ಶಾಂತಿಯುತ ಬದುಕು ಬೇಕಿದ್ದರೆ ಒತ್ತೆಯಾಳು ಸ್ಥಳದ ಮಾಹಿತಿ ನೀಡಿ, ಗಾಜ ಜನತೆಗೆ ಇಸ್ರೇಲ್ ಆಫರ್!
ನೀವು ಶಾಂತಿಯುತ ಜೀವನ ಬಯಸಿದ್ದರೆ, ನಿಮ್ಮ ಮಕ್ಕಳ ಉತ್ತಮ ಭವಿಷ್ಯ ಕುರಿತು ಆಲೋಚಿಸಿದ್ದರೆ, ಇಸ್ರೇಲ್ ಒತ್ತೆಯಾಳಗಳನ್ನು ಎಲ್ಲಿಟ್ಟಿದ್ದಾರೆ ಅನ್ನೋ ಮಾಹಿತಿ ನೀಡಿ. ಇದು ಇಸ್ರೇಲ್ ನೇರವಾಗಿ ಗಾಜಾ ಜನತೆಗೆ ನೀಡಿರುವ ಆಫರ್. ನಿಮ್ಮ ಹಾಗೂ ಕುಟಂಬಕ್ಕೆ ಇಸ್ರೇಲ್ ಸೇನೆ ಭದ್ರತೆ ನೀಡಲಿದೆ. ಜೊತೆಗೆ ಬಹುಮಾನ ಮೊತ್ತವನ್ನು ನೀಡಲಾಗುತ್ತದೆ ಎಂದಿದೆ.
ಇಸ್ರೇಲ್(ಅ.24) ಹಮಾಸ್ ಉಗ್ರರು ಇಸ್ರೇಲ್ ಮೇಲೆ ನಡೆಸಿದ ದಾಳಿಯನ್ನು ಬಹುತೇಕ ಪ್ಯಾಲೆಸ್ತಿನಿಯರು ಸಂಭ್ರಮಿಸಿದ್ದರು. ಅಕ್ಟೋಬರ್ 7ರ ದಾಳಿ, ನರಮೇಧವನ್ನು ನೋಡಿ ಬೀದಿ ಬೀದಿಯಲ್ಲಿ ಸಂಭ್ರಮ ಶುರುವಾಗಿತ್ತು. ಇಸ್ರೇಲ್ ಮಹಿಳೆಯರ ಬೆತ್ತಲೇ ಮೃತದೇಹ ಮೆರವಣಿಯಲ್ಲೂ ಜನರು ಕುಣಿದು ಕುಪ್ಪಳಿಸಿದ್ದರು. ಆದರೆ ಹಮಾಸ್ ಭೀಕರ ದಾಳಿಗೆ ಪ್ರತಿಯಾಗಿ ಇಸ್ರೇಲ್ ದಾಳಿ ಆರಂಭಗೊಳ್ಳುತ್ತಿದ್ದಂತೆ ಗಾಜಾ ಜನತೆ ಬೆಚ್ಚಿ ಬಿದ್ದಿದ್ದಾರೆ. ಇದೀಗ ಇಸ್ರೇಲ್ ಸೇನೆ ಪ್ಯಾಲೆಸ್ತಿನ್ ಜನತೆಗೆ ಹೊಸ ಆಫರ್ ನೀಡಿದೆ. ಇಸ್ರೇಲ್‌ನಿಂದ ಹಮಾಸ್ ಉಗ್ರರು ವಶಕ್ಕೆ ಪಡೆದ ಒತ್ತೆಯಾಳುಗಳು ಎಲ್ಲಿದ್ದಾರೆ. ಈ ಕುರಿತ ಮಾಹಿತಿ ನೀಡಿದರೆ ನಿಮ್ಮ ಹಾಗೂ ಮಕ್ಕಳ ಬದುಕು ಶಾಂತಿಯುತವಾಗಿರುತ್ತದೆ. ಇಷ್ಟೇ ಅಲ್ಲ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುತ್ತದೆ. ಜೊತೆಗೆ ನಿಮಗೆ ಹಾಗೂ ಕುಟುಂಬಕ್ಕೆ ಇಸ್ರೇಲ್ ಸೇನೆ ಗರಿಷ್ಠ ಭದ್ರತೆ ನೀಡಲಿದೆ. ಜೊತೆಹೆ ಬಹುಮಾನ ಮೊತ್ತವನ್ನು ನೀಡಲಾಗುತ್ತದೆ ಎಂದು ಇಸ್ರೇಲ್ ಸೇನೆ ಹೇಳಿದೆ.
ಹಮಾಸ್ ಉಗ್ರರ ವಶದಲ್ಲಿರುವ ಇಸ್ರೇಲ ಒತ್ತೆಯಾಳುಗಳನ್ನು ಕೆಲ ಗಾಜಾ ಜನರ ಮನೆಯಲ್ಲಿರಿಸಲಾಗಿದೆ ಅನ್ನೋ ಮಾಹಿತಿ ಇದೆ. ಕಾರಣ ಹಮಾಸ್ ಉಗ್ರರ ಎಲ್ಲಾ ನೆಲೆಗಳನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಹೀಗಾಗಿ ಹಮಾಸ್ ಉಗ್ರರು ಇದೀಗ ನಾಗರೀಕರ ಮನೆಗಳಿಂದ, ಬಂಕರ್‌ಗಳಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಈ ನಿಖರ ಮಾಹಿತಿಯನ್ನು ನಮ್ಮ ಜೊತೆ ಹಂಚಿಕೊಳ್ಳಿ ಎಂದು ಇಸ್ರೇಲ್ ಸೇನೆ ಹೇಳಿದೆ. ಇದಕ್ಕಾಗಿ ಫೋನ್ ನಂಬರ್, ವ್ಯಾಟ್ಸ್ಆ್ಯಪ್, ಟೆಲಿಗ್ರಾಂ ಸಂಖ್ಯೆಯನ್ನು ಇಸ್ರೇಲ್ ಸೇನೆ ನೀಡಿದೆ.
ಹಮಾಸ್ ವಿರುದ್ದ ದಾಳಿ ತೀವ್ರಗೊಳಿಸಿದ ಬೆನ್ನಲ್ಲೇ ಮತ್ತಿಬ್ಬರು ಇಸ್ರೇಲ್ ಒತ್ತೆಯಾಳುಗಳ ಬಿಡುಗಡೆ!
ನೀವು ಶಾಂತಿಯುತ ಬದುಕು ಆಗ್ರಹಿಸಿದ್ದರೆ, ನಿಮ್ಮ ಮಕ್ಕಳ ಉತ್ತಮ ಭವಿಷ್ಯದ ಕನಸು ಕಂಡಿದ್ದರೆ, ನಮಗೆ ಒತ್ತೆಯಾಳುಗಳನ್ನು ಅಡಗಿಸಿಟ್ಟ ಸ್ಥಳದ ಮಾಹಿತಿ ನೀಡಿ. ಗಾಜಾ ಜನತೆ ನಡೆವೆ ಒತ್ತೆಯಾಳುಗಳನ್ನು ಅಡಗಿಸಡಲಾಗಿದೆ. ನಿಮ್ಮ ಮಾಹಿತಿಯನ್ನು ಗೌಪ್ಯವಾಗಿ ಇಡಲಾಗುತ್ತದೆ. ಇಸ್ರೇಲ್ ಸೇನೆ ನಿಮಗೆ ಹಾಗೂ ನಿಮ್ಮ ಕುಟುಂಬಕ್ಕೆ ಗರಿಷ್ಠ ಭದ್ರತೆಯನ್ನು ಒದಗಿಸಲಿದೆ. ಇದರ ಜೊತೆಗೆ ಬಹುಮಾನ ಮೊತ್ತವನ್ನು ನೀಡುತ್ತೇವೆ ಎಂದು ಇಸ್ರೇಲ್ ಸೇನೆ ಹೇಳಿದೆ.
ಹಮಾಸ್ ಮೇಲಿನ ದಾಳಿ ತೀವ್ರಗೊಳಿಸದ ಬೆನ್ನಲ್ಲೇ ಇಂದು ಇಬ್ಬರು ಹಿರಿಯ ವ್ಯಕ್ತಿಗಳನ್ನು ಹಮಾಸ್ ಉಗ್ರರು ಬಿಡುಗಡೆ ಮಾಡಿದ್ದಾರೆ. ಈ ಮೂಲಕ 200ಕ್ಕೂ ಹೆಚ್ಚು ಒತ್ತೆಯಾಳುಗಳ ಪೈಕಿ ಇದೀಗ ಒಟ್ಟು ನಾಲ್ವರನ್ನು ಹಮಾಸ್ ಉಗ್ರರು ಬಿಡುಗಡೆ ಮಾಡಿದ್ದಾರೆ. ಒತ್ತೆಯಾಳುಗಳನ್ನು ಸುರಕ್ಷಿತವಾಗಿ ಮನೆಗೆ ಕರೆತರುವುದು ನಮ್ಮ ಮೊದಲ ಆದ್ಯತೆ ಎಂದು ಇಸ್ರೇಲ್ ಹೇಳಿದೆ.
ಇಸ್ರೇಲ್ ಹಮಾಸ್ ಯುದ್ಧ: ಅಂತಾರಾಷ್ಟ್ರೀಯ ಮಾಧ್ಯಮಗಳಿಗೆ ಭೀಕರ ಕೃತ್ಯಗಳ ದೃಶ್ಯ ಪ್ರದರ್ಶನ