಸಮಗ್ರವಾಗಿ ಮಾಡಲು ಸಿದ್ಧತೆ ನಡೆಸಲಾಗಿದ್ದು ಮುಂದಿನ ವರದಿಗಳು ಏನು ಹೇಳುತ್ತವೆ ಎಂಬುದನ್ನು ಕಾದು ನೋಡಬೇಕಿದೆ. 

 

Follow Us:
Download App:
  • android
  • ios