Asianet Suvarna News Asianet Suvarna News

Hinglaj Mata Temple : ಪಾಕಿಸ್ತಾನದಲ್ಲಿ ಮತ್ತೊಂದು ಹಿಂದು ದೇವಸ್ಥಾನ ಧ್ವಂಸ!

ಪಾಕಿಸ್ತಾನದಲ್ಲಿ ಹಿಂಗ್ಲಜ್ ಮಾತಾ ದೇವಸ್ಥಾನ ಧ್ವಂಸ
ಕಳೆದ 22 ತಿಂಗಳಲ್ಲಿ 11ನೇ ಬಾರಿಗೆ ಘಟನೆ
ಪಾಕಿಸ್ತಾನದಲ್ಲಿ ದಿನನಿತ್ಯ ಅಲ್ಪಸಂಖ್ಯಾತರ ಧಾರ್ಮಿಕ ಕೇಂದ್ರಗಳ ಹಾನಿ

A group of miscreants destroyed Hinglaj Mata temple in Tharparker district of Pakistans Sindh province san
Author
Bengaluru, First Published Jan 27, 2022, 1:18 AM IST

ನವದೆಹಲಿ (ಜ. 26): ಪಾಕಿಸ್ತಾನದ ಸಿಂಧ್ ಪ್ರಾಂತ್ಯದ  (Pakistan’s Sindh province)ಥಾರ್ಪಾರ್ಕರ್ ಜಿಲ್ಲೆಯ (Tharparker district ) ಹಿಂಗ್ಲಾಜ್ ಮಾತಾ ದೇವಾಲಯವನ್ನು (Hinglaj Mata temple) ದುಷ್ಕರ್ಮಿಗಳ ಗುಂಪೊಂದು ಧ್ವಂಸಗೊಳಿಸಿದೆ. ಕಳೆದ 22 ತಿಂಗಳಲ್ಲಿ ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದುಗಳ ದೇಗುಲಗಳ ಮೇಲೆ ನಡೆದ 11ನೇ ದಾಳಿ ಇದಾಗಿದೆ.

ಘಟನೆಯನ್ನು ಖಂಡಿಸಿರುವ ಪಾಕಿಸ್ತಾನ ಹಿಂದೂ ಮಂದಿರ ಮ್ಯಾನೇಜ್‌ಮೆಂಟ್‌ನ (Pakistan Hindu Mandir Management) ಅಧ್ಯಕ್ಷ ಕ್ರಿಶೇನ್ ಶರ್ಮಾ (Krishen Sharma), ಇಸ್ಲಾಂ ಮೂಲಭೂತವಾದಿಗಳು ಪಾಕಿಸ್ತಾನದ ಸುಪ್ರೀಂ ಕೋರ್ಟ್‌ಗೂ ಸಹಿತ ಹೆದರುವುದಿಲ್ಲ ಎಂದು ಹೇಳಿದ್ದಾರೆ. ಪಾಕಿಸ್ತಾನದ ಅಲ್ಪಸಂಖ್ಯಾತರ ಹಕ್ಕುಗಳ ಆಯೋಗದ ಇತ್ತೀಚಿನ ವರದಿಯು ದೇಶದ ಅತ್ಯಂತ ಪೂಜ್ಯ ಹಿಂದು ತಾಣಗಳಲ್ಲಿ ಆಗುತ್ತಿರುವ ಹಿಂಸೆಯ ಚಿತ್ರಣವನ್ನು ಬಹಿರಂಗಪಡಿಸಿದೆ. ಕಳೆದ ತಿಂಗಳು ದೇಶದ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ವರದಿಯಲ್ಲಿ ಪಾಕಿಸ್ತಾನ ಸರ್ಕಾರದ ಶಾಸನಬದ್ಧ ಮಂಡಳಿಯಾದ ಇವಾಕ್ಯೂ ಟ್ರಸ್ಟ್ ಪ್ರಾಪರ್ಟಿ ಬೋರ್ಡ್ (ಇಟಿಪಿಬಿ) ಅಲ್ಪಸಂಖ್ಯಾತ ಸಮುದಾಯದ ಪ್ರಾಚೀನ ಮತ್ತು ಪವಿತ್ರ ಸ್ಥಳಗಳನ್ನು ನಿರ್ವಹಿಸಲು ವಿಫಲವಾಗಿದೆ ಎಂದು ಹೇಳಿದೆ. 365 ದೇವಸ್ಥಾನಗಳ ಪೈಕಿ ಕೇವಲ 13 ದೇವಸ್ಥಾನಗಳನ್ನು ಮಾತ್ರ ಇಟಿಪಿಬಿ ಅವರು ನಿರ್ವಹಿಸುತ್ತಿದ್ದಾರೆ, 65 ಹಿಂದು ಸಮುದಾಯದೊಂದಿಗೆ ಉಳಿದಿದ್ದರೆ, ಉಳಿದ ದೇವಾಲಯಗಳನ್ನು ದುಷ್ಕರ್ಮಿಗಳು ಹಾಳು ಮಾಡಿದ್ದಾರೆ ಎಂದು ಇಟಿಪಿಬಿ ವರದಿಯನ್ನು ಉಲ್ಲೇಖಿಸಿ ಡಾನ್ ಪತ್ರಿಕೆಯು ವರದಿ ಮಾಡಿದೆ.

ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) ಅಲ್ಪಸಂಖ್ಯಾತರು ಮತ್ತು ಇಸ್ಲಾಮಿಕ್ ಅಲ್ಲದ ಧಾರ್ಮಿಕ ರಚನೆಗಳ ಮೇಲಿನ ದಾಳಿಗಳ ಬಗ್ಗೆ ಭಾರತವು ಹಲವಾರು ಸಂದರ್ಭಗಳಲ್ಲಿ ತನ್ನ ಕಳವಳ ವ್ಯಕ್ತಪಡಿಸಿದೆ. ಅದಲ್ಲದೆ, ವಿಶ್ವಸಂಸ್ಥೆಯ ವೇದಿಕೆಯಲ್ಲೂ ಈ ಬಗ್ಗೆ ಪ್ರಸ್ತಾಪ ಮಾಡಿದೆ.

ಮೋದೀಜಿ ನಮಗೆ ಸಹಾಯ ಮಾಡಿ, ಅಳಲು ತೋಡಿಕೊಂಡ POK ವ್ಯಕ್ತಿ!
ಕಳೆದ ವರ್ಷ, ಸಿಂಧ್‌ನ ಮಾತಾ ರಾಣಿ ಭಟಿಯಾನಿ ಮಂದಿರ, ಗುರುದ್ವಾರ ಶ್ರೀ ಜನಮ್ ಸ್ಥಾನ, ಖೈಬರ್ ಪಖ್ತುಂಖ್ವಾದಲ್ಲಿನ ಕರಾಕ್‌ನಲ್ಲಿರುವ ಹಿಂದೂ ದೇವಾಲಯ ಸೇರಿದಂತೆ ಹಲವಾರು ದೇವಾಲಯಗಳ ಮೇಲೆ ಪಾಕಿಸ್ತಾನದಲ್ಲಿ ದಾಳಿ ನಡೆಸಲಾಗಿತ್ತು. ಪಾಕಿಸ್ತಾನದಲ್ಲಿ ಹಿಂದೂಗಳು ಅತಿ ದೊಡ್ಡ ಅಲ್ಪಸಂಖ್ಯಾತ ಸಮುದಾಯವನ್ನು ಹೊಂದಿದ್ದಾರೆ. ಅಧಿಕೃತ ಅಂದಾಜಿನ ಪ್ರಕಾರ, 75 ಲಕ್ಷ ಹಿಂದೂಗಳು ಪಾಕಿಸ್ತಾನದಲ್ಲಿ ವಾಸಿಸುತ್ತಿದ್ದು,ಬಹುತೇಕ ಮಂದಿ ಸಿಂಧ್ ಪ್ರಾಂತ್ಯದಲ್ಲಿಯೇ ವಾಸವಾಗಿದ್ದಾರೆ.

ಕರಾಚಿಯಲ್ಲೂ ನಡೆದಿತ್ತು ದಾಳಿ: ಕಳೆದ ವರ್ಷ ಡಿಸೆಂಬರ್‌ನಲ್ಲಿ ಪಾಕಿಸ್ತಾನದ ಆರ್ಥಿಕ ರಾಜಧಾನಿ ಎಂದು ಕರೆಯಲ್ಪಡುವ ಕರಾಚಿ(Karachi) ನಗರದ ಹಿಂದೂ ದೇವಾಲಯದಲ್ಲಿ ಉಗ್ರಗಾಮಿಗಳು ದುರ್ಗಾ ದೇವಿಯ ವಿಗ್ರಹವನ್ನು ಧ್ವಂಸಗೊಳಿಸಿದ್ದರು. ಕರಾಚಿಯ ನಾರಿಯನ್ ಪುರ ಹಿಂದೂ ದೇವಾಲಯದ ಮೇಲೆ ಮೂಲಭೂತವಾದಿಗಳು ದಾಳಿ ನಡೆಸಿದ್ದರು. ದಾಳಿಕೋರರು ಇಡೀ ದೇವಾಲಯವನ್ನು ಧ್ವಂಸಗೊಳಿಸಿದ್ದರು. ಕರಾಚಿಯಲ್ಲಿ ಕೂಡ ಹೆಚ್ಚಿನ ಸಂಖ್ಯೆಯ ಹಿಂದೂಗಳು ವಾಸಿಸುತ್ತಿದ್ದಾರೆ. ಈ ದಾಳಿಗೆ ಇಮ್ರಾನ್ ಸರ್ಕಾರವನ್ನೂ ದೊಡ್ಡ ಮಟ್ಟದಲ್ಲಿ ಟೀಕಿಸಲಾಗಿತ್ತು.

Imran Khan : ಪಾಕಿಸ್ತಾನದ ಆರ್ಥಿಕತೆ ಭಾರತಕ್ಕಿಂತ ಉತ್ತಮವಾಗಿದೆ ಎಂದ ಪಾಕ್ ಪ್ರಧಾನಿ!
ಅಲ್ಪ ಸಂಖ್ಯಾತರ ಮೇಲೆ ನಿರಂತರ ದಾಳಿ: 1947ರಲ್ಲಿ ಸ್ವಾತಂತ್ರ್ಯ ಪಡೆದ ವೇಳೆ ಪಾಕಿಸ್ತಾನದ ಒಟ್ಟು ಜನಸಂಖ್ಯೆಯ ಶೇ. 23ರಷ್ಟು ಹಿಂದು, ಕ್ರಿಶ್ಚಿಯನ್, ಸಿಖ್ ರಂಥ ಅಲ್ಪ ಸಂಖ್ಯಾತ ಸಮುದಾಯದವರಾಗಿದ್ದರು. ಆದರೆ 2017ರ ಜನಗಣತಿಯ ಪ್ರಕಾರ ಪಾಕಿಸ್ತಾನದಲ್ಲಿ ಶೇ. 96.28ರಷ್ಟು ಮುಸ್ಲಿಮರಿದ್ದರೆ, ಅಲ್ಪ ಸಂಖ್ಯಾತರ ಸಂಖ್ಯೆ ಶೇ. 3.72ಕ್ಕೆ ಇಳಿದಿದೆ. 1951ರ ಜನಗಣತಿಯ ವೇಳೆ ಪಾಕಿಸ್ತಾನದಲ್ಲಿ ಶೇ. 12.9ರಷ್ಟು ಹಿಂದುಗಳಿದ್ದರೆ, 2017ರ ವೇಳೆಗೆ ಇವರ ಪ್ರಮಾಣ ಶೇ. 16ಕ್ಕೆ ಇಳಿದಿದೆ.

Follow Us:
Download App:
  • android
  • ios