ಅಮೆರಿಕದ ಖಾಸಗಿ ಬಾಹ್ಯಾಕಾಶ ಸಂಸ್ಥೆ ಸ್ಪೇಸ್‌ಎಕ್ಸ್‌ ನಿರ್ಮಾಣ ಮಾಡಿದ್ದ ವಿಶ್ವದ ಅತ್ಯಂತ ಬೃಹತ್‌ 'ಸ್ಟಾರ್‌ಶಿಪ್‌ ರಾಕೆಟ್‌ ಪರೀಕ್ಷಾರ್ಥ ಉಡ್ಡಯನ ವೇಳೆ ಸ್ಫೋಟಗೊಂಡಿದೆ.

ನ್ಯೂಯಾರ್ಕ್: ಅಮೆರಿಕದ ಖಾಸಗಿ ಬಾಹ್ಯಾಕಾಶ ಸಂಸ್ಥೆ ಸ್ಪೇಸ್‌ಎಕ್ಸ್‌ ನಿರ್ಮಾಣ ಮಾಡಿದ್ದ ವಿಶ್ವದ ಅತ್ಯಂತ ಬೃಹತ್‌ 'ಸ್ಟಾರ್‌ಶಿಪ್‌ ರಾಕೆಟ್‌ ಪರೀಕ್ಷಾರ್ಥ ಉಡ್ಡಯನ ವೇಳೆ ಸ್ಫೋಟಗೊಂಡಿದೆ. ಗುರುವಾರ ಮುಂಜಾನೆ ಸ್ಥಳೀಯ ಕಾಲಮಾನ 8.33 ಗಂಟೆಗೆ ಟೆಕ್ಸಾಸ್‌ನ ಬೊಕಾಚಿಕಾದಲ್ಲಿರುವ ಸ್ಪೇಸ್‌ಎಕ್ಸ್‌ನ (SpaceX) ಖಾಸಗಿ ಉಡಾವಣಾ ಕೇಂದ್ರದಿಂದ ಉಡ್ಡಯನಗೊಂಡ ರಾಕೆಟ್‌, ಸುಮಾರು 3 ನಿಮಿಷಗಳ ಬಳಿಕ ಸ್ಫೋಟಗೊಂಡಿದೆ. 

ಇದೊಂದು ಪರೀಕ್ಷಾ ಉಡ್ಡಯನವಾಗಿದ್ದು, ಯಾವುದೇ ಗಗನಯಾತ್ರಿಗಳನ್ನು ಯಾನದಲ್ಲಿ ಬಳಸಲಾಗಿರಲಿಲ್ಲ ಎಂದು ಕಂಪನಿ ಹೇಳಿದೆ. ಉಡಾವಣೆಗೊಂಡ 3 ನಿಮಿಷಗಳ ಬಳಿಕ ರಾಕೆಟ್‌ನ ಮೊದಲ ಹಂತ ಕಳಚಿಕೊಂಡು ಬೀಳಬೇಕಿತ್ತು. ಆದರೆ ತಾಂತ್ರಿಕ ತೊಂದರೆಯಿಂದ ಇದು ನಡೆಯದೇ ಇದ್ದ ಕಾರಣ ರಾಕೆಟ್‌ ಸ್ಫೋಟಗೊಂಡಿದೆ. ಆದರೂ ಈ ಉಡ್ಡಯನ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿರುವ ಸ್ಪೇಸ್‌ಎಕ್ಸ್‌, ನಮ್ಮ ಕಂಪನಿ ಸಂಪೂರ್ಣ ರಾಕೆಟ್‌ ಅನ್ನು ಉಡಾವಣೆ ಮಾಡುವಲ್ಲಿ ಸಫಲಗೊಂಡಿದೆ ಎಂದು ಹೇಳಿದೆ.

ಟ್ವೀಟರ್‌ನ 1 ಕೋಟಿ ರು. ಕಚೇರಿ ಬಾಡಿಗೆ ಕಟ್ಟದ ಮಸ್ಕ್: ದೂರು ದಾಖಲು

ರಾಕೆಟ್‌ನ ವಿಶೇಷತೆ: ಇದು ಭಾರಿ ಶಕ್ತಿಶಾಲಿ ರಾಕೆಟ್‌ ಆಗಿದ್ದು, ಸುಮಾರು 400 ಅಡಿ ಎತ್ತರವಾಗಿದೆ. 250 ಟನ್‌ ತೂಕ ಹೊತ್ತೊಯ್ಯಬಲ್ಲದು. ಕನಿಷ್ಠ 100 ಜನರನ್ನು ಒಮ್ಮೆಗೆ ಮಂಗಳ ಗ್ರಹಕ್ಕೆ ಕರೆದೊಯ್ಯಬಲ್ಲದು. ಚಂದ್ರ, ಮಂಗಳಗ್ರಹದತ್ತ ಮಾನವ ಯಾನದ ಉದ್ದೇಶದಿಂದ ಈ ರಾಕೆಟ್‌ ಅನ್ನು ತಯಾರಿಸಲಾಗಿತ್ತು.

1.6 ಲಕ್ಷ ಕೋಟಿ ರು. ನಷ್ಟ ಮಾಡಿಕೊಂಡ ಮೊದಲ ವ್ಯಕ್ತಿ ಮಸ್ಕ್